ಕಾಸರಗೋಡಿನಲ್ಲಿ ಹಳದಿ ಕಾಮಾಲೆ ಆತಂಕ: ಇಬ್ಬರ ಸಾವು

​ಕಾಸರಗೋಡು : ಜಿಲ್ಲೆಯಲ್ಲಿ ಹಳದಿ ಕಾಮಾಲೆ ಮಾರಕವಾಗಿ ಪರಿಣಮಿಸಿದ್ದು, ಚಿಕಿತ್ಸೆ ಫಲಿಸದೆ ಇಬ್ಬರು ಅಕಾಲಿಕ ಮರಣ ಹೊಂದಿದ್ದಾರೆ.ಮಂಗಲ್ಪಾಡಿ ಕೃಷ್ಣನಗರದ ಕೂಲಿ ಕಾರ್ಮಿಕ ಹಾಗೂ ಸ್ಥಳೀಯ ಕಬಡ್ಡಿ ಪಟು ರಂಜಿತ್ (38) ತೀವ್ರ ಜ್ವರದಿಂದ ಬಳಲುತ್ತಿದ್ದರು. ಕುಂಬಳೆ ಮತ್ತು ಕಾಸರಗೋಡು ಆಸ್ಪತ್ರೆಗಳಲ್ಲಿ ಪರೀಕ್ಷಿಸಿದಾಗ ಹಳದಿ ಕಾಮಾಲೆ ದೃಢಪಟ್ಟಿತ್ತು. ಬಳಿಕ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಗುರುವಾರ ಚಿಕಿತ್ಸೆ ಫಲಿಸದೆ ಕೊನೆಯುಸಿರೆಳೆದರು. ​ಮತ್ತೊಂದು ಘಟನೆಯಲ್ಲಿ, ನೆಲ್ಲಿಕಟ್ಟೆ ಮೂಲದ ವಿಠಲ್ ಕ್ಯಾಶ್ ಕಂಪೆನಿಯ ಚಾಲಕ ಡಿ. ರಾಧಾಕೃಷ್ಣ (48) ಎಂಬವರೂ ಇದೇ…

Read More

ಅಮಾನತಿನಲ್ಲಿದ್ದ ಪೊಲೀಸ್ ಸಿಬ್ಬಂದಿ ಕಳ್ಳತನ ಆರೋಪದಲ್ಲಿ ಬಂಧನ

​ ಕಾಸರಗೋಡು : ಕರ್ತವ್ಯ ಲೋಪ ಹಾಗೂ ಬೇಜವಾಬ್ದಾರಿತನದಿಂದಾಗಿ ಅಮಾನತಿನಲ್ಲಿದ್ದ ಕುಂಬಳೆ ಠಾಣೆಯ ಪೊಲೀಸ್ ಸಿಬ್ಬಂದಿ ವಿ. ಎಂ. ವಿಪಿನ್ ಕುಮಾರ್, ಈಗ ಕಳ್ಳತನದ ಆರೋಪದಲ್ಲಿ ಬಂಧನಕ್ಕೊಳಗಾಗಿದ್ದಾನೆ.ತಳಿಪರಂಬದ ಶ್ರೀರಾಜರಾಜೇಶ್ವರಿ ದೇವಸ್ಥಾನದಲ್ಲಿ ಜ್ಯೋತಿಷಿಯೊಬ್ಬರ ಮೊಬೈಲ್ ಫೋನ್ ಎಗರಿಸಿದ ಹಿನ್ನೆಲೆಯಲ್ಲಿ ಈತನನ್ನು ಕೆಲವೇ ಗಂಟೆಗಳಲ್ಲಿ ಸೆರೆಹಿಡಿಯಲಾಗಿದೆ. ​ಈ ಹಿಂದೆ ಕೆಲಸದಿಂದಲೇ ವಜಾಗೊಳಿಸುವ ಪ್ರಕ್ರಿಯೆಗೆ ಒಳಗಾಗಿದ್ದ ಈತನಿಗೆ ಕಳ್ಳತನವೇ ಹವ್ಯಾಸವಾದಂತಿದೆ. ಈ ಮುಂಚೆಯೂ ಪಯ್ಯನ್ನೂರಿನಲ್ಲಿ ಮೊಬೈಲ್ ಕಳವು, ಶಾಲಾ ಹಳೆಯ ವಿದ್ಯಾರ್ಥಿಗಳ ಸಮಾವೇಶದಲ್ಲಿ ಮಹಿಳೆಯ ಚಿನ್ನಾಭರಣ ಅಪಹರಣ ಹಾಗೂ ತೃಚ್ಛಂಬರ ದೇವಸ್ಥಾನದ…

Read More

ಪಾಲಕ್ಕಾಡ್: ಪಟ್ಟಾಂಬಿ ದೇವಸ್ಥಾನ ಕಳ್ಳತನ ಪ್ರಕರಣದಲ್ಲಿ ಬಿಜೆಪಿ ಸ್ಥಳೀಯ ನಾಯಕರ ವಿರುದ್ಧ ಪ್ರಕರಣ

ಪಟ್ಟಾಂಬಿ: ಪಾಲಕ್ಕಾಡ್ ಜಿಲ್ಲೆಯ ತೃತಾಲ ಕೊಪ್ಪಂ ಎರಯೂರಿನ ದೇವಸ್ಥಾನಕ್ಕೆ ಅಕ್ರಮವಾಗಿ ಪ್ರವೇಶಿಸಿ, ಸಿಸಿಟಿವಿ ಕ್ಯಾಮೆರಾಗಳನ್ನು ಬಟ್ಟೆಯಿಂದ ಮುಚ್ಚಿದ ಬಳಿಕ ಮುಂಭಾಗದಲ್ಲಿದ್ದ ಕಬ್ಬಿಣದ ಗ್ರಿಲ್‌ ಅನ್ನು ಕತ್ತರಿಸಿ ಕೊಂಡೊಯ್ದ ಪ್ರಕರಣದಲ್ಲಿ ಬಿಜೆಪಿ ಸ್ಥಳೀಯ ನಾಯಕರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಎರಯೂರು ಶ್ರೀ ತಿರುವಳಯನಾಡ್ ದೇವಸ್ಥಾನದಲ್ಲಿ ನಡೆದ ಕಳ್ಳತನ ಪ್ರಕರಣದಲ್ಲಿ ಬಿಜೆಪಿಯ ಹಿರಿಯ ಸ್ಥಳೀಯ ನಾಯಕರು ಸೇರಿದಂತೆ ಕೆಲವರ ವಿರುದ್ಧ ಕೊಪ್ಪಂ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ದೇವಸ್ಥಾನದ ಆಡಳಿತ ಸಮಿತಿ ನೀಡಿದ ದೂರಿನ ಆಧಾರದ ಮೇಲೆ…

Read More

ತುಳುವನ್ನು ಹೆಚ್ಚುವರಿ ಆಡಳಿತ ಭಾಷೆಯಾಗಿ ಘೋಷಿಸಲು ಆಗ್ರಹ

ಮಂಗಳೂರು:ಕರ್ನಾಟಕದ ಪ್ರಮುಖ ಪ್ರಾದೇಶಿಕ ಭಾಷೆಗಳಲ್ಲಿ ಒಂದಾಗಿರುವ ತುಳುವನ್ನು ರಾಜ್ಯದ ಹೆಚ್ಚುವರಿ ಆಡಳಿತ ಭಾಷೆಯಾಗಿ ಘೋಷಿಸಬೇಕು ಎಂದು ತುಳುನಾಡ ದೈವ ಪರಿಚಾರಕರ ಕ್ಷೇಮಾಭಿವೃದ್ಧಿ ಟ್ರಸ್ಟ್ ಹಾಗೂ ಜೈ ತುಳುನಾಡು ಸಂಘಟನೆ ಆಗ್ರಹಿಸಿದೆ. ಈ ಕುರಿತು ವಿಧಾನಸಭಾಧ್ಯಕ್ಷರು ಹಾಗೂ ದಕ್ಷಿಣ ಕನ್ನಡ ಉಸ್ತುವಾರಿ ಸಚಿವರಾದ ಯು.ಟಿ. ಖಾದರ್** ಅವರಿಗೆ ಮನವಿ ಸಲ್ಲಿಸಿರುವ ಟ್ರಸ್ಟ್, ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲದೆ ಕರ್ನಾಟಕದ ವಿವಿಧ ಭಾಗಗಳಲ್ಲಿಯೂ ಲಕ್ಷಾಂತರ ಜನರು ತುಳುವನ್ನು ಆಡುಭಾಷೆಯಾಗಿ ಬಳಸುತ್ತಿದ್ದಾರೆ ಎಂದು ತಿಳಿಸಿದೆ. ತುಳು ಭಾಷೆಗೆ ಸುದೀರ್ಘ ಇತಿಹಾಸ…

Read More

ಕೊಡಿಯಮ್ಮೆ ನುಸ್ರತುಲ್ ಇಸ್ಲಾಂ ಸಂಘದ 24ನೇ ವಾರ್ಷಿಕೋತ್ಸವ; ಸೆ.11ರಿಂದ ಮೀಲಾದ್ ಮೆಹ್ಫಿಲ್

ಕುಂಬಳೆ : ಕೊಡಿಯಮ್ಮೆ ನುಸ್ರತುಲ್ ಇಸ್ಲಾಂ ಸಂಘದ 24ನೇ ವಾರ್ಷಿಕೋತ್ಸವದ ಅಂಗವಾಗಿ ಸೆಪ್ಟೆಂಬರ್ 11, 12 ಮತ್ತು 13ರಂದು ತ್ವಾಹಾ ನಗರ ಕೊಡಿಯಮ್ಮೆ ಯಲ್ಲಿ ಮೀಲಾದ್ ರ‍್ಯಾಲಿ ಹಾಗೂ ಮೀಲಾದ್ ಮೆಹ್ಫಿಲ್ ಆಯೋಜಿಸಲಾಗಿದೆ. ಈ ಸಂದರ್ಭದಲ್ಲಿ ಮೂರನೇ ಮರ್ಹೂಂ ಹಾಜಿ ಕೆ. ಹಂಝ ಉಸ್ತಾದ್ ಪ್ರಶಸ್ತಿ ಪ್ರದಾನವೂ ನಡೆಯಲಿದೆ. ಸೆಪ್ಟೆಂಬರ್ 11ರಂದು ಜುಮಾ ನಮಾಝ್ ಬಳಿಕ ಮಖಾಂ ಸಿಯಾರತ್ ಹಾಗೂ ಸಂಜೆ 4 ಗಂಟೆಗೆ ಧ್ವಜಾರೋಹಣ ನಡೆಯಲಿದೆ. ಸೆಪ್ಟೆಂಬರ್ 12ರಂದು ಅಸರ್ ನಮಾಝ್ ಬಳಿಕ 25 ಮದರಸಗಳ…

Read More

ಹೊಸದುರ್ಗ ನಿತ್ಯಾನಂದ ಆಶ್ರಮದಲ್ಲಿ ಪುಸ್ತಕ ಬಿಡುಗಡೆ

ಕಾಸರಗೋಡು: ಕಾಞಂಗಾಡ್‌ನ ಹೊಸದುರ್ಗದ ಭಗವಾನ್ ಶ್ರೀ ನಿತ್ಯಾನಂದ ಆಶ್ರಮದಲ್ಲಿ ಸೆ.19ರಂದು ಬೆಳಿಗ್ಗೆ 10.45ಕ್ಕೆ ಪೂಜ್ಯ ಶ್ರೀ ಅವಧೂತಾನಂದ ಸ್ವಾಮೀಜಿ ಅವರ ಅನುಭವ ಕಥನ ಕುರಿತ ಪುಸ್ತಕವೊಂದರ ಬಿಡುಗಡೆ ಸಮಾರಂಭ ನಡೆಯಲಿದೆ. ಮುಂಬೈಯ ಸ್ವಾಮಿ ಅವಧೂತಾನಂದ ಟ್ರಸ್ಟ್ ಈ ಕಾರ್ಯಕ್ರಮವನ್ನು ಆಯೋಜಿಸಿದೆ. ಪೂಜ್ಯ ಶ್ರೀ ಅವಧೂತಾನಂದ ಸ್ವಾಮೀಜಿ ಅವರ ಅನುಭವಗಳು, ಜೀವನ, ಕಾರ್ಯಗಳನ್ನೊಳಗೊಂಡ ಈ ಕೃತಿಯು ಕನ್ನಡ ಮತ್ತು ಇಂಗ್ಲಿಷ್ ಭಾಷೆಗಳೆರಡರಲ್ಲೂ ಬಿಡುಗಡೆಗೊಳ್ಳಲಿದೆ. ಕಾರ್ಯಕ್ರಮವು ಬೆಳಿಗ್ಗೆ 10.45ರಿಂದ ಮಧ್ಯಾಹ್ನ 1 ರವರೆಗೆ ನಡೆಯಲಿದೆ. ದೀಪ ಪ್ರಜ್ವಲನ, ವೇದಘೋಷ, ಪುಸ್ತಕ…

Read More

ಎ.ಜೆ. ತಾಂತ್ರಿಕ ಮಹಾವಿದ್ಯಾಲಯದಲ್ಲಿ ನೂತನ ಆಡಿಟೋರಿಯಂ ಉದ್ಘಾಟನೆ

ಮಂಗಳೂರು: ನಗರದ ಎ.ಜೆ. ಇಂಜಿನಿಯರಿಂಗ್ ಮತ್ತು ತಾಂತ್ರಿಕ ಮಹಾವಿದ್ಯಾಲಯದಲ್ಲಿ ನೂತನ ಎ.ಜೆ. ಆಡಿಟೋರಿಯಂ ಉದ್ಘಾಟನೆ ಹಾಗೂ ಪದವಿ ಪ್ರದಾನ ಸಮಾರಂಭ ಸೆ. 12ರಂದು ಬೆಳಗ್ಗೆ 10 ಗಂಟೆಗೆ ನಡೆಯಲಿದೆ ಎಂದು ಸಂಸ್ಥೆಯ ಕ್ಯಾಂಪಸ್ ನಿರ್ದೇಶಕ ಡಾ. ಟಿ. ಜಯಪ್ರಕಾಶ್ ರಾವ್ ತಿಳಿಸಿದ್ದಾರೆ. ನಗರದ ಪತ್ರಿಕಾಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕರ್ನಾಟಕ ಸರ್ಕಾರದ ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆಯ ಸಚಿವ ಟಿ. ರಘುಮೂರ್ತಿ ಅವರು ನೂತನ ಆಡಿಟೋರಿಯಂ ಉದ್ಘಾಟಿಸಲಿದ್ದು, ಬೆಂಗಳೂರು ವಿಶ್ವವಿದ್ಯಾಲಯದ ಮಾಜಿ ಕುಲಪತಿ ಡಾ. ಎಂ….

Read More

ಶೇಣಿ ಶಾಲೆಯಲ್ಲಿ ವಿಶೇಷ ಸಮೃದ್ಧಿ ಕಾರ್ಯಕ್ರಮದ ಉದ್ಘಾಟನೆ

ಪೆರ್ಲ: ಶೇಣಿ ಶ್ರೀ ಶಾರದಾಂಬ ಎಯುಪಿ ಶಾಲೆಯಲ್ಲಿ 2026-27ನೇ ಸಾಲಿನ ವಿಶೇಷ ಸಮೃದ್ಧಿ ಕಾರ್ಯಕ್ರಮದ ಉದ್ಘಾಟನೆ ಶುಕ್ರವಾರ ಶಾಲಾ ಸಭಾಂಗಣದಲ್ಲಿ ನಡೆಯಿತು. ಎಣ್ಮಕಜೆ ಗ್ರಾಮ ಪಂಚಾಯತ್ ಅಧ್ಯಕ್ಷೆ ಕುಸುಮಾವತಿ ಬಿ. ಕಾರ್ಯಕ್ರಮವನ್ನು ಉದ್ಘಾಟಿಸಿದರು. ಶಾಲಾ ಮುಖ್ಯೋಪಾಧ್ಯಾಯ ಹಾಗೂ ಎಣ್ಮಕಜೆ ಗ್ರಾಮ ಪಂಚಾಯತ್ ಕ್ಷೇಮ ಕಾರ್ಯ ಸ್ಥಾಯಿ ಸಮಿತಿ ಅಧ್ಯಕ್ಷ ರಾಧಾಕೃಷ್ಣ ನಾಯಕ್ ಜೆ.ಎಸ್. ಅಧ್ಯಕ್ಷತೆ ವಹಿಸಿದ್ದರು. ಎಣ್ಮಕಜೆ ಗ್ರಾಮ ಪಂಚಾಯತ್ ಉಪಾಧ್ಯಕ್ಷ ಅಬೂಬಕರ್ ಸಿದ್ದೀಕ್ ವಳಮೊಗರ್, ಕುಂಬಳೆ ಉಪಜಿಲ್ಲಾ ಶಿಕ್ಷಣಾಧಿಕಾರಿ ಅಶೋಕ ಎಂ., ಕಾಸರಗೋಡು ಡಯಟ್ ಉಪನ್ಯಾಸಕ…

Read More

ಪತ್ನಿ ಅಗಲಿದ ಶೋಕದಲ್ಲಿದ್ದ ಪತಿ ಅದೇ ಸ್ಥಳದಲ್ಲಿ ನೇಣಿಗೆ ಶರಣು

​ಕಾಸರಗೋಡು: ಪತ್ನಿ ಆತ್ಮಹತ್ಯೆ ಮಾಡಿಕೊಂಡ ದುಃಖದಲ್ಲಿದ್ದ ಪತಿಯೊಬ್ಬರು ತಾನೂ ನೇಣು ಬಿಗಿದುಕೊಂಡು ಜೀವತ್ಯಾಗ ಮಾಡಿದ ದಾರುಣ ಘಟನೆ ವೆಳ್ಳರಿಕುಂಡು ಪೊಲೀಸ್ ಠಾಣಾ ವ್ಯಾಪ್ತಿಯ ಪರಪ್ಪ, ಬಿರಿಕ್ಕುಲಂನ ಕುರುಂಬಾಯಿ ಬಳಿ ಸಂಭವಿಸಿದೆ.ರೈತರಾಗಿದ್ದ ಕೆ. ಪವಿತ್ರನ್ (58) ಸಾವನ್ನಪ್ಪಿದ ದುರ್ದೈವಿ. ಗುರುವಾರ ರಾತ್ರಿ 10:30 ರ ಸುಮಾರಿಗೆ ಅವರು ತಮ್ಮ ಮಲಗುವ ಕೋಣೆಯ ಫ್ಯಾನ್‌ಗೆ ನೇಣು ಬಿಗಿದುಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಕೆಲಸಕ್ಕೆ ಹೋಗಿದ್ದ ಮಗ ಮನೆಗೆ ಹಿಂತಿರುಗಿದಾಗ ಈ ದುರಂತ ಬೆಳಕಿಗೆ ಬಂದಿದೆ.ವಿಷಾದಕರ ಸಂಗತಿಯೆಂದರೆ, ಪವಿತ್ರನ್ ಅವರ ಪತ್ನಿ ಗೀತಾ…

Read More

ತೀರ್ಥ ಅಮಾವಾಸ್ಯೆ: ಮಂಜೇಶ್ವರದ ಸಿಂಧೂ ಸಮುದ್ರ ಕಿನಾರೆಯಲ್ಲಿ ಜನಸಾಗರ

​ಕಾಸರಗೋಡು : ಜಿಲ್ಲೆಯಾದ್ಯಂತ ತೀರ್ಥ ಅಮಾವಾಸ್ಯೆಯ ಅಂಗವಾಗಿ ವಿವಿಧ ಧಾರ್ಮಿಕ ಕ್ಷೇತಗಳಲ್ಲಿ ಹಾಗೂ ಸಮುದ್ರ ತೀರಗಳಲ್ಲಿ ಇಂದು ಬೆಳಿಗ್ಗೆಯಿಂದಲೇ ಶ್ರದ್ಧಾ-ಭಕ್ತಿಯಿಂದ ಪುಣ್ಯಸ್ನಾನ ನೆರವೇರುತ್ತಿದೆ. ಮಂಜೇಶ್ವರದ ಐಲ ಶಿವಾಜಿನಗರದ ಸಿಂಧೂ ಸಮುದ್ರ ಕಿನಾರೆಯಲ್ಲಿ ಬೆಳಗಿನ ಜಾವದಿಂದಲೇ ಕರ್ನಾಟ‌ಕ ಸೇರಿದಂತೆ ಹೊರನಾಡಿನ ಸಾವಿರಾರು ಭಕ್ತರು ಆಗಮಿಸಿ, ಸಮುದ್ರದಲ್ಲಿ ಮುಳುಗೆದ್ದು ಪುನೀತರಾದರು. ​ಈ ಮಹೋತ್ಸವಕ್ಕಾಗಿ ಐಲ ರೈಲ್ವೇ ಗೇಟ್‌ನಿಂದ ಕಡಲತೀರದವರೆಗೆ ತಳಿರು-ತೋರಣಗಳಿಂದ ರಮಣೀಯವಾಗಿ ಶೃಂಗರಿಸಲಾಗಿದೆ. ಸ್ಥಳೀಯ ಶ್ರೀ ಗಣೇಶೋತ್ಸವ ಮತ್ತು ಶಾರದೋತ್ಸವ ಸಮಿತಿಯು ಭಕ್ತರ ಅನುಕೂಲಕ್ಕಾಗಿ ರಕ್ಷಣಾ ವ್ಯವಸ್ಥೆ ಹಾಗೂ ಮೂಲಭೂತ…

Read More
error: Content is protected !!