ಮುಂಬೈಯಲ್ಲಿ ಪ್ರಪ್ರಥಮ ಬಾರಿಗೆ ಯಶಸ್ವಿಯಾಗಿ ನಡೆದ ಹರಿಕಥಾ ನವಾಹ

ಮುಂಬೈ:ಕರ್ನಾಟಕದ ಬಹುಮುಖ ಸಾಂಸ್ಕೃತಿಕ ಪ್ರತಿಭೆಯ ಕಲಾವಿದ, ಹರಿದಾಸ ತೋನ್ಸೆ ಪುಷ್ಕಳ ಕುಮಾರ್ ಅವರು ಹರಿಕಥಾ ಕಲೆಯನ್ನು ಮೈಗೂಡಿಸಿಕೊಂಡು ಕರ್ನಾಟಕದ ಕರಾವಳಿ ಜಿಲ್ಲೆಗಳಲ್ಲದೆ, ದೇಶ-ವಿದೇಶಗಳ ವಿವಿಧ ವೇದಿಕೆಗಳಲ್ಲಿ ತಮ್ಮ ಕಲಾ ಪ್ರತಿಭೆಯಿಂದ ಜನಮನ್ನಣೆ ಗಳಿಸಿದ್ದಾರೆ. ಮುಂಬೈಯಲ್ಲಿ ಪ್ರಪ್ರಥಮ ಬಾರಿಗೆ ಆಗಸ್ಟ್ 15ರಿಂದ 23ರವರೆಗೆ ಒಂಬತ್ತು ಸಂಘಟನೆಗಳ ಆಶ್ರಯದಲ್ಲಿ, ಒಂಬತ್ತು ವಿವಿಧ ಸ್ಥಳಗಳಲ್ಲಿ ವಿವಿಧ ಆಖ್ಯಾನಗಳನ್ನು ಒಳಗೊಂಡ ಹರಿಕಥಾ ನವಾಹವನ್ನು ಯಶಸ್ವಿಯಾಗಿ ನಡೆಸಿಕೊಟ್ಟರು. ಆಗಸ್ಟ್ 15ರಂದು ಸಂತಾಕ್ರೂಸ್ ಬಿಲ್ಲವ ಭವನದಲ್ಲಿ ‘ಬಲಿಚಕ್ರವರ್ತಿ’ ಕಥಾನಕದೊಂದಿಗೆ ನವಾಹಕ್ಕೆ ಚಾಲನೆ ನೀಡಲಾಯಿತು. ಆಗಸ್ಟ್ 16ರಂದು…

Read More

ಕೇರಳ ಪ್ರಾಂತ್ಯ ಕನ್ನಡ ಮಾಧ್ಯಮ ಅಧ್ಯಾಪಕರ ಸಂಘ ಮಂಜೇಶ್ವರ ಉಪಜಿಲ್ಲಾ ಸಮ್ಮೇಳನ ಅಕ್ಟೋಬರ್ 10 ರಂದು

ಉಪ್ಪಳ : ಕೇರಳ ಪ್ರಾಂತ್ಯ ಕನ್ನಡ ಮಾಧ್ಯಮ ಅಧ್ಯಾಪಕರ ಸಂಘದ ಮಂಜೇಶ್ವರ ಉಪಜಿಲ್ಲಾ ಸಮ್ಮೇಳನವು ಅಕ್ಟೋಬರ್ 10 ರಂದು ಸರಕಾರಿ ಪ್ರೌಢ ಶಾಲೆ ಕಡಂಬಾರ್ ಲ್ಲಿ ಜರಗಲಿದೆ.ಇದರ ಪೂರ್ವಭಾವಿಯಾಗಿ ಜರಗಿದ ಮಂಜೇಶ್ವರ ಉಪಜಿಲ್ಲಾ ಕಾರ್ಯಕಾರಿ ಸಮಿತಿ ಸಭೆಯು ಉಪಜಿಲ್ಲಾ ಘಟಕದ ಅಧ್ಯಕ್ಷರಾದ ಅಶೋಕ್ ಕೊಡ್ಲಮೊಗರು ರವರ ಅಧ್ಯಕ್ಷತೆಯಲ್ಲಿ ಉಪ್ಪಳದ ಕೈಕಂಬ ಪಂಚಮಿ ಸಭಾಂಗಣದಲ್ಲಿ ಜರಗಿತು. ಸಭೆಯಲ್ಲಿ ಕೇಂದ್ರ ಸಮಿತಿಯ ಅಧ್ಯಕ್ಷರಾದ ಸುಕೇಶ್, ಉಪಾಧ್ಯಕ್ಷರಾದ ಉಮೇಶ್ ಬಾಯಾರ್, ಕಾರ್ಯದರ್ಶಿಯಾದ ಜಯಪ್ರಶಾಂತ್ ಪಾಲೆಂಗ್ರಿ , ಸದಸ್ಯರಾದ ಶ್ರೀರಾಮ್ ಕೆದುಕೋಡಿ ,ಚಂದ್ರಿಕಾ…

Read More

ಹೆರಿಗೆಯಾದ ವಲಸೆ ಕಾರ್ಮಿಕ ಮಹಿಳೆ ಹಾಗೂ ಮಗುವಿನ ಜೀವ ರಕ್ಷಿಸಿದವರಿಗೆ ಎಸ್‌ಡಿಪಿಐ ಯಿಂದ ಗೌರವ

​ಮಂಜೇಶ್ವರ: ಮುಂಜಾನೆ 3:45ಕ್ಕೆ ವಾಸ್ತವ್ಯದ ಫ್ಲಾಟ್‌ನಲ್ಲಿ ಮಗುವಿಗೆ ಜನ್ಮ ನೀಡಿದ ವಲಸೆ ಕಾರ್ಮಿಕ ಮಹಿಳೆ ಹಾಗೂ ನವಜಾತ ಶಿಶುವಿಗೆ ಸಮಯೋಚಿತವಾಗಿ ನೆರವು ನೀಡಿ ಜೀವ ರಕ್ಷಿಸಿದವರನ್ನು ಎಸ್‌ಡಿಪಿಐ ಮಂಜೇಶ್ವರ ಪಂಚಾಯತ್ ಸಮಿತಿ ವತಿಯಿಂದ ಸನ್ಮಾನಿಸಲಾಯಿತು.ಹೆರಿಗೆಯ ವಿಚಾರ ತಿಳಿದ ತಕ್ಷಣವೇ ಎಸ್‌ಡಿಪಿಐ ಮಂಜೇಶ್ವರ ಪಂಚಾಯತ್ ಅಧ್ಯಕ್ಷ ಶಂಸುದ್ದೀನ್ ಮತ್ತು ಜಕರಿಯ ಉದ್ಯಾವರ ಸ್ಥಳಕ್ಕೆ ತಲುಪಿ ಅಗತ್ಯ ಕ್ರಮಕೈಗೊಂಡರು. ಬಳಿಕ ಆ್ಯಂಬುಲೆನ್ಸ್ ಚಾಲಕ ಅಸ್ಲಂ ಉದ್ಯಾವರ, ಉದ್ಯಾವರದ ‘ರಕ್ಷಾ ಹೈಟೆಕ್ ಲ್ಯಾಬೊರೇಟರಿ-ಕ್ಲಿನಿಕ್’ನ ವೈದ್ಯರು ಮತ್ತು ಶುಶ್ರೂಷಕರನ್ನು (ಸಿಸ್ಟರ್ಸ್) ಆ್ಯಂಬುಲೆನ್ಸ್‌ನಲ್ಲಿ ಮಹಿಳೆಯಿದ್ದ…

Read More

ಕ.ಸಾ.ಪ ದಿಂದ ಮೀಯಪದವಿನಲ್ಲಿ ಎಸ್ .ವಿ ಭಟ್ ಸಂಸ್ಮರಣೆ ಮತ್ತು ಕವಿಗೋಷ್ಠಿ. ಎಸ್ .ವಿ ಭಟ್ಟರ ವ್ಯಕ್ತಿತ್ವ ಅನುಸರಣೀಯ: ರಾಜಾರಾಮ ರಾವ್

ಮೀಯಪದವು : ಕನ್ನಡ ಸಾಹಿತ್ಯ ಪರಿಷತ್ತು ಕೇರಳ ಗಡಿನಾಡ ಘಟಕದ ಆಶ್ರಯದಲ್ಲಿ ನಿವೃತ್ತ ಶಿಕ್ಷಣಾ ಧಿಕಾರಿ, ಕನ್ನಡ ಸಾಹಿತ್ಯ ಪರಿಷತ್ತು ಕೇರಳ ಗಡಿನಾಡ ಘಟಕದ ನಿಕಟಪೂರ್ವ ಅಧ್ಯಕ್ಷ, ಎಸ್.ವಿ.ಭಟ್ ಅವರ ಸಂಸ್ಮರಣಾ ಕಾರ್ಯಕ್ರಮ ಮತ್ತು ಕವಿಗೋಷ್ಠಿಯು ಮೀಯಪದವು ವಿದ್ಯಾವರ್ಧಕ ಉನ್ನತ ಪ್ರೌಢಶಾಲೆಯ ‘ಕೇಶವಾಮೃತಂ’ ಸಭಾಂಗಣದಲ್ಲಿ ನಡೆಯಿತು. ವಿದ್ಯಾವರ್ಧಕ ಪ್ರೌಢಶಾಲೆಯ ನಿವೃತ್ತ ಮುಖ್ಯ ಶಿಕ್ಷಕ ರಾಜಾರಾಮ ರಾವ್. ಟಿ ಸಂಸ್ಮರಣಾ ಭಾಷಣ ಮಾಡಿದರು. ದಿ. ಎಸ್ .ವಿ ಭಟ್ಟರು ಕ.ಸಾ.ಪ ಅಧ್ಯಕ್ಷರಾಗಿ ಕನ್ನಡ ಭಾಷೆ ಹಾಗೂ ಸಂಸ್ಕೃತಿಯ ಬೆಳವಣಿಗೆಗೆ…

Read More

ಕಾಸರಗೋಡು-ಮಂಗಳೂರು ಬಸ್ ಪ್ರಯಾಣಿಕರ ಪರದಾಟ: ಒಂದೇ ಬಸ್ಸಿನಲ್ಲಿ 140 ಜನರ ಪ್ರಯಾಣ

ಮಂಜೇಶ್ವರ : ​ಕಾಸರಗೋಡು ಮತ್ತು ಮಂಗಳೂರು ನಡುವೆ ಸಂಚರಿಸುವ ಬಸ್‌ಗಳಲ್ಲಿ ಪ್ರಯಾಣಿಕರ ಸಂಖ್ಯೆ ಮಿತಿಮೀರಿದ್ದು, ಸಾರ್ವಜನಿಕರು ಹಾಗೂ ವಿದ್ಯಾರ್ಥಿಗಳು ತೀವ್ರ ಸಂಕಷ್ಟ ಎದುರಿಸುತ್ತಿದ್ದಾರೆ. ಸಾಮಾನ್ಯ ಬಸ್‌ನ ಸಾಮರ್ಥ್ಯ ಸುಮಾರು 67 ಪ್ರಯಾಣಿಕರಷ್ಟಿದ್ದರೆ, ಪ್ರಸ್ತುತ ಪೀಕ್ ಅವರ್‌ಗಳಲ್ಲಿ ಬಸ್‌ಗಳಲ್ಲಿ 110 ರಿಂದ 140 ಜನ ಪ್ರಯಾಣಿಸುತ್ತಿರುವುದು ಆತಂಕಕ್ಕೆ ಕಾರಣವಾಗಿದೆ. ​ ಕೇರಳ ಸರ್ಕಾರವು ಮಹಿಳೆಯರಿಗೆ ಕೆಎಸ್‌ಆರ್‌ಟಿಸಿ ಬಸ್‌ಗಳಲ್ಲಿ ಉಚಿತ ಪ್ರಯಾಣದ ‘ಪ್ರಿಯದರ್ಶಿನಿ’ ಯೋಜನೆ ಜಾರಿಗೆ ತಂದ ಬಳಿಕ ಬಸ್ ಪ್ರಯಾಣಿಕರ ಸಂಖ್ಯೆ ದುಪ್ಪಟ್ಟಾಗಿದೆ. ಸಮಯಕ್ಕೆ ಸರಿಯಾಗಿ ರೈಲು ಲಭ್ಯವಿಲ್ಲದ…

Read More

ಕಾಸರಗೋಡು ದಸರಾ ಕವಿಗೋಷ್ಠಿಗೆ ಡಾ. ಎಂ.ಜಿ.ಆರ್. ಅರಸ್ ಉದ್ಘಾಟಕರು

ಕಾಸರಗೋಡು: ಕನ್ನಡ ಭವನ ಮತ್ತು ಗ್ರಂಥಾಲಯ, ಕನ್ನಡ ಭವನ ಪ್ರಕಾಶನ, ಕನ್ನಡ ಭವನ ಉಚಿತ ವಾಚನಾಲಯ ಹಾಗೂ ಕಾಸರಗೋಡು ಪಾಂಗೋಡು ಶ್ರೀ ದುರ್ಗಾಪರಮೇಶ್ವರಿ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಸಾಂಸ್ಕೃತಿಕ ಘಟಕದ ಸಂಯುಕ್ತ ಆಶ್ರಯದಲ್ಲಿ ‘ಕಾಸರಗೋಡು ದಸರಾ ಸಾಂಸ್ಕೃತಿಕೋತ್ಸವ-2026’ ನಡೆಯಲಿದೆ. ಇದರ ಅಂಗವಾಗಿ ಅಕ್ಟೋಬರ್ 18ರಂದು ಪಾಂಗೋಡು ಶ್ರೀ ದುರ್ಗಾಪರಮೇಶ್ವರಿ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಸಭಾಂಗಣದಲ್ಲಿ ಕಾಸರಗೋಡು ದಸರಾ ಕವಿಗೋಷ್ಠಿ ನಡೆಯಲಿದೆ. ಡಾ. ವಾಮನ್ ರಾವ್ ಬೇಕಲ್ ಹಾಗೂ ಸಂಧ್ಯಾರಾಣಿ ಟೀಚರ್ ಅವರ ಸಾರಥ್ಯದಲ್ಲಿ ಅಕ್ಟೋಬರ್ 11ರಿಂದ 21ರವರೆಗೆ…

Read More

ಸೆ.13ರಂದು ತುಂಬೆಯಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ

ಬಂಟ್ವಾಳ: ತುಂಬೆ ಮುಹಿಯುದ್ದೀನ್ ಎಜುಕೇಶನಲ್ ಟ್ರಸ್ಟ್ ಆಶ್ರಯದಲ್ಲಿ ಹಾಗೂ ತುಂಬೆ ಗ್ರೂಪ್ ಅಜ್ಜಾನ್ ಯುಎಇ ಸಂಸ್ಥಾಪಕ ಡಾ. ತುಂಬೆ ಮೊಯ್ದಿನ್ ಅವರ ಸಹಯೋಗದಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ ಸೆ.13ರಂದು ಬೆಳಿಗ್ಗೆ 10ರಿಂದ ಮಧ್ಯಾಹ್ನ 1ರವರೆಗೆ ತುಂಬೆ ಪದವಿ ಪೂರ್ವ ಕಾಲೇಜು ಸಭಾಂಗಣದಲ್ಲಿ ನಡೆಯಲಿದೆ. ನುರಿತ ವೈದ್ಯರ ನೇತೃತ್ವದಲ್ಲಿ ಕಣ್ಣಿನ ಹಾಗೂ ಸ್ತ್ರೀರೋಗ ತಪಾಸಣೆ, ರಕ್ತದೊತ್ತಡ, ಮಧುಮೇಹ ಸೇರಿದಂತೆ ವಿವಿಧ ಸಾಮಾನ್ಯ ಕಾಯಿಲೆಗಳ ತಪಾಸಣೆ ಮತ್ತು ಚಿಕಿತ್ಸೆ ನೀಡಲಾಗುವುದು. ಅಗತ್ಯವಿರುವವರಿಗೆ ಉಚಿತ ಔಷಧಿಯನ್ನೂ ವಿತರಿಸಲಾಗುವುದು. ಹೆಚ್ಚಿನ ಚಿಕಿತ್ಸೆಯ…

Read More

ದ.ಕ.ದ 7 ಗ್ರಾಪಂಗಳಿಗೆ ಲೋಕಾಯುಕ್ತ ಪೊಲೀಸರ ದಾಳಿ

ಮಂಗಳೂರು, ಸೆ.10: ದಕ್ಷಿಣ ಕನ್ನಡ ಜಿಲ್ಲೆಯ ವಿವಿಧ ಗ್ರಾಮ ಪಂಚಾಯಿತಿಗಳಿಗೆ ಲೋಕಾಯುಕ್ತ ಪೊಲೀಸರು ಗುರುವಾರ ದಾಳಿ ನಡೆಸಿ ಪರಿಶೀಲನೆ ನಡೆಸಿದ್ದಾರೆ. ಸುಳ್ಯ ತಾಲೂಕಿನ ಬೆಳ್ಳಾರೆ ಹಾಗೂ ಪಂಜ, ಉಳ್ಳಾಲ ತಾಲೂಕಿನ ತಲಪಾಡಿ, ಕೊಣಾಜೆ ಹಾಗೂ ಬಾಳೆಪುಣಿ, ಮಂಗಳೂರು ತಾಲೂಕಿನ ಬಾಳ ಮತ್ತು ಮೂಡುಬಿದಿರೆ ತಾಲೂಕಿನ ಬೆಳುವಾಯಿ ಗ್ರಾಮ ಪಂಚಾಯಿತಿಗಳಲ್ಲಿ ಲೋಕಾಯುಕ್ತ ತಂಡಗಳು ಕಾರ್ಯಾಚರಣೆ ನಡೆಸಿವೆ. ಲೋಕಾಯುಕ್ತ ಕೇಂದ್ರ ಕಚೇರಿಯಲ್ಲಿ ದಾಖಲಾಗಿರುವ ಸ್ವಯಂಪ್ರೇರಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಈ ದಾಳಿ ನಡೆಸಲಾಗಿದೆ. ಲೋಕಾಯುಕ್ತ ಮಂಗಳೂರು ವಿಭಾಗದ ಪೊಲೀಸ್ ಅಧೀಕ್ಷಕ ಬಿ.ಪಿ….

Read More

ಹೂಹಾರ, ಪಟಾಕಿ, ಸಿಹಿ ಹಂಚಿ ಪದ್ಮರಾಜ್ ಪೂಜಾರಿ ಆಯ್ಕೆಗೆ ಕಾರ್ಯಕರ್ತರ ಸಂಭ್ರಮ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಕಾಂಗ್ರೆಸ್ ಅಧ್ಯಕ್ಷರಾಗಿ ಆಯ್ಕೆಯಾದ ಪದ್ಮರಾಜ್ ಪೂಜಾರಿ ಅವರನ್ನು ಕಾರ್ಯಕರ್ತರು ಇಂದು ಅಭಿನಂದಿಸಿದರು. ಎನ್.ಎಸ್.ಯು.ಐ. ಮತ್ತು ಯುವ ಕಾಂಗ್ರೆಸ್ ಪದಾಧಿಕಾರಿಗಳು ಕಾಂಗ್ರೆಸ್ ಕಛೇರಿ ಎದುರು ಆತ್ಮೀಯವಾಗಿ ಹೊಸ ಅಧ್ಯಕ್ಷರನ್ನು ಸ್ವಾಗತಿಸಿದರು .ನೂತನ ಅಧ್ಯಕ್ಷರಿಗೆ ಹೂ ಹಾರ ,ಹೂ ಗುಚ್ಚ ನೀಡಿ ,ಪಟಾಕಿ ಸಿಡಿಸಿ ,ಸಿಹಿ ಹಂಚಿಕೆ ಮಾಡಿ ಸಂಭ್ರಮಿಸಿದರು . ಈ ಸಂದರ್ಭದಲ್ಲಿ ಘೋಷಣೆ ಕೂಗಿ ಹರ್ಷ ವ್ಯಕ್ತ ಪಡಿಸಿದರು.ಎಲ್ಲರ ನಿರೀಕ್ಷೆಗೆ ಸ್ಪಂದಿಸುವುದಾಗಿ ಹಾಗು ಪಕ್ಷದ ಬಲವರ್ಧನೆಗೆ ಶ್ರಮಿಸುವುದಾಗಿ ಪದ್ಮರಾಜ ಪೂಜಾರಿ ಹೇಳಿದರು.

Read More

ಕಾಸರಗೋಡು ದಸರಾ ಕವಿಗೋಷ್ಠಿಗೆ ಡಾ. ಜಯಪ್ಪ ಹೊನ್ನಾಳಿ ಘನ ಅಧ್ಯಕ್ಷತೆ

ಕಾಸರಗೋಡು: ಕಾಸರಗೋಡು ಕನ್ನಡ ಭವನದ ಆಶ್ರಯದಲ್ಲಿ ಅ.11ರಿಂದ 21ರವರೆಗೆ ನಡೆಯಲಿರುವ ‘ಕಾಸರಗೋಡು ದಸರಾ ಸಾಂಸ್ಕೃತಿಕೋತ್ಸವ–2026’ರ ಅಂಗವಾಗಿ ಅ.18ರಂದು ಪಾಂಗೋಡು ಶ್ರೀ ದುರ್ಗಾಪರಮೇಶ್ವರಿ–ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಸಭಾಂಗಣದಲ್ಲಿ ನಡೆಯಲಿರುವ ದಸರಾ ಕವಿಗೋಷ್ಠಿಗೆ ಖ್ಯಾತ ಕವಿ, ಮೈಸೂರಿನ (ಜಯ ಕವಿ ಮೈಸೂರು) ಡಾ. ಜಯಪ್ಪ ಹೊನ್ನಾಳಿ ಅವರು ಅಧ್ಯಕ್ಷತೆ ವಹಿಸಲಿದ್ದಾರೆ. ಡಾ. ವಾಮನ್ ರಾವ್ ಬೇಕಲ್ ಹಾಗೂ ಸಂಧ್ಯಾರಾಣಿ ಟೀಚರ್ ಅವರ ಸಾರಥ್ಯದಲ್ಲಿ ಕನ್ನಡ ಭವನ ಮತ್ತು ಗ್ರಂಥಾಲಯ, ಕನ್ನಡ ಭವನ ಪ್ರಕಾಶನ, ಕನ್ನಡ ಭವನ ಉಚಿತ ವಾಚನಾಲಯ ಹಾಗೂ…

Read More
error: Content is protected !!