ಗಾಂಜಾ ಸೇವಿಸಿದ ಐದು ನರ್ಸಿಂಗ್ ವಿದ್ಯಾರ್ಥಿಗಳು ಪೊಲೀಸ್ ವಶಕ್ಕೆ

ಮಂಗಳೂರು ನಗರದ ನರ್ಸಿಂಗ್ ಕಾಲೇಜ್ ವೊಂದರ ವಿದ್ಯಾರ್ಥಿಗಳ ವಿರುದ್ಧ ಎನ್.ಡಿ.ಪಿ.ಎಸ್ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ. ಕೇರಳದ ಅಜಿಲ್ ನಾಜಿ, ಸಾಜಿಲ್ ಅಬ್ದುಲ್ ಸಮದ್, ಅಬು ಥಾಮಸ್ ಹಾಗೂ ಮೆಲ್ಮನ್ ಟೆಲಿಸ್, ಅಶ್ವಿನ್ ಸಾಜಿ ವಿರುದ್ಧ ‌ಕೇಸ್ ದಾಖಲಾಗಿದೆ. ಮಂಗಳೂರು ನಗರದ ಉರ್ವ ಪೊಲೀಸ್ ರಾಣಾ ವ್ಯಾಪ್ತಿಯಲ್ಲಿ ದಿನಾಂಕ 23.03 2026 ರಂದು ಐದು ಮಂದಿ ಯುವಕರು ಚಿಲಿಂಬಿ ಮಲರಾಯ ದೈವಸ್ಥಾನದ ಸಮೀಪವಿರುವ ಸ್ಟ್ರಿಂಗಫೀಲ್ಡ್ ಲೇಔಟ್ ಪ್ರದೇಶದಲ್ಲಿ ಮಾದಕ ವಸ್ತುವಾದ ಗಾಂಜಾ ಸೇವನೆ ಮಾಡುತ್ತಿರುವುದು ಕಂಡುಬಂದಿದೆ. ಇವರನ್ನು ವಿಚಾರಿಸಿದಾಗ…

Read More

17 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿ ಬಂಧನ

ಮಂಗಳೂರು: ಸುಮಾರು 17 ವರ್ಷಗಳಿಂದ ನ್ಯಾಯಾಲಯಕ್ಕೆ ಹಾಜರಾಗದೇ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಬರ್ಕೆ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಂಧಿತನನ್ನು ರಿಯಾಜ್ ಎಂದು ಗುರುತಿಸಲಾಗಿದೆ. ಈತನ ವಿರುದ್ಧ ಬರ್ಕೆ ಪೊಲೀಸ್ ಠಾಣೆಯಲ್ಲಿ 2009ರಲ್ಲಿ (ಅಪರಾಧ ಕ್ರಮಾಂಕ: 15/2009) ಕಾಪಿರೈಟ್ ಕಾಯ್ದೆಯ ಕಲಂ 52(a) ಮತ್ತು 63ರ ಅಡಿಯಲ್ಲಿ ಪ್ರಕರಣ ದಾಖಲಾಗಿತ್ತು. ಆರೋಪಿತನು ದೀರ್ಘಕಾಲ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದರಿಂದ, 2016ರಲ್ಲಿ ನ್ಯಾಯಾಲಯವು ಪ್ರಕರಣವನ್ನು ಎಲ್‌ಪಿ‌ಸಿ 79/2016 ಎಂದು ಪರಿವರ್ತಿಸಿತ್ತು. ಇದೀಗ ಸುಮಾರು 17 ವರ್ಷಗಳ ಬಳಿಕ, ಬರ್ಕೆ ಪೊಲೀಸ್ ಠಾಣೆಯ ಅಧಿಕಾರಿಗಳು…

Read More

ಕದ್ರಿ ಮಲ್ಲಿಕಟ್ಟೆಯ ಬಬ್ಬುಸ್ವಾಮಿ ದೈವಸ್ಥಾನದಲ್ಲಿ ನೂತನ ಕಟ್ಟಡ ಉದ್ಘಾಟನೆ

ಮಂಗಳೂರು ನಗರದ ಕದ್ರಿ ಮಲ್ಲಿಕಟ್ಟೆ ಪ್ರದೇಶದಲ್ಲಿರುವ ಶ್ರೀ ದೈವರಾಜ ಕೋಟೆದ ಬಬ್ಬುಸ್ವಾಮಿ ದೈವಸ್ಥಾನದಲ್ಲಿ ಸುಮಾರು ₹15 ಲಕ್ಷ ವೆಚ್ಚದಲ್ಲಿ ನಿರ್ಮಿಸಲಾದ ನೂತನ ಕಟ್ಟಡದ ಕಾಮಗಾರಿ ಪೂರ್ಣಗೊಂಡಿದ್ದು, ಇತ್ತೀಚೆಗೆ ಉದ್ಘಾಟನಾ ಸಮಾರಂಭವು ನೆರವೇರಿತು. ಈ ಕಾರ್ಯಕ್ರಮವನ್ನು ಶಾಸಕ Vedavyas Kamath ಅವರ ನೇತೃತ್ವದಲ್ಲಿ ಭಕ್ತಿಭಾವದಿಂದ ಆಯೋಜಿಸಲಾಯಿತು. ಉದ್ಘಾಟನೆ ನಂತರ ಮಾತನಾಡಿದ ಶಾಸಕರು, ಸರ್ಕಾರದ ಆರಾಧನಾ ಯೋಜನೆ ಸೇರಿದಂತೆ ವಿವಿಧ ಅನುದಾನಗಳ ಮೂಲಕ ₹15 ಲಕ್ಷ ಮೊತ್ತವನ್ನು ಸಮರ್ಪಕವಾಗಿ ಬಳಸಿಕೊಂಡು ದೈವಸ್ಥಾನದ ಅಭಿವೃದ್ಧಿ ಕಾರ್ಯಗಳನ್ನು ಪೂರ್ಣಗೊಳಿಸಿರುವುದು ಸಂತೋಷದ ವಿಚಾರ ಎಂದು…

Read More

ಹೊಸ ಒಳ ಮೀಸಲಾತಿಗೆ ವಿರೋಧ.ಬೆಂಗಳೂರಿನಲ್ಲಿ 101 ಜಾತಿಗಳ ಬೃಹತ್ ಪ್ರತಿಭಟನೆ

ಬೆಂಗಳೂರು:ಕರ್ನಾಟಕ ರಾಜ್ಯ ಒಳ ಮೀಸಲಾತಿ (ರಿ.) ವತಿಯಿಂದ ಒಳ ಮೀಸಲಾತಿ ರೋಸ್ಟರ್‌ಗೆ ವಿರೋಧ ವ್ಯಕ್ತಪಡಿಸಿ ನಿನ್ನೆ ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಭೃಹತ್ ಪ್ರತಿಭಟನಾ ಸಮಾವೇಶ ನಡೆಯಿತು.ಈ ಸಂದರ್ಭದಲ್ಲಿ ರಾಜ್ಯದ 101 ಜಾತಿಗಳ ಒಳ ಮೀಸಲಾತಿಯನ್ನು ಖಂಡಿಸಿ, ಭೋವಿ ಗುರುಪೀಠದ ಶ್ರೀ ಇಮ್ಮಡಿ ಸಿದ್ದರಾಮೇಶ್ವರ ಸ್ವಾಮಿಗಳ ನೇತೃತ್ವದಲ್ಲಿ ವಿವಿಧ ಸಮುದಾಯಗಳ ಪ್ರತಿಭಟನೆ ಜರುಗಿತು. “ಹಳೆಯ ಮೀಸಲಾತಿಯನ್ನೇ ನಮಗೆ ಮುಂದುವರಿಸಿ, ಹೊಸ ಮೀಸಲಾತಿಯನ್ನು ನಾವು ಸ್ವೀಕರಿಸುವುದಿಲ್ಲ” ಎಂದು ಪ್ರತಿಭಟನಾಕಾರರು ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.ಇದೇ ವೇಳೆ ಬೆಂಗಳೂರು ರೈಲ್ವೆ ನಿಲ್ದಾಣದಿಂದ ಫ್ರೀಡಂ…

Read More

ಉಡುಪಿ ಶ್ರೀಕೃಷ್ಣ ದರ್ಶನಕ್ಕೆ ನೂತನ ಮಾರ್ಗ ವ್ಯವಸ್ಥೆ: ಭಕ್ತರಿಗೆ ಸುಲಭ ದರ್ಶನ ವ್ಯವಸ್ಥೆ

ಉಡುಪಿ: ಶ್ರೀಕೃಷ್ಣ ದೇವರ ದರ್ಶನಕ್ಕಾಗಿ ತೆರಳುವ ಭಕ್ತರಿಗೆ ಅನುಕೂಲವಾಗುವಂತೆ ದರ್ಶನ ಮಾರ್ಗದಲ್ಲಿ ಬದಲಾವಣೆ ಮಾಡಲಾಗಿದ್ದು, ಪ್ರತಿಯೊಬ್ಬ ಭಕ್ತನಿಗೂ ಸುಗಮವಾಗಿ ದರ್ಶನ ಸಿಗುವಂತೆ ನೂತನ ಪಥವನ್ನು ರೂಪಿಸಲಾಗಿದೆ ಎಂದು ಶೀರೂರು ಮಠದ ದಿವಾನರಾದ ಉದಯಕುಮಾರ್ ಸರಳಾತ್ತಾಯ ತಿಳಿಸಿದ್ದಾರೆ. ಹೊಸ ವ್ಯವಸ್ಥೆಯಂತೆ ಭಕ್ತರು ಕನಕನ ಕಿಂಡಿಯಲ್ಲಿ ಶ್ರೀಕೃಷ್ಣನ ದರ್ಶನ ಮಾಡಿ, ಬಳಿಕ ಶ್ರೀಚಂದ್ರಮೌಳೀಶ್ವರ ಹಾಗೂ ಶ್ರೀಅನಂತೇಶ್ವರ ದೇವರ ದರ್ಶನ ಪಡೆದು, ಶ್ರೀಮನ್ ಮಧ್ವಾಚಾರ್ಯರು ಅದೃಶ್ಯರಾದ ಸ್ಥಳದಲ್ಲಿ ಪ್ರಾರ್ಥನೆ ಸಲ್ಲಿಸಿ ಶ್ರೀಕೃಷ್ಣ ಮಠಕ್ಕೆ ಪ್ರವೇಶಿಸಲಿದ್ದಾರೆ. ನಂತರ ನವಗ್ರಹ ಕಿಂಡಿಯಲ್ಲಿ ಭಗವಂತನ ದರ್ಶನ…

Read More

ತುರ್ತಿ ತರವಾಡಿನಲ್ಲಿ ಕೂವಂ ಅಳಕ್ಕಲ್ ಹಾಗೂ ಅಡಯಾಳo ಕಾರ್ಯಕ್ರಮ

ಅಯ್ಯಾಯಿರಂಪಟ್ಟಂ ಸ್ವರೂಪ ನಾಡಿನ ಅತ್ಯಂತ ಪುರಾತನ, ಋಷಿಮುನಿಗಳ ತಪೋ ಭೂಮಿ, ಉಪ್ಪಳ 25 ವಿಲ್ಲು ಶ್ರೀ ಭಗವತಿ ಕ್ಷೇತ್ರದ ಮಹಾಶಕ್ತಿ ಐವರ್ ಭಗವತಿ ಮಾತೆಯ ಪ್ರಧಾನ ತರವಾಡು, ತುರ್ತಿ ಶ್ರೀ ವಿಷ್ಣುಮೂರ್ತಿ, ವಯನಾಟ್ಟು ಕುಲವನ್ ಮಹಾಮಲರಾಯ ದೈವಸ್ಥಾನ, ತಾರವಡ್ ಉತ್ಸವಸ್ಥಾನದಲ್ಲಿ ಪಡೆoಕುಡಿ ತೀಯಾ (ಕೋಟ್ಯಾನ್‌ ) ತರವಾಡಿನಲ್ಲಿ ಮಹಾ ಉತ್ಸವ ನಡೆಯಲಿದೆ . ಇದರ ಪೂರ್ವ ಭಾವಿಯಾಗಿ ಸೀಮೆಯ ದೈವ ದೇವಾದಿಗಳಿಗೆ ನೈವೇದ್ಯಕ್ಕೆ ಭತ್ತ ಅಳಿಯಿವುದು ಕೂವಂ ಅಳಕ್ಕಲ್ ಹಾಗು ಅಡಯಾಳo ಕಾರ್ಯಕ್ರಮ ಇಂದು ವಿಜೃಂಭಣೆಯಿಂದ ಜರಗಿತು…

Read More

ಕನ್ನಡ ಕಲಿತವರಿಗೆ ಉದ್ಯೋಗ ಸಿಕ್ಕರೆ ಮಾತ್ರ ಭಾಷಾಭಿಮಾನ ಬೆಳೆಯಲಿದೆ

ಮಂಗಳೂರು: ಕನ್ನಡದಲ್ಲಿ ಶಿಕ್ಷಣ ಪಡೆದರೆ ಉದ್ಯೋಗ ಸಿಗುವುದಿಲ್ಲ ಎಂಬ ಧಾರಣೆ ಹೆಚ್ಚುತ್ತಿರುವ ಹಿನ್ನೆಲೆ ಇಂಗ್ಲಿಷ್‌ನಲ್ಲಿ ಕಲಿಯುವ ಅನಿವಾರ್ಯತೆ ನಿರ್ಮಾಣವಾಗಿದೆ. ಕನ್ನಡದಲ್ಲಿ ಕಲಿತವರಿಗೆ ಉದ್ಯೋಗಾವಕಾಶದ ಭರವಸೆ ದೊರಕಿದಾಗ ಮಾತ್ರ ಭಾಷೆಯ ಬಗ್ಗೆ ಅಭಿಮಾನ ಬೆಳೆಯಲು ಸಾಧ್ಯ ಎಂದು ಹಿರಿಯ ಪತ್ರಕರ್ತ ಹಾಗೂ ಸಾಹಿತಿ ಚಿದಂಬರ ಬೈಕಂಪಾಡಿ ಹೇಳಿದರು. ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಆಯ್ಕೆಯಾದ ಹಿನ್ನೆಲೆಯಲ್ಲಿ ಮಂಗಳೂರು ಪ್ರೆಸ್ ಕ್ಲಬ್ ವತಿಯಿಂದ ಬುಧವಾರ ನಡೆದ ಸನ್ಮಾನ ಸಮಾರಂಭದಲ್ಲಿ ಅವರು ಮಾತನಾಡಿದರು. ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ…

Read More

ಬೈಂದೂರು ಬಳಿ ಸರಣಿ ಅಪಘಾತ: ಗೂಡ್ಸ್ ವಾಹನಕ್ಕೆ ಕಾರು ಡಿಕ್ಕಿ, ಹಲವರಿಗೆ ಗಾಯ

ಬೈಂದೂರು: ಬೈಂದೂರು–ಕುಂದಾಪುರ ರಾಷ್ಟ್ರೀಯ ಹೆದ್ದಾರಿ 66ರ ತಲ್ಲೂರು ಸೇತುವೆ ಬಳಿ ಮಂಗಳವಾರ ಸಂಜೆ ಸರಣಿ ಅಪಘಾತ ಸಂಭವಿಸಿದ್ದು, ಹಲವರು ಗಾಯಗೊಂಡು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಮಹಾರಾಷ್ಟ್ರ ಮೂಲದ ಗೂಡ್ಸ್ ವಾಹನವು ಸೇತುವೆಯ ತಡೆಗೋಡೆಗೆ ಡಿಕ್ಕಿ ಹೊಡೆದಿದ್ದು, ಅದರ ಹಿಂದೆ ಬರುತ್ತಿದ್ದ ಕಾರು ಕೂಡ ಗೂಡ್ಸ್ ವಾಹನಕ್ಕೆ ಡಿಕ್ಕಿ ಹೊಡೆದಿದೆ. ಅಪಘಾತದಲ್ಲಿ ಕಾರಿನ ಚಾಲಕ ಸೇರಿದಂತೆ ಪ್ರಯಾಣಿಕರು ಹಾಗೂ ಗೂಡ್ಸ್ ವಾಹನ ಚಾಲಕ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ತಕ್ಷಣ ಕುಂದಾಪುರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ವೇಗವಾಗಿ ಬಂದ ಗೂಡ್ಸ್ ವಾಹನ ನಿಯಂತ್ರಣ…

Read More

ಬಾಲಕಿ ಮುಂದೆ ನಗ್ನತೆ ಪ್ರದರ್ಶನ: ವಿಕೃತ ಕಾಮಿಗೆ ಪೋಕ್ಸೋ ಸಂಕೋಲೆ

ಮಂಜೇಶ್ವರ: ರಸ್ತೆ ಕೇಳುವ ನೆಪದಲ್ಲಿ 12 ವರ್ಷದ ಬಾಲಕಿಯ ಮುಂದೆ ಅಸಭ್ಯವಾಗಿ ವರ್ತಿಸಿ ನಗ್ನತೆ ಪ್ರದರ್ಶಿಸಿದ ಯುವಕನನ್ನು ಕುಂಬಳೆ ಪೊಲೀಸರು ಕ್ಷಿಪ್ರ ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ. ಶೇಣಿ ಮಣಿಯಂಪಾರೆಯಲ್ಲಿ ವಾಸವಿರುವ ವಯನಾಡ್ ಮೂಲದ ಅದ್ನುಲ್ ಫಾರಿಸ್ (22) ಬಂಧಿತ ಆರೋಪಿ. ​ಮಂಗಳವಾರ ಸಂಜೆ ಬಾಲಕಿ ರಸ್ತೆಯಲ್ಲಿ ನಡೆದು ಹೋಗುತ್ತಿದ್ದಾಗ ಕಾರಿನಲ್ಲಿ ಬಂದ ಆರೋಪಿಯು, ಕುಂಬಳೆಗೆ ಹೋಗುವ ದಾರಿ ಕೇಳಿದ್ದಾನೆ. ಬಾಲಕಿ ದಾರಿ ತೋರಿಸುತ್ತಿದ್ದಂತೆ ಆತ ವಿಕೃತವಾಗಿ ನಗ್ನತೆ ಪ್ರದರ್ಶಿಸಿದ್ದಾನೆ.ಇದರಿಂದ ಬೆದರಿದ ಬಾಲಕಿ ತಕ್ಷಣ ಸಮೀಪದ ಅಂಗಡಿಗೆ ಓಡಿ…

Read More

ಮಾ.27ರಂದು ಪವರ್‌ ಸಂಸ್ಥೆಯಿಂದ ಮಹಿಳಾ ಉದ್ಯಮಿಗಳಿಗಾಗಿ ಡಿಜಿಟಲ್‌ ಸಬಲೀಕರಣ ಕಾರ್ಯಕ್ರಮ

ಉಡುಪಿ: ಯುಬಿಯುಎನ್ ಟಿಯು ಕನ್ಸೋರ್ಟಿಯಂ ಹಾಗೂ ಉಡುಪಿಯ ಪವರ್‌ ಸಂಸ್ಥೆಯ ವತಿಯಿಂದ ಮಹಿಳಾ ಉದ್ಯಮಿಗಳಿಗಾಗಿ ಡಿಜಿಟಲ್‌ ಸಬಲೀಕರಣ ಕಾರ್ಯಕ್ರಮ ಇದೇ 27ರಂದು ಬೆಳಿಗ್ಗೆ 10 ರಿಂದ 4 ಗಂಟೆಯವರೆಗೆ ಮಣಿಪಾಲದ ಈಶ್ವರ ನಗರದ ಡಾ. ಟಿ.ಎಂ.ಎ. ಪೈ ಪಾಲಿಟೆಕ್ನಿಕ್‌ ಕಾಲೇಜಿನ ಆವರಣದ ಮಣಿಪಾಲ ಕೌಶಲಾಭಿವೃದ್ಧೀ ಕೇಂದ್ರದಲ್ಲಿ ನಡೆಯಲಿದೆ ಎಂದು ಪವರ್‌ ಸಂಸ್ಥೆಯ ಸಂಸ್ಥಾಪಕಿ ರೇಣು ಜಯರಾಮ್‌ ಮತ್ತು ಅಧ್ಯಕ್ಷೆ ವೀಣಾ ಕುಡ್ವಾ ತಿಳಿಸಿದರು. ಈ‌ಕುರಿತು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಮಹಿಳೆಯರು ಸಾಮಾಜಿಕ ಮಾಧ್ಯಮಗಳನ್ನು ಪರಿಣಾಮಕಾರಿಯಾಗಿ ಬಳಸಿಕೊಂಡು…

Read More
error: Content is protected !!