ನಾಗರಹೊಳೆ ಅಂಚಿನಲ್ಲಿ ಕಾಡಾನೆ ಸಂಕಷ್ಟ, ಅರಣ್ಯ ಇಲಾಖೆ ರಕ್ಷಣೆ
ಹುಣಸೂರು: ನಾಗರಹೊಳೆ ಕಾಡಂಚಿನ ಗ್ರಾಮದಲ್ಲಿ ಮೇವನ್ನರಸಿ ಹೊರಬಂದ ಕಾಡಾನೆ ರೈತರ ಬೆಳೆ ಹಾನಿಗೊಳಿಸಿ ವಾಪಸ್ ಕಾಡಿಗೆ ತೆರಳುವ ವೇಳೆ ರೈಲ್ವೆ ಕಂಬಿ ಬೇಲಿಗೆ ಸಿಲುಕಿಕೊಂಡ ಘಟನೆ ಹನಗೋಡು ಹೋಬಳಿಯ ಉಡುವೇಪುರ ಗ್ರಾಮದ ಸಮೀಪ ನಡೆದಿದೆ. ಈ ಪ್ರದೇಶದಲ್ಲಿ ಕಾಡುಪ್ರಾಣಿಗಳು ಆಹಾರ ಅರಸಿ ಕಾಡಿನಿಂದ ಹೊರಬರುವುದು ಸಾಮಾನ್ಯವಾಗಿದ್ದು, ರೈಲ್ವೆ ಕಂಬಿಗಳ ನಡುವೆ ಅಂತರ ಕಡಿಮೆ ಇರುವುದರಿಂದ ದಾಟುವಾಗ ಆನೆ ಸಿಲುಕಿಕೊಂಡಿದೆ ಎಂದು ತಿಳಿದುಬಂದಿದೆ. ಬೆಳಗಿನ ಜಾವ ಹೊಲಗಳಿಗೆ ತೆರಳಿದ ರೈತರು ಈ ಘಟನೆ ಗಮನಿಸಿ ತಕ್ಷಣ ಅರಣ್ಯ ಇಲಾಖೆಗೆ…