ಭಾರತದ ಮಾಜಿ ಪ್ರಧಾನಿ ದಿ| ರಾಜೀವ್ ಗಾಂಧಿ ಹಾಗೂ ಮಾಜಿ ಮುಖ್ಯಮಂತ್ರಿ ದಿ| ದೇವರಾಜ ಅರಸು ಅವರ ಜನ್ಮ ಜಯಂತಿ ಆಚರಣೆ

ಮಂಗಳೂರು: ಮಾಜಿ ಪ್ರಧಾನಿ ರಾಜೀವ್ ಗಾಂಧಿ ಹಾಗೂ ಮಾಜಿ ಮುಖ್ಯಮಂತ್ರಿ ಡಿ. ದೇವರಾಜ ಅರಸು ಅವರ ಜನಪರ ಚಿಂತನೆ ಮತ್ತು ಆದರ್ಶಗಳನ್ನು ಇಂದಿನ ಪೀಳಿಗೆಗೆ ಪರಿಚಯಿಸುವ ಅಗತ್ಯವಿದೆ ಎಂದು ಮಾಜಿ ಸಚಿವ ಬಿ. ರಮಾನಾಥ ರೈ ಹೇಳಿದರು. ರಾಜೀವ್ ಗಾಂಧಿಯವರು ಯುವಶಕ್ತಿಗೆ ಆದ್ಯತೆ ನೀಡಿ, ತಂತ್ರಜ್ಞಾನ ಹಾಗೂ ಆಧುನಿಕ ಭಾರತದ ನಿರ್ಮಾಣಕ್ಕೆ ಹೊಸ ದಿಕ್ಕು ನೀಡಿದ ದೂರದೃಷ್ಟಿಯ ನಾಯಕ. ದೇಶದ ಅಭಿವೃದ್ಧಿ ಮತ್ತು ಯುವಕರ ಭವಿಷ್ಯದ ಬಗ್ಗೆ ಅವರು ಕಂಡ ಕನಸುಗಳು ಇಂದಿಗೂ ಪ್ರಸ್ತುತವಾಗಿವೆ ಎಂದು ರೈ…

Read More

ಭಯೋತ್ಪಾದಕರಿಗೆ ರಕ್ಷಣೆ ನೀಡಲು UNSC ದುರುಪಯೋಗ ಸಲ್ಲದು: ಭಾರತ

ನವದೆಹಲಿ: ಭಯೋತ್ಪಾದಕರಿಗೆ ರಕ್ಷಣೆ ನೀಡಲು ವಿಶ್ವಸಂಸ್ಥೆಯ ಭದ್ರತಾ ಮಂಡಳಿಯನ್ನು ರಾಜಕೀಯವಾಗಿ ದುರುಪಯೋಗಪಡಿಸಿಕೊಳ್ಳಬಾರದು ಎಂದು ಭಾರತ ಕಠಿಣ ಸಂದೇಶ ನೀಡಿದೆ. ಭದ್ರತಾ ಮಂಡಳಿಯ ಸದಸ್ಯತ್ವವನ್ನು ಸಂಕುಚಿತ ರಾಜಕೀಯ ಹಿತಾಸಕ್ತಿಗಳಿಗಾಗಿ ಬಳಸಬಾರದು. ನಿರ್ಧಾರಗಳು ರಾಜಕೀಯ ಒತ್ತಡದಿಂದಲ್ಲ, ಸ್ಪಷ್ಟ ಸಾಕ್ಷ್ಯಗಳ ಆಧಾರದ ಮೇಲೆ ಕೈಗೊಳ್ಳಬೇಕು ಎಂದು ಭಾರತದ ರಾಯಭಾರಿ ಯೋಜನಾ ಪಟೇಲ್ ಹೇಳಿದ್ದಾರೆ. ವಿಶ್ವಸಂಸ್ಥೆಯು ಇಂದಿನ ಜಾಗತಿಕ ವಾಸ್ತವಾಂಶಗಳನ್ನು ಪ್ರತಿಬಿಂಬಿಸಬೇಕು. ಭದ್ರತಾ ಮಂಡಳಿಯ ಶಾಶ್ವತ ಹಾಗೂ ತಾತ್ಕಾಲಿಕ ಸದಸ್ಯತ್ವವನ್ನು ವಿಸ್ತರಿಸಿ ಅಭಿವೃದ್ಧಿಶೀಲ ಹಾಗೂ ಜಾಗತಿಕ ದಕ್ಷಿಣದ ರಾಷ್ಟ್ರಗಳಿಗೆ ಹೆಚ್ಚಿನ ಪ್ರಾತಿನಿಧ್ಯ ನೀಡಬೇಕು…

Read More

ತಾಯಿಯ ಅನಾರೋಗ್ಯದಿಂದ ಮನನೊಂದು ಅಪ್ರಾಪ್ತ ಬಾಲಕ ಆತ್ಮಹತ್ಯೆ

ಬಂಟ್ವಾಳ: ಪಿಲಾತಬೆಟ್ಟು ಗ್ರಾಮದ ನೈನಾಡು ನಿವಾಸಿ, 9ನೇ ತರಗತಿ ವಿದ್ಯಾರ್ಥಿಯಾಗಿದ್ದ ಅಪ್ರಾಪ್ತ ಬಾಲಕ ( ಅಶೋಕ್) ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ. ನೈನಾಡು ಶಾಲೆಯಲ್ಲಿ 9ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದ ಬಾಲಕನ ತಾಯಿ ಅನಾರೋಗ್ಯದಿಂದ ಬಳಲುತ್ತಿದ್ದು, ಸ್ಟ್ರೋಕ್‌ಗೆ ಒಳಗಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು ಎನ್ನಲಾಗಿದೆ. ತಂದೆ ಇಲ್ಲದ ಹಿನ್ನೆಲೆಯಲ್ಲಿ ತಾಯಿಯೇ ಬಾಲಕ ಹಾಗೂ ಕುಟುಂಬಕ್ಕೆ ಪ್ರಮುಖ ಆಸರೆಯಾಗಿದ್ದರು.ತಾಯಿಯ ಅನಾರೋಗ್ಯದ ವಿಚಾರವಾಗಿ ಬಾಲಕ ಮಾನಸಿಕವಾಗಿ ನೊಂದಿದ್ದ ಎನ್ನಲಾಗಿದ್ದು, ಶಾಲೆಯಲ್ಲಿಯೂ ಆಗಾಗ್ಗೆ ತಾಯಿಯ ಆರೋಗ್ಯದ ಬಗ್ಗೆ ವಿಚಾರಿಸುತ್ತಿದ್ದ…

Read More

ಕಾಸರಗೋಡಿನಲ್ಲಿ ಶಾಲಾ ಬಸ್–ಬೈಕ್ ಅಪಘಾತ; ಯುವಕ ಸಾವು

ಕಾಸರಗೋಡು: ಶಾಲಾ ಬಸ್ ಮತ್ತು ಬೈಕ್ ನಡುವೆ ಸಂಭವಿಸಿದ ಅಪಘಾತದಲ್ಲಿ ಯುವಕನೊಬ್ಬ ಮೃತಪಟ್ಟ ಘಟನೆ ಗುರುವಾರ ಬೆಳಗ್ಗೆ ಕಾಸರಗೋಡಿನ ಬೋವಿಕ್ಕಾನ ಸಮೀಪದ ಪೊವ್ವಲ್ ಮಾಸ್ತಿಕುಂಡು ಎಂಬಲ್ಲಿ ನಡೆದಿದೆ. ಮೃತರನ್ನು ಗಾಳಿಮುಖ ನೆಟ್ಟಣಿಗೆಯ ಹೊಸಹಿತ್ತಿಲಿನ ಎಸ್. ಶಮ್ಮಾಸ್ ಅಬ್ದುಲ್ಲಾ (25) ಎಂದು ಗುರುತಿಸಲಾಗಿದೆ. ಅವರು ಚೆರ್ಕಳ ಕಡೆಯಿಂದ ಗಾಳಿಮುಖದತ್ತ ಬೈಕ್‌ನಲ್ಲಿ ತೆರಳುತ್ತಿದ್ದಾಗ ಮಾಸ್ತಿಕುಂಡು ಬಳಿ ಎದುರಿನಿಂದ ಬರುತ್ತಿದ್ದ ಖಾಸಗಿ ಶಾಲಾ ಬಸ್ ಡಿಕ್ಕಿ ಹೊಡೆದಿದೆ. ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡ ಶಮ್ಮಾಸ್ ಅವರನ್ನು ಕಾಸರಗೋಡಿನ ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಚಿಕಿತ್ಸೆ ಫಲಕಾರಿಯಾಗದೆ…

Read More

ವಾಲ್ಮೀಕಿ ಹಗರಣದಲ್ಲಿ ಮತ್ತಷ್ಟು ಹೆಸರು ಬಹಿರಂಗಗೊಳ್ಳುವ ನಡುಕದಿಂದ ನಾಗೇಂದ್ರಗೆ ಮತ್ತೆ ಸಚಿವ ಸ್ಥಾನ.ಸಚಿವ ನಾಗೇಂದ್ರ ರಾಜೀನಾಮೆಗೆ ಆಗ್ರಹಿಸಿ ಬಿಜೆಪಿ ಮಂಗಳೂರು ಮಂಡಲದಿಂದ ತೊಕ್ಕೊಟ್ಟಿನಲ್ಲಿ ಪ್ರತಿಭಟನೆ

ಉಳ್ಳಾಲ:ವಾಲ್ಮೀಕಿ ನಿಗಮದ ಹಗರಣದಲ್ಲಿ ಶಾಮೀಲಾಗಿರುವವರ ಮತ್ತಷ್ಟು ಹೆಸರುಗಳನ್ನ ಬಹಿರಂಗಗೊಳಿಸುತ್ತಾರೆಂಬ ನಡುಕದಿಂದ ಹಗರಣದ ರೂವಾರಿ ನಾಗೇಂದ್ರ ಅವರಿಗೆ ಮುಖ್ಯ ಮಂತ್ರಿ ಡಿಕೆಶಿ ಸಚಿವ ಸಂಪುಟದಲ್ಲಿ ಮತ್ತೆ ಸ್ಥಾನ ಕಲ್ಪಿಸಿ ಕೊಡಲಾಗಿದೆ.ನಾಗೇಂದ್ರ ಅವರನ್ನ ಸಚಿವ ಸಂಪುಟದಿಂದ ವಜಾಗೊಳಿಸುವವರೆಗೂ ನಮ್ಮ ಹೋರಾಟ ನಿಲ್ಲೋದಿಲ್ಲವೆಂದು ಬಿಜೆಪಿ ಮಂಗಳೂರು ಮಂಡಲದ ಪ್ರಧಾನ ಕಾರ್ಯದರ್ಶಿ ಮೋಹನ್ ರಾಜ್.ಕೆ.ಆರ್ ಅವರು ರಾಜ್ಯ ಸರಕಾರವನ್ನು ಎಚ್ಚರಿಸಿದರು. ವಾಲ್ಮೀಕಿ ನಿಗಮದ ಲೂಟಿಯ ರೂವಾರಿ ಸಚಿವ ಬಿ.ನಾಗೇಂದ್ರ ರಾಜೀನಾಮೆಗೆ ಆಗ್ರಹಿಸಿ,ಭ್ರಷ್ಟ ಹಾಗೂ ಬಡವರ ವಿರೋಧಿ ಕಾಂಗ್ರೆಸ್ ಸರ್ಕಾರದ ವೈಫಲ್ಯಗಳ ವಿರುದ್ಧ ಭಾರತೀಯ…

Read More

ನಾವೂರು ಹಾಲು ಉತ್ಪಾದಕರ ಸಹಕಾರಿ ಸಂಘಕ್ಕೆ ರಜತ ಸಂಭ್ರಮ

ಬಂಟ್ವಾಳ, ಆ.20: “ಹೈನುಗಾರರಿಂದ ಪಡೆದ ಹಾಲಿನಿಂದ ಬರುವ ಲಾಭಾಂಶವನ್ನು ಮತ್ತೆ ಹೈನುಗಾರರಿಗೆ ನೀಡುವ ಪರಿಕಲ್ಪನೆ ಕೇವಲ ಹಾಲು ಒಕ್ಕೂಟದಲ್ಲಿ ಮಾತ್ರ ಇದೆ. ಖಾಸಗಿ ವ್ಯವಸ್ಥೆಯಲ್ಲಿ ಈ ಪರಿಕಲ್ಪನೆಯೇ ಇಲ್ಲ. ಕಳೆದ 25 ವರ್ಷಗಳಿಂದ ನಾವೂರು ಹಾಲು ಉತ್ಪಾದಕರ ಸಹಕಾರಿ ಸಂಘ ಹಾಲು ಉತ್ಪಾದನೆಯಲ್ಲಿ ಮಹೋನ್ನತ ಸಾಧನೆ ಮಾಡಿದ್ದು, ದಕ್ಷ ಹಾಗೂ ಪ್ರಾಮಾಣಿಕ ಆಡಳಿತ ಮಂಡಳಿಯ ಕಾರಣದಿಂದ ಇದು ಸಾಧ್ಯವಾಗಿದೆ” ಎಂದು ದ.ಕ. ಹಾಲು ಒಕ್ಕೂಟದ ಅಧ್ಯಕ್ಷ ರವಿರಾಜ್ ಹೆಗ್ಡೆ ಹೇಳಿದರು. ನಾವೂರು ಹಾಲು ಉತ್ಪಾದಕರ ಸಹಕಾರಿ ಸಂಘದ…

Read More

ಸ್ಕರಿಯ ಅವರಿಗೆ ಎಎಸ್‌ಐ ಹುದ್ದೆಗೆ ಪದೋನ್ನತಿ; ಸುಬ್ರಹ್ಮಣ್ಯ ಠಾಣೆಗೆ ವರ್ಗಾವಣೆ

ಪುತ್ತೂರು: ಸುಳ್ಯ ಪೊಲೀಸ್ ಠಾಣೆಯ ಹೆಡ್ ಕಾನ್‌ಸ್ಟೆಬಲ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ಸ್ಕರಿಯ ಅವರು ಎಎಸ್‌ಐ ಆಗಿ ಪದೋನ್ನತಿ ಹೊಂದಿ ಸುಬ್ರಹ್ಮಣ್ಯ ಪೊಲೀಸ್‌ ಠಾಣೆಗೆ ವರ್ಗಾವಣೆಯಾಗಿದ್ದಾರೆ. ಪೊಲೀಸ್‌ ಇಲಾಖೆಯಲ್ಲಿ ಕಳೆದ 29 ವರ್ಷಗಳಿಂದ ಸುದೀರ್ಘ ಸೇವೆ ಸಲ್ಲಿಸುತ್ತಿರುವ ಸ್ಕರಿಯ ಅವರು, ಈ ಹಿಂದೆ 2005 ರಿಂದ 2011 ರ ವರೆಗೆ ಸುಳ್ಯ ಪೊಲೀಸ್‌ ಠಾಣೆಯಲ್ಲಿ ಕಾನ್‌ಸ್ಟೆಬಲ್‌ ಆಗಿ ಕಾರ್ಯನಿರ್ವಹಿಸಿದ್ದರು. ಬಳಿಕ ಬಡ್ತಿ ಹಾಗೂ ವರ್ಗಾವಣೆಯೊಂದಿಗೆ ಮತ್ತೆ ಸುಳ್ಯ ಠಾಣೆಗೆ ಮರಳಿದ್ದರು.ಮಂಗಳೂರು ಪೂರ್ವ ಪೊಲೀಸ್‌ ಠಾಣೆ, ಪುತ್ತೂರು ಸಂಚಾರ…

Read More

ಕೆನರಾ ಇಂಜಿನಿಯರಿಂಗ್ ಕಾಲೇಜಿನಲ್ಲಿ ರಕ್ತದಾನ ಶಿಬಿರ

ಮಂಗಳೂರು: ಕೆನರಾ ಇಂಜಿನಿಯರಿಂಗ್ ಕಾಲೇಜಿನ ಎನ್ನೆಸ್ಸೆಸ್ , ರೆಡ್ ಕ್ರಾಸ್ ಘಟಕ, ವಿದ್ಯಾರ್ಥಿಗಳ ಇ.ಎಸ್. ಆರ್. ಕ್ಲಬ್ ಹಾಗೂ ಜಿಲ್ಲಾ ವೆನ್ಲಾಕ್ ಆಸ್ಪತ್ರೆಯ ಸಹಯೋಗದಲ್ಲಿ ರಕ್ತದಾನ ಶಿಬಿರ ಕಾಲೇಜಿನಲ್ಲಿ ಬುಧವಾರ ನಡೆಯಿತು. ಜಿಲ್ಲಾ ವೆನ್ಲಾಕ್ ಆಸ್ಪತ್ರೆಯ ಡಾ. ದೀಪಿಕಾ ಹಾಗೂ ಬಳಗದ ಮಾರ್ಗದರ್ಶನ ದಲ್ಲಿ ಬ್ಲಡ್ ಬ್ಯಾಂಕ್ ಮುಖ್ಯಸ್ಥ ಆಂಟನಿ ಡಿ ಸೋಜಾ ಅವರು ರಕ್ತದಾನಿಗಳಿಂದ ರಕ್ತದಾನ ಸಂಗ್ರಹ ಪ್ರಕ್ರಿಯೆಯಲ್ಲಿ ತೊಡಗಿಕೊಂಡರು. ಕಾಲೇಜಿನ ಬೋಧಕರು, ಬೋಧಕೇತರರು ಮತ್ತು ವಿದ್ಯಾರ್ಥಿಗಳು ಪಾಲ್ಗೊಂಡಿದ್ದ ಈ ಶಿಬಿರದಲ್ಲಿ 43 ಯೂನಿಟ್ ರಕ್ತವನ್ನು…

Read More

ಮುಲ್ಕಾಜೆ ಮಾಡದಲ್ಲಿ ಹಾಡಹಗಲೇ ಬೈಕ್ ಸವಾರನ ಅಡ್ಡಗಟ್ಟಿ ದರೋಡೆ

ಬಂಟ್ವಾಳ: ತಾಲೂಕಿನ ಗ್ರಾಮೀಣ ಭಾಗದ ಮುಲ್ಕಾಜೆ ಮಾಡದಲ್ಲಿ ಹಾಡಹಗಲೇ ಬೈಕ್ ಸವಾರನನ್ನು ಅಡ್ಡಗಟ್ಟಿ ನಾಲ್ವರು ದರೋಡೆ ನಡೆಸಿದ ಘಟನೆ ಗುರುವಾರ ನಡೆದಿದೆ.ಸುರತ್ಕಲ್ ನಿವಾಸಿ ಮಯ್ಯದಿ ಎಂಬವರು ವಿವಿಧ ಅಂಗಡಿಗಳಿಗೆ ಹೋಲ್‌ಸೇಲ್‌ನಲ್ಲಿ ಹಾಕಿದ್ದ ಸಿಮೆಂಟ್‌ನ ಹಣವನ್ನು ವಸೂಲಿ ಮಾಡಿಕೊಂಡು ಬೈಕ್‌ನಲ್ಲಿ ಹಿಂದಿರುಗುತ್ತಿದ್ದ ವೇಳೆ ಈ ಘಟನೆ ನಡೆದಿದೆ ಎನ್ನಲಾಗಿದೆ. ಎರಡು ಬೈಕ್‌ಗಳಲ್ಲಿ ಬಂದ ನಾಲ್ವರು ವ್ಯಕ್ತಿಗಳು ಸವಾರನನ್ನು ಅಡ್ಡಗಟ್ಟಿ ತಲವಾರು ತೋರಿಸಿ ಬೆದರಿಸಿ ದರೋಡೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ. ದರೋಡೆಗೊಳಗಾದ ಬ್ಯಾಗ್‌ನಲ್ಲಿ ಸುಮಾರು ₹8 ಲಕ್ಷಕ್ಕೂ ಅಧಿಕ ಹಣ…

Read More

ಮೀಂಜ ಗ್ರಾಮ ಕಚೇರಿ ಮುಂದೆ ಕ್ಷೇಮ ಪಿಂಚಣಿ ತೀರ್ಮಾನ ವಿರೋಧಿಸಿಸಿಪಿಐಎಂ ನೇತೃತ್ವದಲ್ಲಿ ಪ್ರತಿಭಟನೆ

ಮೀಯಪದವು: ಕ್ಷೇಮ ಪಿಂಚಣಿ ಪದ್ಧತಿಯನ್ನು ಬುಡಮೇಲುಗೊಳಿಸುವ ಕೇರಳದ ಯುಡಿಎಫ್ ಸರ್ಕಾರದ ತೀರ್ಮಾನವನ್ನು ವಿರೋಧಿಸಿ, ಸಿಪಿಐಎಂ ರಾಜ್ಯ ಸಮಿತಿಯ ಆಹ್ವಾನದ ಮೇರೆಗೆ ಮೀಯಪದವಿನ ಮೀಂಜ ಗ್ರಾಮ ಕಚೇರಿ ಮುಂದೆ ಪಿಂಚಣಿದಾರರ ಸತ್ಯಾಗ್ರಹ ನಡೆಯಿತು. ಸಿಪಿಐಎಂ ಮಂಜೇಶ್ವರ ಏರಿಯಾ ಕಾರ್ಯದರ್ಶಿ ಸಿ.ಜಿ. ಮ್ಯಾಥ್ಯು ಸತ್ಯಾಗ್ರಹವನ್ನು ಉದ್ಘಾಟಿಸಿದರು. ಲೋಕೇಶ್ ಚಿನಾಲ ಅಧ್ಯಕ್ಷತೆ ವಹಿಸಿದ್ದರು. ರಾಮಚಂದ್ರ ಟಿ. ಸ್ವಾಗತಿಸಿದರು. ಬಾಳಪ್ಪ ಬಂಗೇರ, ಜನಾರ್ದನ ಪೂಜಾರಿ ಹಾಗೂ ಐರಿನ್ ಜೋಸ್ಫಿನ್ ನೇತೃತ್ವದಲ್ಲಿ ಸತ್ಯಾಗ್ರಹ ನಡೆಯಿತು.

Read More
error: Content is protected !!