Headlines

ಕುತ್ತಾರು: ಸನಾತನ ಹಿಂದು ಸೇವಾ ಪ್ರತಿಷ್ಠಾನ ವತಿಯಿಂದ ಬಾಲ ಸಂರಕ್ಷಣಾ ಕೇಂದ್ರ, ಶ್ರೀ ರಾಜರಾಜೇಶ್ವರೀ ದೇವಸ್ಥಾನದಲ್ಲಿ ವನಮಹೋತ್ಸವ

ಸನಾತನ ಹಿಂದು ಸೇವಾ ಪ್ರತಿಷ್ಠಾನ ವತಿಯಿಂದ ಕುತ್ತಾರು: ಬಾಲ ಸಂರಕ್ಷಣಾ ಕೇಂದ್ರ, ಶ್ರೀ ರಾಜರಾಜೇಶ್ವರೀ ದೇವಸ್ಥಾನದಲ್ಲಿ ವನಮಹೋತ್ಸವನಡೆಯಿತು. ಕಾರ್ಯಕ್ರಮ ಉದ್ಘಾಟಿಸಿದ ಪ್ರತಿಷ್ಠಾನದ ಅಧ್ಯಕ್ಷ ಸುರೇಶ್ ಚೌಟ ಕಕ್ಕೆಮಜಲು ಅವರು ಕೇಂದ್ರದ ಉದ್ಯಾನದಲ್ಲಿ ಗಿಡನೆಟ್ಟು ಮಾತನಾಡಿದ ಪರಿಸರ ಸಂರಕ್ಷಣೆ ನಮ್ಮ ಕರ್ತವ್ಯವಾಗಿದ್ದು ಪರಿಸರ ರಕ್ಷಿಸಿ ಮುಂದಿನ ಪೀಳಿಗೆಗೆ ಉತ್ತಮ ಸುಂದರ ವಾತಾವರಣ ನಿರ್ಮಿಸಿಕೊಡೋಣ ಎಂದರು.ಕೋಶಾಧಿಕಾರಿ ಸುನಿಲ್ ಮಾತನಾಡಿ ನೂತನ ಪ್ರತಿಷ್ಠಾನದ ಮೂಲಕ ಬಹಳಷ್ಟು ಸೇವೆಗಳನ್ನು ಮಾಡಲಾಗಿದ್ದು ಮುಂದಿನ ದಿನಗಳಲ್ಲಿ ಅನೇಕ ಸೇವಾ ಚಟುವಟಿಕೆ ನಡೆಸಲಿದ್ದೇವೆ. ಬಡವರಿಗೆ ಸಹಕಾರ, ತೊಂದರೆ…

Read More

ಬುಧವಾರ ಸಚಿವ ಸಂಪುಟ ವಿಸ್ತರಣೆ ಸಾಧ್ಯತೆ; ಅಂತಿಮ ಹಂತದಲ್ಲಿ ಕಾಂಗ್ರೆಸ್ ಚರ್ಚೆ

ಬೆಂಗಳೂರು, ಜು. 20: ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ದೆಹಲಿಗೆ ಮರಳಿದ ಬೆನ್ನಲ್ಲೇ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನೇತೃತ್ವದ ರಾಜ್ಯ ಸಚಿವ ಸಂಪುಟ ವಿಸ್ತರಣೆಗೆ ವೇಗ ಸಿಕ್ಕಿದೆ. ಎಲ್ಲವೂ ಯೋಜನೆಯಂತೆ ನಡೆದರೆ ಬುಧವಾರ ನೂತನ ಸಚಿವರು ಪ್ರಮಾಣವಚನ ಸ್ವೀಕರಿಸುವ ಸಾಧ್ಯತೆ ಇದೆ ಎಂದು ಕಾಂಗ್ರೆಸ್ ಮೂಲಗಳು ತಿಳಿಸಿವೆ. ಸದ್ಯ ಸಚಿವ ಸಂಪುಟದಲ್ಲಿ 20 ಸ್ಥಾನಗಳು ಖಾಲಿ ಇದ್ದು, ಎಲ್ಲ ಹುದ್ದೆಗಳನ್ನು ಒಂದೇ ಹಂತದಲ್ಲಿ ಭರ್ತಿ ಮಾಡಬೇಕೇ ಅಥವಾ ಕೆಲವು ಸ್ಥಾನಗಳನ್ನು ಖಾಲಿ ಉಳಿಸಬೇಕೇ ಎಂಬ ಬಗ್ಗೆ ಅಂತಿಮ…

Read More

ಸಾಹಿತ್ಯ ಮತ್ತು ಶಿಕ್ಷಣದ ಮೂಲಕವೇ ಸಂಸ್ಕಾರಯುತ ನಾಗರಿಕ ಸಮಾಜ ನಿರ್ಮಾಣ – ಸಾಹಿತಿ ಚಂದ್ರಕಲಾ ನಂದಾವರ ಮಂಗಳೂರು ಮಿತ್ರ ಮಂಡಳಿಯ ಪುನಶ್ಚೇತನಕ್ಕೆ ಚಾಲನೆ

ಮಂಗಳೂರಿನ ಕೋರ್ಟ್ ಗುಡ್ಡೆಯ ಆಲದ ಮರದಡಿಯಲ್ಲಿ ಸಮಾನ ಸಾಹಿತ್ಯಾಸಕ್ತರು, ಕನ್ನಡ ಭಾಷಾ ಪಂಡಿತರ ಸಾಹಿತ್ಯ ಚರ್ಚೆಯಲ್ಲಿ ಆರಂಭವಾದ ಮಿತ್ರ ಮಂಡಳಿ ಸಾಹಿತ್ಯ ಲೋಕಕ್ಕೆ ದಿಗ್ಗಜ ಸಾಹಿತಿಗಳನ್ನು ನೀಡಿದೆ. ಮಿತ್ರ ಮಂಡಳಿಯಿಂದ ಬಿಡುಗಡೆಯಾದ ಪುಸ್ತಕಗಳು ಚರಿತ್ರೆಯ ಪುಟಗಳಲ್ಲಿ ಶ್ರೇಷ್ಟ ಸಾಹಿತ್ಯ ಪ್ರಕಾರಗಳಾಗಿ ದಾಖಲಾಗಿವೆ. ಇದರಲ್ಲಿ ಕೆನರಾ ಶಿಕ್ಷಣ ಸಂಸ್ಥೆಯ ಪ್ರಾಧ್ಯಾಪಕರ, ವಿದ್ಯಾರ್ಥಿಗಳ ಕೊಡುಗೆ ದೊಡ್ಡದಿದೆ. ಆ ನಿಟ್ಟಿನಲ್ಲಿ ಮಿತ್ರ ಮಂಡಳಿಯನ್ನು ಮತ್ತೇ ಪುನರುಜ್ಜೀನವನಗೊಳಿಸುವ ಕಾರ್ಯವನ್ನು ಕೆನರಾ ಶಿಕ್ಷಣ ಸಂಸ್ಥೆ ಮಾಡಿರುವುದು ಉತ್ತಮ ಹೆಜ್ಜೆ ಎಂದು ಖ್ಯಾತ ಸಾಹಿತಿ ಚಂದ್ರಕಲಾ…

Read More

ಬಜಪೆಯಲ್ಲಿ ಗಿಡ ನೆಡುವ ಮೂಲಕ ಬ್ಯಾಂಕ್ ರಾಷ್ಟ್ರೀಕರಣದ 58ನೆ ವಾರ್ಷಿಕ ದಿನಾಚರಣೆ

ಮಂಗಳೂರು; ಜುಲೈ1969 19ರಂದು ದೇಶದ 14 ಪ್ರಮುಖ ಖಾಸಗಿ ಬ್ಯಾಂಕು‌ಗಳನ್ನುರಾಷ್ಟ್ರೀಕರಣಗೊಳಿಸಲಾಯಿತು. ಈ ಐತಿಹಾಸಿಕ ನಿರ್ಧಾರವು ದೇಶದ ಸಾಮಾಜಿಕ ಹಾಗೂ ಆರ್ಥಿಕ ವ್ಯವಸ್ಥೆಯಲ್ಲಿ ಮಹತ್ತರ ಬದಲಾವಣೆಯನ್ನು ತಂದಿತು ಮತ್ತು ಬ್ಯಾಂಕಿಂಗ್ ವ್ಯವಸ್ಥೆಯನ್ನು “ವರ್ಗ ಬ್ಯಾಂಕಿಂಗ್’ನಿಂದ “ಜನಸಾಮಾನ್ಯರ ಬ್ಯಾಂಕಿಂಗ್” ಆಗಿ ಪರಿವರ್ತಿಸಿತು ಎಂದು ಅಖಿಲ ಭಾರತ ಬ್ಯಾಂಕ್ ಪಿಂಚಣಿದಾರರು ಮತ್ತು ನಿವೃತ್ತರ ಒಕ್ಕೂಟದ ಹಿರಿಯ ಉಪಾಧ್ಯಕ್ಷರಾದ ಶಿವರಾಮ ಆಳ್ವ ತಿಳಿಸಿದ್ದಾರೆ. ಅಖಿಲ ಭಾರತ ಬ್ಯಾಂಕ್ ಪಿಂಚಣಿದಾರರು ಮತ್ತು ನಿವೃತ್ತರ ಒಕ್ಕೂಟ ದ ವತಿಯಿಂದ ಬ್ಯಾಂಕ್ ರಾಷ್ಟ್ರೀಕರಣದ ದಿನದ 58ನೆ ವರ್ಷಾರಣೆಯ…

Read More

ರಾಜ್ಯದಲ್ಲಿ ಮತ್ತೆ ಚುರುಕಾದ ಮುಂಗಾರು: ಕರಾವಳಿಯಲ್ಲಿ ಭಾರೀ ಮಳೆ ಸಾಧ್ಯತೆ

ಬೆಂಗಳೂರು, ಜು. 20: ರಾಜ್ಯದಲ್ಲಿ ಮುಂಗಾರು ಮತ್ತೆ ಚುರುಕುಗೊಂಡಿದ್ದು, ಜುಲೈ 20 ಮತ್ತು 21ರಂದು ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಉತ್ತಮ ಮಳೆಯಾಗುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ (IMD) ಮುನ್ಸೂಚನೆ ನೀಡಿದೆ. ಉತ್ತರ ಕನ್ನಡ, ಉಡುಪಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಸಾಧಾರಣದಿಂದ ಭಾರೀ ಮಳೆಯಾಗುವ ಸಾಧ್ಯತೆ ಇದ್ದು, ಉತ್ತರ ಮತ್ತು ದಕ್ಷಿಣ ಒಳನಾಡಿನ ಹಲವು ಜಿಲ್ಲೆಗಳಲ್ಲಿ ಗಂಟೆಗೆ 40ರಿಂದ 50 ಕಿ.ಮೀ. ವೇಗದಲ್ಲಿ ಬಿರುಗಾಳಿ ಬೀಸುವ ಸಾಧ್ಯತೆ ಇದೆ. ಬೆಳಗಾವಿ, ಧಾರವಾಡ, ಹಾವೇರಿ,…

Read More

ಉಡುಪಿ: ಎಂಡಿಎಂಎ, ಹೈಡ್ರೋಗಾಂಜಾ ಮಾರಾಟ ಜಾಲ ಭೇದಿಸಿದ ಪೊಲೀಸರು

ಉಡುಪಿ: ಎಂಡಿಎಂಎ ಪೌಡರ್‌, ಹೈಡ್ರೋಗಾಂಜಾ ಹಾಗೂ ಎಂಡಿಎಂಎ ಟ್ಯಾಬ್ಲೆಟ್‌ಗಳನ್ನು ಹೊಂದಿದ್ದು, ಉಡುಪಿ, ಕಾಪು, ಮಣಿಪಾಲ ಮತ್ತು ಕಾರ್ಕಳ ಭಾಗಗಳಲ್ಲಿ ಮಾರಾಟ ಮಾಡುತ್ತಿದ್ದ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿ, ₹3.31 ಲಕ್ಷ ಮೌಲ್ಯದ ಮಾದಕ ವಸ್ತು ಹಾಗೂ ಇತರ ಸೊತ್ತುಗಳನ್ನು ವಶಪಡಿಸಿಕೊಂಡಿದ್ದಾರೆ. ಬಂಧಿತರು ಉದ್ಯಾವರದ ಪಿತ್ರೋಡಿ ನಿವಾಸಿ ವಿಜಯ ಪೂಜಾರಿ (36), ಕುಕ್ಕಂದೂರು ಹಾರ್ಜಿಡ್ಡು ನಿವಾಸಿ ಪಿ.ಎ. ಮೊಹಮ್ಮದ್ ಸಮ್ಮಾಸ್ (24) ಹಾಗೂ ಕಾರ್ಕಳ ತಾಲ್ಲೂಕಿನ ಮಿಯಾರು ಗ್ರಾಮದ ಕುಂಟಿಬೈಲು ನಿವಾಸಿ ಆಕಾಶ್ ಶೆಟ್ಟಿ (20) ಎಂದು ಗುರುತಿಸಲಾಗಿದೆ….

Read More

ಶುದ್ಧ ಷಷ್ಟಿ ಹಿನ್ನಲೆ,ಕುಕ್ಕೆಯಲ್ಲಿ ಭಕ್ತ ಜನ ದಟ್ಟಣೆ

ಸುಬ್ರಮಣ್ಯ : ದಕ್ಷಿಣ ಭಾರತದ ಪ್ರಸಿದ್ಧ ನಾಗರಾಧನೆಯ ಕ್ಷೇತ್ರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ತಿಂಗಳಿಗೊಮ್ಮೆ ಬರುವ ಶುದ್ಧ ಷಷ್ಟಿ ಈ ದಿನ ರವಿವಾರದೊಂದಿಗೆ ಬಂದುದರಿಂದ ಅತ್ಯಧಿಕ ಭಕ್ತ ಜನರು ಕುಕ್ಕೆಗೆ ಆಗಮಿಸಿ ಶ್ರೀ ದೇವರ ದರ್ಶನ ಪ್ರಸಾದ ಸ್ವೀಕರಿಸಿ ದರು. ಕಳೆದ ಒಂದು ವಾರದಿಂದ ನಿರಂತರವಾಗಿ ಸುರಿಯುತ್ತಿರುವ ಮಳೆಯು ಇಂದು ಕೂಡ ಇದ್ದು ಭಕ್ತರಿಗೆ ಸ್ವಲ್ಪ ತೊಂದರೆ ಉಂಟಾಯಿತು. ಆದರೂ ಮಳೆಯನ್ನ ಲೆಕ್ಕಿಸದೆ ರಥ ಬೀದಿಯಿಂದಲೇ ಆಗಮಿಸಿ ಶ್ರೀ ದೇವಳದ ಹೊರಾಂಗಣ ಪ್ರವೇಶಿಸಿ, ಒಳಾಂಗಣ ಸೇರಿದರು….

Read More

ಜಾಗತಿಕ ಪ್ರಯಾಣಿಕರಿಗೆ ಅಮೆರಿಕ ಎಚ್ಚರಿಕೆ; ಪಶ್ಚಿಮ ಏಷ್ಯಾದ ಉದ್ವಿಗ್ನತೆ ಹಿನ್ನೆಲೆ

ವಾಷಿಂಗ್ಟನ್, ಜು. 20: ಪಶ್ಚಿಮ ಏಷ್ಯಾದಲ್ಲಿ ಹೆಚ್ಚುತ್ತಿರುವ ಉದ್ವಿಗ್ನತೆ ಹಾಗೂ ಅಮೆರಿಕ–ಇರಾನ್ ನಡುವಿನ ಮಿಲಿಟರಿ ಚಟುವಟಿಕೆಗಳು ತೀವ್ರಗೊಳ್ಳುತ್ತಿರುವ ಹಿನ್ನೆಲೆಯಲ್ಲಿ, ವಿಶ್ವದಾದ್ಯಂತ ಇರುವ ತನ್ನ ನಾಗರಿಕರು ಪ್ರಯಾಣದ ವೇಳೆ ಹೆಚ್ಚಿನ ಎಚ್ಚರಿಕೆ ವಹಿಸುವಂತೆ ಅಮೆರಿಕ ಸರ್ಕಾರ ಸಲಹೆ ನೀಡಿದೆ. ಈ ಕುರಿತು ಅಮೆರಿಕದ ವಿದೇಶಾಂಗ ಇಲಾಖೆ ಅಧಿಕೃತ ಪ್ರಯಾಣ ಸಲಹೆ (Travel Advisory) ಪ್ರಕಟಿಸಿದ್ದು, ವಿಶೇಷವಾಗಿ ಪಶ್ಚಿಮ ಏಷ್ಯಾದಲ್ಲಿರುವ ಅಮೆರಿಕನ್ನರು ಭದ್ರತಾ ಪರಿಸ್ಥಿತಿಯ ಕುರಿತು ನಿರಂತರವಾಗಿ ಮಾಹಿತಿ ಪಡೆದು ಜಾಗರೂಕರಾಗಿರಬೇಕು ಎಂದು ಸೂಚಿಸಿದೆ. ಮಧ್ಯಪ್ರಾಚ್ಯದಲ್ಲಿ ಹೆಚ್ಚುತ್ತಿರುವ ಉದ್ವಿಗ್ನತೆಯಿಂದ ಭದ್ರತಾ…

Read More

ಫಿಫಾ ವಿಶ್ವಕಪ್–2026: ಸ್ಪೇನ್‌ಗೆ ಚಿನ್ನದ ಗೆಲುವು, ಅರ್ಜೆಂಟೀನಾಗೆ ನಿರಾಸೆ

ಫಿಫಾ ವಿಶ್ವಕಪ್–2026ರ ಫೈನಲ್‌ನಲ್ಲಿ ಯುರೋಪಿಯನ್ ಚಾಂಪಿಯನ್ ಸ್ಪೇನ್, ಹಾಲಿ ವಿಶ್ವ ಚಾಂಪಿಯನ್ ಅರ್ಜೆಂಟೀನಾವನ್ನು 1-0 ಗೋಲುಗಳಿಂದ ಮಣಿಸಿ ವಿಶ್ವಕಪ್ ಕಿರೀಟವನ್ನು ತನ್ನದಾಗಿಸಿಕೊಂಡಿದೆ. ಹೆಚ್ಚುವರಿ ವೇಳೆಯಲ್ಲಿ (Extra Time) ದಾಖಲಾದ ಏಕೈಕ ಗೋಲು ಪಂದ್ಯಕ್ಕೆ ತೀರ್ಮಾನಕವಾಗಿ ಪರಿಣಮಿಸಿತು. ನ್ಯೂಯಾರ್ಕ್–ನ್ಯೂಜೆರ್ಸಿ ಸ್ಟೇಡಿಯಂನಲ್ಲಿ ನಡೆದ ಫೈನಲ್ ಪಂದ್ಯ ಆರಂಭದಿಂದಲೇ ತೀವ್ರ ಪೈಪೋಟಿಗೆ ಸಾಕ್ಷಿಯಾಯಿತು. ಚೆಂಡಿನ ಮೇಲಿನ ಹಿಡಿತ ಸಾಧಿಸಿದ್ದ ಸ್ಪೇನ್ ನಿರಂತರ ದಾಳಿಗಳನ್ನು ನಡೆಸಿದರೂ, ಅರ್ಜೆಂಟೀನಾದ ಗೋಲ್‌ಕೀಪರ್ ಎಮಿಲಿಯಾನೊ ಮಾರ್ಟಿನೆಸ್ ಹಲವು ಅದ್ಭುತ ಸೇವ್‌ಗಳ ಮೂಲಕ ತಂಡವನ್ನು ಪಂದ್ಯದಲ್ಲಿ ಉಳಿಸಿಕೊಂಡರು. ನಿಯಮಿತ…

Read More

ಸಂಶೋಧಕ, ಶಿಕ್ಷಣ ತಜ್ಞ ಡಾ. ಬೆಟ್ಟಪ್ಪ ಕ. ಅವರಿಗೆ ‘ಕನ್ನಡ ಪಯಸ್ವಿನಿ ಶಿಕ್ಷಣ ರತ್ನ ಅಚೀವ್‌ಮೆಂಟ್ ಅವಾರ್ಡ್–2026’

ಕಾಸರಗೋಡು: ಸಂಶೋಧಕ, ಶಿಕ್ಷಣ ತಜ್ಞ ಹಾಗೂ ವಿದ್ವಾಂಸರಾದ ಡಾ. ಬೆಟ್ಟಪ್ಪ ಕ. ಅವರು ಅಂತರ್‌ರಾಜ್ಯ ‘ಕನ್ನಡ ಪಯಸ್ವಿನಿ ಶಿಕ್ಷಣ ರತ್ನ ಅಚೀವ್‌ಮೆಂಟ್ ಅವಾರ್ಡ್–2026’ಗೆ ಆಯ್ಕೆಯಾಗಿದ್ದಾರೆ. ಜುಲೈ 26ರಂದು ಕನ್ನಡ ಭವನದಲ್ಲಿ ನಡೆಯಲಿರುವ ‘ರಜತ ಸಂಭ್ರಮ’ ಸಮಾರೋಪ ಕಾರ್ಯಕ್ರಮ ಹಾಗೂ *ಕರ್ನಾಟಕ ಗಡಿನಾಡು ಕನ್ನಡ ಸಮ್ಮೇಳನದ ಅಂಗವಾಗಿ ಈ ಪ್ರಶಸ್ತಿಯನ್ನು ಪ್ರದಾನ ಮಾಡಲಾಗುವುದು ಎಂದು ಸಮ್ಮೇಳನ ಸಮಿತಿ ಅಧ್ಯಕ್ಷ *ಡಾ. ಕೆ. ಎನ್. ವೆಂಕಟ್ರಮಣ ಹೊಳ್ಳ ಹಾಗೂ ಕನ್ನಡ ಭವನದ ಸ್ಥಾಪಕ ಅಧ್ಯಕ್ಷ ಡಾ. ಕೆ. ವಾಮನ್ ರಾವ್…

Read More
error: Content is protected !!