574 ಮೆಟ್ಟಿಲುಗಳಲ್ಲಿ ಭರತ ನಾಟ್ಯ ಮಾಡುತ್ತ ಅಂಜನಾದ್ರಿ ಬೆಟ್ಟ ಏರಿದ ಕಲಾವಿದೆ!

ಗಂಗಾವತಿ,:  ವಿಜಯನಗರ ಜಿಲ್ಲೆಯ ಹೊಸಪೇಟೆಯ ಕಲಾವಿದೆ ಆರ್. ಹರ್ಷಿತಾ ಭರತನಾಟ್ಯ ಮಾಡುತ್ತಲೇ ಅಂಜನಾದ್ರಿ ಬೆಟ್ಟ ಏರಿ ಕಲೆ ಪ್ರದರ್ಶನ ನೀಡಿದ್ದಾರೆ. ಹನುಮದ್ ವ್ರತಾಚರಣೆ ಸಂದರ್ಭದಲ್ಲಿ, ಪಾಲಕರ ಮಾರ್ಗದರ್ಶನದಲ್ಲಿ 574 ಮೆಟ್ಟಿಲುಗಳ ಮೇಲೆ ವಿವಿಧ ಭಂಗಿಯಲ್ಲಿ ನಾಟ್ಯ ನಡೆಸಿ, ಅವರು 8 ನಿಮಿಷ 59 ಸೆಕೆಂಡಿನಲ್ಲಿ ಶಿಖರವನ್ನು ದಾಟಿದ್ದಾರೆ. ಬೆಟ್ಟದ ತುದಿಯ ಆವರಣದಲ್ಲಿ ಭರತನಾಟ್ಯ ಕಲೆ ಪ್ರದರ್ಶಿಸಿ, ದೇವರ ದರ್ಶನ ಪಡೆದ ಆರ್. ಹರ್ಷಿತಾರನ್ನು ನಂತರ ದೇವಸ್ಥಾನದಲ್ಲಿ ಸನ್ಮಾನಿಸಿ ಗೌರವಿಸಿಲಾಯಿತು. ಹನುಮಮಾಲಾ ವಿಸರ್ಜನೆ ಹಾಗೂ ಹನುಮದ್ ವ್ರತಾಚರಣೆಯ ಸಂದರ್ಭದಲ್ಲಿ,…

Read More

ರೇಬಿಸ್ ರೋಗ ಹೇಗೆ ಬರುತ್ತದೆ? ರೇಬೀಸ್ ತಡೆಗಟ್ಟುವಿಕೆ ಮತ್ತು ಚಿಕಿತ್ಸೆ

ರೇಬೀಸ್ (ಹುಚ್ಚು ನಾಯಿ ರೋಗ) ಎಂಬುದು ವೈರಸ್‌ನಿಂದ ಉಂಟಾಗುವ ಗಂಭೀರವಾದ ಕಾಯಿಲೆಯಾಗಿದ್ದು, ಇದು ಸಾಮಾನ್ಯವಾಗಿ ಸೋಂಕಿತ ಪ್ರಾಣಿಯ ಲಾಲಾರಸದ ಮೂಲಕ ಹರಡುತ್ತದೆ, ಮುಖ್ಯವಾಗಿ ಕಚ್ಚುವಿಕೆಯಿಂದ. ಲಕ್ಷಣಗಳು ಆರಂಭವಾದ ನಂತರ ಈ ಕಾಯಿಲೆ ಮಾರಣಾಂತಿಕವಾಗುತ್ತದೆ, ಆದರೆ ಸೋಂಕಿತ ಪ್ರಾಣಿಯಿಂದ ಕಚ್ಚಿಸಿಕೊಂಡ ನಂತರ ತಕ್ಷಣವೇ ಲಸಿಕೆ ಹಾಕಿಸಿಕೊಳ್ಳುವ ಮೂಲಕ ಇದನ್ನು ತಡೆಯಬಹುದು. ರೇಬೀಸ್ ಲಕ್ಷಣಗಳು ಆರಂಭಿಕ ಲಕ್ಷಣಗಳು: : ಜ್ವರ, ತಲೆನೋವು, ಕಚ್ಚಿದ ಸ್ಥಳದಲ್ಲಿ ಜುಮ್ಮೆನಿಸುವಿಕೆ. ಮುಂದುವರಿದ ಲಕ್ಷಣಗಳು: ರೇಬೀಸ್ ತಡೆಗಟ್ಟುವಿಕೆ ಮತ್ತು ಚಿಕಿತ್ಸೆ

Read More

ಮಂಗಳೂರಿನಲ್ಲಿ ಹೈಕೋರ್ಟ್ ಸಂಚಾರಿ ಪೀಠ.ಸಿಜೆ ಜೊತೆ ಚರ್ಚಿಸಿ ಪೀಠ ಸ್ಥಾಪನೆಗೆ ಪ್ರಾಮಾಣಿಕ ಪ್ರಯತ್ನ.ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ

ಮಂಗಳೂರಿನಲ್ಲಿ ಸಂಚಾರಿ ಹೈಕೋರ್ಟ್ ಪೀಠ ಅತ್ಯವಶ್ಯಕತೆ ಇದೆ ಎಂಬುದು ನನ್ನ ಗಮನಕ್ಕೆ ಬಂದಿದೆ. ಈ ಬಗ್ಗೆ ಕರ್ನಾಟಕ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಗಳ ಜೊತೆಯಲ್ಲಿ ಚರ್ಚಿಸಿ ಮಂಗಳೂರಿನಲ್ಲಿ ಹೈಕೋರ್ಟ್ ಪೀಠ ಸ್ಥಾಪನೆಗೆ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ ನೀಡಿದ್ದಾರೆ.ಮಂಗಳೂರಿನಲ್ಲಿ ಸಂಚಾರಿ ಹೈಕೋರ್ಟ್ ಪೀಠ ಸ್ಥಾಪನೆಗೆ ಕರಾವಳಿ ಭಾಗದ ವಕೀಲರ ನಿಯೋಗ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿತು. ಈ ಸಂದರ್ಭದಲ್ಲಿ ಮಾತನಾಡಿದ ಹೈಕೋರ್ಟ್ ಪೀಠ ಹೋರಾಟ ಸಮಿತಿ ಸಂಚಾಲಕರು ಹಾಗೂ ವಿಧಾನ…

Read More

ಉಡುಪಿ: ಮನೆಗೆ ನುಗ್ಗಿ 65.79 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಕಳವು: ಕಳ್ಳನ ಬಂಧನ

ಉಡುಪಿ: ಉಡುಪಿ ಚಿಟ್ಪಾಡಿಯ ಶಾರದಾಂಬ ದೇವಾಸ್ಥಾನ ಗೋಪುರ ಬಳಿಯ ಮನೆಯೊಂದರಲ್ಲಿ ನ.30ರಂದು 65.79 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಕಳವುಗೈದ ಪ್ರಕರಣಕ್ಕೆ ಸಂಬಂಧಿಸಿ ಓರ್ವ ಆರೋಪಿಯನ್ನು ಉಡುಪಿ ನಗರ ಠಾಣಾ ಪೊಲೀಸರು ಬಂಧಿಸಿದ್ದಾರೆ. ಕುಕ್ಕೆಹಳ್ಳಿ ಗ್ರಾಮದ ಕುಕ್ಕಿಕಟ್ಟೆ ನಿವಾಸಿ ಸುಕೇಶ ನಾಯ್ಕ್ (37) ಬಂಧಿತ ಆರೋಪಿ.ನ.30ರಂದು ಚಿಟ್ಪಾಡಿಯ ಶೈಲಾ ವಿಲ್ಲೆಲ್ ಮೀನಾ ಅವರ ಮನೆಗೆ ನುಗ್ಗಿದ ಯಾರೋ ಕಳ್ಳರು ಸುಮಾರು 65.79 ಲಕ್ಷ ಮೌಲ್ಯದ ಸೊತ್ತು ಕಳವು ಮಾಡಿಕೊಂಡು ಪರಾರಿಯಾಗಿದ್ದರು. ಪ್ರಕರಣ ದಾಖಲಿಸಿಕೊಂಡು ತನಿಖೆಗೆ ಇಳಿದ ಉಡುಪಿ…

Read More

ಅಪಘಾತದ ಹಾಟ್ ಸ್ಪಾಟ್ ಆಗಲಿದೆಯಾ ಉರ್ವ ಮಾರಿಗುಡಿ ಸರ್ಕಲ್ ….. ! ?

ಮಂಗಳೂರು:ನೂತನವಾಗಿ ಉರ್ವ ಮಾರಿಗುಡಿ ಸಮೀಪದ ಆಟೋ ರಿಕ್ಷಾ ನಿಲ್ದಾಣದ ಬಳಿ ನಿರ್ಮಾಣವಾಗುತ್ತಿರುವ ಉರ್ವ ಮಾರಿಗುಡಿ ಸರ್ಕಲ್ ನ ಕಾಮಗಾರಿ ಮನಪಾ ಮತ್ತು ಅದನ್ನು ನಿರ್ಮಿಸಿದ ಇಂಜಿನಿಯರ್ ಅಧಿಕಾರಿಗಳ ಬೇಜವಾಬ್ದಾರಿಗೆ ಉದಾಹರಣೆ ಎಂಬಂತೆ ಇದೆ . ನಿರ್ಮಾಣ ಹಂತದಲ್ಲಿರುವ ಉರ್ವ ಮಾರಿಗುಡಿ ಸರ್ಕಲ್ ನ ಎತ್ತರವು ಹೆಚ್ಚಾಗಿದ್ದು ಇದು ವಾಹನ ಸವಾರರಿಗೆ ಎದುರಿನಿಂದ ಬರುವ ವಾಹನದ ಗೋಚರಕ್ಕೆ ಕಷ್ಟಕರವಾಗಿದೆ . ಇದರಿಂದ ಆ ಭಾಗದಲ್ಲಿ ಅಪಘಾತವಾಗುವ ಸಾಧ್ಯತೆ ಹೆಚ್ಚಿದೆ . ಈ ಸರ್ಕಲ್ ಪ್ರಮುಖವಾಗಿ ಅಶೋಕ ನಗರ ,…

Read More

ಕೇರಳದ ಶಿವಗಿರಿಯ ಶಾಖಾ ಮಠವನ್ನು ಉಡುಪಿ ಅಥವಾ ಮಂಗಳೂರಿನಲ್ಲಿ ಸ್ಥಾಪನೆಗೆ ಸರಕಾರ ಸಿದ್ದ : ಮುಖ್ಯಮಂತ್ರಿ ಸಿದ್ದರಾಮಯ್ಯ

ಮಂಗಳೂರು:ಶ್ರೀ ನಾರಾಯಣ ಗುರು-ಗಾಂಧೀಜಿ ಸಂವಾದ ಶತಮಾನೋತ್ಸವದ ಪ್ರಯುಕ್ತ ಶಿವಗಿರಿ ಮಠ, ವರ್ಕಲ ಮತ್ತು ಬ್ರಹ್ಮಶ್ರೀ ನಾರಾಯಣ ಗುರು ಅಧ್ಯಯನ ಪೀಠ, ಮಂಗಳೂರು ವಿಶ್ವವಿದ್ಯಾನಿಲಯದ ಆಶ್ರಯದಲ್ಲಿ ಕೊಣಾಜೆಯ ಮಂಗಳೂರು ವಿಶ್ವವಿದ್ಯಾನಿಲಯ ಕ್ಯಾಂಪಸ್ ನಲ್ಲಿ ಶ್ರೀ ಮಹಾಗುರುವಿನ ಮಹಾ ಸಮಾಧಿ ಶತಾಬ್ದಿ ಸರ್ವಮತ ಸಮ್ಮೇಳನ ಶತಮಾನೋತ್ಸವ ಕಾರ್ಯಕ್ರಮ ನಡೆಯಿತು. ಇದೇ ವೇಳೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಕೇರಳದ ಶಿವಗಿರಿಯ ಶಾಖಾ ಮಠವನ್ನು ಉಡುಪಿ ಅಥವಾ ಮಂಗಳೂರಿನಲ್ಲಿ ಸ್ಥಾಪಿಸಲು ಅಗತ್ಯ ಇರುವ ಐದು ಎಕರೆ ಜಮೀನನ್ನು ಒದಗಿಸಲಾಗುವುದು ಎಂದರು.ಶಿವಗಿರಿ…

Read More

ಶ್ರೀ ಅಯ್ಯಪ್ಪ ಸ್ವಾಮೀ ಕುಣಿತ ಭಜನಾ ತಂಡ ಬಾಯಿಕಟ್ಟೆ. ನೂತನ ಕುಣಿತ ಭಜನೆಯ ಭಕ್ತಿ ವಿಡಿಯೋ ಆಲ್ಬಮ್ ಸ್ವರ್ಣ ಸನ್ನಿಧಿ -(ಈ ಪುಣ್ಯ ಮಲೆ) ಟೈಟಲ್ ಹಾಗೂ ಟ್ರೈಲರ್ ಬಿಡುಗಡೆ

ಶ್ರೀ ಅಯ್ಯಪ್ಪ ಸ್ವಾಮೀ ಕುಣಿತ ಭಜನಾ ತಂಡ ಬಾಯಿಕಟ್ಟೆ ಪೈವಳಿಕೆ ಇವರ ನೂತನ ಕುಣಿತ ಭಜನೆಯ ಭಕ್ತಿ ವಿಡಿಯೋ ಆಲ್ಬಮ್ ಶೆಟ್ಟಿ ಅಜಯ್ ರಾಜ್ ಅವರ ಸಾಹಿತ್ಯ ಹಾಗೂ ರಾಗಸಂಯೋಜನೆಯಲ್ಲಿ ಸಂದೀಪ್ ಆರ್ ಬಲ್ಲಾಳ್ ಸಂಗೀತ ನೀಡಿರುವ ವಾಣಿ ಮಧ್ವ ,ಪ್ರಾಪ್ತಿ ಆರ್ ಶೆಟ್ಟಿ ಹಾಡಿರುವ ,ರಕ್ಷಿತ್ ಎಸ್.ಎನ್.ಸಿ ಛಾಯಾಗ್ರಹಣ ಮಾಡಿರುವ ಉದಯ ಬೇಕೂರು ,ಮನೋಹರ್ ವಾದ್ಯಪಡ್ಪು ಅವರ ನಿರ್ದೇಶನದಲ್ಲಿ ಮೂಡಿ ಬಂದಿರುವ ಸ್ವರ್ಣ ಸನ್ನಿಧಿ -(ಈ ಪುಣ್ಯ ಮಲೆ) ಟೈಟಲ್ ಹಾಗೂ ಟ್ರೈಲರ್ ಬಾಯಿಕಟ್ಟೆ ಅಯ್ಯಪ್ಪ…

Read More

ಭಟ್ರಕುಮೇರು: ಡಿಸಂಬರ್ 7 ರಂದು ಬಾಲ ತನಿಯನ ವಾರ್ಷಿಕ ಕೋಲ ಸೇವೆ

ಮಂಗಳೂರು : ನಗರದ ಪದವಿನಂಗಡಿ ಸಮೀಪದ ಭಟ್ರಕುಮೇರು ಸ್ವಾಮಿ ಕೊರಗ ತನಿಯ ಸಾನಿಧ್ಯದಲ್ಲಿ ವಾರ್ಷಿಕ ಕೋಲ ಸೇವೆಯು ಇದೇ ಬರುವ ದಿನಾಂಕ 7 -12.-2025 ನೇ ಭಾನುವಾರದಂದು ತಂತ್ರಿಗಳಾದ ಶ್ರೀ ರವಿ ಆನಂದ ಶಾಂತಿ ಅಡುಮರೋಳಿ ಇವರ ಮಾರ್ಗದರ್ಶನದಲ್ಲಿ ಜರುಗಲಿದೆ.ಅಂದು ಬೆಳಿಗ್ಗೆ 7 ಗಂಟೆಯಿಂದ ಮಹಾಗಣಪತಿ ಹೋಮ, ನಂತರ ಬೆಳಿಗ್ಗೆ 10 ಗಂಟೆಯಿಂದ ಮಧ್ಯಾಹ್ನ 2 ಗಂಟೆಯ ವರೆಗೆ ಸ್ಥಳೀಯ ವಿವಿಧ ಭಜನಾ ತಂಡಗಳಿಂದ ಭಜನೆ ಹಾಗೂ ಹರಿನಾಮ ಸಂಕೀರ್ತನೆ ನಡೆಯಲಿದೆ. ಸಂಜೆ 3 ಗಂಟೆಗೆ ಸಮಾರೋಪ…

Read More

ಅಂಗಡಿಯ ಶಟರ್ ಬೀಗ ಮುರಿದು ನಗದು ಹಾಗೂ ಸಾಮಾಗ್ರಿ ಕಳವು

ಮಂಜೇಶ್ವರ : ಮಂಜೇಶ್ವರ ರಾಗಂ ಜಂಕ್ಷನ್ ನಲ್ಲಿ ಕಾರ್ಯಾಚರಿಸುತ್ತಿರುವ ಅಶ್ರಫ್ ಎಂಬವರ ಮಾಲಕತ್ವದಲ್ಲಿರುವ ಭಾರತ್ ಸೂಪರ್ ಮಾರ್ಕೆಟ್ ಅಂಗಡಿಯ ಶಟರ್ ಬೀಗ ಮುರಿದು ಒಳನುಗ್ಗಿದ ಕಳ್ಳರು ಡ್ರವರಿನೊಳಗಿರಿಸಿದ್ದ 35000 ರೂಪಾಯಿ ನಗದು ಹಾಗೂ ಸುಮಾರು 10 ಸಾವಿರ ರೂಪಾಯಿ ಮೌಲ್ಯದ ಸಾಮಾಗ್ರಿಗಳನ್ನು ಕದ್ದೊಯ್ದಿದ್ದಾರೆ.ಬುಧವಾರ ಬೆಳಿಗ್ಗೆ ಮಾಲಕ ಅಶ್ರಫ್ ಅಂಗಡಿಗೆ ತಲುಪಿದಾಗ ಕಳವಾಗಿರುವುದು ಗಮನಕ್ಕೆ ಬಂದಿದೆ. ಮಂಗಳವಾರ ರಾತ್ರಿ ಕಳವು ನಡೆದಿದೆ.ಇದರ ಸಮೀಪದಲ್ಲಿರುವ ಮೊಬೈಲ್ ಅಂಗಡಿ ಹಾಗೂ ತರಕಾರಿ ಅಂಗಡಿಯ ಬೀಗ ಮುರಿದು ಕಳವಿಗೆ ಯತ್ನ ನಡೆದಿದೆ. ಘಟನಾ…

Read More
error: Content is protected !!