“ಪತಿದೇವರು”

ಒಂದು ಊರಲ್ಲಿ ಗಂಡ ಹೆಂಡತಿ ಇದ್ರು, ಹೆಂಡತಿ ಜಗಳಗಂಟಿಯಾಗಿದ್ದಳು, ಪ್ರತೀ ದಿನ ಯಾವುದಾದರೂ ಒಂದು ಕಾರಣ ಇಟ್ಕೊಂಡು, ಗಂಡನ ಜೊತೆಗೆ ಜಗಳ ಮಾಡುತ್ತಿದ್ದಳು,ಕಾರಣ ಅವಳು ತಂದೆ ತಾಯಿ ಮುದ್ದಿನಿಂದ ಸಾಕಿದ ಅವರ ಒಬ್ಬಳೇ ಮಗಳು, ನನ್ನನ್ನು ಗಂಡ ಬಿಟ್ಟರೂ ಕೊನೆವರೆಗೂ ಹೆತ್ತವರು ನೋಡಿಯಾರು ಎಂಬ ಭ್ರಮೆ ಅವಳ ಮನಸ್ಸಿನಲ್ಲಿತ್ತು ಹೀಗೆ ಮುಂದುವರಿದು ಒಂದು ದಿನ ಗಂಡನಲ್ಲಿ ಜಗಳ ಮಾಡ್ತಾ ಇರಬೇಕಾದ್ರೆ ಇವಳಿಗೆ ಎದೆ ನೋವು ಸುರು ಆಯ್ತು, ಗಂಡನಲ್ಲಿ ಹೇಳದೆ ತವರು ಮನೆಗೆ ಹೋಗಿ ಹೆತ್ತವರ ಜೊತೆ…

Read More

ನಾಳೆಯಿಂದ ಫಿಫಾ ವಿಶ್ವಕಪ್ ಆರಂಭ

ಜಗತ್ತಿನಲ್ಲಿಯೇ ಅತೀ ಹೆಚ್ಚು ಪ್ರೇಕ್ಷಕರಿರುವ ಕ್ರೀಡಾಕೂಟ ಆಗಿರುತ್ತದೆ ಫಿಫಾ ವಿಶ್ವಕಪ್ .2026 ರಇಂಡಿಯನ್ ಪ್ರೀಮಿಯರ್ ಲೀಗ್ ಎಂಬ ಕ್ರಿಕೆಟ್ ಪಂದ್ಯಾವಳಿಯ ವಿಜೇತರು ಯಾರು ಎಂಬ ಕುತೂಹಲ ಕ್ರೀಡಾಭಿಮಾನಿಗಳಲ್ಲಿ ಕೊನೆಗೊಂಡ ಸಮಯದಲ್ಲಿ ಮತ್ತೊಂದು ಜಗತ್ತಿನ ಅತಿ ದೊಡ್ಡ ಹೆಚ್ಚು ಪ್ರೇಕ್ಷಕರನ್ನು ಮನರಂಜಿಸುವ ಮತ್ತೊಂದು ಪಂದ್ಯಾವಳಿ ಆಗಿರುತ್ತದೆ ಫಿಫಾ ವಿಶ್ವಕಪ್. 2026ರ ಫಿಫಾ ವಿಶ್ವಕಪ್ ಯಾವ ದೇಶದ ಮುಡಿಗೇರುತ್ತದೆ ಎಂಬ ಕುತೂಹಲಕ್ಕೆ ನಾಳೆಯಿಂದ ಚಾಲನೆ ದೊರಕಳಿದೆ.ಉತ್ತರ ಅಮೆರಿಕ ಭೂಖಂಡದಲ್ಲಿ ಚರಿತ್ರೆಯಲ್ಲಿ ಮೊದಲ ಬಾರಿಗೆ ಮೂರು ದೇಶಗಳ ಆತಿಥ್ಯದಲ್ಲಿ 23ನೇ ಆವೃತ್ತಿಯ…

Read More

ಬೆರಳ ತುದಿಯಲ್ಲಿ ಜಗತ್ತು: ಕ್ಷಯಿಸಿ ಹೋಗುತ್ತಿರುವ ಮಾನವೀಯ ಸಂಬಂಧಗಳು

ನಾವು ಇವತ್ತು ಜಾಗತಿಕ ಭೂಪಟದಲ್ಲಿ ಪ್ರಪಂಚದ ಯಾವುದೇ ಮೂಲೆಯ ದಾರಿಯನ್ನಾದರೂ ಸುಲಭವಾಗಿ ಹುಡುಕಬಲ್ಲೆವು, ಆದರೆ ಪಕ್ಕದ ಕೋಣೆಯಲ್ಲಿರುವ ಮನಸ್ಸಿನ ದಾರಿಯನ್ನು ಮಾತ್ರ ಸಂಪೂರ್ಣವಾಗಿ ಕಳೆದುಕೊಂಡಿದ್ದೇವೆ! ಇವತ್ತು ನಮ್ಮ ಇಡೀ ಜಗತ್ತು ಮುಖಾಮುಖಿ ಭೇಟಿಯ ‘ಆಪ್ತ ಸ್ಪರ್ಶ’ದಿಂದ, ಯಾಂತ್ರಿಕ ‘ಸಂದೇಶ’ದ ಚೌಕಟ್ಟಿಗೆ ಬಂದು ನಿಂತಿದೆ.ಒಂದೇ ಸೂರಿನಡಿ, ಒಂದೇ ಕತ್ತಲ ಕೋಣೆಯಲ್ಲಿ ನಾಲ್ಕು ಜೀವಗಳು ಕುಳಿತಿವೆ. ಅಲ್ಲಿ ಗಾಢವಾದ ಮೌನವಂತೂ ಆವರಿಸಿದೆ, ಆದರೆ ಆ ಮೌನವನ್ನು ಸೀಳಿಕೊಂಡು ಮಂದಬೆಳಕಿನ ಪರದೆಯ ನೀಲಿ ಬೆಳಕು ಆ ನಾಲ್ಕೂ ಮುಖಗಳ ಮೇಲೆ ತಣ್ಣಗೆ…

Read More

ಬೆಳ್ಳಿಪರದೆಯಲ್ಲಿ ಹಳ್ಳಿ ಪ್ರತಿಭೆಯ ಮಿಂಚು : ಉದಯ ಕುಮಾರ್ ನೆಟ್ಟಣಿಗೆ ಅವರ ಕಲಾ ಪಯಣ

ಮಣ್ಣಿನ ಒಡಲಾಳದಲ್ಲಿ ಅಡಗಿರುವ ಬೀಜವೊಂದು ಸೂಕ್ತ ಕಾಲದ ಮಳೆಗಾಗಿ ಕಾಯುವಂತೆ, ಕಲೆಯೆಂಬುದು ಕೆಲವರ ಆಂತರ್ಯದಲ್ಲಿ ಸುಪ್ತ ಜ್ವಾಲೆಯಾಗಿ ಧಗಧಗಿಸುತ್ತಿರುತ್ತದೆ. ಅದಕ್ಕೆ ಪ್ರೋತ್ಸಾಹದ ತಂಗಾಳಿ ಸೋಕಿದಾಗ ಮಾತ್ರ ಅದು ಜಗತ್ತನ್ನು ಬೆಳಗುವ ನಂದಾದೀಪವಾಗುತ್ತದೆ. ಹಳ್ಳಿಯ ಹಸಿರು ಹೊದಿಕೆಯ ಪರಿಸರದಲ್ಲಿ, ಗ್ರಾಮೀಣ ಬದುಕಿನ ನೋವು ನಲಿವುಗಳ ನೈಜ ಪಾಠಶಾಲೆಯಲ್ಲಿ ಬೆಳೆದು ಬಂದ ಯುವಕ ಉದಯ ಕುಮಾರ್ ನೆಟ್ಟಣಿಗೆ. ಬಾಲ್ಯದಿಂದಲೇ ಕಲಾಭಿಮಾನದ ತೀವ್ರ ಹಂಬಲವನ್ನು ಎದೆಯೊಳಗೆ ನುಂಗಿ ಹಿಡಿದಿಟ್ಟುಕೊಂಡು, ದಿನನಿತ್ಯದ ಬದುಕಿನ ಜವಾಬ್ದಾರಿಗಳ ನಡುವೆ ಅದನ್ನು ಜಾಗೃತವಾಗಿರಿಸಿಕೊಂಡಿದ್ದ ಈ ಅಪರೂಪದ ಪ್ರತಿಭೆ…

Read More

ನಮ್ಮ ಬದುಕಿನ ಮೂಕ ಗೆಳೆಯರು

ಸೃಷ್ಟಿಯ ಆದಿಯಿಂದಲೂ ಮನುಷ್ಯ ಕೇವಲ ಮಣ್ಣಿನ ಜೊತೆಗಷ್ಟೇ ಅಲ್ಲ, ಆ ಮಣ್ಣನ್ನು ನಂಬಿ ಬದುಕುವ ಜೀವಜಗತ್ತಿನ ಜೊತೆಗೂ ಅವಿನಾಭಾವ ಸಂಬಂಧವನ್ನು ಬೆಳೆಸಿಕೊಂಡಿದ್ದಾನೆ. ಕೃಷಿ ಸಂಸ್ಕೃತಿಯ ನೆರಳಿನಲ್ಲಿ ನಾಗರಿಕತೆ ಚಿಗುರೊಡೆದಾಗ, ಮನುಷ್ಯನ ಏಕಾಂತಕ್ಕೆ ಮತ್ತು ಕಾಯಕಕ್ಕೆ ಹೆಗಲು ಕೊಟ್ಟು ನಿಂತಿದ್ದು ಇದೇ ಮೂಕ ಸಾಕುಪ್ರಾಣಿಗಳು. ಇಂದು ನಗರೀಕರಣದ ಹೆಜ್ಜೆಯ ಗುರುತುಗಳಲ್ಲಿ ಮನೆಯ ಮುದ್ದಿನ ಪ್ರಾಣಿಗಳು ಎಂಬ ಹೊಚ್ಚ ಹೊಸ ನಾಗರಿಕ ಹಣೆಪಟ್ಟಿ ಸಿಗುವ ಮುನ್ನವೇ, ಈ ಜೀವಿಗಳು ನಮ್ಮ ಹಟ್ಟಿಯ, ನಮ್ಮ ಅಂಗಳದ, ನಮ್ಮ ಇಡೀ ಬದುಕಿನ ಉಸಿರಾಗಿದ್ದವು….

Read More

ನೆಲದ ನಾಡಿಮಿಡಿತ ಮತ್ತು ಸ್ಥಳನಾಮಗಳ ವೈಜ್ಞಾನಿಕ ಚರಿತ್ರೆ

ನಮ್ಮ ಬದುಕಿನ ಬೇರುಗಳನ್ನು ಹುಡುಕುತ್ತಾ ಹೊರಟಾಗ ಮೊದಲು ಎದುರಾಗುವುದೇ ನಾವು ಹುಟ್ಟಿ ಬೆಳೆದ, ಜೀವನ ಸಾಗಿಸುತ್ತಿರುವ ಊರಿನ ಹೆಸರು. ಒಂದು ಊರಿನ ಹೆಸರು ಕೇವಲ ಅಂಚೆ ವಿಳಾಸಕ್ಕಾಗಿ ಬಳಸುವ ಗುರುತಲ್ಲ; ಅದು ಆ ನೆಲದ ಚರಿತ್ರೆ, ಸಂಸ್ಕೃತಿ, ಭೌಗೋಳಿಕ ಹಿನ್ನೆಲೆ ಮತ್ತು ಪೂರ್ವಜರ ಬದುಕಿನ ಆಳವಾದ ಹೆಜ್ಜೆಗುರುತು. ಕಾಲದ ಪ್ರವಾಹದಲ್ಲಿ ಎಷ್ಟೋ ಸಾಮ್ರಾಜ್ಯಗಳು ಉರುಳಿ ಹೋಗಿರಬಹುದು, ರಾಜರುಗಳು ಮರೆತು ಹೋಗಿರಬಹುದು, ಆದರೆ ಅವರು ಆಳಿದ ಮತ್ತು ಜನಸಾಮಾನ್ಯರು ಬದುಕಿದ ಊರುಗಳ ಹೆಸರುಗಳು ಮಾತ್ರ ಇಂದಿಗೂ ತಮ್ಮ ಒಡಲಲ್ಲಿ…

Read More

ಕೈಯ ತುತ್ತು ಯಾರ ಬಾಯಿಗೆ?

ರಾತ್ರಿ ಸುಮಾರು ಎಂಟು ಗಂಟೆ ಆಗಿರಬಹುದು, ವಿಜಯ್ ನ ಮನೆಯಲ್ಲಿ ಊಟಕ್ಕೆ ತಯಾರಿ ನಡೆಯುತ್ತಿತ್ತು. ಮಡದಿ ಪೂಜಾ ಊಟಕ್ಕೆ ಬನ್ನಿ ಎಂದು ಕರೆದಾಗ, ವಿಜಯ್. “ ಆ, ಸ್ವಲ್ಪವೇ ಅಡಿಕೆ ಇದೆ ಅದನ್ನು ಸುಲಿದು ಮುಗಿಸಿ ಬರುತ್ತೇನೆ. ಮಗನನ್ನು ಕರೆ” ಎಂದ. ವಿಜಯನ ಅಮ್ಮ ಆಗಷ್ಟೇ ದೇವರ ನಾಮ ಹೇಳಿ ಮುಗಿಸಿ, ಓದುತ್ತಿದ್ದ ಮೊಮ್ಮಗನನ್ನು ಕರೆದು ಬಂದರು. ತಾನು ಬೆಳೆದ ಅಡಿಕೆ, ಸುಲಿಯಲು ಹಾಕಿದ್ದಷ್ಟನ್ನು ಮುಗಿಸಿ, ಕೈಕಾಲು ತೊಳೆದು ಇನ್ನೇನು ಒಳಗೆ ಬರುವಷ್ಟರಲ್ಲಿ, ಅವನ ಗೆಳೆಯ ಗುರು,…

Read More

ಪತ್ತನಾಜೆ

ತುಳುನಾಡಿನ ಸಂಸ್ಕೃತಿ ಮತ್ತು ಪ್ರಕೃತಿಯ ನಡುವಿನ ಪವಿತ್ರ ಕೊಂಡಿ​ತುಳುನಾಡಿನ ಮಣ್ಣಿನ ವಾಸನೆ ಮತ್ತು ದೈವಾರಾಧನೆಯ ದೈವಿಕ ಸ್ಪರ್ಶವನ್ನು ಹತ್ತಿರದಿಂದ ಅನುಭವಿಸಿದವರಿಗೆ, ‘ಪತ್ತನಾಜೆ’ ಎನ್ನುವುದು ಕೇವಲ ಕ್ಯಾಲೆಂಡರಿನ ಒಂದು ದಿನಾಂಕವಲ್ಲ; ಬದಲಾಗಿ, ಅದು ಪ್ರಕೃತಿಯ ಲಯದೊಂದಿಗೆ ಮನುಷ್ಯನ ಬದುಕು ಬೆರೆತು ಮಿಡಿಯುವ ಒಂದು ಪವಿತ್ರ ಪರಿವರ್ತನಾ ಕಾಲ. ಮಳೆಗಾಲದ ಮುನ್ಸೂಚನೆಯನ್ನು ಹೊತ್ತು ಬರುವ ಈ ದಿನ, ಸೌರಮಾನ ಪಂಚಾಂಗದ ಅನ್ವಯ ತುಳುವರ ಪಾಲಿಗೆ ಒಂದು ಯುಗದ ಮುಕ್ತಾಯ ಮತ್ತು ನವಚೈತನ್ಯದ ಹೊಸ ಆರಂಭದ ಸಂಕೇತವಾಗಿದೆ. ​ನಮ್ಮ ಹಿರಿಯರು ರೂಪಿಸಿದ…

Read More

“ಅಲ್ಲಡ ಸ್ವರೂಪ” ರಾಜಧಾನಿಯಾದ ಮಡಿಯನ್ ಕುಲಂ

ಉತ್ತರ ಕೇರಳ ತನ್ನದೇ ಆದ ಐತಿಹಾಸಿಕ ಹಾಗೂ ಸಾಂಸ್ಕೃತಿಕ ಪರಂಪರೆಯನ್ನು ಹೊಂದಿದ ನೆಲವಾಗಿದೆ. ತುಳುನಾಡು ಮತ್ತು ಮಲಬಾರ್ ಭಾಗಗಳಾಗಿ ವಿಭಜನೆಯಾಗಿದ್ದ ಈ ಪ್ರದೇಶವನ್ನು ಉತ್ತರದಲ್ಲಿ ತುಳು ಅರಸರುಗಳು ಹಾಗೂ ದಕ್ಷಿಣದಲ್ಲಿ “ನಡುವಾಳಿಗಳು” ಎಂದು ಕರೆಯಲ್ಪಟ್ಟ ಅಲ್ಲಡ ಸ್ವರೂಪ ರಾಜಮನೆತನಗಳು ಆಳುತ್ತಿದ್ದರು. ಚಂದ್ರಗಿರಿ ನದಿಯನ್ನು ಗಡಿಯಾಗಿ ಮಾಡಿಕೊಂಡು ಆಡಳಿತ ನಡೆಸುತ್ತಿದ್ದ ಅಲ್ಲಡ ಸ್ವರೂಪದ ರಾಜಧಾನಿಯೇ ಮಡಿಯನ್ ಕುಲಂ ಆಗಿತ್ತೆಂಬುದು ಚರಿತ್ರೆಯಲ್ಲಿ ಸುವರ್ಣಾಕ್ಷರದಲ್ಲಿ ಬರೆದಿದೆ . ಅದಕ್ಕೆ ಪುಷ್ಟಿ ನೀಡುವಂತೆ ಇತಿಹಾಸಕಾರರ ದಾಖಲೆಗಳಲ್ಲಿ ಉಲ್ಲೇಖವಾಗಿದೆ . ದೇವಾಲಯದ ವಾಸ್ತು ಶೈಲಿ…

Read More

ಶತಮಾನಗಳ ಬಂಟತನದ ಗರಿಮೆಯ ಪೆರ್ಲ ಬೀಡು: ಭಕ್ತಿ, ಕಲೆ ಹಾಗೂ ದೈವೀ ಪರಂಪರೆಯ ಮಹಾ ಸಂಗಮ

​ತುಳುನಾಡಿನ ಪವಿತ್ರ ಮಣ್ಣಿನಲ್ಲಿ ಬಂಟತನದ ಸೌರಭಕ್ಕೆ, ಶೌರ್ಯ-ತ್ಯಾಗಗಳಿಗೆ ಮತ್ತು ಅತಿಥಿ ಸತ್ಕಾರದ ಉದಾತ್ತ ಪರಂಪರೆಗೆ ತನ್ನದೇ ಆದ ವಿಶಿಷ್ಟ ಹಾಗೂ ಭವ್ಯ ಇತಿಹಾಸವಿದೆ. ಅಂತಹ ಶತಮಾನಗಳ ಇತಿಹಾಸದ ಹೆಜ್ಜೆಯ ಗುರುತುಗಳನ್ನು ಎದೆಯಲ್ಲಿಟ್ಟುಕೊಂಡು, ಬಂಟತನದ ಗತ್ತು ಹಾಗೂ ಗರಿಮೆಯ ಹೆಮ್ಮೆಯ ಮನೆತನವಾಗಿ ಕಂಗೊಳಿಸುತ್ತಿರುವ ಕಾಸರಗೋಡು ಜಿಲ್ಲೆಯ ಮಂಜೇಶ್ವರ ತಾಲೂಕಿನ ಎಣ್ಮಕಜೆ ಗ್ರಾಮದ ‘ಪೆರ್ಲ ಬೀಡು’ ಅಂಗಳದಲ್ಲಿ ಮತ್ತೊಂದು ಸುವರ್ಣ ಅಧ್ಯಾಯ ದಾಖಲಾಗಿದೆ. ​ಇಲ್ಲಿನ ಭವ್ಯ ನೂತನ ಗೃಹಪ್ರವೇಶ ಹಾಗೂ ದೈವಗಳ ಬಿಂಬ ಪ್ರತಿಷ್ಠಾ ಕಲಶಾಭಿಷೇಕ ಮಹೋತ್ಸವವು ಕೇವಲ ಒಂದು…

Read More
error: Content is protected !!