ಕಾಸರಗೋಡು ಜನರಲ್ ಆಸ್ಪತ್ರೆಯಲ್ಲಿ ಎಡವಟ್ಟು: ಬಾಲಕನ ನಿಗೂಢ ಸಾವು: ರಾಜ್ಯ ಮಟ್ಟದ ವಿಶೇಷ ತಂಡದಿಂದ ತನಿಖೆಗೆ ಚಾಲನೆ
ಕಾಸರಗೋಡು: ಕಾಸರಗೋಡು ಜನರಲ್ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆಯ ನಂತರ ಬೇಡಡ್ಕ ತಲೆಕುನ್ನಿನ 9 ವರ್ಷದ ಬಾಲಕ ಮುಹಮ್ಮದ್ ಇಯಾಸ್ ಸಾವನ್ನಪ್ಪಿದ ಪ್ರಕರಣ ವೈದ್ಯಕೀಯ ಲೋಪದ ಅನುಮಾನಗಳನ್ನು ಹುಟ್ಟುಹಾಕಿದ್ದು, ಇದೀಗ ರಾಜ್ಯ ಆರೋಗ್ಯ ಇಲಾಖೆಯ ವಿಶೇಷ ತಂಡ ತನಿಖೆಗೆ ಚಾಲನೆ ನೀಡಿದೆ. ಪೆರಿಯಾರಂ ವೈದ್ಯಕೀಯ ಕಾಲೇಜಿನಲ್ಲಿ ಮರಣೋತ್ತರ ಪರೀಕ್ಷೆ ನಡೆಸಲಾಗಿದ್ದು, ನಿಖರ ಕಾರಣ ತಿಳಿಯಲು ಆಂತರಿಕ ಅವಯವಗಳನ್ನು ಕಲ್ಲಿಕೋಟೆ ವೈದ್ಯಕೀಯ ಕಾಲೇಜಿನ ಪ್ರಯೋಗಾಲಯಕ್ಕೆ ರವಾನಿಸಲಾಗಿದೆ. ಪೊಲೀಸರು ಸದ್ಯ ಅಸಹಜ ಸಾವು ಪ್ರಕರಣ ದಾಖಲಿಸಿಕೊಂಡು, ಶಸ್ತ್ರಚಿಕಿತ್ಸೆ ನಡೆಸಿದ ವೈದ್ಯರು ಹಾಗೂ…
