ಪ್ರಯಾಣಿಕರಿದ್ದಾಗಲೇ ಬಸ್‌ಗೆ ಇಂಧನ ತುಂಬಿಕೆ — ಸುರಕ್ಷತೆ ಬಗ್ಗೆ ಆತಂಕ
ಉಪ್ಪಳ :ಪ್ರಯಾಣಿಕರು ತುಂಬಿರುವ ಸಂದರ್ಭದಲ್ಲಿ ಕೆಎಸ್‌ಆರ್‌ಟಿಸಿ ಬಸ್‌ಗಳಿಗೆ ಪೆಟ್ರೋಲ್ ಪಂಪ್‌ಗಳಲ್ಲಿ ಇಂಧನ ತುಂಬಲಾಗುತ್ತಿರುವುದು ಪ್ರಯಾಣಿಕರ ಸುರಕ್ಷತೆಗೆ ಗಂಭೀರ ಆತಂಕ ಉಂಟುಮಾಡಿದೆ. ಕೇರಳ ರಾಜ್ಯ ರಸ್ತೆ ಸಾರಿಗೆ ನಿಗಮದ (ಕೆಎಸ್‌ಆರ್‌ಟಿಸಿ) ಬಸ್‌ಗಳು ಕರ್ನಾಟಕದ ತೊಕ್ಕೊಟ್ಟು ಹಾಗೂ ಕೊಟ್ಟೆಕಾರು ಪ್ರದೇಶದ ಪಂಪ್‌ಗಳಲ್ಲಿ ಇಂಧನ ತುಂಬುತ್ತಿರುವುದಾಗಿ ತಿಳಿದುಬಂದಿದೆ. ಈ ವೇಳೆ ಸುಮಾರು 10 ನಿಮಿಷಗಳ ಕಾಲ ಬಸ್ ನಿಲುಗಡೆ ಆಗುತ್ತಿದ್ದು, ಬಳಿಕ ಟೋಲ್ ಪ್ಲಾಜಾಗಳಲ್ಲಿ ಮತ್ತಷ್ಟು ವಿಳಂಬ ಉಂಟಾಗುತ್ತಿರುವುದರಿಂದ ಪ್ರಯಾಣಿಕರಿಗೆ ಸಮಯ ನಷ್ಟವಾಗುತ್ತಿದೆ. ಈ ಬಗ್ಗೆ ಪ್ರಯಾಣಿಕರು ಅಸಮಾಧಾನ ವ್ಯಕ್ತಪಡಿಸುತ್ತಿದ್ದರೂ, ಸಂಬಂಧಿಸಿದ…
