ಎಸ್‌ಡಿಎಂ ಕಾನೂನು ಕಾಲೇಜಿನಲ್ಲಿ ರಾಷ್ಟ್ರೀಯ ಕಾನೂನು ಹಬ್ಬ ಏಪ್ರಿಲ್ 24ರಿಂದ ಆರಂಭ

ಮಂಗಳೂರಿನ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾನೂನು ಕಾಲೇಜಿನ 28ನೇ ವರ್ಷದ ರಾಷ್ಟ್ರೀಯ ಕಾನೂನು ಹಬ್ಬವು ಏಪ್ರಿಲ್ 24, 25 ಮತ್ತು 26ರಂದು ಕಾಲೇಜು ಆವರಣದಲ್ಲಿ ನಡೆಯಲಿದೆ ಎಂದು ಕಾಲೇಜಿನ ಪ್ರಾಂಶುಪಾಲ ಡಾ. ತಾರಾನಾಥ ತಿಳಿಸಿದ್ದಾರೆ. ನಗರದ ಪತ್ರಿಕಾ ಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಏಪ್ರಿಲ್ 24ರಂದು ಪೂರ್ವಾಹ್ನ 9.30ಕ್ಕೆ ಕಾರ್ಯಕ್ರಮ ಉದ್ಘಾಟನೆಯಾಗಲಿದೆ. ಕೇರಳದ ಕೊಚ್ಚಿಯ ನ್ಯಾಶನಲ್ ಯುನಿವರ್ಸಿಟಿ ಆಫ್ ಅಡ್ವಾನ್ಸ್‌ಡ್ ಲೀಗಲ್ ಸ್ಟಡೀಸ್‌ನ ಕುಲಪತಿ ಪ್ರೊ. ಡಾ. ಜಿ.ಬಿ. ರೆಡ್ಡಿ ದೀಪ ಪ್ರಜ್ವಲನೆ ಮಾಡುವರು. ಎಸ್‌ಡಿಎಮ್…

Read More

ತಣ್ಣೀರುಬಾವಿ ಬಳಿ ದರೋಡೆ ಪ್ರಕರಣ: ರೌಡಿಶೀಟರ್ ಚಂದು ಹಾರೀಸ್ ಬಂಧನ – ವಸ್ತುಗಳ ವಶಪಡಿಕೆ

ಮಂಗಳೂರು: ತಣ್ಣೀರುಬಾವಿ ಬೀಚ್ ಬಳಿ ನಡೆದಿದ್ದ ದರೋಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ತಲೆಮರೆಸಿಕೊಂಡಿದ್ದ ರೌಡಿಶೀಟರ್‌ನನ್ನು ಪಣಂಬೂರು ಪೊಲೀಸರು ಬುಧವಾರ ಬಂಧಿಸಿದ್ದಾರೆ. ಕಸಬಾ ಬೆಂಗ್ರೆ ನಿವಾಸಿ ಚಂದು ಹಾರೀಸ್(33) ಬಂಧಿತ ಆರೋಪಿ. ಆರೋಪಿಯಿಂದ ಸುಲಿಗೆ ಮಾಡಿದ ವಸ್ತುಗಳಾದ ಸ್ಮಾರ್ಟ್ ವಾಚ್, ಪವರ್ ಬ್ಯಾಂಕ್ ಮತ್ತು ಕೃತ್ಯಕ್ಕೆ ಬಳಸಿದ ಬೈಕ್ ವಶಕ್ಕೆ ಪಡೆಯಲಾಗಿದೆ. ಆರೋಪಿಯ ವಿರುದ್ಧ 30ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿದ್ದು, ಈತನ ವಿರುದ್ಧ ಪಣಂಬೂರು ಠಾಣೆಯಲ್ಲಿ ಈಗಾಗಲೇ ರೌಡಿ ಶೀಟ್ ತೆರೆಯಲಾಗಿದೆ. ಈತನ ವಿರುದ್ಧ ನ್ಯಾಯಾಲಯದಲ್ಲಿ ಹಳೆಯ ಪ್ರಕರಣಗಳಲ್ಲಿ ಮೂರು…

Read More

ಕನ್ನಡ ಭವನ ಪ್ರಕಾಶನ ವಾರ್ಷಿಕೋತ್ಸವದಲ್ಲಿ ಕೃತಿ ಬಿಡುಗಡೆ – ‘ಭರವಸೆಯ ಭಾರತ ರತ್ನ’ ಪ್ರಶಸ್ತಿ ಪ್ರದಾನ

Kasaragod: ಗಡಿನಾಡಿನ ಹೆಮ್ಮೆಯ ಕನ್ನಡ ಸಂಸ್ಥೆಯಾದ ಕನ್ನಡ ಭವನದ ಅಂಗ ಸಂಸ್ಥೆ ಕನ್ನಡ ಭವನ ಪ್ರಕಾಶನದ ಮೂರನೇ ವಾರ್ಷಿಕೋತ್ಸವ ಸಂಭ್ರಮವು ಏಪ್ರಿಲ್ 22ರಂದು ಕನ್ನಡ ಭವನ ಗ್ರಂಥಾಲಯ ವೇದಿಕೆಯಲ್ಲಿ ಅರ್ಥಪೂರ್ಣವಾಗಿ ಜರುಗಿತು. ಡಾ. ವಾಮನ್ ರಾವ್ ಬೇಕಲ್ ಹಾಗೂ ಸಂಧ್ಯಾ ರಾಣಿ ಟೀಚರ್ ಅವರ ಸಾರಥ್ಯದಲ್ಲಿ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮವನ್ನು ಕನ್ನಡ ಭವನ ನಿರ್ದೇಶಕರಾದ ಡಾ. ವೆಂಕಟ್ರಮಣ ಹೊಳ್ಳ ಉದ್ಘಾಟಿಸಿದರು. ಪತ್ರಕರ್ತ ಹಾಗೂ ರಾಮರಾಜ ಕ್ಷತ್ರಿಯ ಸೇವಾಸಂಘ ಜಿಲ್ಲಾಧ್ಯಕ್ಷ ಪ್ರದೀಪ್ ಬೇಕಲ್ ಅಧ್ಯಕ್ಷತೆ ವಹಿಸಿದರು. ಈ ಸಂದರ್ಭದಲ್ಲಿ…

Read More

ಕಾವೂರಿನಲ್ಲಿ ‘ರಂಗೋತ್ಸವ 2026’ ಸಮಾರೋಪ – ಭವಾನಿ ಶಿಕ್ಷಕಿಗೆ ಪ್ರಶಸ್ತಿ, ಮಕ್ಕಳಿಗೆ ಕಲಾ ಪ್ರೇರಣೆ

ಕಾವೂರು: ರಂಗ ಸ್ವರೂಪ (ರಿ.) ಕುಂಜತ್ತಬೈಲ್ ಆಯೋಜಿಸಿದ ರಂಗೋತ್ಸವ 2026′ 4ದಿನಗಳ ಕಾಲ ಮಕ್ಕಳ ಬೇಸಿಗೆ ಶಿಬಿರದ ಸಮಾರೋಪ ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭ ಮರಕಡ ಸರಕಾರಿ ಶಾಲಾ ಆವರಣದಲ್ಲಿ ನಡೆಯಿತು. ಓಷಿಯನ್ ಕನ್ಸ್ಟ್ರಕ್ಷನ್ ಪ್ರೈವೇಟ್ ಲಿಮಿಟೆಡ್‌ನ ನಿರ್ದೇಶಕ ಇನಾಯತ್ ಅಲಿ ರಂಗೋತ್ಸವ 2026′ ಬೇಸಿಗೆ ಶಿಬಿರದ ಸಮಾರೋಪ ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭಕ್ಕೆ ಚಾಲನೆ ನೀಡಿದರು‌. ಬಳಿಕ ಮಾತನಾಡಿದ ಅವರು ಇಂದಿನ ಮೊಬೈಲ್ ಯುಗದಲ್ಲಿ ಮಕ್ಕಳಿಗೆ ಇಂತಹ ರಂಗ ತರಬೇತಿ ಮತ್ತು ಕಲೆಗಳ ಮೂಲಕ ಸಂಸ್ಕಾರ…

Read More

ಕಾರ್ಕಳ : ಏ.24-25–26ರಂದು ಬೃಹತ್ ಹಲಸು ಮೇಳ : 70ಕ್ಕೂ ಹೆಚ್ಚು ಪ್ರದರ್ಶನ, ವಿವಿಧ ಸ್ಪರ್ಧೆಗಳು

ಕಾರ್ಕಳ : ಇಲ್ಲಿನ ಬಿಲ್ಲವ ಸಭಾಭವನದಲ್ಲಿ ಏಪ್ರಿಲ್ 25ರಿಂದ 26ರವರೆಗೆ ಬೃಹತ್ ಹಲಸು ಮೇಳ ಆಯೋಜಿಸಲಾಗಿದೆ ಎಂದು ವಂಶಿ ಇವೆಂಟ್ಸ್‌ನ ರಮಿತಾ ಸೂರ್ಯವಂಶಿ ತಿಳಿಸಿದರು. ಅವರು ಕಾರ್ಕಳ ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಮೇಳವು ಬೆಳಿಗ್ಗೆ 10 ಗಂಟೆಯಿಂದ ರಾತ್ರಿ 9 ಗಂಟೆಯವರೆಗೆ ನಡೆಯಲಿದ್ದು, ವಿವಿಧ ಕಾರ್ಯಕ್ರಮಗಳು ಜನರನ್ನು ಆಕರ್ಷಿಸಲಿವೆ. ರೋಟರಿ ಕ್ಲಬ್‌ನ ನವೀನ್ ಮಾತನಾಡಿ, ಹಲಸಿನ ಹಣ್ಣಿನಲ್ಲಿರುವ ಪೌಷ್ಟಿಕ ಹಾಗೂ ಔಷಧೀಯ ಗುಣಗಳ ಬಗ್ಗೆ ವಿವರಿಸಿ, ಗ್ರಾಮೀಣ ಸೊಗಡನ್ನು ಇಂದಿನ ಯುವಜನತೆಗೆ ಪರಿಚಯಿಸುವ ಉದ್ದೇಶದಿಂದ…

Read More

ಮಂಜೇಶ್ವರದಲ್ಲಿ ರಾಜಕಾಲುವೆ ಕಸದ ಗುಡ್ಡ – ಸಾಂಕ್ರಾಮಿಕ ರೋಗ ಭೀತಿ, ಸಾರ್ವಜನಿಕರ ಆಕ್ರೋಶ

ಮಂಜೇಶ್ವರ: ರಾಷ್ಟ್ರೀಯ ಹೆದ್ದಾರಿಯ ಮಳೆ ನೀರು ಸುಗಮವಾಗಿ ಹರಿದು ಹೋಗಲೆಂದು ನಿರ್ಮಿಸಲಾದ ಉದ್ಯಾವರ ಮಾಡ ಪರಿಸರದ ವಾಟರ್ ಚಾನಲ್ (ರಾಜಕಾಲುವೆ), ಇದೀಗ ಕಿಡಿಗೇಡಿಗಳ ಅಕ್ಷಮ್ಯ ವರ್ತನೆಯಿಂದಾಗಿ ‘ಸಾಂಕ್ರಾಮಿಕ ರೋಗಗಳ ತವರು’ ಆಗಿ ಮಾರ್ಪಟ್ಟಿದೆ. ಹೆದ್ದಾರಿಯಿಂದ ಹರಿದು ಬರುವ ನೀರು ಕುಂಡುಕೊಳಕೆ ಹಾಗೂ ಅಂಜರೆ ಮಾರ್ಗವಾಗಿ ಸಮುದ್ರವನ್ನು ಸೇರಬೇಕಿತ್ತು. ಆದರೆ, ಪ್ರಸ್ತುತ ಈ ಕಾಲುವೆಯು ಪ್ಲಾಸ್ಟಿಕ್ ಲೋಟ-ಚೀಲಗಳು, ಹಸಿ ಕಸ ಹಾಗೂ ಹಾದಿಹೋಕರು ಎಸೆಯುವ ಕೋಳಿ ತ್ಯಾಜ್ಯದಿಂದ ತುಂಬಿ ತುಳುಕುತ್ತಿದೆ. ಕಾಲುವೆಯಲ್ಲಿ ನೀರು ಹರಿಯುವ ಬದಲು ಕೊಳೆತ ತ್ಯಾಜ್ಯಗಳು…

Read More

ಮಹಿಳಾ ಮೀಸಲಾತಿ ಮಸೂದೆ: ರಾಜಕೀಯ ಆರೋಪ–ಪ್ರತಾರೋಪಗಳ ಮಧ್ಯೆ ಮುಂದುವರಿದ ಚರ್ಚೆ

ಈಗಾಗಲೇ ಲೋಕಸಭೆ ಮತ್ತು ವಿಧಾನಸಭೆಗಳಲ್ಲಿ ಮಹಿಳೆಯರಿಗೆ ಶೇಕಡ 33 ರಷ್ಟು ಮೀಸಲಾತಿಯ ಮಸೂದೆ ಅಂಗೀಕಾರವಾಗಿದೆ. ಲೋಕಸಭೆ ಮತ್ತು ವಿಧಾನಸಭೆಗಳಲ್ಲಿ ಮಹಿಳೆಯರಿಗೆ ಶೇಕಡ 33ರಷ್ಟು ಮೀಸಲಾತಿಯನ್ನು ನೀಡುವ ಮಸೂದೆ ಡಾಕ್ಟರ್ ಮನಮೋಹನ್ ಸಿಂಗ್ ರವರು ಪ್ರಧಾನಮಂತ್ರಿಯಾಗಿದ್ದಾಗ 2010ರಲ್ಲಿ ಮಂಡನೆಯಾಗಿತ್ತು ಆಗ ರಾಜ್ಯಸಭೆಯಲ್ಲಿ ಇದಕ್ಕೆ ಅನುಮೋದನೆ ದೊರೆಯಿತು ಲೋಕಸಭೆಯಲ್ಲಿ ಇದಕ್ಕೆ ಅನುಮೋದನೆ ದೊರೆಯಲಿಲ್ಲ. 2023ರ ಸೆಪ್ಟೆಂಬರ್ 19ರಂದು ಮತ್ತೊಮ್ಮೆ ಈ ಮಸೂದೆ ಮಂಡನೆ ಆಯಿತು ,ಅಂದು ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ಚರ್ಚೆಯಾಗಿ ಸೆಪ್ಟೆಂಬರ್ 20ರಂದು ಎಲ್ಲ ಪಕ್ಷದವರು ಸೇರಿ ಸರ್ವಾನುಮತದಿಂದ…

Read More

ಕೀಳೂರಿನಲ್ಲಿ ಗುಂಡಾಗಿರಿ: ಪ್ರವಾಸಿ ಯುವಕನಿಗೆ ಚಾಕು ಇರಿತ, ಗಂಭೀರ ಗಾಯ

ಕಾಸರಗೋಡು: ಕೀಳೂರು ಪ್ರದೇಶದಲ್ಲಿ ಗುಂಡಾಸಂಘದ ದಾಳಿ ನಡೆದಿದ್ದು, ಪ್ರವಾಸಿ ಯುವಕನಿಗೆ ಚಾಕುವಿನಿಂದ ಇರಿದು ಗಂಭೀರವಾಗಿ ಗಾಯಗೊಳಿಸಿದ ಘಟನೆ ಮಂಗಳವಾರ ರಾತ್ರಿ ನಡೆದಿದೆ. ಕೀಳೂರಿನ ಮಹಮ್ಮದ್ ಕುಂಜಿ ಅವರ ಪುತ್ರ ಹಾಗೂ ಗಲ್ಫ್ ದೇಶದಲ್ಲಿ ಉದ್ಯೋಗದಲ್ಲಿರುವ ಮಿಗ್ದಾದ್ (32) ಗಾಯಗೊಂಡ ವ್ಯಕ್ತಿ. ಅವರನ್ನು ಕಾಸರಗೋಡು ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.ಗಾಯಾಳು ಮಿಗ್ದಾದ್ ನೀಡಿದ ಮಾಹಿತಿ ಪ್ರಕಾರ,ಕಾಞ್ಞಂಗಾಡಿನಲ್ಲಿ ಆಟ ವೀಕ್ಷಿಸಿ ತಮ್ಮ ಸಹೋದರ, ಇಬ್ಬರು ಚಿಕ್ಕ ಮಕ್ಕಳು ಮತ್ತು ಸ್ನೇಹಿತರೊಂದಿಗೆ ರಾತ್ರಿ ಸುಮಾರು 11 ಗಂಟೆಗೆ ಕಾರಿನಲ್ಲಿ…

Read More

ಕುಂಬಳೆಯಲ್ಲಿ ಯುವಕನ ಹತ್ಯೆ ಯತ್ನ ಪ್ರಕರಣ: ಆರು ಮಂದಿ ಆರೋಪಿಗಳ ಬಂಧನ

ಕಾಸರಗೋಡು: ಕುಂಬಳೆಯ ಕೃಷ್ಣನಗರ ಸಮೀಪ ಯುವಕನನ್ನು ಹತ್ಯೆ ಮಾಡಲು ಯತ್ನಿಸಿದ ಪ್ರಕರಣದಲ್ಲಿ ಆರು ಮಂದಿ ಆರೋಪಿಗಳು ಪೊಲೀಸರಿಗೆ ಶರಣಾಗಿದ್ದಾರೆ. ಕುಂಬಳೆ ಕುಂಟಾಗಿರಡ್ಕ ಪ್ರದೇಶದ ಮಹಮ್ಮದ್ ಹಾಶಿಂ (ಆಶಿಂ), ಅಬು ಜಾಸಿಂ (ಜಾಸಿ), ರಮೀಸ್ ರೋಷಾಲ್ ಫಿರೋಸ್ (ರಮೀಸ್), ಮಿನ್ಹಾಜ್ ಅಬ್ದುಲ್ಲ (ಮಿನ್ಹಾಜ್), ಫಝಲ್ ರಹ್ಮಾನ್ (ಪಜಿಲು) ಮತ್ತು ಮೊಹಿಯುದ್ದೀನ್ ನಿಹಾಲ್ (ನಿಹಾಲ್) ಇವರು ಕುಂಬಳ ಪೊಲೀಸ್ ಠಾಣೆಯ ಉಪನಿರೀಕ್ಷಕ ಅನಂತಕೃಷ್ಣನ್ ಆರ್ ಮೆನನ್ ಅವರ ಮುಂದೆ ಶರಣಾಗಿದ್ದಾರೆ. ಮಾರ್ಚ್ 30ರಂದು ಮಧ್ಯರಾತ್ರಿ ಸುಮಾರು 12 ಗಂಟೆಗೆ ಕುಂಬಳೆ…

Read More

ಚೆರ್ಕಳದಲ್ಲಿ ಅಗ್ನಿ ಅವಘಡ: ಮನೆ ಮುಂಭಾಗ ಹಾಗೂ ಬೈಕ್‌ಗೆ ಬೆಂಕಿ ಹಚ್ಚಿ ಧ್ವಂಸ, ₹1.3 ಲಕ್ಷ ನಷ್ಟ

ಚೆರ್ಕಳ: ಮನೆ ಮುಂಭಾಗದಲ್ಲಿ ನಿಲ್ಲಿಸಿದ್ದ ಮೋಟಾರ್ ಬೈಕ್ ಹಾಗೂ ಮನೆಯ ಮುಂಭಾಗಕ್ಕೆ ಅಪರಿಚಿತ ವ್ಯಕ್ತಿಗಳು ಬೆಂಕಿ ಹಚ್ಚಿದ ಘಟನೆ ಚೆರ್ಕಳದ ಅಳಕ್ಕ ಪ್ರದೇಶದಲ್ಲಿ ನಡೆದಿದೆ. ಈ ಸಂಬಂಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಅಳಕ್ಕ ನಿವಾಸಿ ಅಬ್ದುಲ್ಲ ಅವರ ಪುತ್ರ ಸಿ.ಎ. ಸೈಫುದ್ದೀನ್ ಅವರಿಗೆ ಸೇರಿದ ಪ್ಯಾಶನ್ ಪ್ರೋ ಬೈಕ್‌ನ್ನು ಗುರಿಯಾಗಿಸಿ ಈ ಕೃತ್ಯ ಎಸಗಲಾಗಿದೆ. KL 14 Q 0314 ನೋಂದಣಿ ಸಂಖ್ಯೆಯ ಈ ಬೈಕ್ ಮನೆಯ ಕಾರ್ ಪಾರ್ಕ್ ನಲ್ಲಿ ನಿಲ್ಲಿಸಲಾಗಿತ್ತು. ಪೊಲೀಸರ ಮಾಹಿತಿ ಪ್ರಕಾರ,…

Read More
error: Content is protected !!