ಹಾರ್ಮುಜ್ ಜಲಸಂಧಿಯಲ್ಲಿ ಹಡಗು ಸಂಚಾರಕ್ಕೆ ಮತ್ತೆ ಚೈತನ್ಯ
ದುಬೈ:ಅಮೆರಿಕ ಮತ್ತು ಇರಾನ್ ನಡುವಿನ ಉದ್ವಿಗ್ನತೆ ತಗ್ಗಿ ಶಾಂತಿ ಒಪ್ಪಂದ ಜಾರಿಗೆ ಬಂದ ಬೆನ್ನಲ್ಲೇ ಜಾಗತಿಕ ವ್ಯಾಪಾರಕ್ಕೆ ಮಹತ್ವದ ಕೇಂದ್ರವಾಗಿರುವ ಹಾರ್ಮುಜ್ ಜಲಸಂಧಿಯಲ್ಲಿ ಹಡಗು ಸಂಚಾರ ಮತ್ತೆ ಚೇತರಿಕೆಯ ಲಕ್ಷಣಗಳನ್ನು ತೋರಿದೆ. ಹಲವು ತಿಂಗಳುಗಳ ಅನಿಶ್ಚಿತತೆ ಮತ್ತು ನಿರ್ಬಂಧಗಳ ಬಳಿಕ ಜಲಮಾರ್ಗದಲ್ಲಿ ಸಂಚಾರ ಗಣನೀಯವಾಗಿ ಹೆಚ್ಚಿರುವುದು ಜಾಗತಿಕ ವಾಣಿಜ್ಯ ವಲಯಕ್ಕೆ ನೆಮ್ಮದಿ ತಂದಿದೆ. ಕಡಲ ಗುಪ್ತಚರ ಸಂಸ್ಥೆ ಕೆಪ್ಲರ್ (Kpler) ಬಿಡುಗಡೆ ಮಾಡಿದ ಅಂಕಿ-ಅಂಶಗಳ ಪ್ರಕಾರ, ಜೂನ್ 24ರಂದು ಹಾರ್ಮುಜ್ ಜಲಸಂಧಿಯ ಮೂಲಕ ಹಡಗುಗಳ ಸಂಚಾರದಲ್ಲಿ ಶೇ.105ರಷ್ಟು…
