ಮಂಜೇಶ್ವರ ರೈಲ್ವೆ ನಿಲ್ದಾಣಕ್ಕೆ ಅಭಿವೃದ್ಧಿಯ ಸ್ಪರ್ಶ: ಮೂಲಸೌಕರ್ಯ ವೃದ್ಧಿಗೆ ಡಿಆರ್‌ಎಂ ಮಧುಕರ್ ರಾವ್ ಭರವಸೆ

ಮಂಜೇಶ್ವರ: ಮಂಜೇಶ್ವರ ರೈಲ್ವೆ ನಿಲ್ದಾಣದಲ್ಲಿ ಅಗತ್ಯ ಮೂಲಸೌಕರ್ಯಗಳನ್ನು ಅಭಿವೃದ್ಧಿಪಡಿಸಲಾಗುವುದು ಎಂದು ದಕ್ಷಿಣ ರೈಲ್ವೆಯ ಪಾಲಕ್ಕಾಡ್ ವಿಭಾಗೀಯ ರೈಲ್ವೆ ವ್ಯವಸ್ಥಾಪಕ ಮಧುಕರ್ ರಾವ್ ತಿಳಿಸಿದ್ದಾರೆ. ನಿಲ್ದಾಣಕ್ಕೆ ಭೇಟಿ ನೀಡಿದ ವೇಳೆ ಜನಪ್ರತಿನಿಧಿಗಳು, ಪ್ರಯಾಣಿಕರು ಹಾಗೂ ನಿಲ್ದಾಣ ಅಭಿವೃದ್ಧಿ ಸಮಿತಿ ಸದಸ್ಯರೊಂದಿಗೆ ಚರ್ಚೆ ನಡೆಸಿದ ಅವರು, ಹಲವು ಪ್ರಮುಖ ಕಾಮಗಾರಿಗಳ ಬಗ್ಗೆ ಮಾಹಿತಿ ನೀಡಿದರು. ಮಳೆಗಾಲದಲ್ಲಿ ನಿಲ್ದಾಣ ಆವರಣದಲ್ಲಿ ನೀರು ನಿಲ್ಲದಂತೆ ತಡೆಯಲು ಸುಸಜ್ಜಿತ ಚರಂಡಿ ವ್ಯವಸ್ಥೆ ನಿರ್ಮಿಸಲಾಗುವುದು. ಪ್ರಯಾಣಿಕರಿಗೆ ಅನುಕೂಲವಾಗುವಂತೆ ಪ್ಲಾಟ್‌ಫಾರ್ಮ್‌ನ ಎರಡೂ ಬದಿಗಳಲ್ಲಿ ಮೇಲ್ಛಾವಣಿ ನಿರ್ಮಾಣಕ್ಕೂ ಕ್ರಮ…

Read More

ಬೇಕೂರಿನಲ್ಲಿ ಪೈಪ್‌ಲೈನ್ ಸ್ಫೋಟ – ಮಿನಿ ಪ್ರವಾಹ, ಮನೆಗೆ ಹಾನಿ, ನೀರು ಸರಬರಾಜು ಸ್ಥಗಿತದ ಭೀತಿ

ಬೇಕೂರು: ಮಂಗಲ್ಪಾಡಿ ಪಂಚಾಯತ್ ವ್ಯಾಪ್ತಿಯ ವಿವಿಧ ವಾರ್ಡ್‌ಗಳಿಗೆ ನೀರು ಸರಬರಾಜು ಮಾಡುವ ಬೇಕೂರಿನ ಜಲಸಂಪನ್ಮೂಲ ಘಟಕದಲ್ಲಿ ಇಂದು ಬೆಳಗ್ಗೆ ಭಾರೀ ಅವಘಡ ಸಂಭವಿಸಿದೆ. ಬೇಕೂರು ಮಿಲ್ ಸಮೀಪದಲ್ಲಿರುವ ಚೆಂಬರ್‌ನಲ್ಲಿ ಪೈಪ್‌ಲೈನ್ ತುಂಡಾಗಿ, ದೊಡ್ಡ ಪ್ರಮಾಣದ ನೀರು ಹೊರಹರಿದು ಮಿನಿ ಪ್ರವಾಹದಂತ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಘಟನೆ ಇಂದು ಬೆಳಗ್ಗೆ ಸುಮಾರು 8 ಗಂಟೆಯ ವೇಳೆಗೆ ಸಂಭವಿಸಿದ್ದು, ಸ್ಥಳೀಯ ಸ್ಕ್ರಾಪ್ ಅಂಗಡಿ ಮಾಲೀಕ ಗಫೂರ್ ಅವರ ಮನೆಗೆ ನೀರು ನುಗ್ಗಿ, ಹಿತ್ತಲಿನಲ್ಲಿದ್ದ ಮರಗಿಡಗಳು ಹಾಗೂ ಅನೇಕ ವಸ್ತುಗಳು ಸಂಪೂರ್ಣ…

Read More

ಮಂಜೇಶ್ವರ ಬೀಚ್‌ನಲ್ಲಿ ಕಸದ ಪರ್ವತ: ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಮೀನುಗಾರರು–ಪ್ರವಾಸಿಗರ ಆಕ್ರೋಶ

ಮಂಜೇಶ್ವರ: ಪ್ರವಾಸಿ ಆಕರ್ಷಣೆಯಾಗಿ ಹೆಸರು ಮಾಡಿರುವ ಮಂಜೇಶ್ವರ ಬೀಚ್ ಇದೀಗ ಕಸದ ಗುಡ್ಡಗಳ ಕೇಂದ್ರವಾಗುತ್ತಿದೆ. ಬೀಚ್ ಸಮೀಪದ ಎಲ್ಲ ಪ್ರದೇಶಗಳು ಈಗ ಪ್ಲಾಸ್ಟಿಕ್ ಸೇರಿದಂತೆ ವಿವಿಧ ತ್ಯಾಜ್ಯಗಳಿಂದ ತುಂಬಿ ಹರಿಯುತ್ತಿವೆ. ಪ್ರತಿದಿನ ನೂರಾರು ಜನರು ಭೇಟಿ ನೀಡುವ ಈ ಪ್ರದೇಶದಲ್ಲಿ ಮಲಿನತೆ ಹೆಚ್ಚುತ್ತಿರುವುದು ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗುತ್ತಿದೆ. ಬೀಚ್‌ಗೆ ಬರುವ ಪ್ರವಾಸಿಗರು ಮತ್ತು ಹತ್ತಿರದ ವಾಟರ್ ಥೀಮ್ ಪಾರ್ಕ್‌ಗೆ ಆಗಮಿಸುವವರು ಆಹಾರದ ಅವಶೇಷಗಳು ಹಾಗೂ ಪ್ಲಾಸ್ಟಿಕ್ ಕವರ್‌ಗಳನ್ನು ಎಸೆಯುತ್ತಿರುವುದು ಸಾಮಾನ್ಯವಾಗಿದೆ. ಕಸದ ರಾಶಿ ಹೆಚ್ಚಾಗುತ್ತಿದ್ದಂತೆ ಬೀದಿ ನಾಯಿಗಳ…

Read More

ಕುಂಬಳೆ: ವಾಹನ ಕಳ್ಳತನ ಪ್ರಕರಣ—ಆರೋಪಿ ಬಂಧನ

ಕುಂಬಳೆಯಲ್ಲಿ ಹೋಟೆಲ್ ಎದುರು ನಿಲ್ಲಿಸಿದ್ದ ಬೈಕ್ ಕಳವು ಮಾಡಿದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಬಂಬ್ರಾಣದ ನಿವಾಸಿ ರವಿ ಅಲಿಯಾಸ್ ‘ಡಬ್ಬ ರವಿ’ ಬಂಧಿತ ಆರೋಪಿ. ಘಟನೆಯ ಬಳಿಕ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಪೊಲೀಸರು ಹುಡುಕುತ್ತಿದ್ದರು. ಇದೇ ವೇಳೆ ಅಪಘಾತದಲ್ಲಿ ಗಾಯಗೊಂಡ ರವಿಯನ್ನು ಕುಂಬಳೆ ಸರಕಾರಿ ಆಸ್ಪತ್ರೆಗೆ ತರಲಾಗುತ್ತಿದೆ ಎಂಬ ಮಾಹಿತಿ ಪೊಲೀಸರಿಗೆ ದೊರಕಿತು. ತಕ್ಷಣ ಆಸ್ಪತ್ರೆಯಲ್ಲಿ ಕಾದಿದ್ದ ಪೊಲೀಸರು, ಅಲ್ಲಿಗೆ ಬಂದ ಆರೋಪಿಯನ್ನು ಬಂಧಿಸಿದರು. ನಂತರ ಆರೋಪಿಯನ್ನು ಹೆಚ್ಚಿನ ಚಿಕಿತ್ಸೆಗಾಗಿ ಕಾಸರಗೋಡು ಜನರಲ್ ಆಸ್ಪತ್ರೆಗೆ ಕರೆದೊಯ್ಯಲಾಗಿದ್ದು, ಅಲ್ಲಿನ ಪೊಲೀಸ್…

Read More

ಕಾಸರಗೋಡು: ವಸಂತ್ ಕೆರೆಮನೆ–ದಿವ್ಯಶ್ರೀ ದಂಪತಿಗೆ “ಕನ್ನಡ ಸೇವಾ ನಿರತರು” ಪ್ರಶಸ್ತಿ

ಕಾಸರಗೋಡು: ಕನ್ನಡ ಭವನ ಪ್ರದಾನ ಕಾರ್ಯದರ್ಶಿ ವಸಂತ್ ಕೆರೆಮನೆ ಹಾಗೂ ದಿವ್ಯಶ್ರೀ ದಂಪತಿಗಳಿಗೆ ಕನ್ನಡ ಭವನ ಮತ್ತು ಗ್ರಂಥಾಲಯ ಹಾಗೂ ಕನ್ನಡ ಭವನ ಪ್ರಕಾಶನ ವತಿಯಿಂದ “ಕನ್ನಡ ಸೇವಾ ನಿರತರು” ಪ್ರಶಸ್ತಿ ನೀಡಿ ಗೌರವಿಸಲಾಯಿತು. ದಂಪತಿಗಳ ವಿವಾಹ ದಶಮಾನೋತ್ಸವದ ಪ್ರಯುಕ್ತ ಕನ್ನಡ ಭವನದ ಅಭಿಮಾನಿಗಳಿಂದ ಬೇಕಲ್ ಇಂಟರ್ನ್ಯಾಷನಲ್ ಬೀಚ್‌ನಲ್ಲಿ ಸವಿ ಸಂಭ್ರಮ ಕಾರ್ಯಕ್ರಮ ಆಯೋಜಿಸಲಾಗಿತ್ತು. ಕಾರ್ಯಕ್ರಮಕ್ಕೆ ಕನ್ನಡ ಭವನದ ಗೌರವ ಅಧ್ಯಕ್ಷ ಪ್ರದೀಪ್ ಬೇಕಲ್ ಅಧ್ಯಕ್ಷತೆ ವಹಿಸಿದರು. ಕಾರ್ಯಕ್ರಮದಲ್ಲಿ ರಾಮರಾಜ ಕ್ಷತ್ರಿಯ ಕಾಸರಗೋಡು ಅಧ್ಯಕ್ಷ ಹಾಗೂ ಕನ್ನಡ…

Read More

​ಸೌಹಾರ್ದತೆಯ ಸಂಭ್ರಮ: ಉದ್ಯಾವರ ಜಮಾ ಹತ್ ಗೆ ಉದ್ಯಾವರ ಶ್ರೀ ಅರಸು ದೈವಗಳ ಭೇಟಿ; ಜಾತ್ರೆಗೆ ಮುಸ್ಲಿಂ ಬಾಂಧವರಿಗೆ ಪ್ರೀತಿಯ ಆಮಂತ್ರಣ

ಮಂಜೇಶ್ವರದಲ್ಲಿ ತುಳುನಾಡಿನ ಸಾಂಸ್ಕೃತಿಕ ಪರಂಪರೆಯ ಪ್ರತಿರೂಪವಾಗಿರುವ ಉದ್ಯಾವರ ಅರಸು ಮಂಜೀಷ್ಣಾರ್ ಕ್ಷೇತ್ರದ ವಾರ್ಷಿಕ ಜಾತ್ರೋತ್ಸವದ ಪೂರ್ವಭಾವಿ ವಿಧಿವಿಧಾನಗಳು ಭಕ್ತಿ ಹಾಗೂ ಸೌಹಾರ್ದತೆಯೊಂದಿಗೆ ನೆರವೇರಿದವು. ಹಿಂದೂ–ಮುಸ್ಲಿಂ ಭಾವೈಕ್ಯತೆಗೆ ಸಾಕ್ಷಿಯಾಗಿರುವ ಈ ಅಪೂರ್ವ ಸಂಪ್ರದಾಯವು ಮತ್ತೆ ಗಮನ ಸೆಳೆದಿದೆ. ಪ್ರಾಚೀನ ಕಾಲದಿಂದ ನಡೆದುಕೊಂಡು ಬರುತ್ತಿರುವ ಪದ್ಧತಿಯಂತೆ, ಕ್ಷೇತ್ರದ ಅರಸು ದೈವಗಳ ಪಾತ್ರಿಗಳು ಶುಕ್ರವಾರ ಮಧ್ಯಾಹ್ನ ಉದ್ಯಾವರ ಸಾವಿರ ಜಮಾತ್ ಮಸೀದಿಗೆ ಭೇಟಿ ನೀಡಿ ಮುಸ್ಲಿಂ ಬಾಂಧವರನ್ನು ಜಾತ್ರೆಗೆ ಆತ್ಮೀಯವಾಗಿ ಆಹ್ವಾನಿಸಿದರು. ಮೇಷ ಸಂಕ್ರಮಣದ ನಂತರದ ಮೊದಲ ಶುಕ್ರವಾರದಂದು ಈ ಭೇಟಿ…

Read More

ಮಂಜೇಶ್ವರಂ ಬೀಚ್‌ನಲ್ಲಿ ಭದ್ರತೆ ಹೆಚ್ಚಿಸಲು ಆಗ್ರಹ

ಮಂಜೇಶ್ವರಂ: ಶಾಲಾ ರಜೆ ಹಿನ್ನೆಲೆಯಲ್ಲಿ ದಿನವೂ ಸಾವಿರಾರು ಮಂದಿ ಪ್ರವಾಸಿಗರು ಹಾಗೂ ಕುಟುಂಬ ಸಮೇತವಾಗಿ ಮಂಜೇಶ್ವರಂ ಬೀಚ್‌ಗೆ ಭೇಟಿ ನೀಡುತ್ತಿರುವುದರಿಂದ, ಇಲ್ಲಿ ತಕ್ಷಣ ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಬೇಕೆಂಬ ಬೇಡಿಕೆ ವ್ಯಕ್ತವಾಗಿದೆ. ಇತ್ತೀಚೆಗೆ ಸಮುದ್ರ ಅಲೆಯಲ್ಲಿ ಸಿಲುಕಿ ಮೃತಪಟ್ಟ 18 ವರ್ಷದ ಯುವಕನ ಘಟನೆ ಆತಂಕವನ್ನು ಹೆಚ್ಚಿಸಿದೆ. ಬೀಚ್ ಹಾಗೂ ಸಮುದ್ರ ತೀರ ಪ್ರದೇಶಗಳಲ್ಲಿ ಸಮರ್ಪಕ ಭದ್ರತಾ ವ್ಯವಸ್ಥೆಗಳ ಕೊರತೆ ಇದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಸಮುದ್ರಕ್ಕೆ ಇಳಿಯುವವರಿಗೆ ಹಾಗೂ ಮಕ್ಕಳೊಂದಿಗೆ ಬರುವ ಕುಟುಂಬಗಳಿಗೆ ಸುರಕ್ಷತೆ ಒದಗಿಸಲು ಲೈಫ್‌ಗಾರ್ಡ್‌ಗಳು,…

Read More

ಕಾಸರಗೋಡು: ಅಡ್ಕ ಬಂದ್ಯೋಡು ವೀರನಗರದಲ್ಲಿ ಏ.25ರಂದು ಶ್ರೀ ಸಾನಿಧ್ಯದ ವಾರ್ಷಿಕೋತ್ಸವ ಹಾಗೂ ಕೋಲೋತ್ಸವ

ಕಾಸರಗೋಡು : ಅಡ್ಕ ಬಂದ್ಯೋಡು ವೀರನಗರದಲ್ಲಿರುವ ಶ್ರೀ ನಾಗರಾಜ, ನಾಗಕನ್ನಿಕೆ, ರಕ್ತೇಶ್ವರಿ ಹಾಗೂ ಗುಳಿಗಜ್ಜ ಮತ್ತು ಕೊರಗಜ್ಜ ದೈವಗಳ ಸಾನಿಧ್ಯದಲ್ಲಿ ಏಪ್ರಿಲ್ 25ರಂದು ವಾರ್ಷಿಕ ದಿನಾಚರಣೆ ಹಾಗೂ ಕೋಲೋತ್ಸವ ಭಕ್ತಿಶ್ರದ್ದೆಯಿಂದ ನಡೆಯಲಿದೆ.ಪರಮ ಪೂಜ್ಯ ಶ್ರೀ ಶ್ರೀ ಯೋಗಾನಂದ ಸರಸ್ವತೀ ಸ್ವಾಮೀಜಿ (ಕೊಂಡೆವೂರು) ಅವರ ಮಾರ್ಗದರ್ಶನದಲ್ಲಿ ಹಾಗೂ ಶ್ರೀ ಸಾನಿಧ್ಯದ ತಂತ್ರಿವರ್ಯರಾದ ಬ್ರಹ್ಮಶ್ರೀ ಶಂಕರನಾರಾಯಣ ಕಡಮಣ್ಣಾಯ (ಕರ್ಕುಳಮನೆ ಬಂಬ್ರಾಣ) ಅವರ ನೇತೃತ್ವದಲ್ಲಿ ಕಾರ್ಯಕ್ರಮ ಜರುಗಲಿದೆ. ಈ ಸಂದರ್ಭದಲ್ಲಿ ಶ್ರೀ ಸಾನಿಧ್ಯದ ವಾರ್ಷಿಕೋತ್ಸವದ ಜೊತೆಗೆ ಗುಳಿಗಜ್ಜ ಮತ್ತು ಕೊರಗಜ್ಜ ದೈವಗಳ…

Read More

ಬೇಕಲ್: ವಸಂತ್ ಕೆರೆಮನೆಗೆ ‘ಹತ್ತನೇ ಸವಿ ಸಂಭ್ರಮ’ದಲ್ಲಿ ಗೌರವಾರ್ಪಣೆ

ಕನ್ನಡ ಭವನ ಕೇಂದ್ರ ಸಮಿತಿಯ ಪ್ರಧಾನ ಕಾರ್ಯದರ್ಶಿಯಾಗಿ ಹಾಗೂ ವಿವಿಧ ಸಂಘಟನೆಗಳಲ್ಲಿ ಸಕ್ರಿಯವಾಗಿ ಸೇವೆ ಸಲ್ಲಿಸುತ್ತಿರುವ ವಸಂತ್ ಕೆರೆಮನೆ ಅವರಿಗೆ ವಿಶೇಷ ಗೌರವ ಸಲ್ಲಿಸುವ “ಹತ್ತನೇ ಸವಿ ಸಂಭ್ರಮ” ಕಾರ್ಯಕ್ರಮ ಇಂದು ಸಂಜೆ ಬೇಕಲ್ ಬೀಚ್‌ನಲ್ಲಿ ನಡೆಯಲಿದೆ. ವಸಂತ್ ಕೆರೆಮನೆ ಅವರು ಆಲ್ ಕೇರಳ ಫೋಟೋಗ್ರಾಫರ್ಸ್ ಅಸೋಸಿಯೇಷನ್ ಕಾಸರಗೋಡು ವೆಸ್ಟ್ ಯೂನಿಟ್ ಅಧ್ಯಕ್ಷರಾಗಿ, ಕೇರಳ–ಕರ್ನಾಟಕ ಕನ್ನಡ ಚುಟುಕು ಸಾಹಿತ್ಯ ಪರಿಷತ್ ಕೇಂದ್ರ ಸಮಿತಿ ಕಾರ್ಯದರ್ಶಿಯಾಗಿ ಹಾಗೂ ಹಲವು ಧಾರ್ಮಿಕ ಕೇಂದ್ರಗಳಲ್ಲಿ ಪದಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಜೊತೆಗೆ ಉತ್ತಮ ಸೇವಾ…

Read More

​ಮಂಜೇಶ್ವರ: ಸಮುದ್ರ ಪಾಲಾಗಿದ್ದ ಯುವಕನ ಮೃತದೇಹ ಪತ್ತೆ – ಕುಂಡುಕೊಳಕೆ ಬೀಚ್‌ನಲ್ಲಿ ಸೂತಕದ ಛಾಯೆ

​ಮಂಜೇಶ್ವರ: ಇಲ್ಲಿನ ಕುಂಡುಕೊಳಕೆ ಸಮುದ್ರ ಕಿನಾರೆಯಲ್ಲಿ ಬುಧವಾರ ಸಂಜೆ ಅಲೆಗಳ ಅಬ್ಬರಕ್ಕೆ ಸಿಲುಕಿ ನಾಪತ್ತೆಯಾಗಿದ್ದ ಯುವಕನ ಮೃತದೇಹ ಇಂದು (ಗುರುವಾರ) ಸಂಜೆ ಹೊಸಬೆಟ್ಟು ಕಡಪ್ಪುರದಲ್ಲಿ ಪತ್ತೆಯಾಗಿದೆ. ಮಂಜೇಶ್ವರ ಚೌಕಿ ನಿವಾಸಿಗಳಾದ ಉಮರುಲ್ ಫಾರೂಕ್ ಮತ್ತು ರಝೀನಾ ದಂಪತಿಗಳ ಪುತ್ರ ಮೊಹಮ್ಮದ್ ಝೈನುಲ್ ಹಾಬಿದ್ (18) ಬುಧವಾರ ಸಂಜೆ ತನ್ನ ಸ್ನೇಹಿತರೊಂದಿಗೆ ಕುಂಡುಕೊಳಕೆ ಬೀಚ್‌ಗೆ ವಿಹಾರಕ್ಕೆ ಬಂದಿದ್ದನು. ಈ ಸಂದರ್ಭದಲ್ಲಿ ಅಲೆಗಳ ಅಬ್ಬರಕ್ಕೆ ಸಿಲುಕಿ ಆತ ಸಮುದ್ರದಲ್ಲಿ ಕೊಚ್ಚಿ ಹೋಗಿದ್ದನು. ತಕ್ಷಣವೇ ಸ್ಥಳೀಯರು ಮತ್ತು ರಕ್ಷಣಾ ತಂಡಗಳು ಹುಡುಕಾಟ…

Read More
error: Content is protected !!