ಮಂಗಳೂರಿನಲ್ಲಿ ನಡೆದ ಟೀನ್, ಮಿಸ್ ಹಾಗೂ ಮಿಸೆಸ್ ಇಂಡಿಯಾ ಕರ್ನಾಟಕ ಸೌಂದರ್ಯ ಸ್ಪರ್ಧೆ ; ಲಕ್ಷ್ಮೀ ಅಶೋಕ್‌ಗೆ ಒಲಿದ ಮಿಸೆಸ್ ಇಂಡಿಯಾ ಕರ್ನಾಟಕ ಕಿರೀಟ
ಮಂಗಳೂರು : ಪಾಥ್‌ವೇ ಎಂಟರ್‌ಪ್ರೈಸಸ್ ಹಾಗೂ ಮರ್ಸಿ ಬ್ಯೂಟಿ ಅಕಾಡೆಮಿಯ ಸಹಯೋಗದಲ್ಲಿ ಏಳನೇ ಆವೃತ್ತಿಯ ಟೀನ್, ಮಿಸ್ ಹಾಗೂ ಮಿಸೆಸ್ ಇಂಡಿಯಾ ಕರ್ನಾಟಕ ಸೌಂದರ್ಯ ಸ್ಪರ್ಧೆಯು ಭಾನುವಾರ ನಗರದ ಬೋಳೂರು ಬೇಯಲ್ಲಿ ಅದ್ಧೂರಿಯಾಗಿ ಸಂಪನ್ನಗೊಂಡಿತು. ಲಕ್ಷ್ಮೀ ಅಶೋಕ್ ಅವರು ಮಿಸೆಸ್ ಇಂಡಿಯಾ ಕರ್ನಾಟಕ 2026 ಕಿರೀಟವನ್ನು ತನ್ನದಾಗಿಸಿಕೊಂಡಿದ್ದು, ಮುಂದಿನ ಹಂತಕ್ಕೆ ಅರ್ಹತೆಯನ್ನು ಪಡೆದುಕೊಂಡಿದ್ದಾರೆ. ಅಶ್ವಿನಿ ಕೊಠಾರಿ ಪ್ರಥಮ ರನ್ನರ್ ಅಪ್ ಹಾಗೂ ವಾಣಿ ಎಸ್.ಮಯ್ಯ ದ್ವಿತೀಯ ರನ್ನರ್ ಅಪ್ ಕಿರೀಟ ತನ್ನದಾಗಿಸಿಕೊಂಡರು. ಮಿಸೆಸ್ ಇಂಡಿಯಾ ಕ್ಲಾಸಿಕ್ ವಿಭಾಗದಲ್ಲಿ…
