Headlines

ಪಿಎಸ್‌ಸಿ ಅಕ್ರಮ ಆರೋಪ ಹಾಗೂ ಮುಖ್ಯಮಂತ್ರಿ ವಿರುದ್ಧ ಯುವಮೋರ್ಚಾ ಪ್ರತಿಭಟನೆ; ಕ್ಲಿಫ್ ಹೌಸ್ ಮಾರ್ಚ್ ವೇಳೆ ಘರ್ಷಣೆ

ಕೇರಳದಲ್ಲಿ ಪಿಎಸ್‌ಸಿ (ಸಾರ್ವಜನಿಕ ಸೇವಾ ಆಯೋಗ) ನಡೆಸುತ್ತಿರುವ ಅಕ್ರಮಗಳ ಆರೋಪ ಹಾಗೂ ಮುಖ್ಯಮಂತ್ರಿ ವಿ.ಡಿ. ಸತೀಶನ್ ಅವರು ಪ್ರಧಾನಮಂತ್ರಿಯವರ ನಿವಾಸದ ಮುಂದೆ ನಡೆಸಿದ ಪ್ರತಿಭಟನೆಗೆ ವಿರೋಧ ವ್ಯಕ್ತಪಡಿಸಿ ಯುವಮೋರ್ಚಾ ಕಾರ್ಯಕರ್ತರು ಕ್ಲಿಫ್ ಹೌಸ್‌ಗೆ ನಡೆಸಿದ ಮೆರವಣಿಗೆಯಲ್ಲಿ ಘರ್ಷಣೆ ಉಂಟಾಯಿತು. ಪ್ರತಿಭಟನಾಕಾರರು ಬ್ಯಾರಿಕೇಡ್‌ಗಳ ಮೇಲೆ ಹತ್ತಿ ಆಕ್ರೋಶ ವ್ಯಕ್ತಪಡಿಸಿದರು. ಬ್ಯಾರಿಕೇಡ್‌ಗಳನ್ನು ಕೆಡವಲು ಕಾರ್ಯಕರ್ತರು ಪ್ರಯತ್ನಿಸಿದರು. ಪರಿಸ್ಥಿತಿ ನಿಯಂತ್ರಿಸಲು ಪೊಲೀಸರು ಆರು ಬಾರಿ ಜಲಪೀರಂಗಿ (ವಾಟರ್ ಕ್ಯಾನನ್) ಬಳಸಿದರು. ಪ್ರತಿಭಟನಾಕಾರರು ಪೊಲೀಸರ ಮೇಲೆ ಕಲ್ಲು ಹಾಗೂ ಕೋಲುಗಳನ್ನು ಎಸೆದರು. ಈ…

Read More

ಅನರ್ಹವಾಗಿ ಪಿಂಚಣಿ ಪಡೆದಿದ್ದಾರೆ ಎಂಬ ಸುಳ್ಳು ಪ್ರಚಾರ: ಪಿಕೆ ಶ್ರೀಮತಿ ವಿರುದ್ಧದ ನಕಲಿ ಸುದ್ದಿಗೆ ಕಠಿಣ ಕ್ರಮಕ್ಕೆ ಸಿಎಂ ಸೂಚನೆ

ಅನರ್ಹವಾಗಿ ಪಿಂಚಣಿ ಪಡೆದಿದ್ದಾರೆ ಎಂಬ ಆರೋಪದೊಂದಿಗೆ ಸಿಪಿಎಂ ನಾಯಕಿ ಪಿಕೆ ಶ್ರೀಮತಿ ಅವರ ವಿರುದ್ಧ ಹರಡಿದ ಸುಳ್ಳು ಸುದ್ದಿಯ ಕುರಿತು ಮುಖ್ಯಮಂತ್ರಿ ಮಧ್ಯಪ್ರವೇಶಿಸಿದ್ದಾರೆ. ಕಠಿಣ ಕ್ರಮ ಕೈಗೊಳ್ಳುವಂತೆ ಗೃಹ ಇಲಾಖೆಗೆ ಸೂಚನೆ ನೀಡಿದ್ದಾರೆ. ಶ್ರೀಮತಿ ಟೀಚರ್ ನೀಡಿದ ದೂರನ್ನು ಗೃಹ ಸಚಿವರಿಗೆ ಹಸ್ತಾಂತರಿಸಿ ಈ ನಿರ್ದೇಶನ ನೀಡಲಾಗಿದೆ. “ಸುಳ್ಳು ಸುದ್ದಿ ಸೃಷ್ಟಿಸಿದವರನ್ನು ಕ್ಷಮಿಸುವ ಪ್ರಶ್ನೆಯೇ ಇಲ್ಲ. ಇಂದು ಮಾನನಷ್ಟ ಮೊಕದ್ದಮೆ ದಾಖಲಿಸಲಾಗುವುದು” ಎಂದು ಪಿಕೆ ಶ್ರೀಮತಿ ತಿಳಿಸಿದ್ದಾರೆ. ಸುದ್ದಿ ಪ್ರಕಟಿಸಿದ ಹಲವರು ತಮ್ಮನ್ನು ಸಂಪರ್ಕಿಸಿ ಕ್ಷಮೆ ಕೇಳಿದ್ದಾರೆ….

Read More

ಧರ್ಮೇಂದ್ರ ಪ್ರಧಾನ ರಾಜೀನಾಮೆ ನೀಡುವವರೆಗೆ ಹೋರಾಟ ಮುಂದುವರಿಕೆ: ಸಿಜೆಪಿ; ನೀಟ್ ಅಕ್ರಮದ ವಿರುದ್ಧ ವಿದ್ಯಾರ್ಥಿಗಳ ಪ್ರತಿಭಟನೆ ತೀವ್ರ

ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ ಅವರ ರಾಜೀನಾಮೆ ಎಂಬ ಪ್ರಮುಖ ಬೇಡಿಕೆಯಿಂದ ಯಾವುದೇ ಕಾರಣಕ್ಕೂ ಹಿಂದೆ ಸರಿಯುವುದಿಲ್ಲ ಎಂದು ಸಿಜೆಪಿ (CJP) ಸ್ಪಷ್ಟಪಡಿಸಿದೆ. ಧರ್ಮೇಂದ್ರ ಪ್ರಧಾನ ರಾಜೀನಾಮೆ ನೀಡುವವರೆಗೆ ಹೋರಾಟ ಮುಂದುವರಿಸಲಾಗುವುದು ಎಂದು ಸಿಜೆಪಿಯ ಅಭಿಜಿತ್ ದೀಪ್ಕೆ ತಿಳಿಸಿದ್ದಾರೆ. ಸಾಮಾಜಿಕ ಹೋರಾಟಗಾರ ಸೋನಮ್ ವಾಂಗ್ಚುಕ್ ತಮ್ಮ ಪ್ರತಿಭಟನೆಯನ್ನು ಅಂತ್ಯಗೊಳಿಸಿದ್ದರೂ, ವಿದ್ಯಾರ್ಥಿಗಳ ಹೋರಾಟ ಮುಂದುವರಿಯಲಿದೆ ಎಂದು ಅವರು ಹೇಳಿದ್ದಾರೆ. ಭದ್ರತಾ ಕಾರಣಗಳ ಹಿನ್ನೆಲೆಯಲ್ಲಿ ಕೇಂದ್ರ ಸಚಿವರು ಜಂತರ್ ಮಂತರ್‌ಗೆ ಆಗಮಿಸುವುದಿಲ್ಲ. ಹೀಗಾಗಿ ಚರ್ಚೆಗಾಗಿ ಕಾನ್ಸ್ಟಿಟ್ಯೂಷನ್ ಕ್ಲಬ್ ಅನ್ನು…

Read More

ನೀಟ್ ಅಕ್ರಮಕ್ಕೆ ಕೇಂದ್ರವೇ ಹೊಣೆ; ಶಿಕ್ಷಣ ಸಚಿವರು ರಾಜೀನಾಮೆ ನೀಡಲಿ: ಪದ್ಮರಾಜ್ ಪೂಜಾರಿ

ಮಂಗಳೂರು, ಜು.24: ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ತಡೆಯುವಲ್ಲಿ ಕೇಂದ್ರ ಸರ್ಕಾರ ಸಂಪೂರ್ಣ ವಿಫಲವಾಗಿದ್ದು, ಅದರ ನೈತಿಕ ಹೊಣೆ ಹೊತ್ತು ಕೇಂದ್ರ ಶಿಕ್ಷಣ ಸಚಿವರು ರಾಜೀನಾಮೆ ನೀಡಬೇಕು ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಪದ್ಮರಾಜ್ ಆರ್. ಪೂಜಾರಿ ಆಗ್ರಹಿಸಿದರು. ನಗರದ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನೀಟ್ ಅಕ್ರಮ ವಿರೋಧಿಸಿ ಪ್ರತಿಭಟನೆ ನಡೆಸಿದ ವಿದ್ಯಾರ್ಥಿಗಳ ಮೇಲೆ ನಡೆದ ಪೊಲೀಸ್ ಕ್ರಮ ಹಾಗೂ ಪ್ರತಿಪಕ್ಷದ ನಾಯಕ ರಾಹುಲ್ ಗಾಂಧಿ ಅವರನ್ನು ನಡೆಸಿಕೊಂಡ ರೀತಿಯನ್ನು ಖಂಡಿಸಿದರು. ಇದು…

Read More

ಧರ್ಮೇಂದ್ರ ಪ್ರಧಾನ್ ರಾಜೀನಾಮೆಗೆ ಆಗ್ರಹ: ಪ್ರತಿಪಕ್ಷಗಳ ಗದ್ದಲದಿಂದ ಲೋಕಸಭೆ ಮುಂದೂಡಿಕೆ

“ರಾಜೀನಾಮೆ ನೀಡಿ, ರಾಜೀನಾಮೆ ನೀಡಿ…” ಎಂದು ಘೋಷಣೆ ಕೂಗಿದ ವಿರೋಧ ಪಕ್ಷಗಳು ಒಗ್ಗಟ್ಟಾಗಿ ಪ್ರತಿಭಟನೆ ನಡೆಸಿದ ಹಿನ್ನೆಲೆಯಲ್ಲಿ ಲೋಕಸಭೆಯ ಕಲಾಪವನ್ನು ಇಂದಿನ ಮಟ್ಟಿಗೆ ಮುಂದೂಡಲಾಯಿತು. ಈ ನಡುವೆ, ಚರ್ಚೆಗೆ ಸಿದ್ಧವಿರುವುದಾಗಿ ಕೇಂದ್ರ ಸರ್ಕಾರ ಮತ್ತೊಮ್ಮೆ ಸ್ಪಷ್ಟಪಡಿಸಿದೆ. ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಅವರು ಸದನದಲ್ಲಿ ಮಾತನಾಡಿ, ಸರ್ಕಾರ ಚರ್ಚೆಗೆ ಸಿದ್ಧವಾಗಿದೆ ಎಂದು ಪುನರುಚ್ಚರಿಸಿದರು. ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ಖಚಿತಪಡಿಸುವ ಕಾನೂನು ತರಲಾಗುವುದು ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಈಗಾಗಲೇ ಸ್ಪಷ್ಟಪಡಿಸಿದ್ದಾರೆ ಎಂದು ಹೇಳಿದರು. ಕೇಂದ್ರ…

Read More

ಕಾಸರಗೋಡಿನಲ್ಲಿ ಆರ್‌ವಿಆರ್ ನ್ಯೂರೋ-ಆಂಕಾಲಜಿ ಕೇಂದ್ರ ಆರಂಭ; ‘ಆರೋಗ್ಯ ಬೈ ಆರ್‌ವಿಆರ್’ ದೇಶವ್ಯಾಪಿ ವಿಸ್ತರಣೆ

ಮಂಗಳೂರು, ಜು.24: ಕೈಗೆಟುಕುವ ದರದಲ್ಲಿ ವಿಶ್ವದರ್ಜೆಯ ಆರೋಗ್ಯ ಸೇವೆ ನೀಡುವ ಗುರಿಯೊಂದಿಗೆ ಕಾರ್ಯನಿರ್ವಹಿಸುತ್ತಿರುವ ಆರ್‌ವಿಆರ್ ಹೆಲ್ತ್‌ಕೇರ್, ಕೇರಳದ ಕಾಸರಗೋಡಿನಲ್ಲಿ ಜುಲೈ 26ರಂದು ನೂತನ ನ್ಯೂರೋ-ಆಂಕಾಲಜಿ ಕೇಂದ್ರವನ್ನು ಆರಂಭಿಸುವುದಾಗಿ ಹಾಗೂ ತನ್ನ ಸಮುದಾಯ ಆರೋಗ್ಯ ಕಾರ್ಯಕ್ರಮ ‘ಆರೋಗ್ಯ ಬೈ ಆರ್‌ವಿಆರ್’ ಅನ್ನು ದೇಶಾದ್ಯಂತ ವಿಸ್ತರಿಸುವುದಾಗಿ ಘೋಷಿಸಿದೆ. ನಗರದ ದಿ ಓಶನ್ ಪರ್ಲ್ ಹೋಟೆಲ್‌ನಲ್ಲಿ ಶುಕ್ರವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಸಂಸ್ಥೆಯ ನಿರ್ದೇಶಕ ಹಾಗೂ ಹಿರಿಯ ನರಶಸ್ತ್ರಚಿಕಿತ್ಸಕರಾದ ಡಾ. (ಪ್ರೊ.) ರಾಘವೇಂದ್ರ ಬಿ. ಎಸ್. ಈ ಮಾಹಿತಿ ನೀಡಿದರು.2026ರ ಏಪ್ರಿಲ್‌ನಲ್ಲಿ ಆರಂಭಗೊಂಡ…

Read More

ಅಮೆರಿಕದಿಂದ ಭಾರತ ಸೇರಿ 17 ದೇಶಗಳ ಆಮದು ಸರಕುಗಳಿಗೆ ಶೇ.10 ಸುಂಕ

ನವದೆಹಲಿ: ಬಲವಂತದ ಕಾರ್ಮಿಕರ ಶ್ರಮದಿಂದ ಉತ್ಪಾದಿಸಲಾದ ವಸ್ತುಗಳ ಬಳಕೆಯನ್ನು ತಡೆಯುವ ಉದ್ದೇಶದಿಂದ ಅಮೆರಿಕವು ಭಾರತ ಸೇರಿದಂತೆ 17 ದೇಶಗಳಿಂದ ಆಮದು ಆಗುವ ಕೆಲವು ಸರಕುಗಳ ಮೇಲೆ ಶೇ.10ರ ಸುಂಕ ವಿಧಿಸಿದೆ. 1974ರ ಟ್ರೇಡ್ ಆ್ಯಕ್ಟ್‌ನ ಸೆಕ್ಷನ್ 301 ಅಡಿಯಲ್ಲಿ ಈ ಕ್ರಮ ಜಾರಿಗೆ ಬಂದಿದ್ದು, ಆರಂಭದಲ್ಲಿ ಭಾರತಕ್ಕೆ ಶೇ.12.5ರ ಸುಂಕ ಪ್ರಸ್ತಾಪಿಸಲಾಗಿತ್ತು. ಆದರೆ, ಬಲವಂತದ ಕಾರ್ಮಿಕರಿಂದ ತಯಾರಾದ ಸರಕುಗಳ ಆಮದನ್ನು ನಿಷೇಧಿಸುವಂತೆ ಭಾರತ ವಿದೇಶಿ ವ್ಯಾಪಾರ ನೀತಿಗೆ ತಿದ್ದುಪಡಿ ಮಾಡಿದ ಹಿನ್ನೆಲೆಯಲ್ಲಿ ಸುಂಕವನ್ನು ಶೇ.10ಕ್ಕೆ ಇಳಿಸಲಾಗಿದೆ. ಒಟ್ಟು…

Read More

ಅಧಿಕಾರಿಗಳು–ಜನಪ್ರತಿನಿಧಿಗಳ ಸಮನ್ವಯದಿಂದ ಅಭಿವೃದ್ಧಿ ಸಾಧ್ಯ: ಶಾಸಕ ಗುರ್ಮೆ

ಉಡುಪಿ: ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಸಮನ್ವಯದಿಂದ ಕಾರ್ಯನಿರ್ವಹಿಸಿದರೆ ಕ್ಷೇತ್ರದ ಸಮಗ್ರ ಅಭಿವೃದ್ಧಿ ಸಾಧ್ಯ ಎಂದು ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಹೇಳಿದರು. ಹಿರಿಯಡಕದ ದೇವಾಡಿಗರ ಸಭಾಭವನದಲ್ಲಿ ಬೊಮ್ಮರಬೆಟ್ಟು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಜನಸಂಪರ್ಕ ಸಭೆ ಹಾಗೂ ಸಾರ್ವಜನಿಕ ಅಹವಾಲು ಸ್ವೀಕಾರ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಜನರ ಮನೆಬಾಗಿಲಿಗೆ ಆಡಳಿತವನ್ನು ತಲುಪಿಸಿ, ಸ್ಥಳದಲ್ಲಿಯೇ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸುವುದು ಜನಸಂಪರ್ಕ ಸಭೆಯ ಮುಖ್ಯ ಉದ್ದೇಶವಾಗಿದೆ. ಸಾರ್ವಜನಿಕರು ತಮ್ಮ ಅಹವಾಲುಗಳನ್ನು ಮುಕ್ತವಾಗಿ ಸಲ್ಲಿಸಿ, ಅಧಿಕಾರಿಗಳೊಂದಿಗೆ ಸಹಕರಿಸಬೇಕು ಎಂದು ಅವರು…

Read More

ಪಡೀಲು ನಿವಾಸಿ, ಮಾಜಿ ಅಬಕಾರಿ ಉಪನಿರೀಕ್ಷಕ ಅಂಗಾರ ಪಿ ಇನ್ನಿಲ್ಲ

ಪುತ್ತೂರು: ಅಬಕಾರಿ ಇಲಾಖೆಯ ನಿವೃತ್ತ ಉಪನಿರೀಕ್ಷಕ ಪಡೀಲು ನಿವಾಸಿ ಅಂಗಾರ ಪಿ(65ವ) ಅವರು ಜು.24ರ ನಸುಕಿನ ಜಾವ ನಿಧನರಾದರು. ಪುತ್ತೂರು ಮೊಗೇರ ಸಂಘ, ಬನ್ನೂರು ನವೋದಯ ಯುವಕ ವೃಂದದ ಮಾಜಿ ಅಧ್ಯಕ್ಷರೂ, ಹಾಲಿ ಗೌರವಾಧ್ಯಕ್ಷರೂ ಆಗಿದ್ದ ಅಂಗಾರ ಪಿ ಅವರು ಕಾಂಗ್ರೆಸ್ ಪಡೀಲ್‌ಬೂತ್‌ನ ಅಧ್ಯಕ್ಷರಾಗಿಯೂ, ಪಡೀಲು ಸಾರ್ವಜನಿಕ ಕಟ್ಟೆಪೂಜೆ ಸಮಿತಿಯಲ್ಲೂ ಸಕ್ರಿಯರಾಗಿದ್ದರು. ಪುತ್ತೂರು ಪೇಟೆಯ ಹೃದಯಭಾಗ ಚಿಕ್ಕಪುತ್ತೂರಿನಲ್ಲಿ ಭತ್ತಬೇಸಾಯ ಮಾಡುವ ಮೂಲಕ ಮಾದರಿ ಕೃಷಿಕರಾಗಿದ್ದರು. ವಾರದ ಹಿಂದೆ ಅನಾರೋಗ್ಯಕ್ಕೆ ಒಳಗಾಗಿದ್ದ ಅವರು ಮಂಗಳೂರು ಆಸ್ಪತ್ರೆಯಲ್ಲಿ ದಾಖಲಾಗಿದ್ದರು. ಅಲ್ಲಿ…

Read More

ಶ್ರೀ ಪುತ್ತಿಗೆ ಮೂಲ ಮಠದಲ್ಲಿ ವಾರ್ಷಿಕ ಅಭಿಷೇಕ

ಉಡುಪಿ: ಉಡುಪಿ ಸಮೀಪದ ಹಿರಿಯಡ್ಕದ ಶ್ರೀ ಪುತ್ತಿಗೆ ಮೂಲ ಮಠದಲ್ಲಿ ವಾರ್ಷಿಕ ಅಭಿಷೇಕ ಮಹೋತ್ಸವವು ಭಕ್ತಿಭಾವದಿಂದ ನಡೆಯಿತು.ಈ ಸಂದರ್ಭದಲ್ಲಿ ಪರಮಪೂಜ್ಯ ಶ್ರೀ ಪುತ್ತಿಗೆ ಶ್ರೀ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರು ಹಾಗೂ ಕಿರಿಯ ಶ್ರೀಪಾದರು ಪಟ್ಟದ ದೇವರಿಗೆ ಪಂಚಾಮೃತ ಅಭಿಷೇಕ ನೆರವೇರಿಸಿ, ವಿಶೇಷ ಪೂಜೆ ಸಲ್ಲಿಸಿದರು. ಅಭಿಷೇಕ ಮತ್ತು ಪೂಜಾ ವಿಧಿವಿಧಾನಗಳು ವೇದಘೋಷ ಹಾಗೂ ಧಾರ್ಮಿಕ ಸಂಪ್ರದಾಯಗಳಂತೆ ನೆರವೇರಿದವು. ಈ ಸಂದರ್ಭದಲ್ಲಿ ಮಠದ ಅರ್ಚಕರು, ಶಿಷ್ಯವೃಂದ ಹಾಗೂ ಭಕ್ತರು ಉಪಸ್ಥಿತರಿದ್ದು, ವಿಶೇಷ ಪೂಜೆಯಲ್ಲಿ ಭಾಗವಹಿಸಿ ದೇವರ ಅನುಗ್ರಹ…

Read More
error: Content is protected !!