ಪೈವಳಿಕೆ: ರಸ್ತೆ ದುರಸ್ತಿಗೆ ಆಗ್ರಹಿಸಿ ‘ನಮ್ಮ ಊರು ನಮ್ಮ ರೋಡ್’ ಹೋರಾಟ ಸಮಿತಿ ರಚನೆ
ಪೈವಳಿಕೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಮುಂಡೋಲಿಯಿಂದ ಕಲ್ಲಗದ್ದೆವರೆಗಿನ ಸುಮಾರು 5 ಕಿಲೋಮೀಟರ್ ಉದ್ದದ ರಸ್ತೆಯ ದುರಸ್ತಿಗೆ ಆಗ್ರಹಿಸಿ ‘ನಮ್ಮ ಊರು ನಮ್ಮ ರೋಡ್’ ಎಂಬ ಹೆಸರಿನಲ್ಲಿ ಹೋರಾಟ ಸಮಿತಿಯನ್ನು ರಚಿಸಲಾಗಿದೆ.ಆಗಸ್ಟ್ 23ರಂದು ಬಾಯಾರು ಪ್ರದೇಶದ ಗ್ರಾಮಸ್ಥರ ಸಭೆಯಲ್ಲಿ ಈ ಕುರಿತು ತೀರ್ಮಾನ ಕೈಗೊಳ್ಳಲಾಯಿತು. ಸುದೆಂಬಳ, ಕಲ್ಲಗದ್ದೆ, ನೀರ್ಚಾಲು ಹಾಗೂ ದಳಿಕುಕ್ಕು ಗ್ರಾಮಗಳ ಸುಮಾರು 2 ಸಾವಿರಕ್ಕೂ ಅಧಿಕ ನಿವಾಸಿಗಳಿಗೆ ಈ ರಸ್ತೆಯೇ ಪ್ರಮುಖ ಸಂಪರ್ಕ ಮಾರ್ಗವಾಗಿದೆ. ಕಳೆದ 2ರಿಂದ 3 ವರ್ಷಗಳಿಂದ ರಸ್ತೆ ಸಂಪೂರ್ಣ ಹದಗೆಟ್ಟಿದ್ದು, ವಾಹನ…
