ಬ್ರಾಹ್ಮಣ ಸಮುದಾಯದ ಅಭಿವೃದ್ಧಿಗೆ ವಿವಿಧ ಯೋಜನೆಗಳು: ಜಾಗೃತಿ ಅಭಿಯಾನ – ಪಿ.ಎಂ. ಮಾಲತೇಶ್

ಶಿವಮೊಗ್ಗ: ಕರ್ನಾಟಕ ರಾಜ್ಯ ಸರ್ಕಾರ ಬ್ರಾಹ್ಮಣ ಸಮುದಾಯದ ಅಭಿವೃದ್ಧಿಗಾಗಿ ವಿವಿಧ ಯೋಜನೆಗಳನ್ನು ಜಾರಿಗೊಳಿಸಿರುವುದು ಸಂತಸದ ವಿಷಯವಾಗಿದ್ದು, ಈ ಯೋಜನೆಗಳ ಕುರಿತು ರಾಜ್ಯಾದ್ಯಂತ ಜಾಗೃತಿ ಮೂಡಿಸಲಾಗುತ್ತಿದೆ ಎಂದು ಕರ್ನಾಟಕ ರಾಜ್ಯ ಬ್ರಾಹ್ಮಣ ಅಭಿವೃದ್ಧಿ ನಿಗಮದ ನಿರ್ದೇಶಕರಾದ ಪಿ.ಎಂ. ಮಾಲತೇಶ್ ತಿಳಿಸಿದ್ದಾರೆ. ನಗರದ ಪತ್ರಿಕಾಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರ ಮಾರ್ಗದರ್ಶನದಲ್ಲಿ ಕಾರ್ಮಿಕ ಇಲಾಖೆ, ಧಾರ್ಮಿಕ ದತ್ತಿ ಇಲಾಖೆ ಹಾಗೂ ನಿಗಮದ ವಿವಿಧ ಯೋಜನೆಗಳ ಮಾಹಿತಿ ಕೈಪಿಡಿ ಮೂಲಕ ಶಿವಮೊಗ್ಗ, ಚಿಕ್ಕಮಗಳೂರು, ಉಡುಪಿ…

Read More

ಅರಿಕ್ಕಾಡಿಯಲ್ಲಿ ಆಲಿ ಚಾಮುಂಡಿ ತೆಯ್ಯಂ ಪ್ರದರ್ಶನ: ಮಾನವ ಸಹೋದರತ್ವದ ಸಂದೇಶ

ಅರಿಕ್ಕಾಡಿ: ಮಾನವ ಸಹೋದರತ್ವದ ಸಂದೇಶವನ್ನು ಸಾರುವ ಅರಿಕ್ಕಾಡಿ ಪಾರೆ ಭಗವತಿ ಆಲಿ ಚಾಮುಂಡಿ ದೈವಸ್ಥಾನದಲ್ಲಿ ಶನಿವಾರ ಬೆಳಿಗ್ಗೆ ಭಕ್ತರ ಮುಂದೆ ರಂಗ ಪ್ರವೇಶ ಮಾಡಿತು. ಮಾರ್ಚ್ 30ರಿಂದ ಆರಂಭವಾದ ದೈವಸ್ಥಾನದ ವಾರ್ಷಿಕ ಉತ್ಸವವು ಏಪ್ರಿಲ್ 6ರಂದು ಸಮಾಪ್ತಿಯಾಗಲಿದ್ದು, ಸಮಾರೋಪ ದಿನದಂದು ಆಲಿಭೂತಂ, ಹೊಸ ಭಗವತಿ ದೈವ ಮತ್ತು ಭಗವತಿ ದರ್ಶನ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ. ಉತ್ಸವದ ಅಂಗವಾಗಿ ಎಡನೀರ್ ಮಠಾಧೀಶರಾದ ಸಚ್ಚಿದಾನಂದ ಭಾರತಿ ಸ್ವಾಮೀಜಿ ದೈವಸ್ಥಾನಕ್ಕೆ ಭೇಟಿ ನೀಡಿದರು. ಈ ಸಂದರ್ಭದಲ್ಲಿ ಕೆ. ಜಗದೀಶ್…

Read More

ಅಂಬಿತಾಡಿ ಗೇರುಕಟ್ಟೆ ರಸ್ತೆ ಬದಿಯ ತೋಡಿನಲ್ಲಿ ತುಂಬಿದ ತ್ಯಾಜ್ಯ: ವಾಹನದಲ್ಲಿ ತ್ಯಾಜ್ಯವನ್ನು ತಂದು ಬಿಸಾಕುತ್ತಿರುವುದಾಗಿ ಸ್ಥಳೀಯರ ದೂರು

ಅಂಬಿತಾಡಿ: ನೂರಾರು ವಾಹನಗಳು ಹಾಗೂ ದಾರಿಹೋಕರು ಸಂಚರಿಸುವ ಅಂಬಿತಾಡಿ–ಗೇರುಕಟ್ಟೆ ರಸ್ತೆಯಲ್ಲಿರುವ ತೋಡನ್ನು ಕಸದ ತೊಟ್ಟಿಯಂತೆ ಬಳಸಲಾಗುತ್ತಿದ್ದು, ಸ್ಥಳೀಯ ನಾಗರಿಕರ ಆತಂಕಕ್ಕೆ ಕಾರಣವಾಗಿದೆ. ಇತ್ತೀಚಿನ ದಿನಗಳಲ್ಲಿ ಹೊರಗಿನಿಂದ ಸಂಚರಿಸುವವರು ಕೂಡ ನಿರ್ಬಂಧವಿಲ್ಲದೆ ಕಸವನ್ನು ಬಿಸಾಡುತ್ತಿರುವುದು ಕಂಡುಬಂದಿದೆ. ಇದಲ್ಲದೆ, ವೈದ್ಯಕೀಯ ತ್ಯಾಜ್ಯವನ್ನು ಕೂಡ ಇಲ್ಲಿ ಎಸೆಯಲಾಗುತ್ತಿರುವುದು ಪರಿಸ್ಥಿತಿಯನ್ನು ಮತ್ತಷ್ಟು ಗಂಭೀರಗೊಳಿಸಿದೆ. ಇದೀಗ ತೋಡು ಕಸ ತ್ಯಾಜ್ಯದಿಂದ ತುಂಬಿ ತೋಡು ಕಣ್ಮರೆಯಾಗುವ ಸ್ಥಿತಿ ತಲುಪಿದೆ ಇನ್ನೂ ಒಂದು ತಿಂಗಳಲ್ಲಿ ಮಳೆಗಾಲ ಪ್ರಾರಂಭವಾಗಲಿರುವುದರಿಂದ, ನೀರು ಸರಾಗವಾಗಿ ಹರಿಯಲು ಸಾಧ್ಯವಿಲ್ಲದೆ ಕೃತಕ ನೆರೆ ಸೃಷ್ಟಿಯಾಗಿ…

Read More

ಕಡಂಬಾರು ದೇವಸ್ಥಾನ ವಾರ್ಷಿಕೋತ್ಸವ ಸಮಾಪ್ತಿ: ಭಕ್ತರ ಸಂಭ್ರಮದಲ್ಲಿ ಅಂತಿಮ ದಿನ ಕಾರ್ಯಕ್ರಮಗಳು ನೆರವೇರಿಕೆ

ಕಡಂಬಾರು,: ಕಡಂಬಾರು ದೇವಸ್ಥಾನದ ವರ್ಷಾವಧಿ ಉತ್ಸವದ ಅಂತಿಮ ದಿನ ಭಕ್ತರ ಭಾರೀ ಉಪಸ್ಥಿತಿಯಲ್ಲಿ ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ಭಕ್ತಿ ಭಾವದಿಂದ ನೆರವೇರಿದವು. ಅಂತಿಮ ದಿನದ ಪ್ರಮುಖ ಕಾರ್ಯಕ್ರಮವಾಗಿ ಹಗಲು ದರ್ಶನಬಲಿ ಹಾಗೂ ರಾಜಾಂಗಣ ಪ್ರಸಾದ ನಡೆಯಿತು. ಈ ವೇಳೆ ಶ್ರೀ ದೇವರ ದರ್ಶನ ಬಲಿಗೆ ವಿಶೇಷವಾಗಿ ಆಯೋಜಿಸಿದ್ದ ಚೆಂಡೆ ಸುತ್ತು ಭಕ್ತರ ಗಮನ ಸೆಳೆಯಿತು. ಸುಮಾರು 20ರಿಂದ 25 ಕಲಾವಿದರ ತಂಡದಿಂದ ಚೆಂಡೆ, ಡೋಲು ಹಾಗೂ ಚಕ್ರತಾಳಗಳ ಮೇಳೈಸಿದ ವಾದ್ಯಗೋಷ್ಠಿ ಸಂಭ್ರಮವನ್ನು ಹೆಚ್ಚಿಸಿತು. ಇದರ…

Read More

ಮುಂಡಳ್ಳಿ ಶ್ರೀ ದುರ್ಗಾಪರಮೇಶ್ವರಿ ಅಮ್ಮನವರಿಗೆ ಅಷ್ಠ ಬಂಧ ಬ್ರಹ್ಮ ಕಲಶೋತ್ಸವ ಸಂಭ್ರಮ

ಭಟ್ಕಳ ತಾಲೂಕು ಅನೇಕ ದೇವಾಲಯಗಳ ಒಂದು ಬ್ರಹತ್ ಸಮುಚ್ಛಯ ಎಂದರೆ ತಪ್ಪಾಗಲಾರದು ಅನ್ನಿಸುತ್ತದೆ.ಒಮ್ಮೆ ಮೆರವಣಿಗೆಯೊಂದರಲ್ಲಿ ಸಾಗಿ ಬಂದ ಸ್ವಾಮಿಜೀಯೊಬ್ಬರು ಒಂದು ಮಾರ್ಗದಲ್ಲಿ ಇಷ್ಟೊಂದು ದೇವಾಯಗಳನ್ನು ಇದೇ ಮೊದಲ ಬಾರಿ ಭಟ್ಕಳದಲ್ಲಿಯೇ ಕಂಡಿದ್ದು ಎಂದು ಹೇಳಿದ ಮಾತೂ ನೆನಪಿಗೆ ಬರುತ್ತಿದೆ ನನಗೆ.ಇಲ್ಲಿ ಲೆಕ್ಕವಿಲ್ಲದಷ್ಟು ದೇವಾಲಯಗಳಿವೆ. ಬಸಿದಿಗಳಿವೆ ಗುಡಿಗಳಿವೆ.ಒಂದೊಂದು ದೇವಾಲಯಗಳು ಕೂಡ ತನ್ನದೇ ಆದ ಇತಿಹಾಸವನ್ನು ಸಾರಿ ಹೇಳುತ್ತವೆ.ಇಂತಹ ಅನೇಕ ದೇವಾಲಯಗಳ ಪೈಕಿ ಸುಮಾರು ೬೦೦ ವರುಷಗಳ ಇತಿಹಾಸವಿರುವ ಭವ್ಯ ವಾಸ್ತುಶಿಲ್ಪದ ಮುಂಡಳ್ಳಿ ಶ್ರೀ ದುರ್ಗಾಪರಮೇಶ್ವರಿ ದೇವಾಲಯವು ಅತ್ಯಂತ ಪ್ರಮುಖವಾಗಿದೆ….

Read More

ಅರಿಕ್ಕಾಡಿಯಲ್ಲಿ ಶ್ರೀ ಆಲಿಚಾಮುಂಡಿ ಭಗವತಿ ದೇವಸ್ಥಾನದಲ್ಲಿ ಸಂಸ್ಕೃತಿ ಕಾರ್ಯಕ್ರಮ

ಕುಂಬಳೆ: ಕುಂಬಳೆ ಅರಿಕ್ಕಾಡಿ ಪಾರೆ ಸ್ಥಾನದಲ್ಲಿರುವ ಶ್ರೀ ಆಲಿಚಾಮುಂಡಿ ಶ್ರೀ ಭಗವತಿ ದೇವಸ್ಥಾನದಲ್ಲಿ ವಾರ್ಷಿಕೋತ್ಸವದ ಕಳಿಯಾಟ ಪ್ರಯುಕ್ತ ಶ್ರೀ ನಾರಾಯಣ ಗುರು ವನಿತಾ ಸ್ವಸಹಾಯ ಸಂಘದ ವತಿಯಿಂದ 10ನೇ ವರ್ಷದ ಸಂಸ್ಕೃತಿ ಕಾರ್ಯಕ್ರಮ ನೆರವೇರಿತು. ಕಾರ್ಯಕ್ರಮಕ್ಕೆ ದೇವಸ್ಥಾನದ ಅಧ್ಯಕ್ಷ ಸಂತೋಷ್ ಕುಂಬಳೆ ಅಧ್ಯಕ್ಷತೆ ವಹಿಸಿದರು. ತೀಯಾ ಮಹಾಸಭಾ ಅಧ್ಯಕ್ಷ ಗಣೇಶ್ ಮಂಗಾನ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ತೀಯಾ ವೆಲ್ಫೇರ್ ಅಸೋಸಿಯೇಷನ್ ಅಧ್ಯಕ್ಷ ಗಣೇಶ್ ಪಾವೂರು, ಕಾರ್ಯದರ್ಶಿ ನಾಗೇಶ್ ಬಳ್ಳಂಬಾಡಿ, ಸದಾಶಿವ ಕಳತೋರು, ನವೀನ್ ಕುಮಾರ್ ಅರಿಕ್ಕಾಡಿ,…

Read More

ಮಂಜೇಶ್ವರದಲ್ಲಿ ಯೂತ್ ಕಾನ್ಫರೆನ್ಸ್‌ಗೆ ಪಿ.ಟಿ. ಉಷಾ ಚಾಲನೆ

ಮಂಜೇಶ್ವರ: ಮಂಜೇಶ್ವರ ವಿಧಾನಸಭಾ ಕ್ಷೇತ್ರದ ಕ್ರೀಡಾಪಟುಗಳ ಯುವ ಸಮ್ಮೇಳನವನ್ನು ರಾಜ್ಯಸಭಾ ಸಂಸದೆ ಹಾಗೂ ರಾಷ್ಟ್ರೀಯ ಒಲಿಂಪಿಕ್ ಫೆಡರೇಶನ್ ಅಧ್ಯಕ್ಷೆ ಪಿ.ಟಿ. ಉಷಾ ಉದ್ಘಾಟಿಸಿದರು. ಸಮಾರಂಭದಲ್ಲಿ ಮಂಜೇಶ್ವರ ಎನ್‌ಡಿಎ ಅಭ್ಯರ್ಥಿ ಕೆ. ಸುರೇಂದ್ರನ್ ಭಾಗವಹಿಸಿದ್ದರು. ಕ್ಷೇತ್ರದ ವಿವಿಧ ಕ್ಲಬ್‌ಗಳ ಪದಾಧಿಕಾರಿಗಳು ಪಾಲ್ಗೊಂಡ ಸಭೆಯಲ್ಲಿ ಪಿ.ಟಿ. ಉಷಾ ಕ್ರೀಡಾಪಟುಗಳೊಂದಿಗೆ ಸಂವಾದ ನಡೆಸಿದರು. ಈ ವೇಳೆ ರಾಜ್ಯ ಮತ್ತು ರಾಷ್ಟ್ರೀಯ ಮಟ್ಟದ ಕ್ರೀಡಾಕೂಟಗಳಲ್ಲಿ ಭಾಗವಹಿಸಿದ್ದ ಮಂಜೇಶ್ವರದ ಮಕ್ಕಳಿಗೆ ಪಿ.ಟಿ. ಉಷಾ ಸ್ಮರಣಿಕೆಗಳನ್ನು ವಿತರಿಸಿದರು. ಹೊಸಂಗಡಿ ಪ್ರೇರಣಾ ಸಭಾಂಗಣದಲ್ಲಿ ಕ್ರೀಡಾ ಭಾರತಿ ಕಾಸರಗೋಡು…

Read More

ಮಹಾಲಿಂಗೇಶ್ವರ ದೇವಾಲಯ ವಿವಾದ: ‘ಇದು ವೈಯಕ್ತಿಕ ವಿಷಯ, ದೇವಸ್ಥಾನಕ್ಕೆ ಸಂಬಂಧವಿಲ್ಲ’ – ಅಧ್ಯಕ್ಷ ಈಶ್ವರ ಭಟ್

ಪುತ್ತೂರು : ಮಹಾಲಿಂಗೇಶ್ವರ ದೇವಾಲಯದ ಕೊಡಿಮರದ ಅಡಿಯಲ್ಲಿ ಕುಳಿತು ನ್ಯಾಯ ಕೇಳುವುದಕ್ಕೆ ಇದು ದೇವಸ್ಥಾನಕ್ಕೆ ಸಂಬಂಧಿಸಿದ ವಿಷಯ ಅಲ್ಲ. ಇದು ಎರಡು ಮನೆಗೆ ಸಂಬಂಧಪಟ್ಟ ವಿಷಯ. ದೇವಸ್ಥಾನದ ಪೂರ್ವಶಿಷ್ಟ ಸಾಂಪ್ರದಾಯದಂತೆ ನಾವು ಈ ಹಿಂದೆ ಹೇಗಿತ್ತೋ ಹಾಗೆ ಮುಂದುವರಿಯುತ್ತೇವೆ ಎಂದು ಮಹಾಲಿಂಗೇಶ್ವರ ದೇವಾಲಯದ ವ್ಯವಸ್ಥಾನಪನ ಸಮಿತಿ ಅಧ್ಯಕ್ಷ ಈಶ್ವರ ಭಟ್ ಪಂಜಿಗುಡ್ಡೆ ಪ್ರತಿಕ್ರಿಯಿಸಿದ್ದಾರೆ. ಮಹಾಲಿಂಗೇಶ್ವರ ದೇವಾಲಯದ ಧಾರ್ಮಿಕ ಕಾರ್ಯಗಳಿಂದ ದೇವಾಲಯದ ವಾಸ್ತು ಇಂಜಿನಿಯರ್ ಪಿ ಜಿ ಜಗನ್ನಿವಾಸ್ ರಾವ್ ಅವರನ್ನ ಹೊರಗಿಡಬೇಕು. ಇಲ್ಲವಾದಲ್ಲಿ ನಾನು ಕೊಡಿಮರದ ಅಡಿಯಲ್ಲಿ…

Read More

ಗ್ಯಾಸ್ ಅಭಾವದಿಂದ ಪುತ್ತೂರಿನಲ್ಲಿ ಆಟೋ ಸಂಚಾರ ಅಸ್ತವ್ಯಸ್ತ

ಪುತ್ತೂರು: ನಗರದಲ್ಲಿ ತಲೆದೋರಿರುವ ಗ್ಯಾಸ್‌ ಕೊರತೆ ಇದೀಗ ಆಟೋ ರಿಕ್ಷಾ ಚಾಲಕರಿಗೂ ತೀವ್ರ ಸಂಕಷ್ಟ ಉಂಟುಮಾಡಿದೆ. ಶುಕ್ರವಾರ ಬೆಳಿಗ್ಗೆ 6 ಗಂಟೆಯಿಂದಲೇ ಪುತ್ತೂರಿನ ಬೋಲ್ವಾರ್, ಸಂಪ್ಯ ಪ್ರದೇಶದ ಗ್ಯಾಸ್ ಪಂಪ್, ಮುಕ್ರಂಪಾಡಿ ಬಳಿ ಆಟೋಗಳು ಕಿಲೋಮೀಟರ್‌ಗಳಷ್ಟು ಉದ್ದದ ಸಾಲಿನಲ್ಲಿ ನಿಂತು ಕಾಣಿಸಿಕೊಂಡವು. ಗ್ಯಾಸ್‌ ತುಂಬಿಸಿಕೊಳ್ಳಲು ಚಾಲಕರು ಗಂಟೆಗಟ್ಟಲೆ ಕಾಯಬೇಕಾದ ಪರಿಸ್ಥಿತಿ ನಿರ್ಮಾಣವಾಗಿದ್ದು, ದಿನನಿತ್ಯದ ಉದ್ಯೋಗಕ್ಕೆ ಇದರಿಂದ ದೊಡ್ಡ ಹೊಡೆತ ಬಿದ್ದಿದೆ.ಬೆಳಿಗ್ಗೆಯಿಂದಲೇ ಪಂಪ್ ಮುಂದೆ ವಾಹನಗಳ ದಟ್ಟಣೆ ಹೆಚ್ಚಾಗಿ, ಸಂಚಾರಕ್ಕೂ ಅಡಚಣೆ ಉಂಟಾದ ದೃಶ್ಯ ಕಂಡುಬಂದಿತು.ಗ್ಯಾಸ್‌ ಕೊರತೆಯಿಂದಾಗಿ ಪ್ರಯಾಣಿಕರಿಗೆ…

Read More

ಯಕ್ಷಧ್ರುವ ಪಟ್ಲ ಫೌಂಡೇಶನ್: ಮಂಗಳೂರು ಘಟಕದ ಅಷ್ಟಮ ಸಂಭ್ರಮ

ಮಂಗಳೂರು: ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ಇದರ ಮಂಗಳೂರು ನಗರ ಘಟಕದ ಅಷ್ಟಮ ಸಂಭ್ರಮ ಕಾರ್ಯಕ್ರಮವು ಮಂಗಳೂರು ನಗರ ಘಟಕದ ಅಧ್ಯಕ್ಷ ತಾರಾನಾಥ ಶೆಟ್ಟಿ ಬೋಳಾರ ಇವರ ಅಧ್ಯಕ್ಷತೆಯಲ್ಲಿ ಶ್ರೀ ಮಂಗಳಾದೇವಿ ದೇವಸ್ಥಾನದ ಪ್ರಾಂಗಣದಲ್ಲಿ ಜರಗಿತು.ಶ್ರೀ ಮಂಗಳಾದೇವಿ ದೇವಸ್ಥಾನದ ಅನುವಂಶಿಕ ಆಡಳಿತ ಮೊಕ್ತೇಸರ ಎಂ.ಅರುಣ್ ಐತಾಳ್ ಅವರು ಮಾತನಾಡಿ, ಯಕ್ಷಧ್ರುವ ಪಟ್ಲ ಫೌಂಡೇಶನ್ ಯಕ್ಷಗಾನ ಕಲಾವಿದರಿಗೆ ಗಣನೀಯ ಕೊಡುಗೆ ನೀಡುತ್ತಿರುವುದು ಶ್ಲಾಘನೀಯ ಎಂದರು. ಯಕ್ಷಧ್ರುವ ಪಟ್ಲ ಫೌಂಡೇಶನ್ ಇದರ ಸ್ಥಾಪಕ ಅಧ್ಯಕ್ಷ ಪಟ್ಲ ಸತೀಶ್ ಶೆಟ್ಟಿ ಮಾತನಾಡಿ,…

Read More
error: Content is protected !!