ಹೊಸಂಗಡಿ ಓಂ ಶಾಂತಿಯಲ್ಲಿ ಶಿಕ್ಷಕರ ದಿನಾಚರಣೆ ಹಾಗೂ ಶ್ರೀಕೃಷ್ಣ ಜನ್ಮಾಷ್ಟಮಿ ಆಚರಣೆ

ಮಂಜೇಶ್ವರ :ಹೊಸಂಗಡಿ ಓಂ ಶಾಂತಿ ಕೇಂದ್ರದಲ್ಲಿ ಶಿಕ್ಷಕರ ದಿನಾಚರಣೆ ಹಾಗೂ ಶ್ರೀಕೃಷ್ಣ ಜನ್ಮಾಷ್ಟಮಿ ಕಾರ್ಯಕ್ರಮವನ್ನು ಸಡಗರದಿಂದ ಆಚರಿಸಲಾಯಿತು.ಕಾರ್ಯಕ್ರಮದಲ್ಲಿ ಶ್ರೀಮತಿ ಮೋಹಿನಿ ಟೀಚರ್ ವಂದಿಸಿದರು. ಶ್ರೀಮತಿ ಕೃಷ್ಣವೇಣಿ ಟೀಚರ್ ಅವರು ಶಿಕ್ಷಕರನ್ನು ಶಾಲು ಹೊದಿಸಿ ಗೌರವಿಸಿದರು. ಸಭೆಯಲ್ಲಿ ಶ್ರೀಮತಿ ತನುಜಾ ಟೀಚರ್, ಶ್ರೀ ಗಣೇಶ್ ನಾಯಕ್ ಟೀಚರ್ ಹಾಗೂ ಶ್ರೀ ಚಂದ್ರಹಾಸ ಟೀಚರ್ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಮಾತನಾಡಿದ ಬ್ರಹ್ಮಕುಮಾರಿ ವಿಜಯಲಕ್ಷ್ಮಿ ಅಕ್ಕನವರು, “ಮೌಲ್ಯಗಳೇ ಸುಸಂಸ್ಕೃತ ಜೀವನದ ಅಡಿಪಾಯ. ಜೀವನದಲ್ಲಿ ಉಂಟಾಗುವ ದುಃಖ, ಅಶಾಂತಿ, ಒತ್ತಡ ಹಾಗೂ ರೋಗಗಳಿಗೆ ಆಧ್ಯಾತ್ಮಿಕತೆಯ…

Read More

ಯುವಜನರು ವಿಕಸಿತ ಭಾರತಕ್ಕಾಗಿ ತಮ್ಮ ಆಲೋಚನೆಗಳನ್ನು ರಾಷ್ಟ್ರಮಟ್ಟಕ್ಕೆ ತಲುಪಿಸಲಿ

ಮಂಗಳೂರು: ಸ್ವಾಮಿ ವಿವೇಕಾನಂದರ ಜನ್ಮದಿನದ ಅಂಗವಾಗಿ ಪ್ರತಿವರ್ಷ ಜ.12ರಂದು ನಡೆಯುವ ರಾಷ್ಟ್ರೀಯ ಯುವಜನೋತ್ಸವವನ್ನು ‘ವಿಕಸಿತ ಭಾರತ ಯಂಗ್ ಲೀಡರ್ಸ್ ಡೈಲಾಗ್’ ಹೆಸರಿನಲ್ಲಿ ಆಯೋಜಿಸಲಾಗುತ್ತಿದ್ದು, 15ರಿಂದ 29 ವರ್ಷದ ಯುವಜನರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು ಮೈ ಭಾರತ್ ಜಿಲ್ಲಾ ಡೆಪ್ಯೂಟಿ ಡೈರೆಕ್ಟರ್ ಉಲ್ಲಾಸ್ ಮನವಿ ಮಾಡಿದರು. ನಗರದ ಪತ್ರಿಕಾಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಯುವಜನರ ಪ್ರತಿಭೆ, ಜ್ಞಾನ, ಸೃಜನಶೀಲತೆ ಹಾಗೂ ವಿಕಸಿತ ಭಾರತದ ಕುರಿತಾದ ಆಲೋಚನೆಗಳಿಗೆ ರಾಷ್ಟ್ರಮಟ್ಟದ ವೇದಿಕೆ ಕಲ್ಪಿಸುವ ಉದ್ದೇಶದಿಂದ ವಿವಿಧ ವಿಭಾಗಗಳಲ್ಲಿ ಕಾರ್ಯಕ್ರಮಗಳನ್ನು…

Read More

ಕೆಎಂಸಿ ಮಂಗಳೂರಿನಲ್ಲಿ 70ನೇ ವರ್ಷದ ಗಣೇಶ ಚತುರ್ಥಿ ಸಂಭ್ರಮ

ಮಂಗಳೂರು: ಮಣಿಪಾಲ ಉನ್ನತ ಶಿಕ್ಷಣ ಅಕಾಡೆಮಿಯ (MAHE) ಅಂಗಸಂಸ್ಥೆಯಾದ ಕಸ್ತೂರ್ಬಾ ವೈದ್ಯಕೀಯ ಕಾಲೇಜು (KMC), ಮಂಗಳೂರಿನ ಲೈಟ್‌ಹೌಸ್ ಹಿಲ್ ರೋಡ್ ಕ್ಯಾಂಪಸ್‌ನಲ್ಲಿ ಸೆ.14 ಮತ್ತು 15ರಂದು 70ನೇ ವರ್ಷದ ಗಣೇಶ ಚತುರ್ಥಿ ಉತ್ಸವವನ್ನು ಆಚರಿಸಲು ಸಜ್ಜಾಗಿದೆ ಎಂದು ಕೆಎಂಸಿ ಮಂಗಳೂರು ಡೀನ್ ಡಾ. ಬಿ. ಉಣ್ಣಿಕೃಷ್ಣನ್ ತಿಳಿಸಿದ್ದಾರೆ. ನಗರದ ಪತ್ರಿಕಾಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕೆಎಂಸಿಯ ಗಣೇಶ ಚತುರ್ಥಿ ಆಚರಣೆ ಏಳು ದಶಕಗಳಿಂದ ಕ್ಯಾಂಪಸ್ ಜೀವನದ ಅವಿಭಾಜ್ಯ ಅಂಗವಾಗಿದೆ. ವಿದ್ಯಾರ್ಥಿಗಳಿಂದ ಆರಂಭಗೊಂಡ ಈ ಉತ್ಸವ ಇಂದು…

Read More

ಗೋಹತ್ಯೆ ಸಂಪೂರ್ಣ ನಿಷೇಧಕ್ಕೆ ಆಗ್ರಹಿಸಿ ದ.ಕ.ದಲ್ಲಿ 10 ಲಕ್ಷ ಸಹಿ ಅಭಿಯಾನ

ಮಂಗಳೂರು: ದೇಶದಲ್ಲಿ ಗೋಹತ್ಯೆಯನ್ನು ಸಂಪೂರ್ಣವಾಗಿ ನಿಷೇಧಿಸಲು ಕೇಂದ್ರ ಸರ್ಕಾರ ಕಾನೂನು ಜಾರಿಗೆ ತರಬೇಕು ಹಾಗೂ ಗೋವನ್ನು ರಾಷ್ಟ್ರಮಾತೆಯಾಗಿ ಘೋಷಿಸಬೇಕು ಎಂದು ಆಗ್ರಹಿಸಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 10 ಲಕ್ಷಕ್ಕೂ ಅಧಿಕ ಸಹಿ ಸಂಗ್ರಹಿಸುವ ಅಭಿಯಾನಕ್ಕೆ ಚಾಲನೆ ನೀಡಲಾಗಿದೆ ಎಂದು ವಿಶ್ವ ಹಿಂದೂ ಪರಿಷತ್ ಪ್ರಾಂತ ಸಂಚಾಲಕ ಶರಣ್ ಪಂಪವೆಲ್ ತಿಳಿಸಿದ್ದಾರೆ. ದೇಶಾದ್ಯಂತ ನಡೆಯುತ್ತಿರುವ ‘ಗೋಮಾತೆಯ ಗೌರವ’ ಅಭಿಯಾನದ ಮೂರನೇ ಹಂತದ ಭಾಗವಾಗಿ ಜಿಲ್ಲೆಯ ವಿವಿಧ ಹಿಂದೂಪರ ಸಂಘಟನೆಗಳು, ಮಠ–ಮಂದಿರಗಳು ಹಾಗೂ ಗೋಶಾಲೆಗಳ ಸಹಯೋಗದಲ್ಲಿ ಅಭಿಯಾನ ನಡೆಯಲಿದೆ. ಮುಂದಿನ…

Read More

ಮುಲ್ಕಿ ಕಿಲ್ಪಾಡಿ ಗ್ರಾಮದ ಕೊರ್ದಬ್ಬು ದೈವಸ್ಥಾನ ಕಳವು ಪ್ರಕರಣ – ಕುಖ್ಯಾತ ಅಂತರ ಜಿಲ್ಲಾ ಆರೋಪಿಗಳ ಬಂಧನ

ದಿನಾಂಕ 01-09-2026 ರಂದು ಮಧ್ಯರಾತ್ರಿ, ಮುಲ್ಕಿ ಪೊಲೀಸ್ ಠಾಣಾ ವ್ಯಾಪ್ತಿಯ ಕಿಲ್ಪಾಡಿ ಗ್ರಾಮದ ಆದಿ ಕಿಲ್ಲಾಡಿ ಕೊರ್ದಬ್ಬು ದೈವಸ್ಥಾನದ ಗರ್ಭಗುಡಿಯ ಮುಖ್ಯ ದ್ವಾರಕ್ಕೆ ಹಾಕಲಾಗಿದ್ದ ಬೀಗವನ್ನು ತುಂಡರಿಸಿ, ಗರ್ಭಗುಡಿಯಲ್ಲಿದ್ದ ಬೆಲೆಬಾಳುವ ಕೊರ್ದಬ್ಬು ದೈವದ ಮೂರ್ತಿಗಳು ಹಾಗೂ ದೈವದ ಚಿನ್ನಾಭರಣಗಳನ್ನು ಕಳವು ಮಾಡಲಾಗಿತ್ತು. ಈ ಬಗ್ಗೆ ಮುಲ್ಕಿ ಠಾಣೆಯಲ್ಲಿ ಅ.ಕ್ರ 65/2026 ಕಲಂ 331(3), 331(4), 305 ಬಿ.ಎನ್.ಎಸ್ ರಂತೆ ಪ್ರಕರಣ ದಾಖಲಾಗಿತ್ತು. ಪ್ರಕರಣದ ಪತ್ತೆಯ ಕುರಿತು ವಿಶೇಷ ತಂಡವನ್ನು ರಚಿಸಿದ್ದು, ದಿನಾಂಕ 06-09-2026 ರಂದು ಆರೋಪಿ ಜಾಹೀದ್…

Read More

ಮುಂಬೈಯಲ್ಲಿ ಪ್ರಪ್ರಥಮ ಬಾರಿಗೆ ಯಶಸ್ವಿಯಾಗಿ ನಡೆದ ಹರಿಕಥಾ ನವಾಹ

ಮುಂಬೈ:ಕರ್ನಾಟಕದ ಬಹುಮುಖ ಸಾಂಸ್ಕೃತಿಕ ಪ್ರತಿಭೆಯ ಕಲಾವಿದ, ಹರಿದಾಸ ತೋನ್ಸೆ ಪುಷ್ಕಳ ಕುಮಾರ್ ಅವರು ಹರಿಕಥಾ ಕಲೆಯನ್ನು ಮೈಗೂಡಿಸಿಕೊಂಡು ಕರ್ನಾಟಕದ ಕರಾವಳಿ ಜಿಲ್ಲೆಗಳಲ್ಲದೆ, ದೇಶ-ವಿದೇಶಗಳ ವಿವಿಧ ವೇದಿಕೆಗಳಲ್ಲಿ ತಮ್ಮ ಕಲಾ ಪ್ರತಿಭೆಯಿಂದ ಜನಮನ್ನಣೆ ಗಳಿಸಿದ್ದಾರೆ. ಮುಂಬೈಯಲ್ಲಿ ಪ್ರಪ್ರಥಮ ಬಾರಿಗೆ ಆಗಸ್ಟ್ 15ರಿಂದ 23ರವರೆಗೆ ಒಂಬತ್ತು ಸಂಘಟನೆಗಳ ಆಶ್ರಯದಲ್ಲಿ, ಒಂಬತ್ತು ವಿವಿಧ ಸ್ಥಳಗಳಲ್ಲಿ ವಿವಿಧ ಆಖ್ಯಾನಗಳನ್ನು ಒಳಗೊಂಡ ಹರಿಕಥಾ ನವಾಹವನ್ನು ಯಶಸ್ವಿಯಾಗಿ ನಡೆಸಿಕೊಟ್ಟರು. ಆಗಸ್ಟ್ 15ರಂದು ಸಂತಾಕ್ರೂಸ್ ಬಿಲ್ಲವ ಭವನದಲ್ಲಿ ‘ಬಲಿಚಕ್ರವರ್ತಿ’ ಕಥಾನಕದೊಂದಿಗೆ ನವಾಹಕ್ಕೆ ಚಾಲನೆ ನೀಡಲಾಯಿತು. ಆಗಸ್ಟ್ 16ರಂದು…

Read More

ಕೇರಳ ಪ್ರಾಂತ್ಯ ಕನ್ನಡ ಮಾಧ್ಯಮ ಅಧ್ಯಾಪಕರ ಸಂಘ ಮಂಜೇಶ್ವರ ಉಪಜಿಲ್ಲಾ ಸಮ್ಮೇಳನ ಅಕ್ಟೋಬರ್ 10 ರಂದು

ಉಪ್ಪಳ : ಕೇರಳ ಪ್ರಾಂತ್ಯ ಕನ್ನಡ ಮಾಧ್ಯಮ ಅಧ್ಯಾಪಕರ ಸಂಘದ ಮಂಜೇಶ್ವರ ಉಪಜಿಲ್ಲಾ ಸಮ್ಮೇಳನವು ಅಕ್ಟೋಬರ್ 10 ರಂದು ಸರಕಾರಿ ಪ್ರೌಢ ಶಾಲೆ ಕಡಂಬಾರ್ ಲ್ಲಿ ಜರಗಲಿದೆ.ಇದರ ಪೂರ್ವಭಾವಿಯಾಗಿ ಜರಗಿದ ಮಂಜೇಶ್ವರ ಉಪಜಿಲ್ಲಾ ಕಾರ್ಯಕಾರಿ ಸಮಿತಿ ಸಭೆಯು ಉಪಜಿಲ್ಲಾ ಘಟಕದ ಅಧ್ಯಕ್ಷರಾದ ಅಶೋಕ್ ಕೊಡ್ಲಮೊಗರು ರವರ ಅಧ್ಯಕ್ಷತೆಯಲ್ಲಿ ಉಪ್ಪಳದ ಕೈಕಂಬ ಪಂಚಮಿ ಸಭಾಂಗಣದಲ್ಲಿ ಜರಗಿತು. ಸಭೆಯಲ್ಲಿ ಕೇಂದ್ರ ಸಮಿತಿಯ ಅಧ್ಯಕ್ಷರಾದ ಸುಕೇಶ್, ಉಪಾಧ್ಯಕ್ಷರಾದ ಉಮೇಶ್ ಬಾಯಾರ್, ಕಾರ್ಯದರ್ಶಿಯಾದ ಜಯಪ್ರಶಾಂತ್ ಪಾಲೆಂಗ್ರಿ , ಸದಸ್ಯರಾದ ಶ್ರೀರಾಮ್ ಕೆದುಕೋಡಿ ,ಚಂದ್ರಿಕಾ…

Read More

ಹೆರಿಗೆಯಾದ ವಲಸೆ ಕಾರ್ಮಿಕ ಮಹಿಳೆ ಹಾಗೂ ಮಗುವಿನ ಜೀವ ರಕ್ಷಿಸಿದವರಿಗೆ ಎಸ್‌ಡಿಪಿಐ ಯಿಂದ ಗೌರವ

​ಮಂಜೇಶ್ವರ: ಮುಂಜಾನೆ 3:45ಕ್ಕೆ ವಾಸ್ತವ್ಯದ ಫ್ಲಾಟ್‌ನಲ್ಲಿ ಮಗುವಿಗೆ ಜನ್ಮ ನೀಡಿದ ವಲಸೆ ಕಾರ್ಮಿಕ ಮಹಿಳೆ ಹಾಗೂ ನವಜಾತ ಶಿಶುವಿಗೆ ಸಮಯೋಚಿತವಾಗಿ ನೆರವು ನೀಡಿ ಜೀವ ರಕ್ಷಿಸಿದವರನ್ನು ಎಸ್‌ಡಿಪಿಐ ಮಂಜೇಶ್ವರ ಪಂಚಾಯತ್ ಸಮಿತಿ ವತಿಯಿಂದ ಸನ್ಮಾನಿಸಲಾಯಿತು.ಹೆರಿಗೆಯ ವಿಚಾರ ತಿಳಿದ ತಕ್ಷಣವೇ ಎಸ್‌ಡಿಪಿಐ ಮಂಜೇಶ್ವರ ಪಂಚಾಯತ್ ಅಧ್ಯಕ್ಷ ಶಂಸುದ್ದೀನ್ ಮತ್ತು ಜಕರಿಯ ಉದ್ಯಾವರ ಸ್ಥಳಕ್ಕೆ ತಲುಪಿ ಅಗತ್ಯ ಕ್ರಮಕೈಗೊಂಡರು. ಬಳಿಕ ಆ್ಯಂಬುಲೆನ್ಸ್ ಚಾಲಕ ಅಸ್ಲಂ ಉದ್ಯಾವರ, ಉದ್ಯಾವರದ ‘ರಕ್ಷಾ ಹೈಟೆಕ್ ಲ್ಯಾಬೊರೇಟರಿ-ಕ್ಲಿನಿಕ್’ನ ವೈದ್ಯರು ಮತ್ತು ಶುಶ್ರೂಷಕರನ್ನು (ಸಿಸ್ಟರ್ಸ್) ಆ್ಯಂಬುಲೆನ್ಸ್‌ನಲ್ಲಿ ಮಹಿಳೆಯಿದ್ದ…

Read More

ಕ.ಸಾ.ಪ ದಿಂದ ಮೀಯಪದವಿನಲ್ಲಿ ಎಸ್ .ವಿ ಭಟ್ ಸಂಸ್ಮರಣೆ ಮತ್ತು ಕವಿಗೋಷ್ಠಿ. ಎಸ್ .ವಿ ಭಟ್ಟರ ವ್ಯಕ್ತಿತ್ವ ಅನುಸರಣೀಯ: ರಾಜಾರಾಮ ರಾವ್

ಮೀಯಪದವು : ಕನ್ನಡ ಸಾಹಿತ್ಯ ಪರಿಷತ್ತು ಕೇರಳ ಗಡಿನಾಡ ಘಟಕದ ಆಶ್ರಯದಲ್ಲಿ ನಿವೃತ್ತ ಶಿಕ್ಷಣಾ ಧಿಕಾರಿ, ಕನ್ನಡ ಸಾಹಿತ್ಯ ಪರಿಷತ್ತು ಕೇರಳ ಗಡಿನಾಡ ಘಟಕದ ನಿಕಟಪೂರ್ವ ಅಧ್ಯಕ್ಷ, ಎಸ್.ವಿ.ಭಟ್ ಅವರ ಸಂಸ್ಮರಣಾ ಕಾರ್ಯಕ್ರಮ ಮತ್ತು ಕವಿಗೋಷ್ಠಿಯು ಮೀಯಪದವು ವಿದ್ಯಾವರ್ಧಕ ಉನ್ನತ ಪ್ರೌಢಶಾಲೆಯ ‘ಕೇಶವಾಮೃತಂ’ ಸಭಾಂಗಣದಲ್ಲಿ ನಡೆಯಿತು. ವಿದ್ಯಾವರ್ಧಕ ಪ್ರೌಢಶಾಲೆಯ ನಿವೃತ್ತ ಮುಖ್ಯ ಶಿಕ್ಷಕ ರಾಜಾರಾಮ ರಾವ್. ಟಿ ಸಂಸ್ಮರಣಾ ಭಾಷಣ ಮಾಡಿದರು. ದಿ. ಎಸ್ .ವಿ ಭಟ್ಟರು ಕ.ಸಾ.ಪ ಅಧ್ಯಕ್ಷರಾಗಿ ಕನ್ನಡ ಭಾಷೆ ಹಾಗೂ ಸಂಸ್ಕೃತಿಯ ಬೆಳವಣಿಗೆಗೆ…

Read More

ಕಾಸರಗೋಡು-ಮಂಗಳೂರು ಬಸ್ ಪ್ರಯಾಣಿಕರ ಪರದಾಟ: ಒಂದೇ ಬಸ್ಸಿನಲ್ಲಿ 140 ಜನರ ಪ್ರಯಾಣ

ಮಂಜೇಶ್ವರ : ​ಕಾಸರಗೋಡು ಮತ್ತು ಮಂಗಳೂರು ನಡುವೆ ಸಂಚರಿಸುವ ಬಸ್‌ಗಳಲ್ಲಿ ಪ್ರಯಾಣಿಕರ ಸಂಖ್ಯೆ ಮಿತಿಮೀರಿದ್ದು, ಸಾರ್ವಜನಿಕರು ಹಾಗೂ ವಿದ್ಯಾರ್ಥಿಗಳು ತೀವ್ರ ಸಂಕಷ್ಟ ಎದುರಿಸುತ್ತಿದ್ದಾರೆ. ಸಾಮಾನ್ಯ ಬಸ್‌ನ ಸಾಮರ್ಥ್ಯ ಸುಮಾರು 67 ಪ್ರಯಾಣಿಕರಷ್ಟಿದ್ದರೆ, ಪ್ರಸ್ತುತ ಪೀಕ್ ಅವರ್‌ಗಳಲ್ಲಿ ಬಸ್‌ಗಳಲ್ಲಿ 110 ರಿಂದ 140 ಜನ ಪ್ರಯಾಣಿಸುತ್ತಿರುವುದು ಆತಂಕಕ್ಕೆ ಕಾರಣವಾಗಿದೆ. ​ ಕೇರಳ ಸರ್ಕಾರವು ಮಹಿಳೆಯರಿಗೆ ಕೆಎಸ್‌ಆರ್‌ಟಿಸಿ ಬಸ್‌ಗಳಲ್ಲಿ ಉಚಿತ ಪ್ರಯಾಣದ ‘ಪ್ರಿಯದರ್ಶಿನಿ’ ಯೋಜನೆ ಜಾರಿಗೆ ತಂದ ಬಳಿಕ ಬಸ್ ಪ್ರಯಾಣಿಕರ ಸಂಖ್ಯೆ ದುಪ್ಪಟ್ಟಾಗಿದೆ. ಸಮಯಕ್ಕೆ ಸರಿಯಾಗಿ ರೈಲು ಲಭ್ಯವಿಲ್ಲದ…

Read More
error: Content is protected !!