ಟ್ರಂಪ್ ಹತ್ಯೆಗೆ ಇರಾನ್ ಹೊಸ ಸಂಚು ರೂಪಿಸಿದೆ’; ಅಮೆರಿಕಕ್ಕೆ ಇಸ್ರೇಲ್ ಎಚ್ಚರಿಕೆ – ‘ಇರಾನ್‌ನ ಎಲ್ಲಾ ಹತ್ಯೆ ಪಟ್ಟಿಗಳಲ್ಲೂ ನನ್ನ ಹೆಸರಿದೆ’ ಎಂದ ಟ್ರಂಪ್*

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ಹತ್ಯೆ ಮಾಡಲು ಇರಾನ್ ಹೊಸ ಸಂಚು ರೂಪಿಸಿದೆ ಎಂದು ಇಸ್ರೇಲ್ ಅಮೆರಿಕಕ್ಕೆ ಎಚ್ಚರಿಕೆ ನೀಡಿದೆ. ಇದೇ ವೇಳೆ, ಇರಾನ್ ಸಿದ್ಧಪಡಿಸಿರುವ ಎಲ್ಲ ಹತ್ಯೆ ಪಟ್ಟಿಗಳಲ್ಲೂ ತನ್ನ ಹೆಸರಿದೆ ಎಂದು ಟ್ರಂಪ್ ಹೇಳಿದ್ದಾರೆ.

“ಅಮೆರಿಕದ ಅಧ್ಯಕ್ಷನಾದ ನನ್ನನ್ನು ನಿರ್ಮೂಲನೆ ಮಾಡುವುದೇ ಅವರ ಉದ್ದೇಶ. ಇರಾನ್‌ನ ಎಲ್ಲಾ ಹತ್ಯೆ ಪಟ್ಟಿಗಳಲ್ಲೂ ನನ್ನ ಹೆಸರಿದೆ,” ಎಂದು ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.

ಇನ್ನೊಂದೆಡೆ, ಅಮೆರಿಕ ಮತ್ತು ಇರಾನ್ ನಡುವಿನ ದಾಳಿ–ಪ್ರತಿದಾಳಿಗಳು ಮುಂದುವರಿದಿವೆ. ಇರಾನ್‌ನ ಅಣು ಸ್ಥಾವರಗಳು ಸೇರಿದಂತೆ 170ಕ್ಕೂ ಹೆಚ್ಚು ಸ್ಥಳಗಳ ಮೇಲೆ ಅಮೆರಿಕ ದಾಳಿ ನಡೆಸಿರುವುದಾಗಿ ವರದಿಯಾಗಿದೆ.

ಆದರೆ ಕಳೆದ ಕೆಲವು ಗಂಟೆಗಳಲ್ಲಿ ಯಾವುದೇ ಹೊಸ ದಾಳಿ ನಡೆಸಿಲ್ಲ ಎಂದು ಅಮೆರಿಕ ಹೇಳಿಕೊಂಡಿದೆ. ಮತ್ತೊಂದೆಡೆ, ರಕ್ಷಣಾತ್ಮಕ ಕ್ರಮಗಳು ಹಾಗೂ ಪ್ರತಿದಾಳಿಗಳು ಮುಂದುವರಿಯಲಿವೆ ಎಂದು ಇರಾನ್ ಸ್ಪಷ್ಟಪಡಿಸಿದೆ.

ಇದೇ ವೇಳೆ, ಬಹ್ರೈನ್ ಮತ್ತು ಕುವೈತ್‌ನಲ್ಲಿರುವ ಅಮೆರಿಕದ ಸೇನಾ ನೆಲೆಗಳನ್ನು ಗುರಿಯಾಗಿಸಿ ಇರಾನ್ ಪ್ರತಿದಾಳಿ ನಡೆಸಿದೆ ಎಂದು ವರದಿಯಾಗಿದೆ.

SHARE
Loading spinner

Leave a Reply

Your email address will not be published. Required fields are marked *

error: Content is protected !!