ಕೊರಿಂಗಿಲ ಮದ್ರಸದಲ್ಲಿ ಮಿಹ್ರಜಾನುಲ್ ಬಿದಾಯ ಮದ್ರಸ ಪ್ರಾರಂಭೋತ್ಸವ

ಪುತ್ತೂರು: ಕೊರಿಂಗಿಲದಲ್ಲಿರುವ ಮಿಸ್ಬಾಹುಲ್ ಹುದಾ ಮದ್ರಸದಲ್ಲಿ 2026ನೇ ಸಾಲಿನ ಮದ್ರಸ ಅಧ್ಯಯನ ಪ್ರಾರಂಭೋತ್ಸವವನ್ನು ಅದ್ದೂರಿಯಾಗಿ ಆಚರಿಸಲಾಯಿತು. ಪ್ರಥಮ ತರಗತಿಗೆ ಸೇರ್ಪಡೆಗೊಂಡ ಹೊಸ ವಿದ್ಯಾರ್ಥಿಗಳನ್ನು ಬಲೂನ್ ಹಾಗೂ ಹೂಗುಚ್ಚ ನೀಡಿ ಆತ್ಮೀಯವಾಗಿ ಸ್ವಾಗತಿಸಲಾಯಿತು. ಕಾರ್ಯಕ್ರಮದ ವಿಶೇಷವಾಗಿ, ಧಾರ್ಮಿಕ ಶಿಕ್ಷಣದಲ್ಲಿ ಸ್ವಫಾಹಿ ಬಿರುದು ಪಡೆದ ಕೀಲಂಪಾಡಿ ನಿಜಾರ್ ಸ್ವಫಾಹಿ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಈ ಸಂದರ್ಭದಲ್ಲಿ ಖತೀಬರಾದ ಅಯ್ಯೂಬ್ ವಹಬಿ ಉಸ್ತಾದರು ಮದ್ರಸ ಶಿಕ್ಷಣದ ಅಗತ್ಯತೆ ಮತ್ತು ಮಹತ್ವವನ್ನು ವಿವರಿಸಿ, ಪೋಷಕರು ಹಾಗೂ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿದರು. ಸಹ ಅಧ್ಯಾಪಕರಾದ…

Read More

ಮಲಯಾಳ ಭಾಷಾ ಬಿಲ್–2025 ವಿರೋಧಕ್ಕೆ ಕಾಸರಗೋಡಿನಲ್ಲಿ ಕನ್ನಡ ಸಂಘಟನೆಗಳ ಆಕ್ರೋಶ

ಕಾಸರಗೋಡು: ಕೇರಳ ಸರ್ಕಾರ ಪ್ರಸ್ತಾಪಿಸಿರುವ ಮಲಯಾಳ ಭಾಷಾ ಬಿಲ್ಸ್–2025 ಕುರಿತು ಕಾಸರಗೋಡು ಜಿಲ್ಲೆಯ ವಿವಿಧ ಕನ್ನಡ ಸಂಘಟನೆಗಳು ತೀವ್ರ ಆತಂಕ ವ್ಯಕ್ತಪಡಿಸಿವೆ. ಈ ಮಸೂದೆ ಕನ್ನಡ ಭಾಷಿಕರು ಹಾಗೂ ಕನ್ನಡ ಮಾಧ್ಯಮದ ವಿದ್ಯಾರ್ಥಿಗಳಿಗೆ ಹಾನಿಕಾರಕವಾಗುವ ಸಾಧ್ಯತೆ ಇದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. ಕರಾವಳಿ ಸಾಂಸ್ಕೃತಿಕ ಪ್ರತಿಷ್ಠಾನದ ಅಧ್ಯಕ್ಷ ಶಿವರಾಮ ಕಾಸರಗೋಡು ಅವರ ನೇತೃತ್ವದಲ್ಲಿ, ಕೇರಳದ ನೂತನ ಮುಖ್ಯಮಂತ್ರಿಗಳಿಗೆ ಈ ಸಂಬಂಧ ವಿವರವಾದ ಮನವಿ ಸಲ್ಲಿಸಲು ನಿರ್ಧರಿಸಲಾಗಿದೆ. ಜೊತೆಗೆ, ಕಾಸರಗೋಡು ಜಿಲ್ಲೆಯ ಶಾಸಕರ ನೇತೃತ್ವದಲ್ಲಿ ವಿವಿಧ ಸಂಘಟನೆಗಳ ಪ್ರತಿನಿಧಿಗಳನ್ನು…

Read More

ಹಜ್ ಭವನ ನಿರ್ಮಾಣ ವಿಳಂಬಕ್ಕೆ ಎಸ್‌ಡಿಪಿಐ ಆಕ್ರೋಶ

ಹಜ್ ಭವನಕ್ಕೆ ಜಾಗವಿದ್ದರೂ, ಅನುದಾನವೂ ಲಭ್ಯವಿದ್ದರೂ ಕಾಮಗಾರಿ ವಿಳಂಬವಾಗುತ್ತಿರುವುದೇಕೆ ಎಂದು ಪ್ರಶ್ನಿಸಿರುವ ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್‌ಡಿಪಿಐ) ದಕ್ಷಿಣ ಕನ್ನಡ ಗ್ರಾಮಾಂತರ ಜಿಲ್ಲಾಧ್ಯಕ್ಷ ಅನ್ವರ್ ಸಾದತ್, ಮಂಗಳೂರಿನಲ್ಲಿ ದಶಕಗಳಿಂದ ನೆನೆಗುದಿಗೆ ಬಿದ್ದಿರುವ ಹಜ್ ಭವನವನ್ನು ಕೂಡಲೇ ನಿರ್ಮಿಸಬೇಕು ಹಾಗೂ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಹಜ್ ಯಾತ್ರೆಗೆ ನೇರ ವಿಮಾನ ಸೌಲಭ್ಯವನ್ನು ಮರುಾರಂಭಿಸಬೇಕು ಎಂದು ಒತ್ತಾಯಿಸಿದ್ದಾರೆ. ನಗರದ ಪಕ್ಷದ ಕಚೇರಿಯಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯ ಹಜ್ ಯಾತ್ರಿಕರು ಎದುರಿಸುತ್ತಿರುವ ಸಮಸ್ಯೆಗಳತ್ತ ಸರ್ಕಾರದ…

Read More

ಕಾಸರಗೋಡು ಕನ್ನಡ ಗ್ರಾಮದಲ್ಲಿ ಕೇರಳ ಸರಕಾರದ ಮಲಯಾಳಂ ಭಾಷಾ ಬಿಲ್ಸ್- 2025 ತಿದ್ದುಪಡಿಗೆ ಆಗ್ರಹಿಸಿ, ಕಾಸರಗೋಡು ಕನ್ನಡಿಗರ ದುಂಡು ಮೇಜಿನ ಪರಿಷತ್ತು ಗಣ್ಯರ ಸಭೆ ಯಶಸ್ವಿ

ಕೇರಳ ಸರಕಾರವು (Malayalam Bhasha Bills -2025) ಮಲಯಾಳ ಭಾಷಾ ಮಸೂದೆಯಲ್ಲಿ ಕನ್ನಡ ಭಾಷಾ ಅಲ್ಪ ಸಂಖ್ಯಾತರನ್ನು ಹೊರತುಪಡಿಸಲು ಆಗ್ರಹಿಸಿ, ಮುಂದಿನ ಕೇರಳ ವಿಧಾನ ಸಭಾ ಚುನಾವಣೆಯಲ್ಲಿ ಚುನಾಯಿತರಾದ ನೂತನ ಮುಖ್ಯಮಂತ್ರಿಗಳು,ಸಚಿವರು, ಶಾಸಕರು ಒಮ್ಮತದಿಂದ ಈ ಮಸೂದೆಯನ್ನು ಮರು ಪರಿಶೀಲಿಸಿ ಸೂಕ್ತ ತಿದ್ದುಪಡಿ ಯೊಂದಿಗೆ ಪುನ: ಅನುಷ್ಠಾನಗೊಳಿಸಬೇಕೆಂದು ಆಗ್ರಹಿಸಿ ಕಾಸರಗೋಡು ಪ್ರದೇಶದ ವಿವಿಧ ಸಂಘಟನೆಗಳ ಪದಾಧಿಕಾರಿಗಳು, ಪ್ರತಿನಿಧಿಗಳು, ಮಾಧ್ಯಮದವರು ಒಗ್ಗೂಡಿ, “ಕಾಸರಗೋಡು ಕನ್ನಡಿಗರ ದುಂಡು ಮೇಜಿನ ಪರಿಷತ್ತು” ಮೂಲಕ ಮನವಿಯನ್ನು ಸಿದ್ಧಪಡಿಸಿ ಸಂಗ್ರಹ ಅಭಿಯಾನವನ್ನು ಕೈಗೊಳ್ಳಲು ತೀರ್ಮಾನಿಸಲಾಯಿತು….

Read More

ಭಗವಾನ್ ಶ್ರೀ ಮಹಾವೀರರ 2625ನೇ ಜನ್ಮ ಕಲ್ಯಾಣೋತ್ಸವ ಭಕ್ತಿಭಾವದಿಂದ ಆಚರಣೆ

ಮಂಗಳೂರು:ಜೈನ ಧರ್ಮದ ಮಹಾನ್ ತೀರ್ಥಂಕರರಾದ ಭಗವಾನ್ ಶ್ರೀ ಮಹಾವೀರರ 2625ನೇ ಜನ್ಮ ಕಲ್ಯಾಣೋತ್ಸವವನ್ನು ಮಂಗಳೂರಿನ ಬಜಿಲಕೇರಿ ಶ್ರೀ ಆದೀಶ್ವರ ಸ್ವಾಮಿ ಜೈನ ಬಸದಿಯಲ್ಲಿ ಭಕ್ತಿಭಾವದಿಂದ ಆಚರಿಸಲಾಯಿತು.ನಗರದ ಬಸ್ತಿ ಹಿತ್ಲು ಪ್ರದೇಶದಲ್ಲಿರುವ ಬಸದಿ ಮಂದಿರದಲ್ಲಿ ಸೋಮವಾರ ನಡೆದ ಈ ಕಾರ್ಯಕ್ರಮದಲ್ಲಿ ಬಹು ಸಂಖ್ಯೆಯಲ್ಲಿ ಭಕ್ತರು ಆಗಮಿಸಿದ್ದರು. ಬಸದಿಯಲ್ಲಿ ಮುಂಜಾನೆಯಿಂದಲೇ ಧಾರ್ಮಿಕ ಕಾರ್ಯಕ್ರಮ ಆಚರಣೆಯ ಭಾಗವಾಗಿ ವಿಶೇಷ ಪೂಜೆ, ಅಭಿಷೇಕ ಹಾಗೂ ಧಾರ್ಮಿಕ ಕಾರ್ಯಕ್ರಮಗಳು ಶಾಂತಿನಾಥ ಸ್ವಾಮಿಗೆ ಕ್ಷೀರಾಭಿಷೇಕ, ಅಗ್ರೋದಕ ಮೆರವಣಿಗೆ ಭಗವಾನ್ ಶ್ರೀ ಮಹಾವೀರ ಸ್ವಾಮಿಯ ಜನ್ಮ ಕಲ್ಯಾಣ,…

Read More

ಕೃಷಿ ಹೊಂಡದಲ್ಲಿ ಈಜಲು ಹೋದ ನಾಲ್ವರು ಮಕ್ಕಳು ದಾರುಣ ಸಾವು

ಯಾದಗಿರಿ: ಕೃಷಿ ಹೊಂಡದಲ್ಲಿ ಈಜಲು ತೆರಳಿದ್ದ ನಾಲ್ವರು ಮಕ್ಕಳು ದಾರುಣವಾಗಿ ಮೃತಪಟ್ಟ ಘಟನೆ ಜಿಲ್ಲೆಯ ಸುರಪುರ ತಾಲ್ಲೂಕಿನ ನಗನೂರು ಗ್ರಾಮದಲ್ಲಿ ನಡೆದಿದೆ.ಮೃತರನ್ನು ಕಿರಣ, ಬಸಮ್ಮ, ಶರತ್ ಮತ್ತು ಹನುಮೇಶ್ ಎಂದು ಗುರುತಿಸಲಾಗಿದೆ. ಶಾಲೆಗೆ ರಜೆ ಇದ್ದ ಹಿನ್ನೆಲೆಯಲ್ಲಿ ಮಕ್ಕಳು ಹೊಂಡದಲ್ಲಿ ಈಜಲು ಹೋಗಿದ್ದರು ಎನ್ನಲಾಗಿದೆ. ಈ ವೇಳೆ ಅನಾಹುತ ಸಂಭವಿಸಿ ನಾಲ್ವರೂ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ. ಘಟನೆ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ.ಈ ದುರ್ಘಟನೆ ಗ್ರಾಮದಲ್ಲಿ ಶೋಕದ ವಾತಾವರಣ ನಿರ್ಮಾಣ ಮಾಡಿದೆ.

Read More

ಮರೆಯಾಗದಿರಲಿ ತುಳುನಾಡಿನ ಮೂಲ ಸಂಪ್ರದಾಯ.ತುಳುವೆರೆ ಕಲ ಕಾರ್ಯಕ್ರಮದಲ್ಲಿ ಕೊಡೆತ್ತೂರು ಗುತ್ತಿನಾರ್ ನಿತಿನ್ ಶೆಟ್ಟಿ ಆಶಯ

ಕಿನ್ನಿಗೋಳಿ: ತುಳುನಾಡಿನ ನಂಬಿಕೆ ಅನನ್ಯ. ದೈವವನ್ನು ಪ್ರೀತಿಪೂರ್ವಕವಾಗಿ ನಂಬಿದರೆ ಅವು ನಮ್ಮನ್ನು ಅಷ್ಟೇ ಪ್ರೀತಿಯಿಂದ ಕೈ ಹಿಡಿಯುತ್ತದೆ. ಅದಕ್ಕೆ ಅನೇಕ ನಿದರ್ಶನಗಳಿವೆ. ಯಾವುದೇ ಕಾರಣಕ್ಕೂ ನಮ್ಮ ಮೂಲ ಸಂಪ್ರದಾಯವನ್ನು ಮರೆಯಬಾರದು ಎಂದು ಕೊಡೆತ್ತೂರು ಗಡಿ ಪ್ರಧಾನರಾದ ನಿತಿನ್ ಶೆಟ್ಟಿ ಹೇಳಿದರು.ತುಲುವೆರೆ ಕಲ(ರಿ.) ಮಂಗಳೂರು ವತಿಯಿಂದ ಭಾನುವಾರ ಗುತ್ತಿನ ಚಾವಡಿಯಲ್ಲಿ ನಡೆದ ‘ಗುತ್ತುಗೊಂಜಿ ಕಲೊತ ಸುತ್ತು’ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ತುಳುನಾಡಿನ ಸಂಸ್ಕೃತಿಯಲ್ಲಿ ಗುತ್ತುಗಳ ಪಾತ್ರ ಅಪಾರ. ದೇವಳಗಳಲ್ಲಿರುವ ಶಿಷ್ಟಾಚಾರ ಗುತ್ತಿನ ಮನೆಗಳಿಗೂ ಅನ್ವಯ. ವಿಶ್ವಾದ್ಯಂತ ಅನೇಕ ಖ್ಯಾತನಾಮರನ್ನು…

Read More

ಬಿಸಿರೋಡು : ವೈರಲ್ ವಿಡಿಯೋ ಮೂಲಕ ಹೊರಬಂದ ರಸ್ತೆ ಅವ್ಯವಸ್ಥೆ

ಬಂಟ್ವಾಳ: ರಾಷ್ಟ್ರೀಯ ಹೆದ್ದಾರಿ ಮಂಗಳೂರು- ಬೆಂಗಳೂರು ರಸ್ತೆ ಮಧ್ಯೆ ಬಿಸಿರೋಡು ಜಂಕ್ಷನ್ ನಲ್ಲಿ ನಿತ್ಯ ಟ್ರಾಫಿಕ್ ಜಾಮ್ ಸಮಸ್ಯೆಯಾಗುತ್ತಿದೆ ಎಂಬುದರ ಕುರಿತು ವ್ಯಕ್ತಿಯೋರ್ವರು ಮಾಡಿದ ವಿಡಿಯೋ ಒಂದು ಸಾಮಾಜಿಕ ಜಾಲತಾಣದ ಮ‌ೂಲಕ ವೈರಲ್ ಆಗಿದೆ.ಖಾಲಿದ್ ನಂದಾವರ ಎಂಬವರು ಕಾರಿನಲ್ಲಿ ಸಂಚರಿಸುವ ವೇಳೆ ರಸ್ತೆಯ ಮೇಲೆ ನಿಲ್ಲಿಸಿ ಟ್ರಾಫಿಕ್ ಜಾಮ್ ಸಮಸ್ಯೆಗೆ ಕಾರಣವಾಗಿದ್ದ ವಾಹನಗಳ ವಿಡಿಯೋ ಮಾಡಿದ್ದಲ್ಲದೆ, ಸಾಮಾಜಿಕ ಜಾಲತಾಣದ ಮೂಲಕ ವೈರಲ್ ಮಾಡಿದ್ದಾರೆ. ಬಿಸಿರೋಡಿನಲ್ಲಿ ಇತ್ತೀಚಿಗೆ ನಿರ್ಮಾಣವಾದ ಬಾವ ಬಿಲ್ಡರ್ ನವರ ಸ್ಮಾರ್ಟ್ ಸಿಟಿ ಕಾಂಪ್ಲೆಕ್ಸ್ ಮುಂಭಾಗದಿಂದ…

Read More

ಬಂಟ್ವಾಳದಲ್ಲಿ ಮಾ.30ರಿಂದ ಎ.4ರವರೆಗೆ ಬ್ರಹ್ಮಕಲಶೋತ್ಸವ ಮಹೋತ್ಸವ

ಬಂಟ್ವಾಳ: ಶ್ರೀ ಜಗದಂಬಿಕಾ ಶ್ರೀ ಮಹಮ್ಮಾಯಿ ಗುಳಿಗ ಅಣ್ಣಪ್ಪ ಕ್ಷೇತ್ರ ಸೇವಾ ಸಮಿತಿ ( ರಿ.) ದೇವಿನಗರ – ದಡ್ಡಲಕಾಡು ಇಲ್ಲಿ ಮಾ.30 ರಿಂದ ಎ.4 ರ ವರೆಗೆ ನವೀಕರಣ ಪುನರ್ ಪ್ರತಿಷ್ಠಾ ಬ್ರಹ್ಮಕಲಶೋತ್ಸವ,ಶ್ರೀ ಚಂಡಿಕಾಯಾಗ ಹಾಗೂ ಸಹಪರಿವಾರ ದೇವರ ಪ್ರತಿಷ್ಠಾ ಮಹೋತ್ಸವ ಕಾರ್ಯಕ್ರಮಗಳು ನಡೆಯಲಿವೆ ಎಂದು ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ರಾಮದಾಸ್ ಬಂಟ್ವಾಳ ತಿಳಿಸಿದರು.ಅವರು ಬಿಸಿರೋಡಿನ ಪ್ರೆಸ್ ಕ್ಲಬ್ ನಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು. ‌‌‌‌ ಸತ್ಯನಾರಾಯಣ ಭಟ್ ಶಿವಕ್ಷೇತ್ರ, ಇಜ್ಜ ಇವರ ನೇತ್ರತ್ವದಲ್ಲಿ, ವೇದಮೂರ್ತಿ…

Read More

ಏಪ್ರಿಲ್ 26ರಂದು ಕೊಂಕಣಿ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪ್ರಕಟ:ಮೂವರಿಗೆ ಗೌರವ

ಮಂಗಳೂರು:ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯ 2025ನೇ ಸಾಲಿನ ಗೌರವ ಪ್ರಶಸ್ತಿ ಹಾಗೂ ಪುಸ್ತಕ ಪುರಸ್ಕಾರಗಳನ್ನು ಘೋಷಿಸಲಾಗಿದ್ದು, ಸಾಹಿತ್ಯ ಕ್ಷೇತ್ರದಲ್ಲಿ ಸಾಧನೆಗೈದ ಹಿರಿಯ ಸಾಹಿತಿ ರೋನ್ ರೋಚ್ ಕಾಸ್ಸಿಯಾ, ಕಲಾ ಕ್ಷೇತ್ರದಲ್ಲಿ ರಾಮದಾಸ ದತ್ತಾತ್ರೇಯ ಗುಲ್ವಾಡಿ ಹಾಗೂ ಜಾನಪದ ಕ್ಷೇತ್ರದಲ್ಲಿ ಸೈರು (ಮುರಳೀಧರ) ಪುತ್ತು ನಾಯ್ಕ ಅವರು ಗೌರವ ಪ್ರಶಸ್ತಿಗೆ ಭಾಜನರಾಗಿದ್ದು ಕಾರ್ಯಕ್ರಮವು ಎ.26ರಂದು ಸಂಜೆ 5 ಗಂಟೆಗೆ ಉಡುಪಿ ಉದ್ಯಾವರ ಚರ್ಚ್ ವಠಾರದಲ್ಲಿ ನಡೆಯಲಿದೆ ಎಂದು ಕೊಂಕಣಿ ಸಾಹಿತ್ಯ ಅಕಾಡಮಿಯ ಅಧ್ಯಕ್ಷರಾದ ಸ್ಟ್ಯಾನಿ ಅಲ್ವಾರಿಸ್ ತಿಳಿಸಿದರು. ನಗರದ…

Read More
error: Content is protected !!