ಪ್ರಾಪ್ತ ಬಾಲಕಿಯೊಬ್ಬಳಿಗೆ ಲೈಂಗಿಕ ಕಿರುಕುಳ ಹೊಸದುರ್ಗ ಪೋಕ್ಸೋ ವಿಶೇಷ ನ್ಯಾಯಾಲಯ ಮಹತ್ವದ ತೀರ್ಪು

ಮಂಜೇಶ್ವರ : ಅಪ್ರಾಪ್ತ ಬಾಲಕಿಯೊಬ್ಬಳಿಗೆ ಲೈಂಗಿಕ ಕಿರುಕುಳ ನೀಡಿದ ಪ್ರಕರಣಕ್ಕೆ ಸಂಬಂಧಿಸಿ ಆರೋಪಿ ಮದ್ರಸಾ ಅಧ್ಯಾಪಕನಿಗೆ ಹೊಸದುರ್ಗ ಪೋಕ್ಸೋ ವಿಶೇಷ ನ್ಯಾಯಾಲಯ 14 ವರ್ಷ ಕಠಿಣ ಸಜೆ ಹಾಗೂ 40,000 ರೂ. ದಂಡ ವಿಧಿಸಿ ತೀರ್ಪು ನೀಡಿದೆ. ಕಿದೂರು ನಿವಾಸಿ ಎ. ಅಬ್ದುಲ್ ಹಮೀದ್ (46) ಶಿಕ್ಷಗೊಳಗಾದ ಆರೋಪಿ. ಜುಲ್ಮಾನೆ ಪಾವತಿಸದಿದ್ದಲ್ಲಿ ಆರೋಪಿ ಒಂದು ವರ್ಷ ಮೂರು ತಿಂಗಳು ಹೆಚ್ಚು ವರಿ ಸಜೆ ಅನುಭವಿಸಬೇಕಾಗಿದೆಯೆಂದು ತೀರ್ಪಿನಲ್ಲಿ ತಿಳಿಸಲಾಗಿದೆ. ಕುಂಬಳೆ ಪೊಲೀಸ್‌ ಠಾಣೆ ವ್ಯಾಪ್ತಿಗೊಳಪಟ್ಟ ಪ್ರದೇಶದ ನಿವಾಸಿಯಾಗಿರುವ 12…

Read More

ರಾಜ್ಯ ಸರಕಾರಿ ಸಾರಿಗೆ ನೌಕರರು ಮುಂದಿನ ಆರು ತಿಂಗಳವರೆಗೆ ಯಾವುದೇ ರೀತಿಯ ಮುಷ್ಕರ ನಡೆಸದಂತೆ ಕಟ್ಟುನಿಟ್ಟಿನ ಆದೇಶ ಹೊರಡಿಸಿದ ಸರಕಾರ.. !

ಬೆಂಗಳೂರು : ಹೊಸ ವರ್ಷದ ಸಂಭ್ರಮದಲ್ಲಿರುವ ಸಾರಿಗೆ ನೌಕರರಿಗೆ ರಾಜ್ಯ ಸರ್ಕಾರವು ಬಿಗ್ ಶಾಕ್ ನೀಡಿದೆ. ಸಾರ್ವಜನಿಕರ ಸಂಚಾರಕ್ಕೆ ತೊಂದರೆಯಾಗದಂತೆ ಮುನ್ನೆಚ್ಚರಿಕೆ ವಹಿಸಿರುವ ಸರ್ಕಾರ, ಸಾರಿಗೆ ನೌಕರರು ಮುಂದಿನ ಆರು ತಿಂಗಳವರೆಗೆ ಯಾವುದೇ ರೀತಿಯ ಮುಷ್ಕರ ನಡೆಸದಂತೆ ಕಟ್ಟುನಿಟ್ಟಿನ ಆದೇಶ ಹೊರಡಿಸಿದೆ. 2026ರ ಜನವರಿ 1 ರಿಂದ ಜೂನ್ ತಿಂಗಳವರೆಗೆ ಸಾರಿಗೆ ನೌಕರರು ಪ್ರತಿಭಟನೆ ಅಥವಾ ಮುಷ್ಕರ ನಡೆಸುವಂತಿಲ್ಲ. ಸರ್ಕಾರದ ಈ ಆದೇಶವನ್ನು ಉಲ್ಲಂಘಿಸಿ ಮುಷ್ಕರಕ್ಕೆ ಮುಂದಾದಲ್ಲಿ, ಅಗತ್ಯ ಸೇವೆಗಳ ನಿರ್ವಹಣಾ ಕಾಯ್ದೆ ಅಡಿಯಲ್ಲಿ ಕಠಿಣ ಕಾನೂನು…

Read More

ಸಾಹಿತಿ, ಪ್ರಕಾಶಕ, ಮಾಧ್ಯಮ ಪ್ರವರ್ತಕ ಬಸವರಾಜ ಎಸ್. ಬಾಗೇವಾಡಿ ಮಠ ರೀಗೆ ಕನ್ನಡ ಭವನದ ಪ್ರತಿಷ್ಠಿತ “ಕನ್ನಡ ಪಯಸ್ವಿನಿ ಅಚೀವ್ಮೆಂಟ್ ಅವಾರ್ಡ್ ಗೆ “ಆಯ್ಕೆ.

ಕಾಸರಗೋಡು:ಮಾಧ್ಯಮ ಪ್ರವರ್ತಕ ಬಸವರಾಜ ಎಸ್. ಬಾಗೇವಾಡಿ ಮಠರೀಗೆ ಕನ್ನಡ ಭವನದ ಪ್ರತಿಷ್ಠಿತ ಅಂತರ್ ರಾಜ್ಯ ಪ್ರಶಸ್ತಿಯಾದ “ಕನ್ನಡ ಪಯಸ್ವಿನಿ ಪ್ರಶಸ್ತಿ 2026.” ಇದೆ ಬರುವ ಜನವರಿ 18ಕ್ಕೆ ಕನ್ನಡ ಭವನ ರಜತ ಸಂಭ್ರಮ -ನಾಡು ನುಡಿ ಹಬ್ಬ ಕಾರ್ಯಕ್ರಮ ದಲ್ಲಿ, ಕನ್ನಡ ಭವನ, ನುಳ್ಳಿಪ್ಪಾಡಿ, ಕಾಸರಗೋಡಿನಲ್ಲಿ ನೀಡಿ ಗೌರವಿಸಲಿದ್ದೇವೆ ಎಂದು ಕನ್ನಡ ಭವನ ಸ್ಥಾಪಕ ಅಧ್ಯಕ್ಷರಾದ ಡಾ. ವಾಮನ್ ರಾವ್ ಬೇಕಲ್ ಹಾಗೂ ಕಾರ್ಯದರ್ಶಿ ವಸಂತ್ ಕೆರೆಮನೆ ತಿಳಿಸಿದ್ದಾರೆ

Read More

ಬೆಂಗರೆ ಪಲ್ಗುಣಿ ನದಿಯಲ್ಲಿ ಅಪರಿಚಿತ ವ್ಯಕ್ತಿಯ ಶವಪತ್ತೆ

ಮಂಗಳೂರು:ಪಣಂಬೂರು ಪೊಲೀಸ್ ಠಾಣಾ ವ್ಯಾಪ್ತಿಯ ಬೆಂಗರೆ ಪಲ್ಗುಣಿ ನದಿಯಲ್ಲಿ ಅಪರಿಚಿತ ವ್ಯಕ್ತಿಯ ಶವಪತ್ತೆಯಾಗಿದೆ. ಅಪರಿಚಿತ ವ್ಯಕ್ತಿ ಸುಮಾರು 40-43 ವರ್ಷದವರಾಗಿದ್ದು, ನೀಲಿ ಬಣ್ಣದ ಉದ್ದ ತೋಳಿನ ಜೀನ್ಸ್ ಅಂಗಿ ಅದರ ಒಳಗೆ ಹಳದಿ ಮತ್ತು ನೀಲಿ ಬಣ್ಣದ ದಪ್ಪಗೆರೆಗಳ ಟೀ ಶರ್ಟ್, ಬಳಿ ಬಣ್ಣದ ಬರಹಗಳಿರುವ ಕಪ್ಪು ಬಣ್ಣದ ಸ್ಪೋರ್ಟ್ಸ್ ಪ್ಯಾಂಟ್ ಧರಿಸಿದ್ದಾರೆ. ಸದ್ಯ ಮೃತದೇಹವನ್ನು ಮೇಲೆತ್ತಿರುವ ಪಣಂಬೂರು ಪೊಲೀಸರು ವೆನ್ ಲಾಕ್ ಆಸ್ಪತ್ರೆಗೆ ರವಾನಿಸಿದ್ದಾರೆ ಎಂದು ತಿಳಿದು ಬಂದಿದೆ. ಈ ಚಹರೆಯ ವ್ಯಕ್ತಿಯ ಪರಿಚಯಸ್ಯರು, ವಾರೀಸುದಾರರು…

Read More

ವರ್ಷದ ಮೊದಲ ದಿನವೇ ಎಲ್‌ಪಿಜಿ ಬೆಲೆ ಏರಿಕೆ ಬಿಸಿ … !

ಮಂಗಳೂರು : ಹೊಸ ಕ್ಯಾಲೆಂಡರ್ ವರ್ಷದ ಮೊದಲ ದಿನವೇ ಎಲ್‌ಪಿಜಿ ಬಳಕೆದಾರರಿಗೆ ಬೆಲೆ ಏರಿಕೆಯ ಶಾಕ್‌ ತಟ್ಟಿದೆ. ಈ ಬಾರಿ ಕೇಂದ್ರ ಸರ್ಕಾರವು 19 ಕೆಜಿ ವಾಣಿಜ್ಯ ಬಳಕೆ ಸಿಲಿಂಡರ್ ಬೆಲೆಯನ್ನು ಹೆಚ್ಚಿಸಿದೆ. ಇಂಡಿಯನ್ ಆಯಿಲ್ ಪ್ರಕಾರ, ದೆಹಲಿಯಲ್ಲಿ 19 ಕೆಜಿ ಎಲ್‌ಪಿಜಿ ಸಿಲಿಂಡರ್ ಮೊದಲು ರೂ.1580.50ಕ್ಕೆ ಲಭ್ಯವಾಗುತ್ತಿದ್ದರೆ, ಈಗ ರೂ.1691.50ಕ್ಕೆ ಲಭ್ಯವಾಗಲಿದೆ. ಕೋಲ್ಕತ್ತಾದಲ್ಲಿ ಬೆಲೆ ರೂ.1795ಕ್ಕೆ ಏರಿದ್ದು, ರೂ.111 ರಷ್ಟು ಹೆಚ್ಚಳವಾಗಿದೆ. ಚೆನ್ನೈ ಮತ್ತು ಬೆಂಗಳೂರಿನಲ್ಲಿ ಅನುಕ್ರಮವಾಗಿ ರೂ.1849.50 ಮತ್ತು ರೂ.1700 ರುಪಾಯಿಗಳಲ್ಲಿ ಸಿಲಿಂಡರ್ ಲಭ್ಯವಾಗಲಿದೆ….

Read More

ಬದುಕಿ ಬಾಳ ಬೇಕಾದ 13ರ ಹರೆಯದ ಬಾಲಕನ ಎದುರು ಯಮ ಸ್ವರೂಪಿಯಾಗಿ ಬಂದ ಕಾರು ಢಿಕ್ಕಿ ಹೊಡೆದು ಧಾರುಣ ಅಂತ್ಯ …. !

ಮಂಗಳೂರು :ಚಾಲಕನ ಅಜಾಗರೂಕತೆಯಿಂದ ಕಾರೊಂದು ಢಿಕ್ಕಿ ಹೊಡೆದ ಪರಿಣಾಮ 13 ವರ್ಷದ ಬಾಲಕ ಮೃತಪಟ್ಟಿರುವ ಘಟನೆ ಬುಧವಾರ ಮಧ್ಯಾಹ್ನ ಮಾರೂರು ಹೊಸಂಗಡಿ ಬಳಿ ಸಂಭವಿಸಿದೆ. ಹೊಸಂಗಡಿ ನಿವಾಸಿ ನಝೀರ್ ಅವರ ಪುತ್ರ ಝಾಹಿರ್ (13) ಮೃತಪಟ್ಟ ಬಾಲಕ ಎಂದು ಗುರುತಿಸಲಾಗಿದೆ. ಝಾಹಿರ್ ಸ್ಥಳೀಯ ಶಾಲೆಯ ಏಳನೇ ತರಗತಿಯ ವಿದ್ಯಾರ್ಥಿಯಾಗಿದ್ದನು. ಬುಧವಾರ ಮಧ್ಯಾಹ್ನ ತಾಯಿಯೊಂದಿಗೆ ಅಂಗಡಿಗೆಂದು ರಸ್ತೆ ಬದಿ ನಡೆದುಕೊಂಡು ಹೋಗುತ್ತಿದ್ದ ವೇಳೆ ಎದುರಿನಿಂದ ಬಂದ ಕಾರು ಢಿಕ್ಕಿ ಹೊಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಗಂಭೀರವಾಗಿ ಗಾಯಗೊಂಡ ಬಾಲಕನನ್ನು…

Read More

ಕವಯತ್ರಿ, ಸಂಘಟಕಿ ಲಕ್ಷ್ಮಿ ಎಸ್ ಬೆಂಗಳೂರಿಗೆ “ಕನ್ನಡ ಪಯಸ್ವಿನಿ ಅಚೀವರ್ಸ್ ಅವಾರ್ಡ್ 2026” ಘೋಷಣೆ . !

ಕಾಸರಗೋಡು: ಕವಯತ್ರಿ, ಸಂಘಟಕಿ ಲಕ್ಷ್ಮಿ ಎಸ್ ಬೆಂಗಳೂರು ಇವರಿಗೆ ಕನ್ನಡ ಭವನದ ಪ್ರತಿಷ್ಠಿತ ಅಂತರ್ ರಾಜ್ಯ ಪ್ರಶಸ್ತಿಯಾದ “ಕನ್ನಡ ಪಯಸ್ವಿನಿ ಪ್ರಶಸ್ತಿ 2026.” ನ್ನು ಜನವರಿ 18ಕ್ಕೆ ಕಾಸರಗೋಡಿನ ಕನ್ನಡ ಭವನ, ನುಳ್ಳಿಪ್ಪಾಡಿಯಲ್ಲಿ ನಡೆಯುವ ಕನ್ನಡ ಭವನ ರಜತ ಸಂಭ್ರಮ -ನಾಡು ನುಡಿ ಹಬ್ಬ ಕಾರ್ಯಕ್ರಮ ದಲ್ಲಿ ನೀಡಿ ಗೌರವಿಸಲಿದ್ದೇವೆ ಎಂದು ಕನ್ನಡ ಭವನ ಸ್ಥಾಪಕ ಅಧ್ಯಕ್ಷರಾದ ಡಾ. ವಾಮನ್ ರಾವ್ ಬೇಕಲ್ ಹಾಗೂ ಕಾರ್ಯದರ್ಶಿ ವಸಂತ್ ಕೆರೆಮನೆ ತಿಳಿಸಿದ್ದಾರೆ.

Read More

ರಂಗಸಿರಿ ಸಾಂಸ್ಕೃತಿಕ ವೇದಿಕೆಯ ಜೀವಾಳ, ಯಕ್ಷಗಾನ ಗುರು, ಭಾಗವತ ಸೂರ್ಯನಾರಾಯಣ ಪದಕಣ್ಣಾಯ ಬಾಯಾರಿಗೆ ಕನ್ನಡ ಭವನದ “ಕನ್ನಡ ಪಯಸ್ವಿನಿ ಪ್ರಶಸ್ತಿ 2026.ಆಯ್ಕೆ

ಕಾಸರಗೋಡು:ಯಕ್ಷಗಾನ ಗುರು, ಭಾಗವತ ಸೂರ್ಯನಾರಾಯಣ ಪದಕಣ್ಣಾಯ ಬಾಯಾರು ಇವರಿಗೆ ಕನ್ನಡ ಭವನದ ಪ್ರತಿಷ್ಠಿತ ಅಂತರ್ ರಾಜ್ಯ ಪ್ರಶಸ್ತಿಯಾದ “ಕನ್ನಡ ಪಯಸ್ವಿನಿ ಪ್ರಶಸ್ತಿ 2026.”ನ್ನು ಇದೇ ಬರುವ ಜನವರಿ 18ಕ್ಕೆ ಕಾಸರಗೋಡಿನ ಕನ್ನಡ ಭವನ, ನುಳ್ಳಿಪ್ಪಾಡಿಯಲ್ಲಿ ನಡೆಯುವ ಕನ್ನಡ ಭವನ ರಜತ ಸಂಭ್ರಮ -ನಾಡು ನುಡಿ ಹಬ್ಬ ಕಾರ್ಯಕ್ರಮದಲ್ಲಿ ನೀಡಿ ಗೌರವಿಸಲಿದ್ದೇವೆ ಎಂದು ಕನ್ನಡ ಭವನ ಸ್ಥಾಪಕ ಅಧ್ಯಕ್ಷರಾದ ಡಾ. ವಾಮನ್ ರಾವ್ ಬೇಕಲ್ ಹಾಗೂ ಕಾರ್ಯದರ್ಶಿ ವಸಂತ್ ಕೆರೆಮನೆ ತಿಳಿಸಿದ್ದಾರೆ

Read More

ಜನವರಿ 3 ಮತ್ತು 4 ರಂದು ಪಿಲಿಕುಳ ನಿಸರ್ಗಧಾಮದ ಸೌಟ್ಸ್ ಮತ್ತು ಗೈಡ್ಸ್ ಸಭಾ ಭವನದಲ್ಲಿ ರಾಜ್ಯ ಮಟ್ಟದ ಜಿನ ಭಜನಾ ಸೆಮಿ ಫೈನಲ್ ಮತ್ತು ಫೈನಲ್ ಸ್ಪರ್ಧೆ … !

ಮಂಗಳೂರು: ರಾಜ್ಯ ಮಟ್ಟದ ಜಿನ ಭಜನಾ ಸ್ಪರ್ಧೆ ಸೀಸನ್ 9ರ ಪ್ರಯುಕ್ತ ಭಾರತೀಯ ಜೈನ್ ಮಿಲನ್, ವಲಯ-8ರ ಆಶ್ರಯದಲ್ಲಿ ಈ ಬಾರಿ ಮಂಗಳೂರು ಜೈನ್ ಮಿಲನ್‌ನ ಅತಿಥೇಯದಲ್ಲಿ ಪಿಲಿಕುಳ ನಿಸರ್ಗಧಾಮದ ಸೌಟ್ಸ್ ಮತ್ತು ಗೈಡ್ಸ್ ಸಭಾ ಭವನದಲ್ಲಿ ಜನವರಿ 3 ರಂದು ಸೆಮಿಫೈನಲ್ ಹಾಗೂ ಜನವರಿ 4 ರಂದು ಫೈನಲ್ ಜಿನ ಭಜನಾ ಸ್ಪರ್ಧೆ ನಡೆಯಲಿದೆ ಎಂದು ಜೈನ್ ಮಿಲನ್, ವಲಯ-8ರ ನಿಕಟಪೂರ್ವ ಅಧ್ಯಕ್ಷರಾದ ಪುಷ್ಪರಾಜ್ ಜೈನ್ ನಗರದ ಪತ್ರಿಕಾಭವನದಲ್ಲಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು . ಈ…

Read More

ಎನ್.ವಿನಯ ಹೆಗ್ಡೆಯವರ ನಿಧನಕ್ಕೆ ಬಿ.ವೈ.ವಿಜಯೇಂದ್ರ ಸಂತಾಪ

ಬೆಂಗಳೂರು: ದೂರದೃಷ್ಟಿಯ ನಾಯಕ ಮತ್ತು ಶಿಕ್ಷಣ ತಜ್ಞ, ನಿಟ್ಟೆಯ ಎನ್. ವಿನಯ ಹೆಗ್ಡೆಯವರ ನಿಧನದಿಂದ ಶಿಕ್ಷಣ ಮತ್ತು ಸಾಮಾಜಿಕ ಕ್ಷೇತ್ರಕ್ಕೆ ದೊಡ್ಡ ನಷ್ಟವಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ.ವಿಜಯೇಂದ್ರ ಅವರು ತಮ್ಮ ಸಂತಾಪ ಸೂಚನಾ ಸಂದೇಶದಲ್ಲಿ ತಿಳಿಸಿದ್ದಾರೆ.ಎನ್.ವಿನಯ ಹೆಗ್ಡೆ ಅವರು ತಮ್ಮ ದೂರದೃಷ್ಟಿ ಮತ್ತು ಸಾಮಾಜಿಕ ಕಳಕಳಿಯೊಂದಿಗೆ ನಿಟ್ಟೆ ಡೀಮ್ಡ್ ಟು ಬೀ ಯೂನಿವರ್ಸಿಟಿ ಸೇರಿದಂತೆ ಹಲವು ಸಂಸ್ಥೆಗಳನ್ನು ಬೆಳೆಸಿದವರು. ಬಡ ವಿದ್ಯಾರ್ಥಿಗಳಿಗೆ, ಮಹಿಳೆಯರ ಸಬಲೀಕರಣಕ್ಕೆ ಹಾಗೂ ಗ್ರಾಮೀಣಾಭಿವೃದ್ಧಿಗೆ ಶ್ರಮಿಸಿದರು. 24 ಗ್ರಾಮೀಣ ಆಸ್ಪತ್ರೆಗಳನ್ನು…

Read More
error: Content is protected !!