ಬಂಗ್ರಮಂಜೇಶ್ವರದಲ್ಲಿ ಭೂಕುಸಿತ, ಮನೆ-ಬಾವಿ ನಾಶ: ಕುಟುಂಬ ಸ್ಥಳಾಂತರ

​ಮಂಜೇಶ್ವರ: ಬಂಗ್ರಮಂಜೇಶ್ವರದಲ್ಲಿ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ಗುಡ್ಡ ಕುಸಿತ ಸಂಭವಿಸಿದ್ದು, ಕನಿಲ ಭಂಡಾರ ನಿಲಯದ ಪುರುಷೋತ್ತಮ ಅವರ ಮನೆಗೆ ಭಾರಿ ಹಾನಿಯಾಗಿದೆ. ಶುಕ್ರವಾರ ಮಣ್ಣು ಕುಸಿದು ಬಾವಿ ಸಂಪೂರ್ಣವಾಗಿ ಮುಚ್ಚಿಹೋಗಿದ್ದರೆ, ಶನಿವಾರ ಮುಂಜಾನೆ ಮತ್ತೆ ಗುಡ್ಡ ಕುಸಿದು ಮನೆಯ ಅಡುಗೆಕೋಣೆಯ ಮೇಲೆ ಬಿದ್ದಿದೆ. ಪರಿಣಾಮ ಮನೆಯ ಭಾಗಶಃ ಹಾನಿಗೊಳಗಾಗಿದ್ದು, ಆತಂಕಗೊಂಡ ಎಂಟು ಮಂದಿಯ ಕುಟುಂಬವನ್ನು ಸುರಕ್ಷಿತವಾಗಿ ಸಂಬಂಧಿಕರ ಮನೆಗೆ ಸ್ಥಳಾಂತರಿಸಲಾಗಿದೆ. ಸುತ್ತಮುತ್ತಲಿನ ಮನೆಗಳಿಗೂ ಗುಡ್ಡ ಕುಸಿತದ ಭೀತಿ ಎದುರಾಗಿದ್ದು, ಸ್ಥಳೀಯರು ಆತಂಕದಲ್ಲಿದ್ದಾರೆ. ಘಟನಾ ಸ್ಥಳಕ್ಕೆ ಪಂಚಾಯತ್ ಮತ್ತು…

Read More

ಮನೆಯ ಸಿಟ್ ಔಟ್‌ನಲ್ಲಿ ಪ್ರವಾಸಿ ಯುವಕನ ಶವ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆ

​ಕಾಸರಗೋಡು : ಚಿತ್ತಾರಿ ಪೋಯ್ಯಕ್ಕರ ಕಲ್ಲಿಂಗಾಲದ ನಿವಾಸಿ ಕೆ.ವಿ. ಕೃಪೇಶ್ (38) ಎಂಬುವವರು ಶನಿವಾರ ಮುಂಜಾನೆ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಕೆಲವು ತಿಂಗಳ ಹಿಂದೆಯಷ್ಟೇ ಗಲ್ಫ್‌ನಿಂದ ಊರಿಗೆ ಮರಳಿದ್ದ ಕೃಪೇಶ್, ಇಂದು ಬೆಳಗಿನ ಜಾವ 5:30 ರ ಸುಮಾರಿಗೆ ಮನೆಯ ಸಿಟ್ ಔಟ್‌ನಲ್ಲಿ ನೇಣು ಹಾಕಿಕೊಂಡಿರುವುದು ಕಂಡುಬಂದಿದೆ. ಮನೆಯವರು ತಕ್ಷಣವೇ ಅವರನ್ನು ಆಸ್ಪತ್ರೆಗೆ ಸಾಗಿಸಿದರಾದರೂ, ಮಾರ್ಗಮಧ್ಯೆಯೇ ಅವರು ಸಾವನ್ನಪ್ಪಿದ್ದರು. ವಿಷಯ ತಿಳಿಯುತ್ತಿದ್ದಂತೆ ಹೊಸದುರ್ಗ ಪೊಲೀಸರು ಸ್ಥಳಕ್ಕೆ ಧಾವಿಸಿ ಇನ್‌ಕ್ವೆಸ್ಟ್ ನಡೆಸಿದರು. ಮರಣೋತ್ತರ ಪರೀಕ್ಷೆಯ ನಂತರ ಮೃತದೇಹವನ್ನು ಮಧ್ಯಾಹ್ನ…

Read More

ಮನೆಯಂಗಳದಲ್ಲಿ ಆಟವಾಡುತ್ತಿದ್ದ ಒಂದೂವರೆ ವರ್ಷದ ಮಗುವಿನ ಮೇಲೆ ಬೀದಿ ನಾಯಿ ದಾಳಿ!

ಉಪ್ಪಳ : ಜೋಡುಕಲ್ಲುವಿನಲ್ಲಿ ಹೃದಯ ವಿದ್ರಾವಕ ಘಟನೆಯೊಂದು ನಡೆದಿದೆ. ಮನೆಯಂಗಳದಲ್ಲಿ ಆಟವಾಡುತ್ತಿದ್ದ ಗುರುಪ್ರಸಾದ್ ಮತ್ತು ತುಳಸಿ ದಂಪತಿಗಳ ಒಂದೂವರೆ ವರ್ಷದ ಪುತ್ರ ರಿತುರಾಜ್ ಮೇಲೆ ಬೀದಿ ನಾಯಿ ಏಕಾಏಕಿ ದಾಳಿ ಮಾಡಿದೆ. ಶನಿವಾರ ಮಧ್ಯಾಹ್ನ ತಾಯಿ ಸಮೀಪದಲ್ಲೇ ಬಟ್ಟೆ ಒಗೆಯುತ್ತಿದ್ದಾಗ, ಅನಿರೀಕ್ಷಿತವಾಗಿ ಬಂದ ನಾಯಿ ಮಗುವನ್ನು ಕಚ್ಚಿ ಎಳೆದಾಡಿದೆ. ಮಗುವಿನ ಚೀರಾಟ ಕೇಳಿ ತಾಯಿ ಕೂಡಲೇ ಓಡಿಬಂದಾಗ ನಾಯಿ ಪರಾರಿಯಾಗಿದೆ. ಗಂಭೀರವಾಗಿ ಗಾಯಗೊಂಡ ಮಗುವನ್ನು ತಕ್ಷಣವೇ ಹತ್ತಿರದ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಈ ಭಾಗದಲ್ಲಿ ಬೀದಿ…

Read More

ಚಾಲಕನ ನಿಯಂತ್ರಣ ತಪ್ಪಿ ಅಂಗಡಿ ಮಳಿಗೆಗೆ ನುಗ್ಗಿದ ಕಾರು

​ಮಂಜೇಶ್ವರ: ಇಲ್ಲಿಯ ಕಟ್ಟೆ ಬಜಾರ್ ತಿರುವಿನಲ್ಲಿ ಇಂದು ಅನಿರೀಕ್ಷಿತ ಅಪಘಾತವೊಂದು ಸಂಭವಿಸಿದೆ.ಹೊಸಂಗಡಿಯಿಂದ ಮಂಜೇಶ್ವರದತ್ತ ತೆರಳುತ್ತಿದ್ದ ಕಾರಿನ ಒಳಗೆ ಹಠಾತ್ತನೆ ಇಲಿಯೊಂದು ಕಾಣಿಸಿಕೊಂಡಿದ್ದೇ ಚಾಲಕನ ಗಾಬರಿಗೆ ಕಾರಣವಾಯಿತು. ಚಾಲಕನ ಕಾಲಿನ ಬಳಿ ಇಲಿ ಚಲಿಸುತ್ತಿದ್ದಂತೆಯೇ ಕಸಿವಿಸಿಗೊಂಡ ಚಾಲಕ ವಾಹನದ ಮೇಲಿನ ಹಿಡಿತ ಕಳೆದುಕೊಂಡರು. ನಿಯಂತ್ರಣ ತಪ್ಪಿದ ಕಾರು, ರಸ್ತೆ ಬದಿಯಲ್ಲಿ ನಿಂತಿದ್ದ ಸ್ಕೂಟರ್ ಸವಾರನಿಗೆ ಡಿಕ್ಕಿ ಹೊಡೆದು, ತದನಂತರ ಸಮೀಪವಿದ್ದ ಹಳೆಯ ಕಟ್ಟಡದ ಟೈಲರ್ ಅಂಗಡಿಯೊಳಗೆ ನುಗ್ಗಿತು. ಅದೃಷ್ಟವಶಾತ್, ಫೋನ್ ಮಾತನಾಡಲು ದ್ವಿಚಕ್ರ ವಾಹನದಿಂದ ಇಳಿದಿದ್ದ ಸವಾರ ಕ್ಷಣಾರ್ಧದಲ್ಲಿ…

Read More

ರಾಜ್ಯಾದ್ಯಂತ 579 ಮದ್ಯದ ಸನ್ನದುಗಳ ಹಂಚಿಕೆಗೆ ಬೃಹತ್ ಇ-ಹರಾಜು

ಬೆಂಗಳೂರು :ಕರ್ನಾಟಕ ಸರ್ಕಾರವು ರಾಜ್ಯಾದ್ಯಂತ ಒಟ್ಟು 579 ಮದ್ಯದ ಸನ್ನದುಗಳನ್ನು (Licences) ಮುಂದಿನ 5 ವರ್ಷಗಳ ಅವಧಿಗೆ (ಅಂದರೆ 2026-27 ರಿಂದ 2030-31 ರ ವರೆಗೆ) ಎಲೆಕ್ಟ್ರಾನಿಕ್ ಇ-ಹರಾಜು ಮೂಲಕ ಹಂಚಿಕೆ ಮಾಡಲು ಅಧಿಕೃತ ಅಧಿಸೂಚನೆಯನ್ನು ಹೊರಡಿಸಿದೆ.ಈ ಸಂಬಂಧ ಬಿಡ್‌ದಾರರ ನೋಂದಣಿ ಪ್ರಕ್ರಿಯೆಯು ಈಗಾಗಲೇ ಜುಲೈ 3 ರಿಂದಲೇ ಆರಂಭವಾಗಿದ್ದು, ಜುಲೈ 24 ರಿಂದ ಜುಲೈ 31 ರವರೆಗೆ ವಿವಿಧ ಹಂತಗಳಲ್ಲಿ ನೇರ ಹರಾಜು (Live Bidding) ಪ್ರಕ್ರಿಯೆ ನಡೆಯಲಿದೆ. 483 ಸಿಎಲ್(2-ಎ) ಮತ್ತು 96 ಸಿಎಲ್(9-ಎ)…

Read More

ಲಾವಣ್ಯ ಹತ್ಯೆಯ ಆರೋಪಿ ಚೇತನ್ ಪರವಾಗಿ ವಕಾಲತ್ತು ವಹಿಸದಂತೆ ಬಂಟ್ವಾಳ ವಕೀಲರ ಸಂಘಕ್ಕೆ ವಿಶ್ವ ಹಿಂದೂ ಪರಿಷದ್ ಬಜರಂಗದಳ ಬಂಟ್ವಾಳ ಪ್ರಖಂಡ ವತಿಯಿಂದ ಮನವಿ

ವಿಶ್ವ ಹಿಂದೂ ಪರಿಷದ್ ಬಜರಂಗದಳ ಬಂಟ್ವಾಳ ಪ್ರಖಂಡ ವತಿಯಿಂದ 16/7/26ರಂದು ಬಿಸಿರೋಡ್ ನಲ್ಲಿ ನಡೆದ ಲಾವಣ್ಯ ಎಂಬ ಮುಗ್ದ ಬಾಲಕಿಯನ್ನು ಬರ್ಬರವಾಗಿ ಹತ್ಯೆಯು ಅಂತ್ಯತ ಕ್ರೂರ ಮತ್ತು ಹೇಯ ಕೃತ್ಯವಾಗಿದ್ದು ಇಂತಹ ಭರ್ಜರ ಕೊಲೆ ಮಾಡಿದ ರಾಕ್ಷಸ ಮಾನಸಿಕತೆಯ ಚೇತನ್ ಎಂಬವನ ಪರವಾಗಿ ಗೌರವಾನ್ವಿತ ನ್ಯಾಯವಾದಿಗಳು ವಕಾಲತ್ತು ವಹಿಸದಂತೆ ಬಂಟ್ವಾಳ ವಕೀಲರ ಸಂಘಕ್ಕೆ ವಿಶ್ವ ಹಿಂದೂ ಪರಿಷದ್ ಬಜರಂಗದಳ ಬಂಟ್ವಾಳ ಪ್ರಖಂಡ ವತಿಯಿಂದ ಇಂದು ಮನವಿ ನೀಡಲಾಯಿತು. ಈ ಸಂದರ್ಭದಲ್ಲಿ ವಿಶ್ವ ಹಿಂದೂ ಪರಿಷದ್ ಬಜರಂಗದಳ ಬಂಟ್ವಾಳ…

Read More

ಕೌಶಲ್ಯ ತರಬೇತಿ ಕಾರ್ಯಾಗಾರ ಆಗಸ್ಟ್ 12 ರಂದು

ಮಂಗಳೂರು: ಪ್ರಧಾನ ಮಂತ್ರಿ ಕೌಶಲ್ಯ ಅಭಿವೃದ್ಧಿ ಯೋಜನೆಯಡಿ ವಿವಿಧ ಜಾಬ್’ರೋಲ್’ಗಳಲ್ಲಿ ಕೌಶಲ್ಯ ತರಬೇತಿ ನೀಡುವ ಕಾರ್ಯಾಗಾರವನ್ನು ಆಗಸ್ಟ್ 12 ರಂದು ಬೆಳಿಗ್ಗೆ 10 ಗಂಟೆಗೆ ನಗರದ ಉರ್ವಾ ಮಾರುಕಟ್ಟೆ ಕಟ್ಟಡದ 2ನೇ ಮಹಡಿಯಲ್ಲಿರುವ ಜಿಲ್ಲಾ ಕೌಶಲ್ಯಾಭಿವೃದ್ಧಿ ಕಛೇರಿಯಲ್ಲಿ ಆಯೋಜಿಸಲಾಗಿದೆ. 18 ರಿಂದ 50 ವರ್ಷ ವಯಸ್ಸಿನವರು ಈ ತರಬೇತಿಗೆ ಹಾಜರಾಗಬಹುದು. ಆಸಕ್ತರು ಹೆಚ್ಚಿನ ಮಾಹಿತಿಗೆ ಕಛೇರಿ ದೂರವಾಣಿ ಸಂಖ್ಯೆ 0824-2453222 ಯನ್ನು ಸಂಪರ್ಕಿಸಬಹುದು ಎಂದು ಜಿಲ್ಲಾ ಕೌಶಲ್ಯಾಭಿವೃದ್ಧಿ ಅಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.:

Read More

ಅಮೃತ ಪ್ರಕಾಶ ಪತ್ರಿಕೆಯ 13ನೇ ವರ್ಷದ ವಾರ್ಷಿಕೋತ್ಸವ ಜು. 21ರಂದು

ಮಂಗಳೂರು, ಜು. 18: ಅಮೃತ ಪ್ರಕಾಶ ಪತ್ರಿಕೆ ಮಂಗಳೂರು ವತಿಯಿಂದ 13ನೇ ವರ್ಷದ ವಾರ್ಷಿಕೋತ್ಸವ ಸಮಾರಂಭವು ಜುಲೈ 21ರಂದು ಬೆಳಿಗ್ಗೆ 10.30ಕ್ಕೆ ನಗರದ ಪತ್ರಿಕಾ ಭವನದಲ್ಲಿ ನಡೆಯಲಿದೆ. ಕಾರ್ಯಕ್ರಮವನ್ನು ಕಾವೂರು ಬಂಟರ ಸಂಘದ ಅಧ್ಯಕ್ಷ ಶ್ರೀ ಆನಂದ ಶೆಟ್ಟಿ ಅಡ್ಯಾರ್ ಉದ್ಘಾಟಿಸಲಿದ್ದು, ಕರ್ನಾಟಕ ಸಾಹಿತ್ಯ ಪರಿಷತ್ತಿನ ಮಾಜಿ ರಾಜ್ಯಾಧ್ಯಕ್ಷ ಹಾಗೂ ಮಾಜಿ ಅಧ್ಯಕ್ಷ ಡಾ. ಹರಿಕೃಷ್ಣ ಪುನರೂರು ವಿಶೇಷ ಸಂಚಿಕೆಯನ್ನು ಬಿಡುಗಡೆ ಮಾಡಲಿದ್ದಾರೆ. ಸಮಾಜ ಸೇವಕಿ ಲಯನ್ ಆಶಾ ರಾವ್ ಆರೂರು ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದು, ಕಾರ್ಯಕ್ರಮದ…

Read More

ಹಿರಿಯ ಪತ್ರಕರ್ತ ಪರಮಾನಂದ ಸಾಲ್ಯಾನ್‌ಗೆ ಭಾವಪೂರ್ಣ ನುಡಿನಮನ

ಮಂಗಳೂರು, ಜು. 18: ಇತ್ತೀಚೆಗೆ ನಿಧನರಾದ ಹಿರಿಯ ಪತ್ರಕರ್ತ, ರಂಗಕರ್ಮಿ ಹಾಗೂ ತುಳು ಸಂಸ್ಕೃತಿಯ ಅಧ್ಯಯನಕಾರ ಪರಮಾನಂದ ಸಾಲ್ಯಾನ್ ಅವರಿಗೆ ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಮತ್ತು ಮಂಗಳೂರು ಪ್ರೆಸ್ ಕ್ಲಬ್ ವತಿಯಿಂದ ಶುಕ್ರವಾರ ನಗರದ ಪತ್ರಿಕಾ ಭವನದಲ್ಲಿ ಶ್ರದ್ಧಾಂಜಲಿ ಸಭೆ ನಡೆಯಿತು. ಮಂಗಳೂರು ಪ್ರೆಸ್ ಕ್ಲಬ್ ಅಧ್ಯಕ್ಷ ಪಿ.ಬಿ. ಹರೀಶ್ ರೈ ಮಾತನಾಡಿ, ಪರಮಾನಂದ ಸಾಲ್ಯಾನ್ ಅವರು ಪತ್ರಿಕೋದ್ಯಮದ ಜೊತೆಗೆ ತುಳು ರಂಗಭೂಮಿ, ಜಾನಪದ ಹಾಗೂ ಭೂತಾರಾಧನೆಯ ಕುರಿತು ಅಪಾರ ಜ್ಞಾನ ಹೊಂದಿದ್ದ…

Read More

ಭಾರತದ ಮೊದಲ ಖಾಸಗಿ ಕಕ್ಷಾ ರಾಕೆಟ್ ‘ವಿಕ್ರಮ್-1’ ಯಶಸ್ವಿ ಉಡಾವಣೆ

ಶ್ರೀಹರಿಕೋಟಾ, ಜು. 18: ಭಾರತದ ಖಾಸಗಿ ಬಾಹ್ಯಾಕಾಶ ಕ್ಷೇತ್ರದಲ್ಲಿ ಐತಿಹಾಸಿಕ ಮೈಲಿಗಲ್ಲು ನಿರ್ಮಾಣವಾಗಿದ್ದು, ದೇಶದ ಮೊದಲ ಖಾಸಗಿ ಕಕ್ಷಾ (ಆರ್ಬಿಟಲ್ ಕ್ಲಾಸ್) ರಾಕೆಟ್ ‘ವಿಕ್ರಮ್-1’ ಶನಿವಾರ ಯಶಸ್ವಿಯಾಗಿ ಉಡಾವಣೆಯಾಯಿತು. ಹೈದರಾಬಾದ್ ಮೂಲದ ಸ್ಕೈರೂಟ್ ಏರೋಸ್ಪೇಸ್ ಅಭಿವೃದ್ಧಿಪಡಿಸಿರುವ ಈ ರಾಕೆಟ್‌ನ ಪರೀಕ್ಷಾ ಉಡಾವಣೆಗೆ ‘ಮಿಷನ್ ಆಗಮನ’ ಎಂದು ಹೆಸರಿಡಲಾಗಿದ್ದು, ಇದು ಭಾರತದ ವಾಣಿಜ್ಯ ಬಾಹ್ಯಾಕಾಶ ಕ್ಷೇತ್ರಕ್ಕೆ ಹೊಸ ಅಧ್ಯಾಯ ತೆರೆದಿದೆ. ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದ ಮೊದಲ ಉಡಾವಣಾ ವೇದಿಕೆಯಿಂದ ಮಧ್ಯಾಹ್ನ 12.05ಕ್ಕೆ ನಾಲ್ಕು ಹಂತಗಳ ವಿಕ್ರಮ್-1…

Read More
error: Content is protected !!