ಉಳ್ಳಾಲ ಕಡಲ ತೀರದಲ್ಲಿ ಪತ್ತೆಯಾದ ಶವ ಪ್ರಕರಣಕ್ಕೆ ಮೇಜರ್ ಟ್ವಿಸ್ಟ್: ಕೊಲೆ ಶಂಕೆ

ಮಂಗಳೂರು:ಉಳ್ಳಾಲ ಕೋಟೆಪುರ ಸಮುದ್ರ ತೀರದಲ್ಲಿ ಕೊಳೆತ ಸ್ಥಿತಿಯಲ್ಲಿ ಶವ ಪತ್ತೆಯಾಗಿದ್ದ ಘಟನೆಗೆ ಮೇಜರ್ ಟ್ವಿಸ್ಟ್ ಸಿಕ್ಕಿದೆ.ಮೀನುಗಾರಿಕಾ ಬೋಟ್ ನಿಂದ ಸಮುದ್ರಕ್ಕೆ ಬಿದ್ದು ನಾಪತ್ತೆಯಾಗಿದ್ದ ಎನ್ನಲಾದ ವ್ಯಕ್ತಿಯನ್ನು ತಲೆಗೆ ಮತ್ತು ಹೊಟ್ಟೆಗೆ ಹರಿತ ಆಯುಧದಿಂದ ಹೊಡೆದು ಕೊಲ್ಲಲಾಗಿದೆ ಎನ್ನುವ ವರದಿ ಮರಣೋತ್ತರ ಪರೀಕ್ಷೆಯಲ್ಲಿ ಬಂದಿದೆ. ಈ ಬಗ್ಗೆ ಉಳ್ಳಾಲ ಠಾಣೆಯಲ್ಲಿ ವ್ಯಕ್ತಿಯನ್ನು ಯಾರೋ ಕೊಲೆಗೈದು ಸಮುದ್ರಕ್ಕೆ ಎಸೆದಿರುವ ಶಂಕೆಯಲ್ಲಿ ಪ್ರಕರಣ ದಾಖಲಾಗಿದೆ. ಆಗಸ್ಟ್ 17ರಂದು ಕೋಟೆಪುರ ಮಸೀದಿ ಹಿಂಭಾಗದ ಕಡಲ ಕಿನಾರೆಯಲ್ಲಿ ವ್ಯಕ್ತಿಯೊಬ್ಬರ ಶವವು ಸಂಪೂರ್ಣ ಕೊಳೆತ ಸ್ಥಿತಿಯಲ್ಲಿ…

Read More

ಆಳ್ವಾಸ್ ನಲ್ಲಿ ದುಬೈ ಮಕ್ಕಳ‌ ಯಕ್ಷಗಾನ‌ ಪ್ರದರ್ಶನ

ಮೂಡಬಿದಿರೆ: ಕಂಡವರ ಕಣ್ಣರಳಿಸಬಲ್ಲ ಕನ್ನಡದ ಕಮನೀಯ ಕಲೆಯೇ ಯಕ್ಷಗಾನ. ಇದು ಕಾವ್ಯ, ನಾಟ್ಯ, ಗಾಯನವೇ ಮೊದಲಾ‌ದ ಸಾಂಗತ್ಯವನ್ನು ಒಳಗೊಂಡಿರುವ ಒಂದು ಸತ್ತ್ವಯುತ ಸಾಂಸ್ಕೃತಿಕ ಸೌರಂಭದ ಕಲೆ. ಈಬಾರಿಯ ಕಲೆಯು ಅನಾವರಣಗೊಂಡದ್ದು ಇಲ್ಲಿಯವರಿಂದಲ್ಲ ಬದಲಾಗಿಗಲ್ಫ್ ರಾಷ್ಟ್ರಗಳಲ್ಲಿ ಉದ್ಯೋಗ ನಿಮಿತ್ತ ನೆಲೆಯಾಗಿರುವ ಅನಿವಾಸಿ ಭಾರತೀಯರಿಂದ ಅದರಲ್ಲೂ ವಿಶೇಷವಾಗಿ ಅಲ್ಲಿಯೇ ಹುಟ್ಟಿ ಬೆಳೆದ ಪುಟಾಣಿ ಮಕ್ಕಳಿಂದ ಅಲ್ಲಿನ ಮಕ್ಕಳು ಕಲಿಯುತ್ತಿರುವುದು ಇಂಗ್ಲೀಷ್ ಮಾಧ್ಯಮದಲ್ಲೇ ಆದರೂ ಯಕ್ಷಗಾನಕ್ಕೆ ಬೇಕಾಗಿ ಕನ್ನಡವನ್ನು ಕಲಿತು ಪ್ರದರ್ಶನ ನೀಡಿರುವುದು ಹೆಮ್ಮೆಯ ಸಂಗತಿ ಯಕ್ಷಗಾನ ಅಭ್ಯಾಸ ಕೇಂದ್ರ ಯುಎಇ,…

Read More

ಕಾಸರಗೋಡಿನಲ್ಲಿ ಭೀಕರ ರಸ್ತೆ ಅಪಘಾತ:ಟ್ಯಾಂಕರ್ ಲಾರಿ ಹರಿದು ದಾರುಣ ಸಾವು

​ಕಾಸರಗೋಡು : ನಗರದ ಎಂ.ಜಿ ರಸ್ತೆಯಲ್ಲಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಟ್ಯಾಂಕರ್ ಲಾರಿ ಹರಿದು ತಳಂಗರೆ ಬಾಂಗೋಡು ನಿವಾಸಿ ಹನೀಫಾ (55) ದಾರುಣವಾಗಿ ಸಾವನ್ನಪ್ಪಿದ್ದಾರೆ. ​ವಿದ್ಯಾನಗರದಲ್ಲಿ ಪ್ಲೆಕ್ಸ್ ಅಂಗಡಿ ಹೊಂದಿದ್ದ ಹನೀಫಾ ಅವರು ಸ್ಕೂಟರ್‌ನಲ್ಲಿ ಹೊಸ ಬಸ್ ನಿಲ್ದಾಣದಿಂದ ಹಳೆ ಬಸ್ ನಿಲ್ದಾಣದ ಕಡೆಗೆ ತೆರಳುತ್ತಿದ್ದಾಗ ಈ ದುರ್ಘಟನೆ ಸಂಭವಿಸಿದೆ.ಲಾರಿ ಢಿಕ್ಕಿ ಹೊಡೆದು ಕೆಳಗೆ ಬಿದ್ದ ಇವರ ಕಾಲಿನ ಮೇಲೆ ಲಾರಿಯ ಚಕ್ರ ಹರಿದಿತ್ತು. ತೀವ್ರ ಗಾಯಗೊಂಡಿದ್ದ ಅವರನ್ನು ಕಾಸರಗೋಡು ಮತ್ತು ಮಂಗಳೂರಿನ ಆಸ್ಪತ್ರೆಗಳಲ್ಲಿ ದಾಖಲಿಸಿ…

Read More

ಕುಂಬಳೆ ಅಳಿವೆಬಾಗಿಲಿನಲ್ಲಿ ಅನಧಿಕೃತ ಹೊಯ್ದೆ ಸಂಗ್ರಹಕ್ಕೆ ಹೈಕೋರ್ಟ್ ತಡೆ

ಮಂಜೇಶ್ವರ: ಕುಂಬಳೆ ಗ್ರಾಮ ಪಂಚಾಯತ್‌ನ ಆರಿಕ್ಕಾಡಿ ಹಾಗೂ ಶಿರಿಯ ಹೊಳೆಗಳ ಸಂಗಮ ಅಳಿವೆಬಾಗಿಲಿನಿಂದ ಅನಧಿಕೃತವಾಗಿ ಮರಳು ಸಂಗ್ರಹಿಸುವುದಕ್ಕೆ ಕೇರಳ ಹೈಕೋರ್ಟ್ ತಡೆಯಾಜ್ಞೆ ನೀಡಿದೆ. ಕಳೆದ 9 ವರ್ಷಗಳಿಂದ ಇಲ್ಲಿ ಕಾನೂನುಬಾಹಿರವಾಗಿ ನಡೆಯುತ್ತಿದ್ದ ಮರಳು ವ್ಯಾಪಾರಕ್ಕೆ ಸಂಬಂಧಿಸಿದಂತೆ ಪಂಚಾಯತ್‌ಗೆ ಸುಮಾರು 15 ಕೋಟಿ ರೂಪಾಯಿ ದಂಡ ಎದುರಾಗುವ ಸೂಚನೆ ಸಿಕ್ಕಿದೆ. ಕುಂಬಳೆ ತ್ವಾಫ್ ಮಂಜಿಲ್ ಅಬ್ಬಾಸ್ ಜಾಫರ್ ಸಲ್ಲಿಸಿದ ದೂರಿನ ಮೇರೆಗೆ ವಿಚಾರಣೆ ನಡೆಸಿದ ನ್ಯಾಯಾಲಯ, ಸಂಬಂಧಿತ ಇಲಾಖೆಗಳಿಂದ ಅಧಿಕೃತ ಅನುಮತಿ ಪಡೆಯುವವರೆಗೆ ಶಿರಿಯ ಹೊಳೆಯಿಂದ ಯಾವುದೇ ಮರಳು…

Read More

ಭಾರತದ ಮಾಜಿ ಪ್ರಧಾನಿ ದಿ| ರಾಜೀವ್ ಗಾಂಧಿ ಹಾಗೂ ಮಾಜಿ ಮುಖ್ಯಮಂತ್ರಿ ದಿ| ದೇವರಾಜ ಅರಸು ಅವರ ಜನ್ಮ ಜಯಂತಿ ಆಚರಣೆ

ಮಂಗಳೂರು: ಮಾಜಿ ಪ್ರಧಾನಿ ರಾಜೀವ್ ಗಾಂಧಿ ಹಾಗೂ ಮಾಜಿ ಮುಖ್ಯಮಂತ್ರಿ ಡಿ. ದೇವರಾಜ ಅರಸು ಅವರ ಜನಪರ ಚಿಂತನೆ ಮತ್ತು ಆದರ್ಶಗಳನ್ನು ಇಂದಿನ ಪೀಳಿಗೆಗೆ ಪರಿಚಯಿಸುವ ಅಗತ್ಯವಿದೆ ಎಂದು ಮಾಜಿ ಸಚಿವ ಬಿ. ರಮಾನಾಥ ರೈ ಹೇಳಿದರು. ರಾಜೀವ್ ಗಾಂಧಿಯವರು ಯುವಶಕ್ತಿಗೆ ಆದ್ಯತೆ ನೀಡಿ, ತಂತ್ರಜ್ಞಾನ ಹಾಗೂ ಆಧುನಿಕ ಭಾರತದ ನಿರ್ಮಾಣಕ್ಕೆ ಹೊಸ ದಿಕ್ಕು ನೀಡಿದ ದೂರದೃಷ್ಟಿಯ ನಾಯಕ. ದೇಶದ ಅಭಿವೃದ್ಧಿ ಮತ್ತು ಯುವಕರ ಭವಿಷ್ಯದ ಬಗ್ಗೆ ಅವರು ಕಂಡ ಕನಸುಗಳು ಇಂದಿಗೂ ಪ್ರಸ್ತುತವಾಗಿವೆ ಎಂದು ರೈ…

Read More

ಭಯೋತ್ಪಾದಕರಿಗೆ ರಕ್ಷಣೆ ನೀಡಲು UNSC ದುರುಪಯೋಗ ಸಲ್ಲದು: ಭಾರತ

ನವದೆಹಲಿ: ಭಯೋತ್ಪಾದಕರಿಗೆ ರಕ್ಷಣೆ ನೀಡಲು ವಿಶ್ವಸಂಸ್ಥೆಯ ಭದ್ರತಾ ಮಂಡಳಿಯನ್ನು ರಾಜಕೀಯವಾಗಿ ದುರುಪಯೋಗಪಡಿಸಿಕೊಳ್ಳಬಾರದು ಎಂದು ಭಾರತ ಕಠಿಣ ಸಂದೇಶ ನೀಡಿದೆ. ಭದ್ರತಾ ಮಂಡಳಿಯ ಸದಸ್ಯತ್ವವನ್ನು ಸಂಕುಚಿತ ರಾಜಕೀಯ ಹಿತಾಸಕ್ತಿಗಳಿಗಾಗಿ ಬಳಸಬಾರದು. ನಿರ್ಧಾರಗಳು ರಾಜಕೀಯ ಒತ್ತಡದಿಂದಲ್ಲ, ಸ್ಪಷ್ಟ ಸಾಕ್ಷ್ಯಗಳ ಆಧಾರದ ಮೇಲೆ ಕೈಗೊಳ್ಳಬೇಕು ಎಂದು ಭಾರತದ ರಾಯಭಾರಿ ಯೋಜನಾ ಪಟೇಲ್ ಹೇಳಿದ್ದಾರೆ. ವಿಶ್ವಸಂಸ್ಥೆಯು ಇಂದಿನ ಜಾಗತಿಕ ವಾಸ್ತವಾಂಶಗಳನ್ನು ಪ್ರತಿಬಿಂಬಿಸಬೇಕು. ಭದ್ರತಾ ಮಂಡಳಿಯ ಶಾಶ್ವತ ಹಾಗೂ ತಾತ್ಕಾಲಿಕ ಸದಸ್ಯತ್ವವನ್ನು ವಿಸ್ತರಿಸಿ ಅಭಿವೃದ್ಧಿಶೀಲ ಹಾಗೂ ಜಾಗತಿಕ ದಕ್ಷಿಣದ ರಾಷ್ಟ್ರಗಳಿಗೆ ಹೆಚ್ಚಿನ ಪ್ರಾತಿನಿಧ್ಯ ನೀಡಬೇಕು…

Read More

ತಾಯಿಯ ಅನಾರೋಗ್ಯದಿಂದ ಮನನೊಂದು ಅಪ್ರಾಪ್ತ ಬಾಲಕ ಆತ್ಮಹತ್ಯೆ

ಬಂಟ್ವಾಳ: ಪಿಲಾತಬೆಟ್ಟು ಗ್ರಾಮದ ನೈನಾಡು ನಿವಾಸಿ, 9ನೇ ತರಗತಿ ವಿದ್ಯಾರ್ಥಿಯಾಗಿದ್ದ ಅಪ್ರಾಪ್ತ ಬಾಲಕ ( ಅಶೋಕ್) ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ. ನೈನಾಡು ಶಾಲೆಯಲ್ಲಿ 9ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದ ಬಾಲಕನ ತಾಯಿ ಅನಾರೋಗ್ಯದಿಂದ ಬಳಲುತ್ತಿದ್ದು, ಸ್ಟ್ರೋಕ್‌ಗೆ ಒಳಗಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು ಎನ್ನಲಾಗಿದೆ. ತಂದೆ ಇಲ್ಲದ ಹಿನ್ನೆಲೆಯಲ್ಲಿ ತಾಯಿಯೇ ಬಾಲಕ ಹಾಗೂ ಕುಟುಂಬಕ್ಕೆ ಪ್ರಮುಖ ಆಸರೆಯಾಗಿದ್ದರು.ತಾಯಿಯ ಅನಾರೋಗ್ಯದ ವಿಚಾರವಾಗಿ ಬಾಲಕ ಮಾನಸಿಕವಾಗಿ ನೊಂದಿದ್ದ ಎನ್ನಲಾಗಿದ್ದು, ಶಾಲೆಯಲ್ಲಿಯೂ ಆಗಾಗ್ಗೆ ತಾಯಿಯ ಆರೋಗ್ಯದ ಬಗ್ಗೆ ವಿಚಾರಿಸುತ್ತಿದ್ದ…

Read More

ಕಾಸರಗೋಡಿನಲ್ಲಿ ಶಾಲಾ ಬಸ್–ಬೈಕ್ ಅಪಘಾತ; ಯುವಕ ಸಾವು

ಕಾಸರಗೋಡು: ಶಾಲಾ ಬಸ್ ಮತ್ತು ಬೈಕ್ ನಡುವೆ ಸಂಭವಿಸಿದ ಅಪಘಾತದಲ್ಲಿ ಯುವಕನೊಬ್ಬ ಮೃತಪಟ್ಟ ಘಟನೆ ಗುರುವಾರ ಬೆಳಗ್ಗೆ ಕಾಸರಗೋಡಿನ ಬೋವಿಕ್ಕಾನ ಸಮೀಪದ ಪೊವ್ವಲ್ ಮಾಸ್ತಿಕುಂಡು ಎಂಬಲ್ಲಿ ನಡೆದಿದೆ. ಮೃತರನ್ನು ಗಾಳಿಮುಖ ನೆಟ್ಟಣಿಗೆಯ ಹೊಸಹಿತ್ತಿಲಿನ ಎಸ್. ಶಮ್ಮಾಸ್ ಅಬ್ದುಲ್ಲಾ (25) ಎಂದು ಗುರುತಿಸಲಾಗಿದೆ. ಅವರು ಚೆರ್ಕಳ ಕಡೆಯಿಂದ ಗಾಳಿಮುಖದತ್ತ ಬೈಕ್‌ನಲ್ಲಿ ತೆರಳುತ್ತಿದ್ದಾಗ ಮಾಸ್ತಿಕುಂಡು ಬಳಿ ಎದುರಿನಿಂದ ಬರುತ್ತಿದ್ದ ಖಾಸಗಿ ಶಾಲಾ ಬಸ್ ಡಿಕ್ಕಿ ಹೊಡೆದಿದೆ. ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡ ಶಮ್ಮಾಸ್ ಅವರನ್ನು ಕಾಸರಗೋಡಿನ ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಚಿಕಿತ್ಸೆ ಫಲಕಾರಿಯಾಗದೆ…

Read More

ವಾಲ್ಮೀಕಿ ಹಗರಣದಲ್ಲಿ ಮತ್ತಷ್ಟು ಹೆಸರು ಬಹಿರಂಗಗೊಳ್ಳುವ ನಡುಕದಿಂದ ನಾಗೇಂದ್ರಗೆ ಮತ್ತೆ ಸಚಿವ ಸ್ಥಾನ.ಸಚಿವ ನಾಗೇಂದ್ರ ರಾಜೀನಾಮೆಗೆ ಆಗ್ರಹಿಸಿ ಬಿಜೆಪಿ ಮಂಗಳೂರು ಮಂಡಲದಿಂದ ತೊಕ್ಕೊಟ್ಟಿನಲ್ಲಿ ಪ್ರತಿಭಟನೆ

ಉಳ್ಳಾಲ:ವಾಲ್ಮೀಕಿ ನಿಗಮದ ಹಗರಣದಲ್ಲಿ ಶಾಮೀಲಾಗಿರುವವರ ಮತ್ತಷ್ಟು ಹೆಸರುಗಳನ್ನ ಬಹಿರಂಗಗೊಳಿಸುತ್ತಾರೆಂಬ ನಡುಕದಿಂದ ಹಗರಣದ ರೂವಾರಿ ನಾಗೇಂದ್ರ ಅವರಿಗೆ ಮುಖ್ಯ ಮಂತ್ರಿ ಡಿಕೆಶಿ ಸಚಿವ ಸಂಪುಟದಲ್ಲಿ ಮತ್ತೆ ಸ್ಥಾನ ಕಲ್ಪಿಸಿ ಕೊಡಲಾಗಿದೆ.ನಾಗೇಂದ್ರ ಅವರನ್ನ ಸಚಿವ ಸಂಪುಟದಿಂದ ವಜಾಗೊಳಿಸುವವರೆಗೂ ನಮ್ಮ ಹೋರಾಟ ನಿಲ್ಲೋದಿಲ್ಲವೆಂದು ಬಿಜೆಪಿ ಮಂಗಳೂರು ಮಂಡಲದ ಪ್ರಧಾನ ಕಾರ್ಯದರ್ಶಿ ಮೋಹನ್ ರಾಜ್.ಕೆ.ಆರ್ ಅವರು ರಾಜ್ಯ ಸರಕಾರವನ್ನು ಎಚ್ಚರಿಸಿದರು. ವಾಲ್ಮೀಕಿ ನಿಗಮದ ಲೂಟಿಯ ರೂವಾರಿ ಸಚಿವ ಬಿ.ನಾಗೇಂದ್ರ ರಾಜೀನಾಮೆಗೆ ಆಗ್ರಹಿಸಿ,ಭ್ರಷ್ಟ ಹಾಗೂ ಬಡವರ ವಿರೋಧಿ ಕಾಂಗ್ರೆಸ್ ಸರ್ಕಾರದ ವೈಫಲ್ಯಗಳ ವಿರುದ್ಧ ಭಾರತೀಯ…

Read More

ನಾವೂರು ಹಾಲು ಉತ್ಪಾದಕರ ಸಹಕಾರಿ ಸಂಘಕ್ಕೆ ರಜತ ಸಂಭ್ರಮ

ಬಂಟ್ವಾಳ, ಆ.20: “ಹೈನುಗಾರರಿಂದ ಪಡೆದ ಹಾಲಿನಿಂದ ಬರುವ ಲಾಭಾಂಶವನ್ನು ಮತ್ತೆ ಹೈನುಗಾರರಿಗೆ ನೀಡುವ ಪರಿಕಲ್ಪನೆ ಕೇವಲ ಹಾಲು ಒಕ್ಕೂಟದಲ್ಲಿ ಮಾತ್ರ ಇದೆ. ಖಾಸಗಿ ವ್ಯವಸ್ಥೆಯಲ್ಲಿ ಈ ಪರಿಕಲ್ಪನೆಯೇ ಇಲ್ಲ. ಕಳೆದ 25 ವರ್ಷಗಳಿಂದ ನಾವೂರು ಹಾಲು ಉತ್ಪಾದಕರ ಸಹಕಾರಿ ಸಂಘ ಹಾಲು ಉತ್ಪಾದನೆಯಲ್ಲಿ ಮಹೋನ್ನತ ಸಾಧನೆ ಮಾಡಿದ್ದು, ದಕ್ಷ ಹಾಗೂ ಪ್ರಾಮಾಣಿಕ ಆಡಳಿತ ಮಂಡಳಿಯ ಕಾರಣದಿಂದ ಇದು ಸಾಧ್ಯವಾಗಿದೆ” ಎಂದು ದ.ಕ. ಹಾಲು ಒಕ್ಕೂಟದ ಅಧ್ಯಕ್ಷ ರವಿರಾಜ್ ಹೆಗ್ಡೆ ಹೇಳಿದರು. ನಾವೂರು ಹಾಲು ಉತ್ಪಾದಕರ ಸಹಕಾರಿ ಸಂಘದ…

Read More
error: Content is protected !!