ಹಿಂಬದಿಯಿಂದ ಗೂಡ್ಸ್ ಕ್ಯಾಂಟರ್ ಡಿಕ್ಕಿ: ಮದುವೆಗೆ ಮುನ್ನವೇ ಯುವ ಫೋಟೋಗ್ರಾಫರ್ ದಾರುಣ ಸಾವು
ತಾಲೂಕಿನ ರಾಷ್ಟ್ರೀಯ ಹೆದ್ದಾರಿ 275ರ ಎಮ್ಮೆಕೊಪ್ಪಲು ಗ್ರಾಮದ ಪುಟ್ಟನಕೆರೆ ಬಳಿ ಸಂಭವಿಸಿದೆ.ಮೈಸೂರು ನಗರದ ಅರವಿಂದ ನಗರದ ನಿವಾಸಿ ಮಹದೇವು ಅವರ ಪುತ್ರ, ವೃತ್ತಿಯಲ್ಲಿ ಫೋಟೋಗ್ರಾಫರ್ ಆಗಿದ್ದ ಅಭಿಲಾಷ್ (27) ಮೃತಪಟ್ಟ ದುರ್ದೈವಿ. ಅಭಿಲಾಷ್ ಅವರು ತಮ್ಮ ಬೈಕ್‌ನಲ್ಲಿ ಕೆಲಸದ ನಿಮಿತ್ತ ಹುಣಸೂರಿಗೆ ಆಗಮಿಸುತ್ತಿದ್ದರು. ಈ ವೇಳೆ ಮೈಸೂರು ಕಡೆಯಿಂದ ಬಂದ ಗೂಡ್ಸ್ ಕ್ಯಾಂಟರ್ ವಾಹನ ಹಿಂಬದಿಯಿಂದ ಬೈಕ್‌ಗೆ ಶರವೇಗದಲ್ಲಿ ಡಿಕ್ಕಿ ಹೊಡೆದಿದೆ. ಡಿಕ್ಕಿಯಾದ ರಭಸಕ್ಕೆ ಬೈಕ್‌ನಿಂದ ರಸ್ತೆಗೆ ಎಸೆಯಲ್ಪಟ್ಟ ಅಭಿಲಾಷ್ ಅವರ ತಲೆಗೆ ತೀವ್ರ ಪೆಟ್ಟು ಬಿದ್ದು…
