ಮೊಬೈಲ್ ಸುಳಿಗೆ ಪ್ರಕರಣ,ತಲೆಮರೆಸಿದ್ದ ಆರೋಪಿಯ ದಸ್ತಗಿರಿ ಮಾಡಿದ ಉಳ್ಳಾಲ ಪೊಲೀಸರು.

ಮಂಗಳೂರು : ಮನೆಗೆ ನುಗ್ಗಿ ವ್ಯಕ್ತಿಯೋರ್ವನಿಗೆ ಹಲ್ಲೆ ನಡೆಸಿ ಆತನ ಮೊಬೈಲ್ ಸುಳಿಗೆ ಮಾಡಿದ್ದ ಪ್ರಕರಣದಲ್ಲಿ ತಲೆಮರೆಸಿಕೊಂಡಿದ್ದ ಪ್ರಮುಖ ಆರೋಪಿಯನ್ನು ಉಳ್ಳಾಲ ಪೊಲೀಸರು ದಸ್ತಗಿರಿ ನಡೆಸಿ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದಾರೆ. ಉಳ್ಳಾಲ ಖಿಲ್ರಿಯಾ ನಗರ ನಿವಾಸಿ ನಿಫಾನ್ ಅಹ್ಮದ್ ಪಾಷ(33)ಬಂಧಿತ ಆರೋಪಿಯಾಗಿದ್ದಾನೆ. ಬಂಧಿತ ನಿಫಾನ್ ಕಳೆದ ಫೆಬ್ರವರಿ 5 ರಂದು ಮಧ್ಯರಾತ್ರಿ ತನ್ನ ಸಹವರ್ತಿಗಳಾದ ನಿಝಪತ್ ಅಲಿ ಮತ್ತು ಅಮೀರ್ ಸುಹೈಲ್ ಜೊತೆ ಸೇರಿ ಕೋಟೆಪುರದ ಮಹಮ್ಮದ್ ತಸ್ವೀರ್ ಎಂಬವರ ಮನೆಗೆ ನುಗ್ಗಿದ್ದಲ್ಲದೆ,ತಸ್ವೀರ್ಗೆ ಹಲ್ಲೆಗೈದು ಅವರ ಮೊಬೈಲ್…

Read More

ಏಣಿಯಿಂದ ಬಿದ್ದು ಕಾಲೇಜು ವಿದ್ಯಾರ್ಥಿ ಮೃತ್ಯು: ಹೆಬ್ರಿಯಲ್ಲಿ ದುರ್ಘಟನೆ

ಉಡುಪಿ: ಹೆಬ್ರಿ ತಾಲೂಕಿನ ಹುತುರ್ಕೆ ಪ್ರದೇಶದಲ್ಲಿ ಏಣಿಯಿಂದ ಆಯತಪ್ಪಿ ಬಿದ್ದ ಪರಿಣಾಮ ಕಾಲೇಜು ವಿದ್ಯಾರ್ಥಿಯೋರ್ವ ಸಾವನ್ನಪ್ಪಿದ ದುರ್ಘಟನೆ ನಡೆದಿದೆ. ಹೆಬ್ರಿ ತಾಲೂಕಿನ ಬೇಳಂಜೆ ನಿವಾಸಿ ಸಾತ್ವಿಕ್ ಮೃತ ವಿದ್ಯಾರ್ಥಿ ಎಂದು ಗುರುತಿಸಲಾಗಿದೆ. ಈತ ದ್ವಿತೀಯ ಪಿಯುಸಿ ವಿದ್ಯಾರ್ಥಿಯಾಗಿದ್ದು, ಇತ್ತೀಚೆಗೆ ಪರೀಕ್ಷೆ ಮುಗಿಸಿದ್ದನು. ರಜೆಯ ಸಮಯವನ್ನು ಸದುಪಯೋಗಪಡಿಸಿಕೊಂಡು ತನ್ನ ವಿದ್ಯಾಭ್ಯಾಸಕ್ಕೂ ಹಾಗೂ ಮನೆಯ ಖರ್ಚಿಗೂ ಸಹಾಯವಾಗಲಿ ಎಂಬ ಉದ್ದೇಶದಿಂದ ಕೆಲಸಕ್ಕೆ ಹೋಗಿದ್ದ ವೇಳೆ ಈ ದುರ್ಘಟನೆ ಸಂಭವಿಸಿದೆ. ಹುತುರ್ಕೆ ಪ್ರದೇಶದಲ್ಲಿ ಕೆಲಸ ಮಾಡುತ್ತಿದ್ದಾಗ ಏಣಿಯಿಂದ ಆಯತಪ್ಪಿ ಬಿದ್ದು ಗಂಭೀರವಾಗಿ…

Read More

ಮಾಣಿಬೆಟ್ಟುವಿನಲ್ಲಿ ಹೊನಲು ಬೆಳಕಿನ ‘ಮೂಳೂರು–ಅಡ್ಡೂರು’ ಜೋಡುಕರೆ ಕಂಬಳ ಏಪ್ರಿಲ್ 4ರಂದು

ಮಂಗಳೂರು: ತುಳುನಾಡಿನ ಪರಂಪರೆಯ ಜೀವನಾಡಿಯಾಗಿರುವ ಕಂಬಳ ಜಾನಪದ ಕ್ರೀಡೆಯನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಗುರುಪುರದ ಮಾಣಿಬೆಟ್ಟುವಿನಲ್ಲಿ ಏಪ್ರಿಲ್ 4ರಂದು ಶನಿವಾರ 3ನೇ ವರ್ಷದ ಹೊನಲು ಬೆಳಕಿನ “ಮೂಳೂರು–ಅಡ್ಡೂರು” ಜೋಡುಕರೆ ಕಂಬಳವನ್ನು ಆಯೋಜಿಸಲಾಗಿದೆ ಎಂದು ಸಮಿತಿ ಅಧ್ಯಕ್ಷ ಇನಾಯತ್ ಅಲಿ ತಿಳಿಸಿದ್ದಾರೆ. ನಗರದ ಓಷನ್ ಪರ್ಲ್ ಹೋಟೆಲ್‌ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, “ಕಂಬಳ ಕೇವಲ ಕ್ರೀಡೆಯಲ್ಲ, ಇದು ನಮ್ಮ ಮಣ್ಣಿನ ಸಂಸ್ಕೃತಿ. ಜಾತಿ, ಮತ, ಪಕ್ಷ ಭೇದವಿಲ್ಲದೆ ಎಲ್ಲರೂ ಒಂದಾಗಿ ಆಚರಿಸುವ ಹಬ್ಬವಾಗಿದ್ದು, ನಮ್ಮ ಪರಂಪರೆಯನ್ನು ಮುಂದಿನ…

Read More

ಮಂಗಳೂರು–ಸೂರತ್ ವಿಶೇಷ ರೈಲು ಖಾಯಂ: ಹೊಸ ಸಂಖ್ಯೆಯೊಂದಿಗೆ ಸೇವೆ ಮುಂದುವರಿಕೆ

ಮಂಗಳೂರು: ಮಂಗಳೂರು ಜಂಕ್ಷನ್ ಮತ್ತು ಸೂರತ್ ನಡುವಿನ ವಿಶೇಷ ರೈಲು ಸೇವೆಯನ್ನು ಖಾಯಂಗೊಳಿಸಲು ರೈಲ್ವೇ ಸಚಿವಾಲಯ ಒಪ್ಪಿಗೆ ನೀಡಿದೆ. ಈ ನಿರ್ಧಾರದಿಂದ ಪ್ರಯಾಣಿಕರಿಗೆ ದೀರ್ಘಾವಧಿಯ ಅನುಕೂಲ ಸಿಗಲಿದೆ. ಖಾಯಂ ಸೇವೆಯ ಭಾಗವಾಗಿ ರೈಲಿನ ಸಂಖ್ಯೆಯಲ್ಲಿಯೂ ಬದಲಾವಣೆ ಮಾಡಲಾಗಿದೆ. ನಂ. 19057 ಸೂರತ್–ಮಂಗಳೂರು ಎಕ್ಸ್‌ಪ್ರೆಸ್ ಪ್ರತೀ ಬುಧವಾರ ಮತ್ತು ರವಿವಾರ ರಾತ್ರಿ 7.35ಕ್ಕೆ ಸೂರತ್‌ನಿಂದ ಹೊರಡಲಿದ್ದು, ಗುರುವಾರ ಹಾಗೂ ಸೋಮವಾರ ಮಂಗಳೂರಿಗೆ ತಲುಪಲಿದೆ. ಅದೇ ರೀತಿಯಾಗಿ, ನಂ. 19058 ಮಂಗಳೂರು–ಸೂರತ್ ಎಕ್ಸ್‌ಪ್ರೆಸ್ ಗುರುವಾರ ಮತ್ತು ಸೋಮವಾರ ಮಂಗಳೂರಿನಿಂದ ಹೊರಟು,…

Read More

ಮಂಗಳೂರಿನಲ್ಲಿ ಐಎಂಎಸ್‌ಸಿ ಆಫ್-ರೋಡ್ ಟ್ರೋಫಿ-2026: 140ಕ್ಕೂ ಅಧಿಕ ಸ್ಪರ್ಧಿಗಳು ಭಾಗಿ

ಮಂಗಳೂರು: ದಕ್ಷಿಣ ಕನ್ನಡ ಮೋಟಾರ್ ಸ್ಪೋರ್ಟ್ಸ್ ಸಂಸ್ಥೆಯು ತನ್ನ 25ನೇ ವರ್ಷದ ಸಂಭ್ರಮದ ಅಂಗವಾಗಿ 400ನೇ ಸ್ಪರ್ಧೆಯಾಗಿ ಪ್ರತಿಷ್ಠಿತ ‘ಐಎಂಎಸ್‌ಸಿ ಆಫ್-ರೋಡ್ ಟ್ರೋಫಿ-2026’ ಅನ್ನು ಮಾ.28 ಮತ್ತು 29ರಂದು ಮಂಗಳೂರು ಸಮೀಪದ ಒಡ್ಡೂರು ಫಾರ್ಮ್‌ನಲ್ಲಿ ಆಯೋಜಿಸಿದೆ. ನಗರದ ಪತ್ರಿಕಾಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಇಂಡಿಯನ್ ಮೋಟಾರ್ ಸ್ಪೋರ್ಟ್ಸ್ ಕ್ಲಬ್ ಕಾರ್ಯದರ್ಶಿ ಅಶ್ವಿನ್ ನಾಯಕ್ ಮಾಹಿತಿ ನೀಡಿ, ಈ ಸ್ಪರ್ಧೆಯಲ್ಲಿ ಒಟ್ಟು 11 ವಿಭಾಗಗಳಲ್ಲಿ 140ಕ್ಕೂ ಅಧಿಕ ಸ್ಪರ್ಧಿಗಳು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು. ದೇಶದ ವಿವಿಧ ಭಾಗಗಳಿಂದ ಸ್ಪರ್ಧಿಗಳು ಪಾಲ್ಗೊಳ್ಳಲು…

Read More

ಕುಂಜತ್ತಬೈಲ್‌ನ ಕೊಂರ್ಗಿಬೈಲ್ ಅರ್ತಿವೊಡಲು ಶ್ರೀ ವಿಷ್ಣುಮೂರ್ತಿ ದೇವಾಲಯದಲ್ಲಿ ಅಷ್ಟಬಂಧ ಬ್ರಹ್ಮಕಲಶೋತ್ಸವ

ಮಂಗಳೂರು: ನಗರದ ಕುಂಜತ್ತಬೈಲ್‌ನ ಕೊಂರ್ಗಿಬೈಲ್ ಅರ್ತಿವೊಡಲು ಶ್ರೀ ವಿಷ್ಣುಮೂರ್ತಿ ದೇವಾಲಯದಲ್ಲಿ ಅಷ್ಟಬಂಧ ಬ್ರಹ್ಮಕಲಶೋತ್ಸವವು ಏಪ್ರಿಲ್ 6ರಿಂದ 12ರವರೆಗೆ ವಿವಿಧ ವೈದಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಜರುಗಲಿದೆ ಎಂದು ಬ್ರಹ್ಮಕಲಶೋತ್ಸವ ಸಮಿತಿಯ ಕಾರ್ಯಾಧ್ಯಕ್ಷ ಆಶಿಕ್ ಬಲ್ಲಾಳ್ ತಿಳಿಸಿದ್ದಾರೆ. ನಗರದ ಪತ್ರಿಕಾಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ದೇವಾಲಯದಲ್ಲಿ ಅಷ್ಟಬಂಧ ಬ್ರಹ್ಮಕಲಶಾಭಿಷೇಕ ಮಹೋತ್ಸವವು ಏಪ್ರಿಲ್ 12ರಂದು (ಭಾನುವಾರ) ಪೂರ್ವಾಹ್ನ 8:20ರಿಂದ 10:00 ಗಂಟೆಯೊಳಗಿನ ವೃಷಭ ಲಗ್ನದ ಸುಮುಹೂರ್ತದಲ್ಲಿ ನೆರವೇರಲಿದೆ ಎಂದು ಹೇಳಿದರು. ಈ ಮಹೋತ್ಸವದ ಅಂಗವಾಗಿ ಏಪ್ರಿಲ್ 6ರಿಂದವೇ ವೇದಮೂರ್ತಿ…

Read More

ಕೋಮು ಪ್ರಚೋದಕ ಪೋಸ್ಟ್ ಪ್ರಕರಣ: ಆರೋಪಿ ಬಂಧನ, ನ್ಯಾಯಾಂಗ ಬಂಧನಕ್ಕೆ ಆದೇಶ

ಮಂಗಳೂರು: ನಗರದಲ್ಲಿ 2025ರಲ್ಲಿ ನಡೆದ ಸುಹಾಸ್ ಶೆಟ್ಟಿ ಕೊಲೆ ಪ್ರಕರಣದ ಬಳಿಕ ಸಾಮಾಜಿಕ ಜಾಲತಾಣಗಳಲ್ಲಿ ಕೋಮು ಪ್ರಚೋದನೆಗೆ ಕಾರಣವಾಗುವಂತಹ ಪೋಸ್ಟ್‌ಗಳನ್ನು ಹಂಚಿಕೊಂಡ ಆರೋಪದಡಿ ದಾಖಲಾಗಿದ್ದ ಪ್ರಕರಣದಲ್ಲಿ ಕಂಕನಾಡಿ ನಗರ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಈ ಸಂಬಂಧ ಕಂಕನಾಡಿ ನಗರ ಪೊಲೀಸ್ ಠಾಣೆಯಲ್ಲಿ ಅ.ಕ್ರ. 179/2025ರಂತೆ ಬಿ.ಎನ್‌.ಎಸ್‌. 2023ರ ಕಲಂ 353(1), 353(2), 61(2), 55 ಅಡಿಯಲ್ಲಿ ಪ್ರಕರಣ ದಾಖಲಾಗಿ ತನಿಖೆ ನಡೆಯುತ್ತಿತ್ತು. ತನಿಖೆ ವೇಳೆ ‘TN-MADDY’ ಎಂಬ ಸಾಮಾಜಿಕ ಜಾಲತಾಣ ಖಾತೆಯಿಂದ ಕೋಮು ಪ್ರಚೋದಕ ವಿಷಯಗಳನ್ನು ಹಂಚಿಕೊಳ್ಳಲಾಗಿರುವುದು…

Read More

ಮಂಗಳೂರಲ್ಲಿ ವಿಶ್ವ ಕ್ಷಯರೋಗ ದಿನಾಚರಣೆ

ದಕ್ಷಿಣ ಕನ್ನಡ ಜಿಲ್ಲಾಡಳಿತ, ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಕ್ಷಯರೋಗ ನಿಯಂತ್ರಣಾಧಿಕಾರಿಗಳ ಕಛೇರಿ, ಮಂಗಳೂರು ಇದರ ವತಿಯಿಂದ ಶ್ರೀದೇವಿ ಕಾಲೇಜು ಆಫ್ ನಸಿರ್ಂಗ್, ಜಿಲ್ಲಾ ವೆನ್ಲಾಕ್ ಆಸ್ಪತ್ರೆಯ ಪ್ಯಾರಾ ಮೆಡಿಕಲ್ ವಿದ್ಯಾರ್ಥಿಗಳು ಹಾಗೂ ಪಿ. ದಯಾನಂದ ಪೈ, ಪಿ.ಸತೀಶ್ ಪೈ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಸಮಾಜ ಕಾರ್ಯಕ್ರಮ ವಿದ್ಯಾರ್ಥಿಗಳಿಗೆ ಕ್ಷಯರೋಗದ ಕುರಿತು ಅರಿವು ಕಾರ್ಯಕ್ರಮವನ್ನು ಹಮ್ಮಿಕೊಂಡು ವಿಶ್ವ ಕ್ಷಯರೋಗ ದಿನಾಚರಣೆ 2026 ಕಾರ್ಯಕ್ರಮವನ್ನು ಜಿಲ್ಲಾ ವೆನ್ಲಾಕ್…

Read More

ಬಂಟ್ವಾಳದಲ್ಲಿ ಯುವತಿ ಕಾಣೆ: ಪ್ರಕರಣ ದಾಖಲು

ಬಂಟ್ವಾಳ: ಕೆಲಸಕ್ಕೆಂದು ಮನೆಯಿಂದ ತೆರಳಿದ್ದ ಯುವತಿಯೊಬ್ಬಳು ಮನೆಗೆ ಮರಳದೆ ಕಾಣೆಯಾಗಿರುವ ಘಟನೆ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ದಾಖಲಾಗಿದೆ. ಅರಳ ಗ್ರಾಮದ ಮುಲಾರಪಟ್ನ ನಿವಾಸಿಯಾದ ಕುಮಾರಿ ಫಾತಿಮತ್ ಇಪ್ರಾ (18) ಕಾಣೆಯಾದ ಯುವತಿಯಾಗಿದ್ದಾಳೆ. ಕಂಪ್ಯೂಟರ್ ತರಬೇತಿ ಪಡೆದಿದ್ದ ಈಕೆ ಬಿಸಿರೋಡಿನಲ್ಲಿರುವ ಒನ್ ಸೈಬರ್ ಸೆಂಟರ್‌ನಲ್ಲಿ ಕೆಲಸ ಮಾಡುತ್ತಿದ್ದಳು. ಮಾರ್ಚ್ 24ರಂದು ಕೆಲಸಕ್ಕೆಂದು ತೆರಳಿದ್ದ ಫಾತಿಮತ್ ಇಪ್ರಾ ಮನೆಗೆ ವಾಪಸ್ಸಾಗದೆ ಕಾಣೆಯಾಗಿದ್ದಾಳೆ. ಈ ಕುರಿತು ಯುವತಿಯ ತಾಯಿ ರಝೀಯಾ ಅವರು ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಗೆ ದೂರು…

Read More

ಬಂಟ್ವಾಳದಲ್ಲಿ ಶ್ರೀರಾಮ ನವಮಿಯ ಪ್ರಯುಕ್ತ ಧಾರ್ಮಿಕ ಕಾರ್ಯಕ್ರಮ

ಬಂಟ್ವಾಳ: ಕಾಮಾಜೆಯ ದೈಪಲದಲ್ಲಿರುವ ಶ್ರೀರಾಮ ಭಜನಾ ಮಂದಿರ ಟ್ರಸ್ಟ್ (ರಿ.) ಹಾಗೂ ಶ್ರೀ ರಾಮಾಂಜನೇಯ ವ್ಯಾಯಾಮ ಶಾಲೆ ಶಿವಾಜಿನಗರದ ವತಿಯಿಂದ ಶ್ರೀರಾಮ ನವಮಿಯ ಅಂಗವಾಗಿ 15ನೇ ವರ್ಷದ ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜೆ ಹಾಗೂ ಶ್ರೀರಾಮ ತಾರಕ ಯಾಗವು ಮಾರ್ಚ್ 27ರಂದು ನಡೆಯಲಿದೆ ಎಂದು ಮಂದಿರದ ಅಧ್ಯಕ್ಷ Keshava Daipala ತಿಳಿಸಿದ್ದಾರೆ. ಮಂದಿರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ವೇದಮೂರ್ತಿ Rajagopalacharya ಅವರ ನೇತೃತ್ವದಲ್ಲಿ ಒಂದು ಲಕ್ಷ ಶ್ರೀರಾಮ ತಾರಕ ಜಪ ನಡೆಯಲಿದೆ ಎಂದು ಮಾಹಿತಿ ನೀಡಿದರು….

Read More
error: Content is protected !!