ಕುಡ್ಲಕ್ಕೆ ಕಾಲಿಟ್ಟ “ಕೆಸಿಸಿಎಲ್ ಕುಡ್ಲಾ” ಹೆಸರಿನ ಕೇರಳ ವಿಷನ್ ಬ್ರಾಡ್ ಬ್ಯಾಂಡ್ ಅಧಿಕೃತವಾಗಿ ನಾಳೆ ಉದ್ಘಾಟನೆ …. !
ಮಂಗಳೂರು:ದೇಶದ ಅಂತರ್ಜಾಲ ವಿತರಣಾ ಕ್ಷೇತ್ರದಲ್ಲಿ ಆರನೇ ಅತಿ ದೊಡ್ಡ ಸೇವಾ ಪೂರೈಕೆದಾರರಲ್ಲೊಂದಾದ ಕೇರಳ ವಿಷನ್ ಬ್ರಾಡ್‌ಬ್ಯಾಂಡ್ ಇದೀಗ ಮಂಗಳೂರಿನಲ್ಲಿ ತನ್ನ ಸೇವೆಯನ್ನು “ಕೆಸಿಸಿಎಲ್ ಕುಡ್ಲಾ” ಎಂಬ ಹೆಸರಿನಲ್ಲಿ ವಿಸ್ತರಿಸಲು ಹೊರಟಿದ್ದು ನಗರದ ಬೆಂದೂರ್ವೆಲ್ ನಲ್ಲಿರುವ ಕಚೇರಿಯಲ್ಲಿ ಇದರ ಅಧಿಕೃತ ಉದ್ಘಾಟನೆಯನ್ನು ನಾಳೆ ಕರ್ನಾಟಕ ವಿಧಾನಸಭೆಯ ಸ್ಪೀಕರ್ ಯು.ಟಿ. ಖಾದರ್ ನೆರವೇರಿಸಲಿದ್ದಾರೆ ಎಂದು ಕೆಸಿಸಿಎಲ್ ಕುಡ್ಲಾ ಇದರ ಅಧ್ಯಕ್ಷರಾದ ಶುಕ್ಕೂರ್ ಕೋಳಿಕ್ಕರ ತಿಳಿಸಿದರು . ಅವರು ನಗರದ ಪ್ರತಿಷ್ಠಿತ ಹೋಟೆಲ್ ನಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಕೆಸಿಸಿಎಲ್ ಕುಡ್ಲಾ…
