‘ಕಮ್ಯುನಿಸಂ ಕ್ಯಾನ್ಸರ್‌ನಂತೆ; ಆರಂಭದಲ್ಲೇ ಸಂಪೂರ್ಣ ನಿರ್ಮೂಲನೆ ಮಾಡಬೇಕು’ – ಕಮ್ಯುನಿಸ್ಟ್ ಬೆದರಿಕೆ ಕುರಿತು ಮತ್ತೆ ಟ್ರಂಪ್ ಹೇಳಿಕೆ*
ವಾಷಿಂಗ್ಟನ್: ಅಮೆರಿಕದಲ್ಲಿ ಕಮ್ಯುನಿಸಂ ಪ್ರಭಾವ ಹೆಚ್ಚಾಗುವ ಸಾಧ್ಯತೆ ಇದೆ ಎಂದು ಅಮೆರಿಕ ಅಧ್ಯಕ್ಷ Donald Trump ಎಚ್ಚರಿಕೆ ನೀಡಿದ್ದಾರೆ. ಅಮೆರಿಕದ 250ನೇ ಸ್ವಾತಂತ್ರ್ಯ ವಾರ್ಷಿಕೋತ್ಸವದ ಅಂಗವಾಗಿ ವಾಷಿಂಗ್ಟನ್‌ನ ನ್ಯಾಷನಲ್ ಮಾಲ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. “ಕಮ್ಯುನಿಸಂ ಎಂಬ ಬೆದರಿಕೆಯನ್ನು ಅದು ಆರಂಭವಾಗುವ ಮುನ್ನವೇ ತಡೆಯಬೇಕು. ಅದು ಕ್ಯಾನ್ಸರ್‌ನಂತಿದೆ. ಕ್ಯಾನ್ಸರ್ ಅನ್ನು ಆರಂಭದಲ್ಲೇ ಶಸ್ತ್ರಚಿಕಿತ್ಸೆಯ ಮೂಲಕ ಹೇಗೆ ತೆಗೆದುಹಾಕುತ್ತೇವೆಯೋ, ಅದೇ ರೀತಿ ಕಮ್ಯುನಿಸಂನ್ನೂ ತ್ವರಿತವಾಗಿ ನಿರ್ಮೂಲನೆ ಮಾಡಬೇಕು” ಎಂದು ಟ್ರಂಪ್ ಹೇಳಿದ್ದಾರೆ. ಈ ಕಾರ್ಯಕ್ರಮದಲ್ಲಿ ಟ್ರಂಪ್ ಅವರ…
