28 ವರ್ಷದ ಕೃಷಿ ಸಾಧನೆ — ಪೆರ್ಮುದೆಯ ಸುಬ್ಬಣ್ಣ ನಾಯ್ಕ ಮಾದರಿ ರೈತ
ಉಪ್ಪಳ, ಏಪ್ರಿಲ್:ಮಣ್ಣಿನೊಂದಿಗೆ ಮನಸ್ಸು ಸೇರಿಸಿದರೆ ಯಶಸ್ಸು ಖಚಿತ ಎಂಬುದನ್ನು ಪೆರ್ಮುದದ ರೈತ ಸುಬ್ಬಣ್ಣ ನಾಯ್ಕ ಅವರು ತಮ್ಮ 28 ವರ್ಷದ ಕೃಷಿ ಜೀವನದ ಮೂಲಕ ಸಾಬೀತುಪಡಿಸಿದ್ದಾರೆ. ಕಳೆದ ಹಲವು ವರ್ಷಗಳಿಂದ ಕೃಷಿಯನ್ನು ಜೀವನದ ಭಾಗವನ್ನಾಗಿಸಿಕೊಂಡಿರುವ ಅವರು, ವೈವಿಧ್ಯಮಯ ಬೆಳೆಗಳ ಮೂಲಕ ಸ್ಥಳೀಯ ರೈತರಿಗೆ ಮಾದರಿಯಾಗಿದ್ದಾರೆ. ಒಂದು ಬೆಳೆಗೇ ಸೀಮಿತವಾಗದೆ, ಪೇರಲೆ, ಪಪ್ಪಾಯಿ, ದಾಳಿಂಬೆ ಸೇರಿದಂತೆ ವಿವಿಧ ಹಣ್ಣುಗಳು, ಹರಿವೆ ಸೊಪ್ಪು (ಚೀರ), ಬೆಂಡೆಕಾಯಿ , ಮಲ್ಲಿಗೆ ಸೇರಿದಂತೆ ತರಕಾರಿ ಹಾಗೂ ಸುಗಂಧ ದ್ರವ್ಯಗಳನ್ನು ಬೆಳೆಸುತ್ತಿದ್ದಾರೆ. ಇದರ ಜೊತೆಗೆ…
