“ಕೇರಳ ಮತ್ತೆ ಎಡಪಂಥದೊಂದಿಗೆ; ಆಡಳಿತ ಮುಂದುವರಿಕೆ ಖಚಿತ” – ಎಂ. ಸ್ವರಾಜ್ ಹೇಳಿಕೆ

Kumbla: ಕೇರಳ ಮತ್ತೆ ಎಡಪಂಥದೊಂದಿಗೆ ನಿಂತಿದ್ದು, ಮುಂದಿನ ವಿಧಾನಸಭಾ ಚುನಾವಣೆಯಲ್ಲೂ ಬಹುಮತದೊಂದಿಗೆ ಆಡಳಿತ ಮುಂದುವರಿಯಲಿದೆ ಎಂದು ಎಂ. ಸ್ವರಾಜ್ ಹೇಳಿದ್ದಾರೆ. ಕುಂಬಳೆಯಲ್ಲಿ ನಡೆದ ಭಾಸ್ಕರ್ ಕುಂಬಳೆ ಅವರ ರಕ್ತಸಾಕ್ಷಿ ದಿನಾಚರಣಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ರಾಜ್ಯದ ರಾಜಕೀಯ ಪರಿಸ್ಥಿತಿಯನ್ನು ವಿಶ್ಲೇಷಿಸಿದರು. 2021ರ ಚುನಾವಣೆಗೆ ಮುನ್ನವೇ ಕಾಂಗ್ರೆಸ್ ಪಕ್ಷವು ಮುಖ್ಯಮಂತ್ರಿ ಯಾರು ಆಗಬೇಕು ಎಂಬುದನ್ನು ತೀರ್ಮಾನಿಸಿಕೊಂಡಿತ್ತು ಎಂದು ಅವರು ಟೀಕಿಸಿದರು. “ಎರಡೂವರೆ ವರ್ಷ ಉಮ್ಮನ್ ಚಾಂಡಿ ಹಾಗೂ ನಂತರದ ಅವಧಿಯಲ್ಲಿ ರಮೇಶ್ ಚೆನ್ನಿತಾಲ ಮುಖ್ಯಮಂತ್ರಿ ಆಗಬೇಕು ಎಂಬ…

Read More

ಕನ್ನಡ ಭವನ ಪ್ರಕಾಶನ ವಾರ್ಷಿಕೋತ್ಸವದಲ್ಲಿ ಕೃತಿ ಬಿಡುಗಡೆ – ‘ಭರವಸೆಯ ಭಾರತ ರತ್ನ’ ಪ್ರಶಸ್ತಿ ಪ್ರದಾನ

Kasaragod: ಗಡಿನಾಡಿನ ಹೆಮ್ಮೆಯ ಕನ್ನಡ ಸಂಸ್ಥೆಯಾದ ಕನ್ನಡ ಭವನದ ಅಂಗ ಸಂಸ್ಥೆ ಕನ್ನಡ ಭವನ ಪ್ರಕಾಶನದ ಮೂರನೇ ವಾರ್ಷಿಕೋತ್ಸವ ಸಂಭ್ರಮವು ಏಪ್ರಿಲ್ 22ರಂದು ಕನ್ನಡ ಭವನ ಗ್ರಂಥಾಲಯ ವೇದಿಕೆಯಲ್ಲಿ ಅರ್ಥಪೂರ್ಣವಾಗಿ ಜರುಗಿತು. ಡಾ. ವಾಮನ್ ರಾವ್ ಬೇಕಲ್ ಹಾಗೂ ಸಂಧ್ಯಾ ರಾಣಿ ಟೀಚರ್ ಅವರ ಸಾರಥ್ಯದಲ್ಲಿ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮವನ್ನು ಕನ್ನಡ ಭವನ ನಿರ್ದೇಶಕರಾದ ಡಾ. ವೆಂಕಟ್ರಮಣ ಹೊಳ್ಳ ಉದ್ಘಾಟಿಸಿದರು. ಪತ್ರಕರ್ತ ಹಾಗೂ ರಾಮರಾಜ ಕ್ಷತ್ರಿಯ ಸೇವಾಸಂಘ ಜಿಲ್ಲಾಧ್ಯಕ್ಷ ಪ್ರದೀಪ್ ಬೇಕಲ್ ಅಧ್ಯಕ್ಷತೆ ವಹಿಸಿದರು. ಈ ಸಂದರ್ಭದಲ್ಲಿ…

Read More

ಮಂಜೇಶ್ವರದಲ್ಲಿ ರಾಜಕಾಲುವೆ ಕಸದ ಗುಡ್ಡ – ಸಾಂಕ್ರಾಮಿಕ ರೋಗ ಭೀತಿ, ಸಾರ್ವಜನಿಕರ ಆಕ್ರೋಶ

ಮಂಜೇಶ್ವರ: ರಾಷ್ಟ್ರೀಯ ಹೆದ್ದಾರಿಯ ಮಳೆ ನೀರು ಸುಗಮವಾಗಿ ಹರಿದು ಹೋಗಲೆಂದು ನಿರ್ಮಿಸಲಾದ ಉದ್ಯಾವರ ಮಾಡ ಪರಿಸರದ ವಾಟರ್ ಚಾನಲ್ (ರಾಜಕಾಲುವೆ), ಇದೀಗ ಕಿಡಿಗೇಡಿಗಳ ಅಕ್ಷಮ್ಯ ವರ್ತನೆಯಿಂದಾಗಿ ‘ಸಾಂಕ್ರಾಮಿಕ ರೋಗಗಳ ತವರು’ ಆಗಿ ಮಾರ್ಪಟ್ಟಿದೆ. ಹೆದ್ದಾರಿಯಿಂದ ಹರಿದು ಬರುವ ನೀರು ಕುಂಡುಕೊಳಕೆ ಹಾಗೂ ಅಂಜರೆ ಮಾರ್ಗವಾಗಿ ಸಮುದ್ರವನ್ನು ಸೇರಬೇಕಿತ್ತು. ಆದರೆ, ಪ್ರಸ್ತುತ ಈ ಕಾಲುವೆಯು ಪ್ಲಾಸ್ಟಿಕ್ ಲೋಟ-ಚೀಲಗಳು, ಹಸಿ ಕಸ ಹಾಗೂ ಹಾದಿಹೋಕರು ಎಸೆಯುವ ಕೋಳಿ ತ್ಯಾಜ್ಯದಿಂದ ತುಂಬಿ ತುಳುಕುತ್ತಿದೆ. ಕಾಲುವೆಯಲ್ಲಿ ನೀರು ಹರಿಯುವ ಬದಲು ಕೊಳೆತ ತ್ಯಾಜ್ಯಗಳು…

Read More

ಕೀಳೂರಿನಲ್ಲಿ ಗುಂಡಾಗಿರಿ: ಪ್ರವಾಸಿ ಯುವಕನಿಗೆ ಚಾಕು ಇರಿತ, ಗಂಭೀರ ಗಾಯ

ಕಾಸರಗೋಡು: ಕೀಳೂರು ಪ್ರದೇಶದಲ್ಲಿ ಗುಂಡಾಸಂಘದ ದಾಳಿ ನಡೆದಿದ್ದು, ಪ್ರವಾಸಿ ಯುವಕನಿಗೆ ಚಾಕುವಿನಿಂದ ಇರಿದು ಗಂಭೀರವಾಗಿ ಗಾಯಗೊಳಿಸಿದ ಘಟನೆ ಮಂಗಳವಾರ ರಾತ್ರಿ ನಡೆದಿದೆ. ಕೀಳೂರಿನ ಮಹಮ್ಮದ್ ಕುಂಜಿ ಅವರ ಪುತ್ರ ಹಾಗೂ ಗಲ್ಫ್ ದೇಶದಲ್ಲಿ ಉದ್ಯೋಗದಲ್ಲಿರುವ ಮಿಗ್ದಾದ್ (32) ಗಾಯಗೊಂಡ ವ್ಯಕ್ತಿ. ಅವರನ್ನು ಕಾಸರಗೋಡು ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.ಗಾಯಾಳು ಮಿಗ್ದಾದ್ ನೀಡಿದ ಮಾಹಿತಿ ಪ್ರಕಾರ,ಕಾಞ್ಞಂಗಾಡಿನಲ್ಲಿ ಆಟ ವೀಕ್ಷಿಸಿ ತಮ್ಮ ಸಹೋದರ, ಇಬ್ಬರು ಚಿಕ್ಕ ಮಕ್ಕಳು ಮತ್ತು ಸ್ನೇಹಿತರೊಂದಿಗೆ ರಾತ್ರಿ ಸುಮಾರು 11 ಗಂಟೆಗೆ ಕಾರಿನಲ್ಲಿ…

Read More

ಕುಂಬಳೆಯಲ್ಲಿ ಯುವಕನ ಹತ್ಯೆ ಯತ್ನ ಪ್ರಕರಣ: ಆರು ಮಂದಿ ಆರೋಪಿಗಳ ಬಂಧನ

ಕಾಸರಗೋಡು: ಕುಂಬಳೆಯ ಕೃಷ್ಣನಗರ ಸಮೀಪ ಯುವಕನನ್ನು ಹತ್ಯೆ ಮಾಡಲು ಯತ್ನಿಸಿದ ಪ್ರಕರಣದಲ್ಲಿ ಆರು ಮಂದಿ ಆರೋಪಿಗಳು ಪೊಲೀಸರಿಗೆ ಶರಣಾಗಿದ್ದಾರೆ. ಕುಂಬಳೆ ಕುಂಟಾಗಿರಡ್ಕ ಪ್ರದೇಶದ ಮಹಮ್ಮದ್ ಹಾಶಿಂ (ಆಶಿಂ), ಅಬು ಜಾಸಿಂ (ಜಾಸಿ), ರಮೀಸ್ ರೋಷಾಲ್ ಫಿರೋಸ್ (ರಮೀಸ್), ಮಿನ್ಹಾಜ್ ಅಬ್ದುಲ್ಲ (ಮಿನ್ಹಾಜ್), ಫಝಲ್ ರಹ್ಮಾನ್ (ಪಜಿಲು) ಮತ್ತು ಮೊಹಿಯುದ್ದೀನ್ ನಿಹಾಲ್ (ನಿಹಾಲ್) ಇವರು ಕುಂಬಳ ಪೊಲೀಸ್ ಠಾಣೆಯ ಉಪನಿರೀಕ್ಷಕ ಅನಂತಕೃಷ್ಣನ್ ಆರ್ ಮೆನನ್ ಅವರ ಮುಂದೆ ಶರಣಾಗಿದ್ದಾರೆ. ಮಾರ್ಚ್ 30ರಂದು ಮಧ್ಯರಾತ್ರಿ ಸುಮಾರು 12 ಗಂಟೆಗೆ ಕುಂಬಳೆ…

Read More

ಆನೆಕಲ್ಲು ಶಾಲೆಯಲ್ಲಿ ಮೂರು ದಿನಗಳ ವೈವಿಧ್ಯ ಬೇಸಿಗೆ ಶಿಬಿರ ಆರಂಭ

ಆನೆಕಲ್ಲು: ಎಸ್. ಎಸ್. ಕೆ ಕಾಸರಗೋಡು ಹಾಗೂ ಬಿ. ಆರ್. ಸಿ ಮಂಜೇಶ್ವರ ಆಶ್ರಯದಲ್ಲಿ ಮೂರು ದಿನಗಳ ವೈವಿಧ್ಯ ಬೇಸಿಗೆ ಶಿಬಿರವು ಆನೆಕಲ್ಲು ಶಾಲೆಯಲ್ಲಿ ಜರಗಿತು. ಕಾರ್ಯಕ್ರಮದ ಉದ್ಘಾಟನೆಯನ್ನು ಕಾಸರಗೋಡು ಜಿಲ್ಲಾ ಪಂಚಾಯತ್ ಸದಸ್ಯರಾದ ಹರ್ಷಾದ್ ವರ್ಕಾಡಿ ನೆರವೇರಿಸಿದರು. ಶಾಲಾ ರಕ್ಷಕ ಶಿಕ್ಷಕ ಸಂಘದ ಉಪಾಧ್ಯಕ್ಷರಾದ ಅಶೋಕ್ ಕೊಡ್ಲಮೊಗರು ರವರ ಅಧ್ಯಕ್ಷತೆಯಲ್ಲಿ ಜರಗಿದ ಕಾರ್ಯಕ್ರಮದಲ್ಲಿ, ಶಾಲಾ ಮುಖ್ಯೋಪಾಧ್ಯಯರಾದ ರವಿಶಂಕರ್ , ಸಿತಾರ ಟೀಚರ್ ಶುಭ ಹಾರೈಸಿದರು. ಬಿ .ಪಿ. ಸಿ ರಾಜ ಗೋಪಾಲನ್ ಕಾರ್ಯಕ್ರಮದ ಉದ್ದೇಶವನ್ನು ತಿಳಿಸಿದರು….

Read More

ಕಾಸರಗೋಡಿನ ಕೇರಳ ಕೆ. ಎಸ್.ಆರ್. ಟಿ.ಸಿ.ಫಾಸ್ಟ್ ಪ್ಯಾಸೆಂಜರ್ ಬಸ್ಸು ಬೀರಿ ಬಸ್ ಸ್ಟಾಪ್ ನಲ್ಲಿ ನಿಲುಗಡೆಗೆ ಒತ್ತಾಯಿಸಿ ಕರ್ನಾಟಕ ವಿಧಾನ ಸಭೆಯ ಸಭಾಧ್ಯಕ್ಷರಿಗೆ ಮನವಿ

ಕಾಸರಗೋಡು ಮಂಗಳೂರು ಅಂತರ ರಾಜ್ಯ ಮಾರ್ಗದಲ್ಲಿ ವೇಗವಾಗಿ ಸಂಚರಿಸುವ ಕೇರಳ ಕೆ.ಎಸ್.ಆರ್. ಟಿ.ಸಿ ಫಾಸ್ಟ್ ಪ್ಯಾಸೆಂಜರ್ ಬಸ್, ಬೀರಿ ಬಸ್ ಸ್ಟಾಪ್ ನಲ್ಲಿ ನಿಲುಗಡೆಯಾಗಬೇಕೆಂದು ಕಾಸರಗೋಡು ಕಡೆಗೆ ದಿನನಿತ್ಯ ಹೋಗಿ ಬರುವ ಬಸ್ಸು ಪ್ರಯಾಣಿಕರು ಒತ್ತಾಯಿಸುತ್ತಿದ್ದಾರೆ.ಈ ಫಾಸ್ಟ್ ಪ್ಯಾಸೆಂಜರ್ ಕೆ. ಎಸ್.ಆರ್. ಟಿ. ಸಿ ಬಸ್ಸು ತಲಪಾಡಿ ಮತ್ತು ತೊಕ್ಕೋಟು ಬಸ್ ಸ್ಟಾಪ್ ನಲ್ಲಿ ಮಾತ್ರ ನಿಲುಗಡೆಯಿದೆ. ದಿನಂಪ್ರತಿ ನೂರಾರು ಸಂಖ್ಯೆಯಲ್ಲಿ ಕಾಸರಗೋಡು ಬೀರಿ ಮಾರ್ಗವಾಗಿ ಉದ್ಯೋಗ ವ್ಯವಹಾರ ಹಾಗೂ ಇನ್ನಿತರ ಕೌಟುಂಬಿಕ ಅಗತ್ಯಗಳಿಗಾಗಿ ಪ್ರಯಾಣಿಸುವ ದಿನನಿತ್ಯದ…

Read More

ನಾಲ್ಕು ವರ್ಷಗಳಿಂದ ನೀರಿಲ್ಲ, ಆದರೂ ಬಿಲ್–ಜಪ್ತಿ ನೋಟಿಸ್: ಮಾಡ ಕೊಳಕೆಯ ಜನರ ಆಕ್ರೋಶ

​ಮಂಜೇಶ್ವರ: ಅಭಿವೃದ್ಧಿಯ ಹೆಸರಿನಲ್ಲಿ ಜನರ ಮೂಲಭೂತ ಹಕ್ಕನ್ನೇ ಕಸಿದುಕೊಳ್ಳುವುದು ಎಷ್ಟು ಸರಿ? ಮಂಜೇಶ್ವರ ಗ್ರಾಮ ಪಂಚಾಯಿತಿಯ 23ನೇ ವಾರ್ಡ್ ವ್ಯಾಪ್ತಿಯ ಮಾಡ ಕೊಳಕೆ ನಿವಾಸಿಗಳ ಇಂದಿನ ಸ್ಥಿತಿ ನೋಡಿದರೆ ವ್ಯವಸ್ಥೆಯ ಮೇಲೆ ಅಸಹ್ಯ ಹುಟ್ಟದಿರದು. ಕಳೆದ ನಾಲ್ಕು ವರ್ಷಗಳಿಂದ ಕುಡಿಯುವ ನೀರಿಲ್ಲದೆ ಇಲ್ಲಿನ ಕುಟುಂಬಗಳು ನರಕಯಾತನೆ ಅನುಭವಿಸುತ್ತಿದ್ದರೂ, ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಮಾತ್ರ ‘ಕುರುಡಾಗಿ’ ಕುಳಿತಿದ್ದಾರೆ. ​ತಲಪಾಡಿಯಿಂದ ಚೆಂಗಳವರೆಗಿನ ರಸ್ತೆ ಕಾಮಗಾರಿ ಆರಂಭವಾದಾಗ ಅಭಿವೃದ್ಧಿಯ ಕನಸು ಕಂಡಿದ್ದ ಜನರಿಗೆ ಇಂದು ಆ ರಸ್ತೆಯೇ ಶಾಪವಾಗಿ ಪರಿಣಮಿಸಿದೆ. ಕಾಮಗಾರಿ…

Read More

ಕಾಸರಗೋಡು ಕನ್ನಡ ಭವನ ಪ್ರಕಾಶನದ 3ನೇ ವಾರ್ಷಿಕೋತ್ಸವ ಇಂದು – ಪುಸ್ತಕ ಬಿಡುಗಡೆ, ಪ್ರತಿಭಾ ಪುರಸ್ಕಾರ

Kasaragod: ಕನ್ನಡ ಭವನದ ಅಂಗ ಸಂಸ್ಥೆಯಾದ ಕನ್ನಡ ಭವನ ಪ್ರಕಾಶನದ ಮೂರನೇ ವಾರ್ಷಿಕೋತ್ಸವವು ಇಂದು (ಏಪ್ರಿಲ್ 22) ಸಂಜೆ 5 ಗಂಟೆಗೆ ಕನ್ನಡ ಭವನ ವೇದಿಕೆಯಲ್ಲಿ ನಡೆಯಲಿದೆ. ಕಾರ್ಯಕ್ರಮಕ್ಕೆ ಪತ್ರಕರ್ತ ಹಾಗೂ ಕನ್ನಡ ಭವನ ಗೌರವ ಅಧ್ಯಕ್ಷ ಪ್ರದೀಪ್ ಬೇಕಲ್ ಅಧ್ಯಕ್ಷತೆ ವಹಿಸಲಿದ್ದು, ಕನ್ನಡ ಭವನ ನಿರ್ದೇಶಕ ಹಾಗೂ ಧಾರ್ಮಿಕ ಮುಂದಾಳು ಡಾ. ಕೆ. ಎನ್. ವೆಂಕಟ್ರಮಣ ಹೊಳ್ಳ ಉದ್ಘಾಟಿಸಲಿದ್ದಾರೆ. ಈ ಸಂದರ್ಭದಲ್ಲಿ ಅಖಿಲ ಭಾರತ ಮಟ್ಟದಲ್ಲಿ ಸಾಧನೆಗೈದ ಇಬ್ಬರು ಪ್ರತಿಭಾವಂತರಿಗೆ ಗೌರವ ಸಮರ್ಪಣೆ ನಡೆಯಲಿದೆ. ಎಂ.ಬಿ.ಬಿ.ಎಸ್.,…

Read More

ಸ್ಕೂಟರ್‌ನಲ್ಲಿ ಮಾದಕ ವಸ್ತು ಸಾಗಾಟ:19.340 ಗ್ರಾಂ ಎಂ.ಡಿ.ಎಂ.ಎ ಸಹಿತ ಯುವಕನ ಬಂಧನ

ಕಾಸರಗೋಡು: ಸ್ಕೂಟರ್‌ನಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ 19.340 ಗ್ರಾಂ ಎಂ.ಡಿ.ಎಂ.ಎ ಸಹಿತ ಓರ್ವನನ್ನು ಕುಂಬಳೆ ಪೊಲೀಸರು ಬಂಧಿಸಿದ್ದಾರೆ.ದಕ್ಷಿಣ ಕರ್ನಾಟಕದ ಪೆರುಮಣ್ಣೂರು, ಕಲ್ಲಾಪು ನಿವಾಸಿಯಾದ ಸಯ್ಯಿದ್ ಆಫ್ರೀದಿ (28) ಬಂಧಿತನಾಗಿದ್ದಾನೆ. ಶುಕ್ರವಾರ ಮಧ್ಯರಾತ್ರಿ ಸುಮಾರು 12 ಗಂಟೆಗೆ ಶಿರಿಯ ಮುಟ್ಟಮ್ ಪ್ರದೇಶದಲ್ಲಿ ಪೇಟ್ರೋಲಿಂಗ್ ನಡೆಸುತ್ತಿದ್ದ ವೇಳೆ ಸರ್ವೀಸ್ ರಸ್ತೆಯಲ್ಲಿ ಅನುಮಾನಾಸ್ಪದವಾಗಿ ಕಂಡುಬಂದ ಕರ್ನಾಟಕ ನೋಂದಣಿ ಸಂಖ್ಯೆಯ ಸ್ಕೂಟರ್ ಅನ್ನು ಪೊಲೀಸರು ತಡೆದು ಪರಿಶೀಲನೆ ನಡೆಸಿದರು. ಈ ವೇಳೆ ಆರೋಪಿಯ ಬಳಿ ಇದ್ದ ಮಾದಕ ವಸ್ತು ಪತ್ತೆಯಾಯಿತು ಎಂದು ಪೊಲೀಸರು ತಿಳಿಸಿದ್ದಾರೆ….

Read More
error: Content is protected !!