Avatar

NAMMA MEDIA 24X7

ಶ್ರೀ ಚೌಕರು ಗುಳಿಗ-ಕೊರಗ ತನಿಯ ಸನ್ನಿದಿಯಲ್ಲಿ ವಾರ್ಷಿಕ ಕೋಲದ ಆಮಂತ್ರಣ ಪತ್ರಿಕೆ ಬಿಡುಗಡೆ

ಶ್ರೀ ಚೌಕರು ಗುಳಿಗ, ಶ್ರೀ ಕೊರಗ ತನಿಯ ಸನ್ನಿದಿ ದೊಡ್ಡ ಹಿತ್ತಿಲು ಮಠ ಮೊಗ್ರಾಲ್ ಪುತ್ತೂರು , ಮೇ 23, 2026ರಂದು ನಡೆಯಲಿರುವ ವಾರ್ಷಿಕ ಕೋಲದ ಆಮಂತ್ರಣ ಪತ್ರಿಕೆ ಬಿಡುಗಡೆ ಕಾರ್ಯಕ್ರಮ ಭಕ್ತಿಭಾವದಿಂದ ನೆರವೇರಿತು. ಸನ್ನಿಧಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಶ್ರೀ ಚಾಮುಂಡೇಶ್ವರಿ ಭಜನಾ ಮಂದಿರದ ಆಡಳಿತ ಸಮಿತಿ ಅಧ್ಯಕ್ಷರಾದ ಶ್ರೀದರ ನಡುಹಿತ್ಲು ಅವರ ಸಮ್ಮುಖದಲ್ಲಿ ಆಮಂತ್ರಣ ಪತ್ರಿಕೆಯನ್ನು ಬಿಡುಗಡೆ ಮಾಡಲಾಯಿತು. ಈ ಸಂದರ್ಭದಲ್ಲಿ ದೈವದಪಾತ್ರಿ ಶ್ರೀ ರಾಮ ಪಂಜದಗುಡ್ಡೆ, ಮಂದಿರದ ಅರ್ಚಕರಾದ ಶ್ರೀ ಪ್ರಭಾಕರ ದೊಡ್ಡಹಿತ್ಲು, ಶ್ರೀ…

Read More

ಆಸ್ಪತ್ರೆಯ ವೆರಾಂಡಾದಲ್ಲಿ

​ನಮ್ಮ ಅಕ್ಕನಿಗೆ ವೈದ್ಯರ ಸೂಚನೆಯಂತೆ ಇಕೋ ಕಾರ್ಡಿಯೋಗ್ರಾಫಿ (Echocardiography) ಮಾಡಿಸಲು ಕಾಸರಗೋಡಿನ ಖ್ಯಾತ ವೈದ್ಯರ ಭೇಟಿಗಾಗಿ ಹೋದ ಸಂದರ್ಭ ಅದು. ಆಸ್ಪತ್ರೆಯ ಒಳಗಿನ ಮುಚ್ಚಿದ ಕೋಣೆಯಲ್ಲಿ ಅತ್ಯಾಧುನಿಕ ವೈದ್ಯಕೀಯ ಉಪಕರಣಗಳು ಮನುಷ್ಯನ ಹೃದಯದ ಬಡಿತವನ್ನು ಯಾಂತ್ರಿಕವಾಗಿ ಅಳೆಯುತ್ತಿದ್ದರೆ, ಹೊರಗಿನ ಸುದೀರ್ಘ ಕಾರಿಡಾರ್‌ನಲ್ಲಿ ಮಾತ್ರ ಇಡೀ ಬದುಕಿನ ನಾಡಿಮಿಡಿತವೇ ನಲ್ಲಿ ತೆರೆದುಕೊಂಡಿತ್ತು. ಈ ಕಾಂಕ್ರೀಟ್ ಕಾರಿಡಾರ್ ಕೇವಲ ಕಾಯುವಿಕೆಗಾಗಿ ಇರುವ ಶೂನ್ಯ ಜಾಗವಲ್ಲ; ಅದು ಮನುಷ್ಯನ ಕಣ್ಣೀರ ಅಸಹಾಯಕತೆ, ಪ್ರಾರ್ಥನೆಯ ಭರವಸೆ, ನಿಶ್ಶಬ್ದ ಪ್ರೀತಿ ಮತ್ತು ಕಡು ನಿರಾಸೆಗಳು…

Read More

ಭೋವಿ ಜನಾಂಗಕ್ಕೆ ಜಾತಿ ಪ್ರಮಾಣ ಪತ್ರ ನಿರಾಕರಣೆ ಆರೋಪ: ಜಿಲ್ಲಾಡಳಿತದ ವಿರುದ್ಧ ಅಸಮಾಧಾನ

ಕರ್ನಾಟಕದ ಅವಿಭಾಜ್ಯ ಭಾಗವಾಗಿರುವ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳಲ್ಲಿ ಭೋವಿ ಜನಾಂಗದವರಿಗೆ ಜಾತಿ ಪ್ರಮಾಣ ಪತ್ರ ನೀಡುವುದನ್ನು ಕಳೆದ 7-8 ವರ್ಷಗಳಿಂದ ನಿರಾಕರಿಸಲಾಗುತ್ತಿದೆ ಎಂಬ ಆರೋಪ ಕೇಳಿಬಂದಿದೆ. ಈ ಕುರಿತು ಪ್ರತಿಕ್ರಿಯಿಸಿರುವ ಭೋವಿ ಸಮಾಜದ ಯುವ ಮುಖಂಡ ಪವನ್ ಕುಮಾರ್, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸುಮಾರು 30 ಸಾವಿರ ಹಾಗೂ ಉಡುಪಿ ಜಿಲ್ಲೆಯಲ್ಲಿ ಸುಮಾರು 40 ಸಾವಿರ ಭೋವಿ ಸಮುದಾಯದ ಜನರು ವಾಸವಾಗಿದ್ದು, ರಾಜ್ಯದ ಇತರ 31 ಜಿಲ್ಲೆಗಳಲ್ಲಿ ಜಾರಿಯಲ್ಲಿರುವ ಒಂದೇ ಕಾನೂನು ಈ ಎರಡು…

Read More

ಬ್ರಿಕ್ಸ್ ಶೃಂಗಸಭೆಗೂ ಮುನ್ನ ಭಾರತಕ್ಕೆ ಜಾಗತಿಕ ಗಮನ: ಕ್ಸಿ ಜಿನ್‌ಪಿಂಗ್, ಪುಟಿನ್ ಭೇಟಿ ಸಾಧ್ಯತೆ

ಈ ವರ್ಷದ ಬ್ರಿಕ್ಸ್ (BRICS) ಶೃಂಗಸಭೆಯ ಅಧ್ಯಕ್ಷತೆಯನ್ನು ಭಾರತ ವಹಿಸಿಕೊಳ್ಳುತ್ತಿರುವ ಹಿನ್ನೆಲೆ, ಜಾಗತಿಕ ರಾಜತಾಂತ್ರಿಕ ವಲಯದಲ್ಲಿ ದೇಶ ಮತ್ತೊಮ್ಮೆ ಕೇಂದ್ರಬಿಂದುವಾಗಿದ್ದು, ಸೆಪ್ಟೆಂಬರ್ 12 ಮತ್ತು 13ರಂದು ನವದೆಹಲಿಯಲ್ಲಿ ನಡೆಯಲಿರುವ ಶೃಂಗಸಭೆ ಭಾರೀ ಮಹತ್ವ ಪಡೆದುಕೊಂಡಿದೆ. ಆರ್ಥಿಕ ಮತ್ತು ಭೌಗೋಳಿಕ ರಾಜಕೀಯ ಚರ್ಚೆಗಳ ಜೊತೆಗೆ, ಭಾರತ-ಚೀನಾ ನಡುವಿನ ದೀರ್ಘಕಾಲದ ಬಿಕ್ಕಟ್ಟಿನ ಸಂಬಂಧಗಳಿಗೆ ಹೊಸ ತಿರುವು ಸಿಗುವ ಸಾಧ್ಯತೆಯೂ ಈ ಸಮ್ಮೇಳನದಿಂದ ಮೂಡಿದೆ. ಚೀನಾದ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಅವರು ಶೃಂಗಸಭೆಯಲ್ಲಿ ಭಾಗವಹಿಸಲು ಭಾರತಕ್ಕೆ ಆಗಮಿಸುವ ಸಾಧ್ಯತೆ ದಟ್ಟವಾಗಿದ್ದು, ಅವರು…

Read More

ಅಮೆರಿಕದ ‘ಆಪರೇಶನ್ ಎಪಿಕ್ ಫ್ಯೂರಿ’ಗೆ ಭಾರೀ ನಷ್ಟ: ಕಾಂಗ್ರೆಸ್ ಅಧೀನದ CRS ವರದಿ ಬಹಿರಂಗ

ಇರಾನ್ ವಿರುದ್ಧ ಅಮೆರಿಕ ನಡೆಸುತ್ತಿರುವ ‘ಆಪರೇಶನ್ ಎಪಿಕ್ ಫ್ಯೂರಿ’ ಕಾರ್ಯಾಚರಣೆಯಲ್ಲಿ ಅಮೆರಿಕ ಸೇನೆಗೆ ಭಾರೀ ನಷ್ಟ ಉಂಟಾಗಿದೆ ಎಂದು ಅಮೆರಿಕ ಕಾಂಗ್ರೆಸ್ ಅಧೀನದ ಸಂಸತ್ತೀಯ ಸಂಶೋಧನಾ ಸೇವೆ (CRS) ವರದಿ ಬಹಿರಂಗಪಡಿಸಿದೆ. ಫೆಬ್ರವರಿ 28ರಿಂದ ಆರಂಭವಾದ ಕಾರ್ಯಾಚರಣೆಯಲ್ಲಿ ಅಮೆರಿಕದ 42 ಯುದ್ಧ ವಿಮಾನಗಳು ಹಾಗೂ ಡ್ರೋನ್‌ಗಳು ಹಾನಿಗೊಳಗಾಗಿವೆ ಅಥವಾ ನಾಶವಾಗಿವೆ ಎಂದು ವರದಿಯಲ್ಲಿ ತಿಳಿಸಲಾಗಿದೆ. ಹಾನಿಗೊಳಗಾದವುಗಳಲ್ಲಿ F-15E, F-35A, A-10 ಯುದ್ಧ ವಿಮಾನಗಳು, KC-135 ಇಂಧನ ಪೂರೈಕೆ ವಿಮಾನಗಳು, E-3 ಸೆಂಟ್ರಿ AWACS ಹಾಗೂ ವಿಶೇಷ ಕಾರ್ಯಾಚರಣೆ…

Read More

ಆನ್‌ಲೈನ್ ಔಷಧ ಮಾರಾಟ ವಿರೋಧಿಸಿ ದೇಶವ್ಯಾಪಿ ಪ್ರತಿಭಟನೆ: ಕರ್ನಾಟಕದಲ್ಲಿ ಮಿಶ್ರ ಪ್ರತಿಕ್ರಿಯೆ

ಆನ್‌ಲೈನ್ ಮೂಲಕ ನಡೆಯುತ್ತಿರುವ ಔಷಧ ಮಾರಾಟ ವಿರೋಧಿಸಿ ಅಖಿಲ ಭಾರತ ಔಷಧ ವ್ಯಾಪಾರಿಗಳ ಸಂಘ (AIOCD) ಕರೆ ನೀಡಿದ್ದ ದೇಶವ್ಯಾಪಿ ಮೆಡಿಕಲ್ ಶಾಪ್ ಬಂದ್‌ಗೆ ಕರ್ನಾಟಕದಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ರಾಜ್ಯದ ಕೆಲವು ವ್ಯಾಪಾರ ಸಂಘಟನೆಗಳು ಸಂಪೂರ್ಣ ಬಂದ್‌ಗೆ ಬೆಂಬಲ ಸೂಚಿಸಿದರೆ, ಇನ್ನೂ ಕೆಲವು ಸಂಘಟನೆಗಳು ಕಪ್ಪುಪಟ್ಟಿ ಧರಿಸಿ ನೈತಿಕ ಬೆಂಬಲ ವ್ಯಕ್ತಪಡಿಸಿ ಅಂಗಡಿಗಳನ್ನು ತೆರೆಯುವ ನಿರ್ಧಾರ ಕೈಗೊಂಡಿವೆ. ರಾಜ್ಯದಲ್ಲಿ ಸುಮಾರು 26 ಸಾವಿರಕ್ಕೂ ಅಧಿಕ ಮೆಡಿಕಲ್ ಶಾಪ್‌ಗಳಿದ್ದು, ಬೆಂಗಳೂರಿನಲ್ಲಿ ಶೇಕಡಾ 90ರಷ್ಟು ಅಂಗಡಿಗಳು ಎಂದಿನಂತೆ ಕಾರ್ಯನಿರ್ವಹಿಸುತ್ತಿವೆ….

Read More

ಇಂಧನ ಬೆಲೆ ಏರಿಕೆ ನಡುವೆಯೂ ಬಸ್ ದರ ಹೆಚ್ಚಳ ಇಲ್ಲ: ದಕ್ಷಿಣ ಕನ್ನಡ ಬಸ್ ಮಾಲಕರ ಸಂಘ

ಜಾಗತಿಕ ಮಟ್ಟದಲ್ಲಿ ಇಂಧನ ತೈಲ ಬೆಲೆ ನಿರಂತರ ಏರಿಕೆಯಾಗುತ್ತಿರುವ ನಡುವೆಯೂ ಮುಂದಿನ ಒಂದು ತಿಂಗಳವರೆಗೆ ಬಸ್ ದರ ಹೆಚ್ಚಳ ಮಾಡದಿರಲು ದಕ್ಷಿಣ ಕನ್ನಡ ಬಸ್ ಮಾಲಕರ ಸಂಘ ತೀರ್ಮಾನಿಸಿದೆ ಎಂದು ಸಂಘದ ಅಧ್ಯಕ್ಷ ಅಝೀಝ್ ಪರ್ತಿಪ್ಪಾಡಿ ತಿಳಿಸಿದ್ದಾರೆ. ಮಂಗಳವಾರ ನಡೆದ ದಕ್ಷಿಣ ಕನ್ನಡ ಬಸ್ ಮಾಲಕರ ಸಂಘದ ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಸ್ತುತ ಪರಿಸ್ಥಿತಿಯಲ್ಲಿ ವಾಹನಗಳ ಬಿಡಿಭಾಗಗಳು, ಪೆಟ್ರೋಲ್, ಡೀಸೆಲ್ ಹಾಗೂ ಇಂಜಿನ್ ಆಯಿಲ್ ಬೆಲೆಗಳು ಗಣನೀಯವಾಗಿ ಏರಿಕೆಯಾಗಿರುವುದರಿಂದ ಸಾರಿಗೆ ನಿರ್ವಹಣಾ ವೆಚ್ಚ ಹೆಚ್ಚಾಗಿದೆ…

Read More

ಗಡಿನಾಡು ಕನ್ನಡ ಸೇವೆಗೆ ರಾಜ್ಯ ಮಟ್ಟದ ಗೌರವ: ಡಾ. ವಾಮನ್ ರಾವ್ ಬೇಕಲ್ ಹಾಗೂ ಸಂಧ್ಯಾರಾಣಿ ಟೀಚರ್ ದಂಪತಿಗೆ “ಕರುನಾಡ ಕನ್ನಡ ಗಡಿನಾಡು ಪೋಷಕ ರತ್ನ” ಪ್ರಶಸ್ತಿ

ಕರುನಾಡ ಕನ್ನಡ ಸಾಹಿತ್ಯ ಹಾಗೂ ಸಾಂಸ್ಕೃತಿಕ ಬಳಗ(ರಿ), ಬೆಂಗಳೂರು ವತಿಯಿಂದ ನೀಡಲಾಗುವ ರಾಜ್ಯ ಮಟ್ಟದ “ಕರುನಾಡ ಕನ್ನಡ ಗಡಿನಾಡು ಪೋಷಕ ರತ್ನ” ಪ್ರಶಸ್ತಿಗೆ ಗಡಿನಾಡು ಕಾಸರಗೋಡಿನ ಕನ್ನಡ ಸೇವಾ ಕ್ಷೇತ್ರದಲ್ಲಿ ವಿಶಿಷ್ಟ ಸೇವೆ ಸಲ್ಲಿಸುತ್ತಿರುವ ಡಾ. ವಾಮನ್ ರಾವ್ ಬೇಕಲ್ ಹಾಗೂ ಶ್ರೀಮತಿ ಸಂಧ್ಯಾರಾಣಿ ಟೀಚರ್ ದಂಪತಿ ಆಯ್ಕೆಯಾಗಿದ್ದಾರೆ. ಮೇ 25ರಂದು ಹಾವೇರಿ ಜಿಲ್ಲೆಯ ಡಾ. ಬಿ.ಆರ್. ಅಂಬೇಡ್ಕರ್ ಸಭಾಭವನದಲ್ಲಿ ನಡೆಯಲಿರುವ ರಾಜ್ಯ ಮಟ್ಟದ ಎರಡನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ. ಗಡಿನಾಡು…

Read More

ಕಾಸರಗೋಡಿನ ತಳ ಮಟ್ಟದ ಬಂಟರ ಏಳಿಗೆಗಾಗಿ ಹೊಸ ಬಂಟ ಸಂಘಟನೆ ಅಸ್ತಿತ್ವಕ್ಕೆ ರೂಪುರೇಷೆ

ಮಹಾದಾನಿ ಕುಳೂರು ಕನ್ಯಾನ ಸದಾಶಿವ ಶೆಟ್ಟಿ ನೇತೃತ್ವದಲ್ಲಿ ನಡೆದ ಸಮಾನ ಮನಸ್ಕ ಬಂಟರ ಸಭೆ ಮಂಜೇಶ್ವರ : ಕಾಸರಗೋಡಿನ ಕೆಳಮಟ್ಟದ ಬಂಟರ ಏಳಿಗೆ ಮತ್ತು ಬಂಟರ ಭವನ ನಿರ್ಮಾಣದ ಸದುದ್ದೇಶವನ್ನು ಮುಂದಿಟ್ಟುಕೊಂಡು ಮಹಾದಾನಿ ಕುಳೂರು ಕನ್ಯಾನ ಸದಾಶಿವ ಶೆಟ್ಟಿಯವರ ನೇತೃತ್ವದಲ್ಲಿ ಸಮಾನ ಮನಸ್ಸಿನ ಬಂಟರು ಭಾಗಿಯಾಗಿ ಕಾಸರಗೋಡು ಬಂಟ ಸಮಾಜದ ಸರ್ವತೋಮುಖ ಏಳಿಗೆಯ ಬಗ್ಗೆ ತೀವ್ರ ಚರ್ಚೆ ನಡೆಯಿತು.ಸದಾಶಿವ ಶೆಟ್ಟಿಯವರ ಅಧ್ಯಕ್ಷತೆಯಲ್ಲಿ ಅವರ ಹೊಸ ನಿವಾಸ ಶ್ರೀಲಿಲಾ ಸದನದಲ್ಲಿ ನಡೆದ ಸಭೆಯಲ್ಲಿ ಮಹತ್ವದ ನಿರ್ಧಾರ ಮಾಡಲಾಯಿತು. ಸಭೆಯಲ್ಲಿ…

Read More

ಅಶ್ವಮೇಧಾ

ಊರಲ್ಲಿ ನಾನು ಒಂದು ಕಡೆಯಿಂದ ಇನ್ನೊಂದು ಕಡೆಗೆ ಹೋಗಬೇಕೆಂದರೆ ಸ್ಕೂಟರಲ್ಲಿ ಹೋಗುತ್ತೇನೆ. ಒಂದು ಕಾಲವಿತ್ತು, ನಾವು ಎಲ್ಲಿಂದ ಎಲ್ಲಿಗೆ ಹೋಗಬೇಕಾದರೂ ಬಸ್ಸು ಹೋಗುವ ಮಾರ್ಗದವರಿಗೆ ನಡೆದುಕೊಂಡು ಹೋಗಿ ಆಮೇಲೆ ಬಸ್ ಹತ್ತಿ ಹೋಗಬೇಕಿತ್ತು. ಬಸ್ಸು ತಪ್ಪಿ ಹೋದರಂತೂ ಗಂಟೆ ಗಂಟೆ ಬಸ್ಟ್ಯಾಂಡಿನಲ್ಲಿ ನಿಂತು ಕಾಯಬೇಕಾಗಿತ್ತು. ಈಗ ಒಂದು ಹತ್ತು ವರ್ಷದ ಹಿಂದೆ ಸ್ಕೂಟರ್ ತಗೊಂಡ ಮೇಲೆ ಬಸ್ ಹತ್ತಿದ ನೆನಪೇ ಇಲ್ಲ. ಇದೇ ವೇಳೆಗೆ ಸಿದ್ದರಾಮಯ್ಯನ ಸರಕಾರವು ಮಹಿಳೆಯರಿಗೆ ಉಚಿತ ಪ್ರಯಾಣವನ್ನು ಘೋಷಿಸಿತು. ಈಗ ಸ್ಕೂಟರ್ ನಲ್ಲಿ…

Read More
error: Content is protected !!