ಉಪ್ಪಳ. ಸರ್ವ ಶಕ್ತಿ ಸ್ವರೂಪಿಣಿ ತಾಯಿ ಕಾಳಿ ಚಾಮುಂಡಿ ದೈವದ ಕುರಿತಾದ ಭಕ್ತಿ ಪ್ರಧಾನವಾದ ಭಕ್ತಿ ಗೀತೆ ” ಮೇರ್ಲದ ಸತ್ಯೋಲೆ ಸುಗಿಪು” ಇದರ ಧ್ವನಿಸುರುಳಿಯ ವಿಡಿಯೋ ಲೋಕಾರ್ಪಣೆಗೊಂಡಿತು.


ಉಪ್ಪಳ ಮುಳಿಂಜ ಮಹಾನಗರದ ಮುಳಿಂಜ ಫ್ರೆಂಡ್ಸ್ ಕ್ಲಬ್ ನ 17 ನೆ ವಾರ್ಷಿಕೋತ್ಸವ ಹಾಗೂ ಮೊಸರು ಕುಡಿಕೆ ಉತ್ಸವದ ಸಮಾರೋಪ ಸಮಾರಂಭದ ವೇದಿಕೆಯಲ್ಲಿ ವಿಡಿಯೋ ಲೋಕಾರ್ಪಣೆಯಾಯಿತು. ಶ್ರೀ ಅಭಿಷೇಕ್ ಹೊಸಂಗಡಿ ನಿರ್ಮಾಣಕ್ಕೆ ಶ್ರೀ ಸುರೇಶ್ ಕುಮಾರ್ ಮಂಗಲ್ಪಾಡಿ ಯವರ ಸಾಹಿತ್ಯಕ್ಕೆ ಬಹುಭಾಷಾ ಗಾಯಕರಾದ ಶ್ರೀ ಪವನ್ ಕುಮಾರ್ ಹೊಸಂಗಡಿ ಕಂಠ ದಾನ ಮಾಡಿದ್ದಾರೆ. ಶ್ರೀ ಶ್ರೀನಿವಾಸ ಕರಿಬೈಲ್ ಅವರ ಮೂಲ ಪ್ರೇರಣೆಯೊಂದಿಗೆ ಮೂಡಿಬಂದ ಈ ಹಾಡಿಗೆ ನಮ್ಮ ಮೀಡಿಯಾ 24×7 ಮತ್ತು ಶ್ರೀ ಹೇಮಂತ್ ಕಡಂಬಾರ್ ವಿಡಿಯೋ ಸಂಕಲನ ಮಾಡಿದ್ದು, ಶ್ರೀ ಫಿರೋಜ್ ಕಾಸರಗೋಡು ಧ್ವನಿ ಮುದ್ರಣ ಮಾಡಿದ್ದಾರೆ.



ಸಮಾರಂಭದಲ್ಲಿ ವಾಮನ ಸಾಗು, ಮಾದವ ಕುಳೂರು, ಕಿಶೋರ್ ಕುಮಾರ್ ಮಂಗಲ್ಪಾಡಿ, ಸುಧಾಕರ ಮುಲಿಂಜ, ಶರತ್ ಬೇಕೂರು ಮೊದಲಾದವರು ಉಪಸ್ಥಿತರಿದ್ದರು.

