​ಮಂಜೇಶ್ವರ ಕುಂಡುಕೊಳಕೆ ಬೀಚ್: ಪ್ರವಾಸಿಗರ ಪಾಲಿಗೆ ಮೃತ್ಯುಕೂಪವಾಗುತ್ತಿದೆಯೇ ಈ ಕಿನಾರೆ?

​ಮಂಜೇಶ್ವರ: ಶಾಲಾ ರಜೆ ಅವಧಿಯಾದ್ದರಿಂದ ಮಂಜೇಶ್ವರದ ಪ್ರಸಿದ್ಧ ಕುಂಡುಕೊಳಕೆ ಬೀಚ್‌ಗೆ ಪ್ರತಿದಿನ ಸಾವಿರಾರು ಪ್ರವಾಸಿಗರು ಮತ್ತು ಕುಟುಂಬಗಳು ಆಗಮಿಸುತ್ತಿದ್ದಾರೆ. ಆದರೆ, ಕನಿಷ್ಠ ಭದ್ರತಾ ವ್ಯವಸ್ಥೆಯೂ ಇಲ್ಲದ ಕಾರಣ ಈ ಸುಂದರ ಕಿನಾರೆ ಇದೀಗ ಪ್ರಾಣಭಯ ಹುಟ್ಟಿಸುವ ತಾಣವಾಗಿ ಮಾರ್ಪಟ್ಟಿದೆ. ಬುಧವಾರ ಸಂಜೆ ಸಂಭವಿಸಿದ ದುರಂತದಲ್ಲಿ 18 ವರ್ಷದ ಝೈನುಲ್ ಹಾಬಿದ್ ಸಮುದ್ರ ಪಾಲಾಗಿದ್ದು, ಈತನ ಪತ್ತೆಗಾಗಿ ಶೋಧ ಕಾರ್ಯ ತೀವ್ರಗೊಂಡಿದ್ದರೂ ಇನ್ನು ಸುಳಿವು ಲಭ್ಯವಾಗಿಲ್ಲ. ಇದು ಕೇವಲ ಒಂದು ಆಕಸ್ಮಿಕವಲ್ಲ, ಇಲ್ಲಿನ ಭದ್ರತಾ ವೈಫಲ್ಯಕ್ಕೆ ಬಲಿಯಾದ ಮತ್ತೊಂದು…

Read More

ಪದ್ಮಶ್ರೀ ಸತ್ಯನಾರಾಯಣ ಬೇಳೇರಿ ಅತಿಕಾರ ಟ್ರಸ್ಟ್: ಬೆಳ್ಳೂರಿನಲ್ಲಿ ಹೊಸ ಸೇವಾಯಾನಕ್ಕೆ ಮುನ್ನುಡಿ

​ಬೆಳ್ಳೂರಿನ ಮಣ್ಣಿನ ಸತ್ವ ಮತ್ತು ಇಲ್ಲಿನ ಜನರ ಸೇವಾ ಮನೋಭಾವಕ್ಕೆ ಸಾಕ್ಷಿಯಾಗಿ ಹೊಸದೊಂದು ಇತಿಹಾಸ ನಿರ್ಮಾಣವಾಗಿದೆ. ಈ ಮಹತ್ತರ ಯೋಜನೆಗೆ ಉದ್ಯಮಿ ಶ್ರೀ ಮಧುಸೂಧನ ಅಯರ್ ಅವರು ೪ ಲಕ್ಷ ರೂಪಾಯಿಗಳ ಪ್ರಥಮ ದೇಣಿಗೆಯನ್ನು ನೀಡುವ ಮೂಲಕ ಚಾಲನೆ ನೀಡಿದ್ದಾರೆ. ಈ ಉದಾರ ಧನಸಹಾಯವು ಸೇವಾ ಚಟುವಟಿಕೆಗಳ ವಿಸ್ತರಣೆಗಾಗಿ ಭದ್ರವಾದ ಬುನಾದಿಯನ್ನು ಹಾಕಿದೆ. ಸಮಾಲೋಚನೆ ಮತ್ತು ಮಾರ್ಗದರ್ಶನ ​ಬೆಳ್ಳೂರಿನ ಪವಿತ್ರ ಶ್ರೀ ಮಹಾವಿಷ್ಣು ದೇವಾಲಯದ ಸಭಾಂಗಣದಲ್ಲಿ ನಿನ್ನೆ ಸಂಜೆ ಹಮ್ಮಿಕೊಳ್ಳಲಾಗಿದ್ದ ಸಮಾಲೋಚನಾ ಸಭೆಯು ಭವಿಷ್ಯದ ಆಶೋತ್ತರಗಳಿಗೆ ದಿಕ್ಸೂಚಿಯಾಗಿತ್ತು….

Read More

ಮುಗುಳಿಗುಡ್ಡೆ ಕ್ಷೇತ್ರದಲ್ಲಿ ಅಷ್ಟಮಂಗಲ ಪ್ರಶ್ನೆ: ಮೇ 21ರಿಂದ ಮಹತ್ವದ ಧಾರ್ಮಿಕ ಕಾರ್ಯಕ್ರಮ

ಕನ್ಯಾನ ಗ್ರಾಮದ ಶ್ರೀ ಕ್ಷೇತ್ರ ಮುಗುಳಿಗುಡ್ಡೆಯ ದಿವ್ಯ ಸಾನಿಧ್ಯದಲ್ಲಿ ಅಷ್ಟಮಂಗಲ ಪ್ರಶ್ನೆ ನಡೆಸುವ ಬಗ್ಗೆ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ. ವಿಟ್ಲ ಅರಮನೆಯ ಶ್ರೀ ಬಂಗಾರು ಅರಸರ ನೇತೃತ್ವದ ಪ್ರಶ್ನಾ ಚಿಂತನಾ ಸಮಿತಿಯ ವತಿಯಿಂದ ಮೇ 21.05.2026 ಗುರುವಾರದಿಂದ ಮೂರರಿಂದ ಐದು ದಿನಗಳ ಕಾಲ ಈ ಧಾರ್ಮಿಕ ಕಾರ್ಯಕ್ರಮ ನಡೆಯಲಿದೆ ಎಂದು ಇತ್ತೀಚೆಗೆ ನಡೆದ ಸಾರ್ವಜನಿಕ ಸಮಾಲೋಚನಾ ಸಭೆಯಲ್ಲಿ ತೀರ್ಮಾನಿಸಲಾಗಿದೆ. ಕಳೆದ ಮಹಾಶಿವರಾತ್ರಿಯಂದು ಮಹಾ ಸನ್ನಿಧಿಯಲ್ಲಿ ಕೈಗೊಂಡ ನಿರ್ಣಯದಂತೆ, ಈ ಅಷ್ಟಮಂಗಲ ಪ್ರಶ್ನೆ ಕಾರ್ಯವು ಕಾರಿಂಜದ ಶ್ರೀ ರಾಘವೇಂದ್ರ…

Read More

ಕನ್ನಡ ಭವನ ರೂವಾರಿಗಳಾದ ಡಾ. ವಾಮನ್ ರಾವ್ ಬೇಕಲ್ -ಸಂಧ್ಯಾರಾಣಿ ದಂಪತಿಗಳಿಗೆ “ಗಡಿನಾಡು ಕನ್ನಡ ಪೋಷಕ “ಪ್ರಶಸ್ತಿ

ಕಾಸರಗೋಡು : ಮಂಗಳೂರಿನ ಖ್ಯಾತ ಕನ್ನಡ ಸಂಘಟಕಿಯಾದ ರಾಣಿ ಪುಷ್ಪಲತಾ ದೇವಿ ಅಧ್ಯಕ್ಷೆಯಾದ, ಕರ್ನಾಟಕ ಸಾಮಾಜಿಕ ಸಾಂಸ್ಕೃತಿಕ ಅಭಿವೃದ್ಧಿ ಪ್ರತಿಷ್ಠಾನ (ರಿ.)25.4.2026.ಶನಿವಾರ ಸಂಜೆ ಗಂಟೆ 5.30 ರಿಂದ ಮಂಗಳೂರಿನ ಪುರಭವನದ ಎದುರಿನ ರಾಜಾಜಿ ಪಾರ್ಕ್ ನಲ್ಲಿ ನಡೆಯುವ “ಕನ್ನಡ ಜೇಂಕಾರ “ಕಾರ್ಯಕ್ರಮ ನಡೆಯಲಿದೆ. ಈ ಕಾರ್ಯಕ್ರಮದಲ್ಲಿ ಕಾಸರಗೋಡು ನುಳ್ಳಿಪ್ಪಾಡಿಯ ಕನ್ನಡ ಭವನ ಮತ್ತು ಗ್ರಂಥಾಲಯ (ರಿ.)ಕನ್ನಡ ಭವನ ಪ್ರಕಾಶನ, ಕನ್ನಡ ಭವನ ಉಚಿತ ಸಾರ್ವಜನಿಕ ವಾಚನಾಲಯ, ಕನ್ನಡ ಭವನ “ಉಚಿತ ವಸತಿ ಸೌಕರ್ಯ “, ಕನ್ನಡ ಭವನ…

Read More

ಮಂಜೇಶ್ವರ : ಕುಂಡು ಕೊಳಕೆ ಸಮುದ್ರ ಕಿನಾರೆಯಲ್ಲಿ ಕೊಚ್ಚಿ ಹೋದ ಯುವಕ : ಮುಂದುವರಿದ ತೀವ್ರ ಶೋಧ

ಮಂಜೇಶ್ವರ: ಇಲ್ಲಿನ ಕುಂಡುಕೊಳಕೆ ಸಮುದ್ರ ಕಿನಾರೆಯಲ್ಲಿ ಬುಧವಾರ ಸಂಜೆ ಭೀಕರ ದುರಂತವೊಂದು ಸಂಭವಿಸಿದ್ದು, 18 ವರ್ಷದ ಯುವಕನೊಬ್ಬ ಅಲೆಗಳ ಅಬ್ಬರಕ್ಕೆ ಸಿಲುಕಿ ಸಮುದ್ರ ಪಾಲಾಗಿದ್ದಾನೆ. ​ಮಂಜೇಶ್ವರ ಚೌಕಿ ನಿವಾಸಿಗಳಾದ ಉಮರುಲ್ ಫಾರೂಕ್ ಮತ್ತು ರಝೀನಾ ದಂಪತಿಗಳ ಪುತ್ರ ಮೊಹಮ್ಮದ್ ಝೈನುಲ್ ಹಾಬಿದ್ ಸಮುದ್ರದಲ್ಲಿ ನಾಪತ್ತೆಯಾದ ದುರ್ದೈವಿ. ಸ್ವಲ್ಪ ಅನಾರೋಗ್ಯದಿಂದ ಬಳಲುತ್ತಿದ್ದ ಝೈನುಲ್ ಹಾಬಿದ್, ಬುಧವಾರ ಸಂಜೆ ತನ್ನ ಕುಟುಂಬದವರೊಂದಿಗೆ ಮನಃಶಾಂತಿಗಾಗಿ ಮತ್ತು ವಿಹಾರಕ್ಕಾಗಿ ಸಮುದ್ರ ಕಿನಾರೆಗೆ ಆಗಮಿಸಿದ್ದರು. ಈ ಸಂದರ್ಭದಲ್ಲಿ ಆಕಸ್ಮಿಕವಾಗಿ ಅಲೆಗಳ ಸುಳಿಗೆ ಸಿಲುಕಿದ ಯುವಕ…

Read More

ಪೀಸ್ ಕ್ರಿಯೇಟಿವ್ ಶಾಲೆಯಲ್ಲಿ ಶೈಕ್ಷಣಿಕ ಕ್ರಾಂತಿ: ಹೊಸ ಸೌಲಭ್ಯಗಳಿಗೆ ಚಾಲನೆ

ಮಂಜೇಶ್ವರ : ಗಡಿನಾಡಿನ ಶಿಕ್ಷಣ ಕ್ಷೇತ್ರದಲ್ಲಿ ತನ್ನದೇ ಆದ ವಿಶಿಷ್ಟ ಛಾಪನ್ನು ಮೂಡಿಸಿರುವ ಪೀಸ್ ಕ್ರಿಯೇಟಿವ್ ಶಾಲೆ, 2026-27ನೇ ಶೈಕ್ಷಣಿಕ ಸಾಲಿನಲ್ಲಿ ಅಭೂತಪೂರ್ವ ಬದಲಾವಣೆಗೆ ಸಾಕ್ಷಿಯಾಗುತ್ತಿದೆ. ವಿದ್ಯಾರ್ಥಿಗಳ ಸರ್ವತೋಮುಖ ಅಭಿವೃದ್ಧಿಯನ್ನು ಗುರಿಯಾಗಿರಿಸಿಕೊಂಡಿರುವ ಶಾಲಾ ಆಡಳಿತ ಮಂಡಳಿಯು, ಲೌಕಿಕ ಶಿಕ್ಷಣದ ಜೊತೆಗೆ ಕ್ರೀಡೆ ಮತ್ತು ಸಂಸ್ಕಾರಯುತ ಶಿಕ್ಷಣಕ್ಕೆ ಭರ್ಜರಿ ತಯಾರಿಗೆ ಚಾಲನೆ ನೀಡಿದೆ. ಮಕ್ಕಳ ದೈಹಿಕ ಬೆಳವಣಿಗೆ ಮತ್ತು ಕ್ರೀಡಾಸಕ್ತಿಗೆ ರೆಕ್ಕೆ ನೀಡುವ ಉದ್ದೇಶದಿಂದ ಶಾಲಾ ಆವರಣದಲ್ಲಿ ಅತ್ಯುತ್ತಮ ಮಟ್ಟದ ಫುಟ್ಬಾಲ್ ಟರ್ಫ್, ಬಾಸ್ಕೆಟ್ ಬಾಲ್, ವಾಲಿಬಾಲ್ ಸೇರಿದಂತೆ…

Read More

ಹೊಸಂಗಡಿ ಬಸ್ ನಿಲ್ದಾಣ ನಿರ್ಲಕ್ಷ್ಯ: ಹೆದ್ದಾರಿಯಲ್ಲೇ ಬಸ್ ನಿಲುಗಡೆ, ಅಪಘಾತ ಭೀತಿ ಹೆಚ್ಚಳ

​ಮಂಜೇಶ್ವರ: ಮಂಜೇಶ್ವರ ತಾಲೂಕಿನ ಪ್ರಮುಖ ವ್ಯಾಪಾರ ಕೇಂದ್ರ ಹಾಗೂ ಹೃದಯಭಾಗವಾದ ಹೊಸಂಗಡಿಯಲ್ಲಿ ಸುಸಜ್ಜಿತ ಬಸ್ ನಿಲ್ದಾಣವಿದ್ದರೂ, ಅದರ ಸರಿಯಾದ ಬಳಕೆ ಆಗದಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡೇ ನಿಲ್ದಾಣವಿದ್ದರೂ, ಬಸ್ಸುಗಳು ನಿಲ್ದಾಣದಲ್ಲಿ ನಿಲ್ಲಿಸದೆ ರಸ್ತೆಯಲ್ಲೇ ಪ್ರಯಾಣಿಕರನ್ನು ಹತ್ತಿಸಿ-ಇಳಿಸುತ್ತಿರುವುದು ಸಂಚಾರ ದಟ್ಟಣೆ ಮತ್ತು ಅಪಘಾತಗಳಿಗೆ ಆಹ್ವಾನ ನೀಡುತ್ತಿದೆ. ​​ ಕಾಸರಗೋಡು ಮತ್ತು ಮಂಗಳೂರು ನಡುವೆ ಸಂಚರಿಸುವ ಕೆ.ಎಸ್.ಆರ್.ಟಿ.ಸಿ (ಕರ್ನಾಟಕ ಮತ್ತು ಕೇರಳ) ಹಾಗೂ ಖಾಸಗಿ ಬಸ್ಸುಗಳು ನಿಗದಿತ ಬಸ್ ನಿಲ್ದಾಣದಲ್ಲಿ ನಿಲುಗಡೆಗೊಳಿಸುವ ಬದಲು, ಹೆದ್ದಾರಿಯ ತಿರುವುಗಳಲ್ಲೇ…

Read More

ಪಜಿಂಗಾರ್ ಸಾಲಿಯಾನ್ ಕುಟುಂಬದಲ್ಲಿ ಧಾರ್ಮಿಕ ವೈಭವ: ಗ್ರಹಪ್ರವೇಶ, ಕೋಲ ಸೇವೆ ಸಂಪನ್ನ

ಮೂಡಂಬೈಲ್ ಪಜಿಂಗಾರ್ ಸಾಲಿಯಾನ್ ಕುಟುಂಬದ ನೂತನ ತರವಾಡಿನ ಗ್ರಹಪ್ರವೇಶ, ಬ್ರಹ್ಮಕಲಶ ಪ್ರತಿಷ್ಠೆ ಹಾಗೂ ನೇಮೋತ್ಸವ ಕಾರ್ಯಕ್ರಮಗಳು ಏಪ್ರಿಲ್ 12ರಂದು ಭಕ್ತಿಶ್ರದ್ದೆಯಿಂದ ನೆರವೇರಿದವು. ಕಾರ್ಯಕ್ರಮದ ಪೂರ್ವಭಾವಿಯಾಗಿ ಏಪ್ರಿಲ್ 11ರಂದು ತಂತ್ರಿಗಳ ಉಪಸ್ಥಿತಿಯಲ್ಲಿ ಸ್ಥಳ ಶುದ್ಧಿ, ಪುಣ್ಯಹ ವಚನ, ಕಲಶ ಶುದ್ಧಿ, ವಾಸ್ತು ಹೋಮ ಹಾಗೂ ವಾಸ್ತು ಬಲಿ ವಿಧಿವಿಧಾನಗಳು ವಿಜೃಂಭಣೆಯಿಂದ ನಡೆಯಿತು. ಏಪ್ರಿಲ್ 12ರಂದು ಬ್ರಹ್ಮಶ್ರೀ ಬಡಾಜೆಬೀಡು ಗೋಪಾಲ ಕೃಷ್ಣ ತಂತ್ರಿಯವರ ಸಾನ್ನಿಧ್ಯದಲ್ಲಿ ಬೆಳಗ್ಗೆ 8:45ಕ್ಕೆ ಗ್ರಹಪ್ರವೇಶ ಮತ್ತು ಮಹಾ ಪೂಜೆ ನೆರವೇರಿತು. ಮಧ್ಯಾಹ್ನ ಮಲರಾಯ ದೈವದ ನೇಮ,…

Read More

ಮಕ್ಕಳಿಗೆ ರಾಜ್ಯ ಮಟ್ಟದ ಬೇಸಿಗೆ ಸಾಹಿತ್ಯ ಶಿಬಿರ: ಏಪ್ರಿಲ್ 29ರಿಂದ ತುಮಕೂರಿನಲ್ಲಿ: ದಿನಾಂಕ 20-4-2026 ಪ್ರತಿನಿಧಿಗಳ ಹೆಸರು ನೋಂದಣಿಗೆ ಕೊನೆಯ ದಿನ

ಕಾಸರಗೋಡು: ಮಕ್ಕಳಲ್ಲಿ ಸಾಹಿತ್ಯ, ಸಂಸ್ಕೃತಿ ಮತ್ತು ಸೃಜನಾತ್ಮಕ ಚಿಂತನೆ ಬೆಳೆಸುವ ಉದ್ದೇಶದಿಂದ ಕರ್ನಾಟಕ ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್ತು ರಾಜ್ಯ ಮಟ್ಟದ ಬೇಸಿಗೆ ಸಾಹಿತ್ಯ ಶಿಬಿರವನ್ನು ಆಯೋಜಿಸಿದೆ. ಚನ್ನರಾಯಪಟ್ಟಣದ ಪರಿಸರ ತಜ್ಞ ಸಿ.ಎನ್. ಅಶೋಕ ಅವರ ನೇತೃತ್ವದಲ್ಲಿ ಕಳೆದ 15 ವರ್ಷಗಳಿಂದ ಮಕ್ಕಳಿಗಾಗಿ ರಾಷ್ಟ್ರ ಹಾಗೂ ರಾಜ್ಯ ಮಟ್ಟದಲ್ಲಿ ಸಾಹಿತ್ಯ ಸಮ್ಮೇಳನಗಳನ್ನು ಆಯೋಜಿಸುತ್ತಿರುವ ಪರಿಷತ್ತು, ಈ ಬಾರಿ ತುಮಕೂರು ಜಿಲ್ಲೆಯ ಕೊರಟಗೆರೆ ಸಮೀಪದ ಸಿದ್ದರಬೆಟ್ಟದಲ್ಲಿ ಏಪ್ರಿಲ್ 29ರಿಂದ ಮೇ 2ರವರೆಗೆ ನಾಲ್ಕು ದಿನಗಳ ಶಿಬಿರವನ್ನು ನಡೆಸಲಿದೆ. ಶಿಬಿರದಲ್ಲಿ…

Read More

ಪಾವೂರು ಪೊಯ್ಯೇ ಶ್ರೀ ಚಾಮುಂಡೇಶ್ವರಿ ದೈವಸ್ಥಾನದಲ್ಲಿ 57ನೇ ಏಕಹಾ ಭಜನೆ

ಪಾವೂರು ಪೊಯ್ಯೇ ಶ್ರೀ ಚಾಮುಂಡೇಶ್ವರಿ ದೈವಸ್ಥಾನದಲ್ಲಿ ವಾರ್ಷಿಕೋತ್ಸವದ ಅಂಗವಾಗಿ ಶ್ರೀ ಚಾಮುಂಡೇಶ್ವರಿ ಭಜನಾ ಮಂಡಳಿ ವತಿಯಿಂದ 57ನೇ ಏಕಹಾ ಭಜನೆ ಕಾರ್ಯಕ್ರಮ ಭಕ್ತಿಭಾವದೊಂದಿಗೆ ನಡೆಯಿತು. ಕಾರ್ಯಕ್ರಮವನ್ನು ಕ್ಷೇತ್ರದ ಅಧ್ಯಕ್ಷರಾದ ಮನೋಹರ ಶೆಟ್ಟಿ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ತ್ಯಾಪಣ್ಣ ಶೆಟ್ಟಿ, ರವಿ ಮುಡಿಮಾರ್, ನಾಗೇಶ್ ಬಲ್ಲೂರ್, ವಿನೋದ್ ಪಾವೂರು, ಶಿವಕುಮಾರ್ ಬಳ್ಳೂರ್, ಶಿವ ಕೊಪ್ಪಳ, ಗಣೇಶ್ ಪಾವೂರು, ಮೋನಪ್ಪ ಶೆಟ್ಟಿ ಮುಟ್ಲ ಸೇರಿದಂತೆ ಸಮಿತಿ ಸದಸ್ಯರು ಹಾಗೂ ಹಲವಾರು ಭಕ್ತರು ಭಾಗವಹಿಸಿದರು. ಇದೇ ವೇಳೆ ಚಾಮುಂಡೇಶ್ವರಿ ಕ್ಷೇತ್ರದ ಬಾಲಗೋಕುಲ…

Read More
error: Content is protected !!