ಸುಬ್ರಹ್ಮಣ್ಯ – ನಾಪತ್ತೆಯಾಗಿದ್ದ ಆಂಬ್ಯುಲೆನ್ಸ್ ಡ್ರೈವರ್ ಮೃತದೇಹ ಪತ್ತೆ

ಕಳೆದ ಕೆಲವು ದಿನಗಳ ಹಿಂದೆ ನಾಪತ್ತೆಯಾಗಿದ್ದ ಸುಬ್ರಹ್ಮಣ್ಯ ಪ್ರಾಥಮಿಕ ಆರೋಗ್ಯಕೇಂದ್ರದ ಆಂಬ್ಯುಲೆನ್ಸ್ ಡ್ರೈವರ್ ಮೃತದೇಹ ಕುಮಾರಧಾರ ನದಿಯಲ್ಲಿ ನೆನ್ನೆ ಪತ್ತೆಯಾಗಿದೆ.ಮೃತರನ್ನು ಸುಬ್ರಹ್ಮಣ್ಯ ದೇವರಗದ್ದೆ ನಿವಾಸಿ ಹೊನ್ನಪ್ಪ (52) ಎಂದು ಗುರುತಿಸಲಾಗಿದೆ. ಸುಬ್ರಹ್ಮಣ್ಯ ಪ್ರಾಥಮಿಕ ಆರೋಗ್ಯಕೇಂದ್ರದ ಆಂಬ್ಯುಲೆನ್ಸ್ ಡ್ರೈವರ್ ಆಗಿ ಕೆಲಸ ನಿರ್ವಹಿಸುತ್ತಿದ್ದ ಹೊನ್ನಪ್ಪ ಅವರು ಮಂಗಳವಾರದಿಂದ ನಾಪತ್ತೆಯಾಗಿದ್ದರು. ಅವರು ಕುಮಾರಧಾರ ನದಿ ಕಡೆಗೆ ಓಡುತ್ತಿರುವ ದೃಶ್ಯ ಸಿಸಿ ಕೆಮರಾದಲ್ಲಿ ಸೆರೆಯಾಗಿತ್ತು. ಈ ಹಿನ್ನಲೆ ನದಿಗೆ ಹಾರಿರಬಹುದು ಎಂಬ ಶಂಕೆ ಮೇರೆಗೆ ಕುಮಾರಧಾರ ನದಿಯಲ್ಲಿ ಅಂದು ರಾತ್ರಿಯಿಂದಲೇ ಹುಡುಕಾಟ…

Read More

ಕರಾವಳಿ ಜಿಲ್ಲೆಗಳಿಗೆ ಅಂತರ್ ರಾಜ್ಯಗಳಿಂದ ಭಾರಿ ಪ್ರಮಾಣದಲ್ಲಿ ಮೀನು ಪೂರೈಕೆ.

ಕರ್ನಾಟಕ ಕರಾವಳಿಯಲ್ಲಿ ಮೀನುಗಾರಿಕೆ ನಿಷೇಧವಿದ್ದರೂ, ತಮಿಳುನಾಡು, ಆಂಧ್ರಪ್ರದೇಶಗಳಿಂದ ಹೇರಳವಾಗಿ ಮೀನು ಮಂಗಳೂರಿಗೆ ಬರುತ್ತಿದೆ. ಕಮಿಷನ್ ಏಜೆಂಟರು ಹೊರ ರಾಜ್ಯಗಳ ವ್ಯಾಪಾರಿಗಳೊಂದಿಗೆ ವ್ಯವಹರಿಸಿ, ಪ್ರತಿದಿನ 40-50 ಲಾರಿಗಳಷ್ಟು ಮೀನು ತರಿಸುತ್ತಿದ್ದಾರೆ. ಆಗಸ್ಟ್ 1ರಿಂದ ಕರ್ನಾಟಕದಲ್ಲಿ ಮೀನುಗಾರಿಕೆ ಆರಂಭವಾಗಲಿದ್ದರೂ, ಹೊರ ರಾಜ್ಯಗಳಿಂದ ಮೀನು ಪೂರೈಕೆ ನಿರಂತರವಾಗಿ ಮುಂದುವರಿಯುತ್ತದೆ. ಕರ್ನಾಟಕ ಕರಾವಳಿಯಲ್ಲಿ ಜೂನ್ ಮತ್ತು ಜುಲೈನಲ್ಲಿಯೇ ಮೀನುಗಾರಿಕೆ ನಿಷೇಧವಿದ್ದು, ತಮಿಳುನಾಡು ಮತ್ತು ಆಂಧ್ರಪ್ರದೇಶದಿಂದ ಕರಾವಳಿ ಪ್ರದೇಶಕ್ಕೆ ಸಾಕಷ್ಟು ಪ್ರಮಾಣದಲ್ಲಿ ಮೀನು ಬರುತ್ತಿದೆ.ಮಂಗಳೂರು, ಮಲ್ಪೆ, ಕುಂದಾಪುರ, ಗಂಗೊಳ್ಳಿ, ಭಟ್ಕಳ, ಕುಮಟಾ, ಕಾರವಾರದಲ್ಲಿ 26…

Read More

ಲಾರಿ ಮತ್ತು ಕಾರಿನ ನಡುವೆ ಭೀಕರ ಅಪಘಾತ ನಾಲ್ವರು ಮೃತ್ಯು

‘ಲಾರಿ ಮತ್ತು ಕಾರಿನ ನಡುವೆ ಭೀಕರ ಅಪಘಾತ ಸಂಭವಿಸಿ ಕಾರಿನಲ್ಲಿದ್ದ ನಾಲ್ವರು ಮೃತಪಟ್ಟ ಘಟನೆ ಮಾಣಿ – ಮೈಸೂರು ರಾಷ್ಟ್ರೀಯ ಹೆದ್ದಾರಿಯ ದೇವರಕೊಲ್ಲಿ ಹೆದ್ದಾರಿಯ ಕೊಯನಾಡು ಎಂಬಲ್ಲಿ ಜು.25ರ ಶುಕ್ರವಾರ ನಡೆದಿದೆ. ನಿಹಾದ್, ರಿಸ್ವಾನ್, ರಾಶಿಬ್ ಮತ್ತು ರಿಶು ಮೃತಪಟ್ಟವರು ಎಂದು ಗುರುತಿಸಲಾಗಿದೆ. ಘಟನೆಯ ಪರಿಣಾಮ ಕಾರಿನಲ್ಲಿದ್ದ ನಾಲ್ವರಲ್ಲಿ ಇಬ್ಬರು ಸ್ಥಳದಲ್ಲೇ ಮೃತಪಟ್ಟರೆ, ಇನ್ನಿಬ್ಬರು ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ. ಮೃತದೇಹಗಳನ್ನು ಸುಳ್ಯದ ಆಸ್ಪತ್ರೆಗೆ ತರಲಾಗಿದ್ದು, ಪ್ರಕ್ರಿಯೆಗಳು ನಡೆಯುತ್ತಿದೆ. ಪೊಲೀಸರು ಸ್ಥಳ ಪರಿಶೀಲನೆ ನಡೆಸಿ, ಮಾಹಿತಿ ಪಡೆಯುತ್ತಿದ್ದಾರೆ.

Read More

ಆಗಸ್ಟ್ 1 ಹಾಗೂ 2 ರಂದು 15ನೇ ಆವೃತ್ತಿಯ ‘ಆಳ್ವಾಸ್ ಉದ್ಯೋಗ ಮೇಳ..!

ಮಂಗಳೂರು: ಮೂಡುಬಿದಿರೆಯ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನವು ಆಯೋಜಿಸಿಕೊಂಡು ಬರುತ್ತಿರುವ ಉದ್ಯೋಗ ಮೇಳದ 15ನೇ ಆವೃತ್ತಿಯು ಆಗಸ್ಟ್ 1 ಹಾಗೂ 2 ರಂದು ಮೂಡಬಿದ್ರೆಯ ವಿದ್ಯಾಗಿರಿಯಲ್ಲಿ ನಡೆಯಲಿದೆ ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವ್ಯವಸ್ಥಾಪಕ ಟ್ರಸ್ಟಿ ವಿವೇಕ್ ಆಳ್ವ ತಿಳಿಸಿದ್ದಾರೆ. ಮಂಗಳೂರಿನ ಪತ್ರಿಕಾಭವನದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು 2007 ರಲ್ಲಿ ಪ್ರಾರಂಭವಾದ ಆಳ್ವಾಸ್ ಪ್ರಗತಿ ಉದ್ಯೋಗಮೇಳವು ವೃತ್ತಿ ಆಕಾಂಕ್ಷಿಗಳಿಗೆ ಸದಾ ಉದ್ಯೋಗಾವಕಾಶಗಳನ್ನು ನೀಡುತ್ತಾ ಬಂದಿದ್ದು ಈ ಮೇಳವು ವಿಶೇಷವಾಗಿ ಗ್ರಾಮೀಣ ಮತ್ತು ಸವಲತ್ತುಗಳಿಲ್ಲದ ವರ್ಗಗಳ ಪ್ರತಿಭೆಗಳಿಗೆ ಉದ್ಯೋಗ ಅವಕಾಶಕೊಡಿಸುವ…

Read More

ಹೈದರಾಬಾದ್ ,ಮುಂಬೈ,ಬೆಂಗಳೂರು ,ಅಹಮದಾಬಾದ್ ನಡೆದ ಭಯೋತ್ಪಾದನಾ ದಾಳಿಯ ಹಿನ್ನಲೆಯಲ್ಲಿ ಬಂದಿಯಾಗಿದ್ದ ಆರೋಪಿ ಯಾಸೀನ್ ಭಟ್ಕಳ ವಿಚಾರಣೆ ಮತ್ತೆ ಆರಂಭ

ಹೈದರಾಬಾದ್ ,ಮುಂಬೈ,ಬೆಂಗಳೂರು ,ಅಹಮದಾಬಾದ್ ನಡೆದ ಭಯೋತ್ಪಾದನಾ ದಾಳಿಯ ಹಿನ್ನಲೆಯಲ್ಲಿ 04-10-2008 ರಂದು ಬಂಧಿಸಲಾಗಿದ್ದ ಯಾಸೀನ್ ಭಟ್ಕಳ ವಿಚಾರಣೆ ಮತ್ತೆ ಆರಂಭವಾಗಿದೆ ನಿಷೇಧಿತ ಇಂಡಿಯನ್ ಮುಜಾಹಿದ್ದೀನ್ ಸಂಘಟನೆ ಯೊಂದಿಗೆ ನಂಟು ಇಟ್ಟುಕೊಂಡಿದ್ದ ಭಯೋತ್ಪಾದನಾ ಕೃತ್ಯಗಳಲ್ಲಿ ತೊಡಗಿಸಿಕೊಂಡಿದ್ದ ಯಾಸೀನ್ ಭಟ್ಕಳ ವಿರುದ್ಧ ದೇಶದ ವಿವಿಧ ಕಡೆಗಳಲ್ಲಿ ಭಯೋತ್ಪಾದನಾ ಕೃತ್ಯ ಎಸಗಲು ಪೂರ್ವ ತಯಾರಿ ಆರೋಪ ಮತ್ತು ಸ್ಪೋಟಕ ವಸ್ತುಗಳನ್ನು ಹಾಗೂ ಸ್ಪೋಟಕಗಳನ್ನು ತಯಾರಿಸುವ ವಸ್ತುಗಳನ್ನು ತನ್ನ ಬಳಿ ಇಟ್ಟುಕೊಂಡ ಆರೋಪದಲ್ಲಿ ಮಂಗಳೂರಿನ ಉಳ್ಳಾಲ ಠಾಣೆಯಲ್ಲಿ ಕೇಸ್ ದಾಖಲಾಗಿತ್ತು, ದಕ್ಷಿಣ ಕನ್ನಡ…

Read More

ಕುಳೂರು ಸೇತುವೆಯಲ್ಲಿ ವಾಹನ ಸಂಚಾರ ಸುಗಮ

ರಾಷ್ಟ್ರೀಯ ಹೆದ್ದಾರಿ 66 ರ ಕೆಐಒಸಿಎಲ್ ಜಂಕ್ಷನ್ ಮತ್ತು ಕೂಳೂರು ಕಮಾನು ಸೇತುವೆಯ ನಡುವಿನ ರಸ್ತೆ ದುರಸ್ತಿ ಕಾರ್ಯ ನಡೆಯುತ್ತಿದ್ದ ಕಾರಣ ವಾಹನ ಸಂಚಾರಕ್ಕೆ ತೀವ್ರ ಅಡ್ಡಿ ಉಂಟಾಗಿತ್ತು. ಇದೀಗ ಮತ್ತೆ ಕುಳೂರು ಸೇತುವೆಯಲ್ಲಿ ವಾಹನ ಸಂಚಾರ ಸುಗಮವಾಗಿದೆ. ಜುಲೈ 22ರ ಸಂಜೆ ಮೊದಲ ಬಾರಿಗೆ ಭಾರೀ ವಾಹನ ದಟ್ಟಣೆ ಕಂಡುಬಂದಿತ್ತು. ಜುಲೈ 23ರಂದು ಇಡೀ ದಿನ ಕೊಟ್ಟಾರ-ಪಣಂಬೂರು ಮಾರ್ಗದಲ್ಲಿ ವಾಹನಗಳು ಸಾಲುಗಟ್ಟಿ ನಿಂತಿದ್ದವು. ವಾಹನಗಳ ಸಂಚಾರವನ್ನು ಪರಿಣಾಮಕಾರಿಯಾಗಿ ಸುಗಮಗೊಳಿಸಲು ಸಾಧ್ಯವಾಗದೆ ಪೊಲೀಸರು ಪರದಾಡಿದ್ದರು. ಬುಧವಾರ, ಕುಳೂರಿನ…

Read More

ಧರೆಗುರುಳಿದ ಶತಾಯುಷಿ ಬೃಹತ್ ಮರ.ತಪ್ಪಿದ ಭಾರೀ ಅನಾಹುತ

ಕಾಸರಗೋಡು:ಕಾಞಂಗಾಡ್ ರಾಜ್ಯ ಹೆದ್ದಾರಿಯಲ್ಲಿ ಬರುವ ಚಾಮುಂಡಿಕುನ್ನು ಪರಿಸರದಲ್ಲಿ ವ್ಯಾಪಕವಾಗಿ ಸುರಿದ ಮಳೆ ಹಾಗೂ ಬಲವಾಗಿ ಬೀಸಿದ ಗಾಳಿಯ ಪರಿಣಾಮ ಚಿತ್ತಾರಿ ವಿಲೇಜ್ ಆಫೀಸ್ ಬಳಿಯ ಬೃಹತ್ ತ್ತಾದ ಮರವೊಂದು ಧರೆಗೆ ಉರುಳಿದೆ . ಪರಿಣಾಮ ಕಾರೊಂದು ಜಕ್ಕಮ್ ಆಗಿದೆ ಜೊತೆಗೆ ಪಕ್ಕದಲ್ಲಿದ್ದ ವಿದ್ಯುತ್ ಕಂಬಕ್ಕೆ ರೆಂಬೆ ಕೊಂಬೆಗಳು ಬಿದ್ದ ಪರಿಣಾಮ ವಿದ್ಯುತ್ ತಂತಿ ತುಂಡಾಗಿ ರೋಡ್ ಗೆ ಬಿದ್ದಿದೆ . ಪರಿಣಾಮ ಕೆಲಕಾಲ ವಾಹನ ಸಂಚಾರದಲ್ಲಿ ವ್ಯತ್ಯಾಸ ಉಂಟಾಯಿತು . ಕೆಲ ದಿನಗಳ ಹಿಂದೆ ಈ ಮರವನ್ನು…

Read More

ಮಂಜೇಶ್ವರದ ಅಂಬಿತ್ತಾಡಿಯಲ್ಲಿ ದೈತ್ಯಾಕಾರದ ಮರವೊಂದು ಧಾರಾಶಾಯಿ.ಅಸ್ತವ್ಯಸ್ತಗೊಂಡ ಸಂಚಾರ ವ್ಯವಸ್ಥೆಯನ್ನು ಸ್ಥಳೀಯರ ಸಹಕಾರದೊಂದಿಗೆ ಸರಿಪಡಿಸಿದ ವಾರ್ಡ್ ಸದಸ್ಯೆ

ಮಂಜೇಶ್ವರ: ಮಂಜೇಶ್ವರ ಗ್ರಾಮ ಪಂಚಾಯತು ವ್ಯಾಪ್ತಿಯ 7ನೇ ವಾರ್ಡ್ ಅಂಬಿತ್ತಾಡಿಯಲ್ಲಿ ದೈತ್ಯಾಕಾರದ ಮರವೊಂದು ರಸ್ತೆಗೆ ಬಿದ್ದು ಸುಮಾರು ವಾರಗಳ ಕಾಲ ಸಂಚಾರ ಸಂಪೂರ್ಣ ಸ್ಥಗಿತಗೊಂಡಿತ್ತು. ದಿನನಿತ್ಯದ ಓಡಾಟದಲ್ಲಿ ಸಮಸ್ಯೆ ಎದುರಿಸುತ್ತಿದ್ದ ಸ್ಥಳೀಯರಿಗೆ ಬಹಳ ಅಡಚಣೆಯಾಗಿತ್ತು. ರಸ್ತೆಗೆ ಅಡ್ಡವಾಗಿ ಬಿದ್ದ ಈ ಮರ, ಸ್ಥಳೀಯ ನಿವಾಸಿಗಳ ಮತ್ತು ವಾಹನ ಸವಾರರ ಸಂಚಾರಿ ಜೀವನವನ್ನು ಸಂಪೂರ್ಣವಾಗಿ ಅಸ್ತವ್ಯಸ್ತಗೊಳಿಸಿತ್ತು. ಸಂಬಂಧಿತ ಇಲಾಖೆಗಳಿಂದ ನಿರೀಕ್ಷಿಸಿದ ನೆರವು ತಡವಾಗುತ್ತಿದ್ದ ಸಂದರ್ಭದಲ್ಲಿ 7ನೇ ವಾರ್ಡ್‌ನ ಸದಸ್ಯೆ ಶ್ರೀಮತಿ ರುಬೀನಾ ಅವರು ಮುಂದಾಗಿದ್ದು, ಊರಿನ ಯುವಕರು ಹಾಗೂ…

Read More

ಕೊಂಡೆವೂರು: ಶ್ರೀ ನಿತ್ಯಾನಂದ ಯೋಗಾಶ್ರಮದಲ್ಲಿ ಕಾರ್ಗಿಲ್ ವಿಜಯ ದಿವಸ ಕಾರ್ಯಕ್ರಮ ನಾಳೆ

ಉಪ್ಪಳ :ಕೊಂಡೆವೂರು: ಶ್ರೀ ನಿತ್ಯಾನಂದ ಯೋಗಾಶ್ರಮದಲ್ಲಿ ಕಾರ್ಗಿಲ್ ವಿಜಯ ದಿವಸ ಕಾರ್ಯಕ್ರಮ ನಾಳೆ ನಡೆಯಲಿದೆ.ಬೆಳಗ್ಗೆ 10 ಗಂಟೆಗೆ ನಡೆಯುವ ಕಾರ್ಯಕ್ರಮವನ್ನು ಯೋಗಾಶ್ರಮದ ಪರಮಪೂಜ್ಯ ಶ್ರೀ ಶ್ರೀ ಶ್ರೀ ಯೋಗಾನಂದ ಸರಸ್ವತಿ ಸ್ವಾಮೀಜಿ ದೀಪ ಬೆಳಗಿಸಿ ಉಧ್ಘಾಟಿಸಿ ಆಶೀರ್ವಚನ ನೀಡುವರು.ಈ ಸಂಧರ್ಭದಲ್ಲಿ ನಡೆಯುವ ಸಭಾ ಕಾರ್ಯಕ್ರಮದಲ್ಲಿ ಏಷ್ಯಾನೆಟ್ ಸುವರ್ಣ ವಾಹಿನಿಯ ಸುದ್ದಿ ಸಂಪಾದಕ ಅಜಿತ್ ಹನುಮಕ್ಕ ನವರು ಮುಖ್ಯ ಭಾಷಣ ಮಾಡಲಿದ್ದಾರೆ. ಕಾರ್ಗಿಲ್ ಯುದ್ಧ ವೀರ ಹವಲ್ದಾರ್ ಜಾನಿ ಮಾಥು ರಾಜಪುರಂ ಉಪಸ್ಥಿತರಿರುವರು, ಬ್ರಿಗೇಡಿಯರ್ ಐ.ಎನ್.ರೈ ಕುಂಬಳೆ, ಕಮಾಂಡರ್…

Read More

ಮಂಗಳೂರು ನಗರದಲ್ಲಿ ಮತ್ತೆ ಫ್ಲೆಕ್ಸ್ ಹಾವಳಿ -ತ್ವರಿತ ಕಾರ್ಯಾಚರಣೆ ನಡೆಸಬೇಕೆಂದು ಸಾರ್ವಜನಿಕರ ಆಗ್ರಹ

ಮಂಗಳೂರು ನಗರದಲ್ಲಿ ಮತ್ತೆ ಫ್ಲೆಕ್ಸ್ ಹಾವಳಿ ಶುರುವಾಗುವ ಸಾಧ್ಯತೆ ಎದ್ದು ಕಾಣ್ತಾ ಇದೆ . ಈ ಮೂಲಕ ಹಳೆ ಚಾಳಿ ಮುಂದುವರೆದಿದೆ . ಮಹಾನಗರ ಪಾಲಿಕೆ ಇವುಗಳ ಮೇಲೆ ಕಣ್ಣಿಟ್ಟು ತ್ವರಿತ ಕಾರ್ಯಾಚರಣೆ ನಡೆಸಬೇಕು ಎಂಬ ಆಗ್ರಹ ಸಾರ್ವಜನಿಕ ವಲಯದಿಂದ ಕೇಳಿಬಂದಿದೆ. ಕೆಲವು ತಿಂಗಳ ಹಿಂದೆ ನಿರಂತರ ಕಾರ್ಯಾಚರಣೆ ಮೂಲಕ ಮಂಗಳೂರು ನಗರವನ್ನು ಪ್ಲೆಕ್ಸ್ ಮುಕ್ತಗೊಳಿಸುವಲ್ಲಿ ಪಾಲಿಕೆ ಯಶಸ್ವಿಯಾಗಿತ್ತು. ಆದರೆ ಮುಂಗಾರು ಆರಂಭದ ಬೆನ್ನಲೇ ಈ ಕಾರ್ಯಾಚರಣೆಯ ವೇಗ ಕುಗ್ಗಿತ್ತು ,ಇದೀಗ ಮತ್ತೆ ಕೆಲವು ಕಡೆಗಳಲ್ಲಿ ಪ್ಲೆಕ್ಸ್‌…

Read More
error: Content is protected !!