ಆ.23ರಂದು ಬೆಂಗಳೂರಿನಲ್ಲಿ ಕೊಂಕಣಿ ಮಾನ್ಯತಾ ದಿನಾಚರಣೆ
ಬೆಂಗಳೂರು:ಕೊಂಕಣಿ ಭಾಷಾ ಮಂಡಳ್ ಕರ್ನಾಟಕ ಮತ್ತು ಜಾಲಹಳ್ಳಿ ಫಾತಿಮಾ ಚರ್ಚ್ ಕೊಂಕಣಿ ಕುಟುಂಬ ಸಹಯೋಗದಲ್ಲಿ ಆ.23ರಂದು ಬೆಂಗಳೂರಿನಲ್ಲಿ ಕೊಂಕಣಿ ಮಾನ್ಯತಾ ದಿನಾಚರಣೆ ಆಯೋಜಿಸಲಾಗಿದೆ.1992 ರಲ್ಲಿ ಕೊಂಕಣಿ ಭಾಷೆಗೆ ಆಗಸ್ಟ್ 20ರಂದು ಸಂವಿಧಾನದ ಎಂಟನೇ ಪರಿಚ್ಛೇದದ ಮಾನ್ಯತೆ ದೊರೆಯಿತು. ಈ ಹಿನ್ನೆಲೆಯಲ್ಲಿ ಕೊಂಕಣಿ ಮಾನ್ಯತಾ ದಿನಾಚರಣೆಯನ್ನು ಜಾಲಹಳ್ಳಿ ಕುವೆಂಪು ನಗರ ನಾಯ್ಡು ಲೇಔಟ್ ಶ್ರೀರಾಮ ಸಮೀಕ್ಷಾ ಅಪಾರ್ಟ್‌ಮೆಂಟ್ ಇವರ ಕ್ಲಬ್ ಹೌಸ್ ನಲ್ಲಿ 23 ಆಗಸ್ಟ್ ಮಧ್ಯಾಹ್ನ 2.30ರಿಂದ ಆಚರಿಸಲಾಗುವುದು. ಕಾರ್ಯಕ್ರಮ ಕೊಂಕಣಿ ಭಾಷಾ ಮಂಡಳ್ ಕರ್ನಾಟಕ ಇದರ…
