ಆ. 23ರಂದು ಕೊಂಕಣಿ ಮಾನ್ಯತಾ ದಿನಾಚರಣೆ

ಮಂಗಳೂರು:ಕೊಂಕಣಿ ಸಾಂಸ್ಕೃತಿಕ ಸಂಘದ ವತಿಯಿಂದ ಆ. 23ರಂದು ಸಂಜೆ 4 ಗಂಟೆಗೆ ನಗರದ ಅಮ್ಮೆಂಬಳ್ ಸುಬ್ಬರಾವ್ ರಸ್ತೆಯ ಕೆನರಾ ಶಾಲೆಯ ಶ್ರೀ ಸುಧೀಂದ್ರ ತೀರ್ಥ ಸಭಾಗೃಹದಲ್ಲಿ ಕೊಂಕಣಿ ಮಾನ್ಯತಾ ದಿನಾಚರಣೆ ನಡೆಯಲಿದೆ ಎಂದು ಸಂಘದ ಅಧ್ಯಕ್ಷ ಕೃಷ್ಣ ಕಾಮತ್ ತಿಳಿಸಿದ್ದಾರೆ. 1981ರಲ್ಲಿ ದಿವಂಗತ ಜಿ.ಜಿ. ವಾಸುದೇವ ಪ್ರಭು ಸ್ಥಾಪಿಸಿದ ಸಂಘವು ನಾಲ್ಕು ದಶಕಗಳಿಂದ ಕೊಂಕಣಿ ಭಾಷೆ, ಸಾಹಿತ್ಯ ಹಾಗೂ ಸಂಸ್ಕೃತಿಯ ಉಳಿವು-ಬೆಳವಣಿಗೆಗೆ ಶ್ರಮಿಸುತ್ತಿದೆ. ಕಾರ್ಯಕ್ರಮದಲ್ಲಿ ಸಂಸ್ಥಾಪಕರ ಸಂಸ್ಮರಣಾ ದಿನವನ್ನೂ ಆಚರಿಸಲಾಗುವುದು ಎಂದರು. ಕೊಂಕಣಿ ಭಾಷೆ ಮತ್ತು ಸಾಹಿತ್ಯಕ್ಕೆ…

Read More

ಕ್ಷೇಮ ಪಿಂಚಣಿ ವಿತರಣೆ ನೀತಿ ವಿರೋಧಿಸಿ ಸಿಪಿಐಎಂ ಮಂಜೇಶ್ವರ ಲೋಕಲ್ ಕಮಿಟಿಯಿಂದ ಧರಣಿ

ಮಂಜೇಶ್ವರ : ಸಿಪಿಐಎಂ ಮಂಜೇಶ್ವರ ಲೋಕಲ್ ಕಮಿಟಿಯ ನೇತೃತ್ವದಲ್ಲಿ ಹೊಸಬೆಟ್ಟು ಗ್ರಾಮ ಕಚೇರಿ ಮುಂಭಾಗದಲ್ಲಿ ಪ್ರತಿಭಟನಾ ಧರಣಿ ನಡೆಯಿತು.ಪ್ರಶಾಂತ್ ಕನಿಲರವರ ಅಧ್ಯಕ್ಷತೆಯಲ್ಲಿ ನಡೆದ ಧರಣಿಯನ್ನು ಕಾಸರಗೋಡು ಜಿಲ್ಲಾ ಸೆಕ್ರಟರಿಯೇಟ್ ಸದಸ್ಯ ಕೆ ಆರ್ ಜಯಾನಂದ ಉದ್ಘಾಟಿಸಿದರು. ಕೇರಳ ಸರಕಾರವು ಕ್ಷೇಮ ಪೆನ್ಸ್‌ನ್ ವಿತರಣೆಯನ್ನು ರಾಷ್ಟ್ರೀಕೃತ ಬ್ಯಾಂಕಿನ ಮೂಲಕ ವಿತರಿಸುವ ನಿರ್ಧಾರ ಹಿಂತೆಗೆಯಬೇಕು, ಕ್ಷೇಮ ಪೆನ್ಸನ್ ಬುಡಮೇಲುಗೊಳಿಸುವ ನಿಲುವಿನಿಂದ ಹಿಂದಕ್ಕೆ ಸರಿಯಬೇಕು, ಐಕ್ಯ ರಂಗ ಪ್ರಕಟಣೆಯಲ್ಲಿ ಘೋಷಿಸಿದ ರೂ 3000/- ಪೆಸ್ಟನ್ ಕೂಡಲೇ ನೀಡಬೇಕು. ಮೊದಲಾದ ಬೇಡಿಕೆಗಳನ್ನು ಮುಂದಿಟ್ಟು…

Read More

ನಿರ್ಮಾಣ ಸಾಮಗ್ರಿಗಳ ಮೇಲಿನ ನಿಯಂತ್ರಣ: ಕೇರಳಕ್ಕೆ ವಿನಾಯಿತಿ ನೀಡಲು ತಮಿಳುನಾಡು ಚಿಂತನೆ

ತಿರುವನಂತಪುರಂ: ಮೆಟಲ್ ಸೇರಿದಂತೆ ನಿರ್ಮಾಣ ಸಾಮಗ್ರಿಗಳನ್ನು ಇತರ ರಾಜ್ಯಗಳಿಗೆ ಸಾಗಿಸಲು ತಮಿಳುನಾಡು ಸರ್ಕಾರ ವಿಧಿಸಿರುವ ನಿಯಂತ್ರಣಗಳಿಂದ ಕೇರಳಕ್ಕೆ ವಿನಾಯಿತಿ ನೀಡುವ ಬಗ್ಗೆ ಪರಿಶೀಲಿಸಲಾಗುವುದು ಎಂದು ತಮಿಳುನಾಡು ಮುಖ್ಯಮಂತ್ರಿ ಜೋಸೆಫ್ ವಿಜಯ್ ತಿಳಿಸಿರುವುದಾಗಿ ಕೇರಳ ಮುಖ್ಯಮಂತ್ರಿ ವಿ.ಡಿ. ಸತೀಶನ್ ಹೇಳಿದ್ದಾರೆ. ನಿನ್ನೆ ಮಹಾಬಲಿಪುರಂನಲ್ಲಿ ನಡೆದ ದಕ್ಷಿಣ ವಲಯ ಮಂಡಳಿ ಸಭೆಯ ಸಂದರ್ಭದಲ್ಲಿ ತಮಿಳುನಾಡು ಮುಖ್ಯಮಂತ್ರಿಯೊಂದಿಗೆ ನಡೆದ ಭೇಟಿಯಲ್ಲಿ ವಿ.ಡಿ. ಸತೀಶನ್ ಈ ವಿಷಯವನ್ನು ಪ್ರಸ್ತಾಪಿಸಿದ್ದರು. ಕೇರಳದ ವಿಶೇಷ ಪರಿಸ್ಥಿತಿಯನ್ನು ಪರಿಗಣಿಸಿ ಈ ನಿರ್ಧಾರವನ್ನು ಮರುಪರಿಶೀಲಿಸಬೇಕು ಎಂದು ಅವರು ಮನವಿ…

Read More

ಕೊಚ್ಚಿ ಮೆಟ್ರೋ ಹೆಸರು ಬದಲಾವಣೆ ಸದ್ಯ ಪರಿಗಣನೆಯಲ್ಲಿಲ್ಲ*ಸರ್ಕಾರದ ಅಂತಿಮ ನಿರ್ಧಾರವೇ ಅಂತಿಮ ಮಾತು: ಲೋಕನಾಥ್ ಬೆಹ್ರಾ*ಸರ್ಕಾರದ ಯಾವುದೇ ನಿರ್ಧಾರವನ್ನು KMRL ಗೌರವಿಸುತ್ತದೆ

ಕೊಚ್ಚಿ: ಕೊಚ್ಚಿ ಮೆಟ್ರೋ ಹೆಸರನ್ನು ಬದಲಾಯಿಸುವ ಯಾವುದೇ ನಿರ್ಧಾರ ಸದ್ಯ ಪರಿಗಣನೆಯಲ್ಲಿಲ್ಲ ಎಂದು KMRL ಎಂಡಿ ಲೋಕನಾಥ್ ಬೆಹ್ರಾ ತಿಳಿಸಿದ್ದಾರೆ. ಸರ್ಕಾರದೊಂದಿಗೆ ಯಾವುದೇ ಸಮಾಲೋಚನೆ ನಡೆಸದೆ ಈ ಕುರಿತು ಪತ್ರಿಕಾ ವರದಿ ನೀಡಲಾಗಿದೆ. ಹಾಗಿರುವಾಗ ತಾನು ಏಕೆ ಪ್ರತಿಕ್ರಿಯಿಸಬೇಕು ಎಂದು ಅವರು ಪ್ರಶ್ನಿಸಿದರು. ಈ ವಿಷಯದಲ್ಲಿ ಸರ್ಕಾರದೊಂದಿಗೆ ಯಾವುದೇ ಚರ್ಚೆ ನಡೆದಿಲ್ಲ. ಕೇವಲ ಒಂದು ಪ್ರಸ್ತಾವನೆಯನ್ನು ಮುಂದಿಡಲಾಗಿದೆ. ಸರ್ಕಾರ ಯಾವ ನಿರ್ಧಾರ ಕೈಗೊಂಡರೂ ಅದನ್ನು ಗೌರವಿಸುತ್ತೇವೆ. KMRL ಯಾವಾಗಲೂ ಸರ್ಕಾರದೊಂದಿಗೆ ನಿಲ್ಲಲಿದೆ. ಸರ್ಕಾರದ ನಿರ್ಧಾರವೇ ಅಂತಿಮ ಎಂದು…

Read More

ಪುಲಿಕಳಿಯ ಕುರಿತು ಹೇಳಿಕೆಗೆ ವಿ.ಕೆ. ಶ್ರೀರಾಮನ್ ವಿಷಾದ*ಅನುಚಿತ ಪದಪ್ರಯೋಗದಿಂದ ಕಲಾವಿದರಿಗೆ ನೋವಾಗಿದ್ದರೆ ಕ್ಷಮೆ: ವಿ.ಕೆ. ಶ್ರೀರಾಮನ್

ನಟ ಹಾಗೂ ಬರಹಗಾರ ವಿ.ಕೆ. ಶ್ರೀರಾಮನ್ ಅವರು ಪುಲಿಕಳಿಯ ಕುರಿತು ತಾವು ನೀಡಿದ್ದ ಅಭಿಪ್ರಾಯ ಮತ್ತು ಬಳಸಿದ ಅನುಚಿತ ಪದಪ್ರಯೋಗಗಳಿಂದ ಕಲಾವಿದರಿಗೆ ನೋವಾಗಿದ್ದರೆ ಅದಕ್ಕಾಗಿ ವಿಷಾದ ವ್ಯಕ್ತಪಡಿಸಿದ್ದಾರೆ. ಪುಲಿಕಳಿಯು ಪ್ರೇಕ್ಷಕರಿಗೆ ದೃಶ್ಯ ವೈಭವವನ್ನು ಸೃಷ್ಟಿಸುವುದು ಪ್ರಮುಖ ಉದ್ದೇಶವಾಗಿರುವ ಏಕೈಕ ಥೀಮ್‌ನ ಕಾರ್ನಿವಲ್ ಎಂಬ ಅಭಿಪ್ರಾಯವನ್ನು ತಾವು ಒಪ್ಪಿಕೊಳ್ಳುವುದಾಗಿ ವಿ.ಕೆ. ಶ್ರೀರಾಮನ್ ಫೇಸ್‌ಬುಕ್‌ನಲ್ಲಿ ಬರೆದಿದ್ದಾರೆ. ಹೀಗಾಗಿ ತಮ್ಮ ಹಿಂದಿನ ಅಭಿಪ್ರಾಯವು ಹೆಚ್ಚು ಪ್ರಬುದ್ಧವಾಗಿರಲಿಲ್ಲ ಎಂಬುದನ್ನು ತಾವು ಅರಿತುಕೊಂಡಿರುವುದಾಗಿ ಅವರು ತಿಳಿಸಿದ್ದಾರೆ. ಈ ಹಿಂದೆ ಪುಲಿಕಳಿಯ ವಿರುದ್ಧ ಟೀಕೆ ವ್ಯಕ್ತಪಡಿಸಿದ್ದ…

Read More

ಮಿಸಾ’ ನಾಟಕದ ವಿರುದ್ಧ ಅಪಪ್ರಚಾರ: ನಟಿ ಚಿನ್ನೂಸ್ ಕೆಲಂಕ ಪ್ರತಿಕ್ರಿಯೆ

ತ್ರಿಶೂರ್: DYFI ರಾಜ್ಯ ಸಮ್ಮೇಳನದ ಅಂಗವಾಗಿ ಪ್ರದರ್ಶಿಸಲಾದ ‘ಮಿಸಾ’ ನಾಟಕದ ವಿರುದ್ಧ ನಡೆಯುತ್ತಿರುವ ಅಪಪ್ರಚಾರಕ್ಕೆ ರಂಗ ಕಲಾವಿದೆ ಚಿನ್ನೂಸ್ ಕೆಲಂಕ ಪ್ರತಿಕ್ರಿಯಿಸಿದ್ದಾರೆ. ನಾಟಕದ ಒಂದು ಭಾಗವನ್ನು ಮಾತ್ರ ಕತ್ತರಿಸಿ, ಅದನ್ನು ತಪ್ಪು ರೀತಿಯಲ್ಲಿ ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಚಾರ ಮಾಡಲಾಗುತ್ತಿದೆ ಎಂದು ಚಿನ್ನೂಸ್ ಅವರು ತಿಳಿಸಿದ್ದಾರೆ. ಆಡಳಿತ ವ್ಯವಸ್ಥೆಯ ದೌರ್ಜನ್ಯ ಮತ್ತು ಭಯೋತ್ಪಾದನೆಯ ಕುರಿತು ಈ ನಾಟಕ ಮಾತನಾಡುತ್ತದೆ. ನಾಟಕ ಯಾರಿಗೆ ತಲುಪಬೇಕಿತ್ತೋ, ಅವರಿಗೆ ಸರಿಯಾಗಿಯೇ ತಲುಪಿದೆ ಎಂದು ಭಾವಿಸುತ್ತೇನೆ. ನಾಟಕವನ್ನು ಇನ್ನಷ್ಟು ಬಲವಾಗಿ ಮುಂದುವರಿಸುತ್ತೇವೆ ಎಂದು ಚಿನ್ನೂಸ್…

Read More

DYFI ರಾಜ್ಯ ಸಮ್ಮೇಳನದಲ್ಲಿ ತೀವ್ರ ಟೀಕೆ-: ಸಂಘಟನಾ ಶೈಲಿ ಬದಲಾವಣೆಗೆ ಪ್ರತಿನಿಧಿಗಳ ಒತ್ತಾಯ

ತ್ರಿಶೂರ್: DYFI ರಾಜ್ಯ ಸಮ್ಮೇಳನದಲ್ಲಿ ಪ್ರತಿನಿಧಿಗಳು ಸಂಘಟನೆಯ ಕಾರ್ಯವೈಖರಿ ಕುರಿತು ತೀವ್ರ ಟೀಕೆ ವ್ಯಕ್ತಪಡಿಸಿದರು. DYFI ಅಖಿಲ ಭಾರತ ನಾಯಕತ್ವವು ರಾಷ್ಟ್ರಮಟ್ಟದಲ್ಲಿ ಗಮನ ಸೆಳೆಯುವಂತಹ ಯಾವುದೇ ಪ್ರಮುಖ ಅಭಿಯಾನಗಳನ್ನು ಕೈಗೆತ್ತಿಕೊಳ್ಳುತ್ತಿಲ್ಲ ಎಂದು ಪ್ರತಿನಿಧಿಗಳು ಆರೋಪಿಸಿದರು. CJP ನಡೆಸಿದ ಪ್ರತಿಭಟನೆಗೆ ನಿಜವಾದ ಅರ್ಥದಲ್ಲಿ ನೇತೃತ್ವ ವಹಿಸಬೇಕಾಗಿದ್ದದ್ದು DYFI ಆಗಿರಬೇಕಿತ್ತು ಎಂದು ಪ್ರತಿನಿಧಿಗಳು ಅಭಿಪ್ರಾಯಪಟ್ಟರು. Gen Z ಯುವಕರನ್ನು ಸಂಘಟನೆಯತ್ತ ಆಕರ್ಷಿಸುವ ಉದ್ದೇಶದಿಂದ DYFI ತನ್ನ ಕಾರ್ಯಶೈಲಿಯಲ್ಲಿ ಸಂಪೂರ್ಣ ಬದಲಾವಣೆ ತರಬೇಕು ಎಂದು ಅವರು ಸಲಹೆ ನೀಡಿದರು. ಉಡುಪು ಧರಿಸುವ…

Read More

ಪೋಕ್ಸೋ ಪ್ರಕರಣದಲ್ಲಿ ಆರೋಪಿಗೆ ಶಿಕ್ಷೆ ಪ್ರಕಟ

ಬೆಳ್ಳಾರೆ ಪೊಲೀಸ್ ಠಾಣಾ ಅ. ಕ್ರ : 12/2020, ಕಲಂ : 354(A1),506 IPC ಮತ್ತು ಕಲಂ : 8 POCSO ACT -2012 ರಂತೆ ದಾಖಲಾಗಿದ್ದ ಪ್ರಕರಣದಲ್ಲಿ, ಆರೋಪಿತನಾದ ಕಡಬ ಕುದ್ಮಾರು ನಿವಾಸಿಯಾದ ಅಬ್ದುಲ್ಲಾ(64) ಎಂಬವರಿಗೆ, ಮಾನ್ಯ 7 ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಮಂಗಳೂರು ಇಲ್ಲಿ ವಿಚಾರಣೆ ನಡೆದು, ಆರೋಪಗಳು ಸಾಬೀತಾದ ಹಿನ್ನೆಲೆಯಲ್ಲಿ, ಮಾನ್ಯ ನ್ಯಾಯಾಧೀಶರಾದ ಸುಮಂಗಲ ಚಕಲಬ್ಬಿರವರು ಆರೋಪಿಯನ್ನು ದೋಷಿ ಎಂದು ತೀರ್ಪು ನೀಡಿ ಆರೋಪಿಗೆ 5 ವರ್ಷಗಳ ಸಾಧಾರಣ…

Read More

ಕೂಳೂರು ರಸ್ತೆಯ ದುಸ್ಥಿತಿ: ಗುಂಡಿ, ಟ್ರಾಫಿಕ್ ಜಾಮ್‌ಗೆ ಸಿಲುಕಿದ ಜನಜೀವನ; ಶಾಶ್ವತ ಪರಿಹಾರಕ್ಕೆ ಆಗ್ರಹ

ಮಂಗಳೂರು: ನಗರದ ಪ್ರಮುಖ ಪ್ರವೇಶ ದ್ವಾರವಾಗಿರುವ ಕೂಳೂರು–ಬೈಕಂಪಾಡಿ ರಸ್ತೆಯ ಅವ್ಯವಸ್ಥೆ ಹಾಗೂ ನಿರಂತರ ಸಂಚಾರ ದಟ್ಟಣೆಯಿಂದ ವಾಹನ ಸವಾರರು, ಆಟೋ ಹಾಗೂ ಬಸ್ ಚಾಲಕರು, ಪಾದಚಾರಿಗಳು ಮತ್ತು ಸಾರ್ವಜನಿಕರು ತೀವ್ರ ಸಂಕಷ್ಟ ಎದುರಿಸುತ್ತಿದ್ದಾರೆ. ರಸ್ತೆಯ ಗುಂಡಿಗಳಿಗೆ ತಾತ್ಕಾಲಿಕವಾಗಿ ಮಣ್ಣು ಹಾಗೂ ಜಲ್ಲಿ ಹಾಕಿ ದುರಸ್ತಿ ಮಾಡಲಾಗುತ್ತಿದ್ದರೂ, ಮಳೆ ಬಂದ ಬಳಿಕ ಮತ್ತೆ ಗುಂಡಿಗಳು ನಿರ್ಮಾಣವಾಗುತ್ತಿವೆ. ಸಮರ್ಪಕ ಡಾಂಬರೀಕರಣ ಮಾಡದೆ ಕೈಗೊಳ್ಳುತ್ತಿರುವ ತಾತ್ಕಾಲಿಕ ಕಾಮಗಾರಿಯಿಂದ ಯಾವುದೇ ಪ್ರಯೋಜನವಿಲ್ಲ ಎಂದು ಕೂಳೂರು ಆಟೋ ಚಾಲಕ ಅಬ್ದುಲ್ ರಝಾಕ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ….

Read More

SCS ಆಸ್ಪತ್ರೆಯಲ್ಲಿ ‘ಹಗಲು ದರೋಡೆ’ ಆರೋಪ: ವಿಡಿಯೋ ವೈರಲ್

ಮಂಗಳೂರು:SCS ಆಸ್ಪತ್ರೆಯಲ್ಲಿ ರೋಗಿಯಿಂದ ಹೆಚ್ಚಿನ ಶುಲ್ಕ ವಸೂಲಿ ಹಾಗೂ ಡಿಸ್ಚಾರ್ಜ್‌ಗೆ ವಿಳಂಬ ಮಾಡಲಾಗುತ್ತಿದೆ ಎಂದು ಆರೋಪಿಸಿ ರೋಗಿಯ ಸಂಬಂಧಿಕರೊಬ್ಬರು ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಹಂಚಿಕೊಂಡಿದ್ದು, ವೈರಲ್ ಆಗಿದೆ. ಕೈನೋವಿನ ಸಮಸ್ಯೆಯಿಂದ ಆಸ್ಪತ್ರೆಗೆ ದಾಖಲಾಗಿದ್ದ ಮಹಿಳೆಗೆ ಸಂಜೆ ಆರ್ಥೋಪೆಡಿಕ್ ವೈದ್ಯರು ಚಿಕಿತ್ಸೆ ನೀಡಲಿದ್ದಾರೆ ಎಂದು ತಿಳಿಸಲಾಗಿತ್ತು. ಆದರೆ ರಾತ್ರಿ 10 ಗಂಟೆಯಾದರೂ ವೈದ್ಯರು ಆಗಮಿಸಿಲ್ಲ ಎಂದು ಸಂಬಂಧಿಕರು ಆರೋಪಿಸಿದ್ದಾರೆ. ಡಿಸ್ಚಾರ್ಜ್ ಕೇಳಿದಾಗ ಹೆಚ್ಚುವರಿ ಬಿಲ್ ಪಾವತಿಸುವಂತೆ ಒತ್ತಾಯಿಸಲಾಗುತ್ತಿದೆ ಎಂದು ಅವರು ದೂರಿದ್ದಾರೆ. ಈ ಕುರಿತು ಲೂಯಿಸ್ ಮೊಂತೆರೋ ಕೂಡ…

Read More
error: Content is protected !!