ಹೊಸಂಗಡಿ ಕನಿಲ ಶ್ರೀ ಭಗವತೀ ಭಂಡಾರ ನಿಲಯದಲ್ಲಿ ನವರಾತ್ರಿ ಪೂಜೆ ಹಾಗೂ ವಿಜಯದಶಮಿ ಪೂಜೆಯ ಅಂಗವಾಗಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿದೆ.


ಅಕ್ಟೋಬರ್ 11ರಿಂದ ಅಕ್ಟೋಬರ್ 20ರವರೆಗೆ ನಡೆಯಲಿರುವ ಉತ್ಸವದ ಅಂಗವಾಗಿ ಪ್ರತಿದಿನ ವಿಶೇಷ ಪೂಜೆ ಹಾಗೂ ಧಾರ್ಮಿಕ ವಿಧಿವಿಧಾನಗಳು ನೆರವೇರಲಿವೆ.
ಅಕ್ಟೋಬರ್ 11ರಂದು ಆದಿತ್ಯವಾರ ರಾತ್ರಿ 8 ಗಂಟೆಗೆ ಮೊದಲ ಪೂಜೆ ನಡೆಯಲಿದ್ದು, ಅಕ್ಟೋಬರ್ 12ರಿಂದ 19ರವರೆಗೆ ಪ್ರತಿದಿನ ರಾತ್ರಿ 8 ಗಂಟೆಗೆ ವಿವಿಧ ಪೂಜೆಗಳು ನಡೆಯಲಿವೆ.

ಅಕ್ಟೋಬರ್ 20ರಂದು ಮಂಗಳವಾರ ವಿಜಯದಶಮಿ ಪೂಜೆ ಮಧ್ಯಾಹ್ನ 12.30ಕ್ಕೆ ಮುದುಕುಂಜ ಗುತ್ತು ವರ್ಣಸ್ಥರಿಂದ ನಡೆಯಲಿದ್ದು, ರಾತ್ರಿ 11.30ಕ್ಕೆ ಕಟ್ಟಿ ಭೇಟಿಗೆ ಭಂಡಾರ ನಿಲಯದಿಂದ ವಿಜಯದಶಮಿ ಘೋಷ ಯಾತ್ರೆ ಹೊರಡುವುದು
ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ದೇವಿಯ ಕೃಪೆಗೆ ಪಾತ್ರರಾಗುವಂತೆ ಕ್ಷೇತ್ರದ ಆಡಳಿತ ಮಂಡಳಿ ಮನವಿ ಮಾಡಿದೆ.

