ಅ.30ರಿಂದ ‘ಶ್ರೀನೋವಾ-2026’ ರಾಷ್ಟ್ರೀಯ ಮಟ್ಟದ ಕಾಲೇಜು ಉತ್ಸವ

ಮಂಗಳೂರು, ಅ.23: ಶ್ರೀನಿವಾಸ ವಿಶ್ವವಿದ್ಯಾಲಯದ ವತಿಯಿಂದ ಪದವಿಪೂರ್ವ ಕಾಲೇಜು ವಿದ್ಯಾರ್ಥಿಗಳಿಗಾಗಿ ರಾಷ್ಟ್ರೀಯ ಮಟ್ಟದ ಅಂತರ್ ಕಾಲೇಜು ಉತ್ಸವ ‘ಶ್ರೀನೋವಾ-2026’ ಅ.30 ಮತ್ತು 31ರಂದು ನಡೆಯಲಿದೆ.

ನಗರದ ಪಾಂಡೇಶ್ವರ ಸಿಟಿ ಕ್ಯಾಂಪಸ್, ನ್ಯೂ ಕ್ಯಾಂಪಸ್ ಹಾಗೂ ಹಂಪನಕಟ್ಟೆಯ ಏವಿಯೇಷನ್ ಕ್ಯಾಂಪಸ್‌ಗಳಲ್ಲಿ ಉತ್ಸವ ಆಯೋಜಿಸಲಾಗಿದೆ. ಸಾಂಸ್ಕೃತಿಕ, ಕ್ರೀಡೆ, ಆಹಾರ, ಸೃಜನಾತ್ಮಕ ಚಟುವಟಿಕೆ, ವ್ಯವಹಾರ, ಉದ್ಯಮಶೀಲತೆ, ತಂತ್ರಜ್ಞಾನ, ಕೃತಕ ಬುದ್ಧಿಮತ್ತೆ ಮತ್ತು ಇ-ಸ್ಪೋರ್ಟ್ಸ್ ಸೇರಿದಂತೆ ವಿವಿಧ ವಿಭಾಗಗಳಲ್ಲಿ 32 ಸ್ಪರ್ಧೆಗಳು ನಡೆಯಲಿವೆ. ವಿಜೇತರಿಗೆ ಒಟ್ಟು ₹2.5 ಲಕ್ಷ ಬಹುಮಾನ ನೀಡಲಾಗುವುದು. ಒಟ್ಟಾರೆ ವಿಜೇತ ತಂಡಕ್ಕೆ ₹50 ಸಾವಿರ ನಗದು ಹಾಗೂ ಟ್ರೋಫಿ ಲಭಿಸಲಿದೆ.

ಅ.30ರಂದು ಕ್ರೀಡೆ, ಆಹಾರ ತಯಾರಿ, ಪುಷ್ಪಾಲಂಕಾರ, ಕೇಶವಿನ್ಯಾಸ, ವ್ಯವಹಾರ ಹಾಗೂ ರಸಪ್ರಶ್ನೆ ಸ್ಪರ್ಧೆಗಳು ನಡೆಯಲಿದ್ದು, ಸಂಜೆ 4ರಿಂದ ಲೈವ್ ಬ್ಯಾಂಡ್ ಕಾರ್ಯಕ್ರಮ ಆಯೋಜಿಸಲಾಗಿದೆ. ಅ.31ರಂದು ಸಮೂಹ ನೃತ್ಯ, ಸಾಂಪ್ರದಾಯಿಕ ಉಡುಗೆಗಳ ರ‍್ಯಾಂಪ್ ವಾಕ್, ರಂಗೋಲಿ, ಕೋಡಿಂಗ್, ತಾಂತ್ರಿಕ ಟ್ರೆಷರ್ ಹಂಟ್ ಹಾಗೂ ಎಐ ಆಧಾರಿತ ಸ್ಪರ್ಧೆಗಳು ನಡೆಯಲಿವೆ ಎಂದು ಕಾರ್ಯಕ್ರಮದ ಸಂಚಾಲಕಿ ಹಾಗೂ ಏವಿಯೇಷನ್ ಸ್ಟಡೀಸ್ ವಿಭಾಗದ ಡೀನ್ ಡಾ. ಪವಿತ್ರ ಕುಮಾರಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಹೆಚ್ಚಿನ ಮಾಹಿತಿಗಾಗಿ srinivasuniversity.edu.in ಸಂಪರ್ಕಿಸಬಹುದು. ಪತ್ರಿಕಾಗೋಷ್ಠಿಯಲ್ಲಿ ಡೀನ್‌ಗಳಾದ ಡಾ. ವೆಂಕಟೇಶ್ ಅಮಿನ್, ಡಾ. ತ್ರಿಶಾಲಾ ನೊರೊನ್ಹಾ ಹಾಗೂ ಪ್ರಾಂಜಲಿ ಮಥ್ರೆ ಉಪಸ್ಥಿತರಿದ್ದರು.

SHARE
Loading spinner

Leave a Reply

Your email address will not be published. Required fields are marked *

error: Content is protected !!