ಸಂಧ್ಯಾರಾಣಿ ಟೀಚರ್ ಅವರಿಗೆ ‘ಶ್ರೀ ಕೃಷ್ಣಾನುಗ್ರಹ ಪ್ರಶಸ್ತಿ’ ಘೋಷಣೆ

ಕಾಸರಗೋಡು:ಗಡಿನಾಡು ಕಾಸರಗೋಡಿನ ಕನ್ನಡ ಸೇವೆಯಲ್ಲಿ ತೊಡಗಿಸಿಕೊಂಡಿರುವ ಕನ್ನಡ ಭವನ ಸಮೂಹ ಸಂಸ್ಥೆಗಳ ಮುಖ್ಯಸ್ಥೆ ಶ್ರೀಮತಿ ಸಂಧ್ಯಾರಾಣಿ ಟೀಚರ್ ಅವರಿಗೆ 2026ನೇ ಸಾಲಿನ ‘ಶ್ರೀ ಕೃಷ್ಣಾನುಗ್ರಹ ಪ್ರಶಸ್ತಿ’ ಪ್ರದಾನ ಮಾಡಲು ನಿರ್ಧರಿಸಲಾಗಿದೆ. ಉಡುಪಿ ಶ್ರೀ ಕೃಷ್ಣ ಮಠ, ಪರ್ಯಾಯ ಶಿರೂರು ಮಠ ಹಾಗೂ ಮಂಗಳೂರಿನ ಕಥಾಬಿಂದು ಪ್ರಕಾಶನ ಮತ್ತು ಕಥಾಬಿಂದು ಸಾಹಿತ್ಯ ವೇದಿಕೆಯ ಆಶ್ರಯದಲ್ಲಿ ಏಪ್ರಿಲ್ 12ರಂದು ಉಡುಪಿಯ ರಾಜಾಂಗಣದಲ್ಲಿ ನಡೆಯಲಿರುವ ‘ಕಥಾಬಿಂದು ಸಾಹಿತ್ಯ ಸಮ್ಮೇಳನ 2026’ ಸಂದರ್ಭದಲ್ಲಿ ಈ ಪ್ರಶಸ್ತಿ ಪ್ರದಾನ ನಡೆಯಲಿದೆ. ಈ ಸಮ್ಮೇಳನವನ್ನು ಶಿರೂರು…

Read More

ಚುನಾವಣಾ ಜಾಗೃತಿಗೆ ಬಾಲಕಿಯ ವಿಶಿಷ್ಟ ಪ್ರಯತ್ನ: ಮತದಾನದ ಮಹತ್ವ ಸಾರಿದ ಸನ್ನಿಧಿ

ಬಂಟ್ವಾಳ/ಕಾಸರಗೋಡು:ಮತದಾರರನ್ನು ಚುನಾವಣಾ ಪ್ರಕ್ರಿಯೆಯ ಭಾಗವಾಗಿಸಲು ಹನ್ನೊಂದು ವರ್ಷದ ಬಾಲಕಿ ಸನ್ನಿಧಿ ಕಶೆಕೋಡಿ ವಿಶಿಷ್ಟ ಜಾಗೃತಿ ಮೂಡಿಸುತ್ತಿದ್ದು, ಸಾರ್ವಜನಿಕರಿಂದ ಮೆಚ್ಚುಗೆ ಪಡೆಯುತ್ತಿದ್ದಾರೆ. ಮಂಗಳೂರು ಬಂಟ್ವಾಳ ಮೂಲದ ಸನ್ನಿಧಿ, ಮಂಜೇಶ್ವರ ಹಾಗೂ ಕಾಸರಗೋಡು ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಸಂಚರಿಸಿ ಮತದಾನದ ಮಹತ್ವವನ್ನು ಜನಸಾಮಾನ್ಯರಿಗೆ ತಿಳಿಸುವ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ. ಐದು ಭಾಷೆಗಳಲ್ಲಿ ಮಾತನಾಡುವ ಸಾಮರ್ಥ್ಯ ಹೊಂದಿರುವ ಈ ಬಾಲಕಿ, ದೆಹಲಿ, ಗೋವಾ, ಕೇರಳ ಹಾಗೂ ಕರ್ನಾಟಕ ರಾಜ್ಯಗಳಲ್ಲಿಯೂ ಇದೇ ರೀತಿಯ ಜಾಗೃತಿ ಕಾರ್ಯ ನಡೆಸಿ ಪ್ರಶಂಸೆಗೆ ಪಾತ್ರರಾಗಿದ್ದಾರೆ. ಇಂದು ಕಾಸರಗೋಡು ಜಿಲ್ಲಾ…

Read More

ಪೆರ್ಲ ಪೇಟೆಯಲ್ಲಿ ಬಿಜೆಪಿ ಭರ್ಜರಿ ರೋಡ್ ಶೋ: ಕೆ. ಸುರೇಂದ್ರನ್ ಪರ ಅಣ್ಣಾಮಲೈ ಪ್ರಚಾರ

ಪೆರ್ಲ (ಮಂಜೇಶ್ವರ):ಬಿಜೆಪಿ ಅಭ್ಯರ್ಥಿ ಕೆ. ಸುರೇಂದ್ರನ್ ಅವರ ಬಹಿರಂಗ ಪ್ರಚಾರದ ಅಂತಿಮ ದಿನದ ಅಂಗವಾಗಿ ಇಂದು ಬೆಳಿಗ್ಗೆ 10 ಗಂಟೆಗೆ ಪೆರ್ಲ ಪೇಟೆಯಲ್ಲಿ ಭರ್ಜರಿ ರೋಡ್ ಶೋ ನಡೆಯಿತು. ಶ್ರೀಮಾತಾ ಆರ್ಕೇಡ್ ಚೆಕ್ ಪೋಸ್ಟ್ ಪ್ರದೇಶದಿಂದ ಆರಂಭವಾದ ಮೆರವಣಿಗೆ ಪೆರ್ಲದ ಪ್ರಮುಖ ರಾಜ ರಸ್ತೆಗಳಲ್ಲಿ ಸಂಚರಿಸಿ ಗಮನ ಸೆಳೆಯಿತು. ಈ ರೋಡ್ ಶೋಗೆ ಮುಖ್ಯ ಅತಿಥಿಯಾಗಿ ಮಾಜಿ ಐಪಿಎಸ್ ಅಧಿಕಾರಿ ಹಾಗೂ ಬಿಜೆಪಿ ನಾಯಕ ಕೆ. ಅಣ್ಣಾಮಲೈ ಭಾಗವಹಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅಣ್ಣಾಮಲೈ, ಬಿಜೆಪಿ ಅಭ್ಯರ್ಥಿ…

Read More

ಮಂಗಲ್ಪಾಡಿಯಲ್ಲಿ ಅಂಬೇಡ್ಕರ್ ಜಯಂತಿ ಹಾಗೂ ವಾರ್ಷಿಕೋತ್ಸವ: ಪೂರ್ವಭಾವಿ ಸ್ಪರ್ಧೆಗಳು ಆಯೋಜನೆ

ಮಂಜೇಶ್ವರ (ಮಂಗಲ್ಪಾಡಿ):ಡಾ. ಬಿ.ಆರ್ ಅಂಬೇಡ್ಕರ್ ಗ್ರಾಮ ವಿಕಸನ ಮತ್ತು ಕಲಾವೇದಿಕೆ, ಮಂಗಲ್ಪಾಡಿ ವತಿಯಿಂದ ಭಾರತ ರತ್ನ ಡಾ. ಬಿ.ಆರ್ ಅಂಬೇಡ್ಕರ್ ಅವರ 137ನೇ ಜನ್ಮದಿನ ಹಾಗೂ ಕಲಾವೇದಿಕೆಯ 29ನೇ ವಾರ್ಷಿಕೋತ್ಸವವನ್ನು ಏಪ್ರಿಲ್ 11, 2026ರಂದು ಶನಿವಾರ ರಾತ್ರಿ 8 ಗಂಟೆಗೆ ವೈಭವದಿಂದ ಆಚರಿಸಲು ತೀರ್ಮಾನಿಸಲಾಗಿದೆ. ಈ ಕಾರ್ಯಕ್ರಮದ ಪೂರ್ವಭಾವಿಯಾಗಿ ಏಪ್ರಿಲ್ 5, 2026ರಂದು ಭಾನುವಾರ ಮಕ್ಕಳಿಗೆ, ಮಹಿಳೆಯರಿಗೆ ಹಾಗೂ ಪುರುಷರಿಗೆ ವಿವಿಧ ಆಟೋಟ ಸ್ಪರ್ಧೆಗಳು ಆಯೋಜಿಸಲಾಯಿತು. ಈ ಸ್ಪರ್ಧೆಗಳಲ್ಲಿ ಸ್ಥಳೀಯರು ಉತ್ಸಾಹದಿಂದ ಭಾಗವಹಿಸಿ ಕ್ರೀಡಾತ್ಮಕ ಮನೋಭಾವವನ್ನು ತೋರಿಸಿದರು….

Read More

ಕಾಸರಗೋಡು ಮಂಜೇಶ್ವರ ಸೇರಿದಂತೆ ಐದು ವಿಧಾನ ಸಭಾ ಕ್ಷೇತ್ರ ಸಮೀಕ್ಷೆ: ಗಡಿ ಜಿಲ್ಲೆಯಲ್ಲಿ ಹಳೆ ಆಟ, ಹಳೆ ಲೆಕ್ಕಾಚಾರ? ಐದು ಚಾನೆಲ್‌ಗಳ ಭವಿಷ್ಯ ಹೀಗಿದೆ.

​ ಮಂಜೇಶ್ವರ: ಕೇರಳ ವಿಧಾನಸಭಾ ಚುನಾವಣೆಯ ಕಣ ರಂಗೇರುತ್ತಿರುವಂತೆಯೇ ಹೊರಬಿದ್ದಿರುವ ಮಲಯಾಳಂನ ಪ್ರಮುಖ ಐದು ಸುದ್ದಿವಾಹಿನಿಗಳ ಸಮೀಕ್ಷಾ ವರದಿಗಳು ಜಿಲ್ಲೆಯಲ್ಲಿ ಹಳೆ ಫಲಿತಾಂಶವೇ ಮರುಕಳಿಸುವ ಮುನ್ಸೂಚನೆ ನೀಡಿವೆ. ಏಶ್ಯಾನೆಟ್, ಮನೋರಮಾ, ಮಾತೃಭೂಮಿ, ಬಿಗ್ ಟಿವಿ ಮತ್ತು ರಿಪೋರ್ಟರ್ ಚಾನೆಲ್‌ಗಳ ಸಮೀಕ್ಷೆಯ ಪ್ರಕಾರ, ಜಿಲ್ಲೆಯ ಐದು ಕ್ಷೇತ್ರಗಳ ಪೈಕಿ ಎಡರಂಗ 3 ಮತ್ತು ಯುಡಿಎಫ್ 2 ಕ್ಷೇತ್ರಗಳಲ್ಲಿ ಜಯಭೇರಿ ಬಾರಿಸಲಿವೆ. ​ಹೈವೋಲ್ಟೇಜ್ ಕ್ಷೇತ್ರಗಳಲ್ಲಿ ಬದಲಾಗದ ಹವಾ!​ಎಲ್ಲರ ಕಣ್ಣು ನೆಟ್ಟಿರುವ ಮಂಜೇಶ್ವರ ಮತ್ತು ಕಾಸರಗೋಡು ಕ್ಷೇತ್ರಗಳಲ್ಲಿ ಈ ಬಾರಿಯೂ ಯಾವುದೇ…

Read More

ಲೀಗ್ ನಾಯಕರ ವಿರುದ್ಧ ಅಸಮಾಧಾನ: ಮಂಜೇಶ್ವರದಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಅಬ್ದುಲ್ಲ ಮಾಸ್ಟರ್ ಕಣಕ್ಕೆ

ಕುಂಬಳೆ (ಕಾಸರಗೋಡು):ಮುಸ್ಲಿಂ ಲೀಗ್ ನಾಯಕರು ನೀಡಿದ ಭರವಸೆಗಳನ್ನು ಈಡೇರಿಸಲಿಲ್ಲವೆಂದು ಆರೋಪಿಸಿ, ಮಂಜೇಶ್ವರ ವಿಧಾನಸಭಾ ಕ್ಷೇತ್ರದಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿರುವ ಅಬ್ದುಲ್ಲ ಮಾಸ್ಟರ್ ಕಣ್ಣೂರು ಪ್ರಚಾರ ಕಾರ್ಯದಲ್ಲಿ ಸಕ್ರಿಯರಾಗಿದ್ದಾರೆ. ಕಳೆದ ಚುನಾವಣೆಯಲ್ಲಿ ಅಲ್ಪ ಮತಾಂತರದಲ್ಲಿ ಜಯಗಳಿಸಿದ್ದ ಮುಸ್ಲಿಂ ಲೀಗ್ ಪಕ್ಷವನ್ನು ಮತ್ತೆ ಗೆಲ್ಲಿಸಲು ಕಾರ್ಯಕರ್ತರು ಶ್ರಮಿಸುತ್ತಿರುವ ಸಂದರ್ಭದಲ್ಲೇ, ಪಕ್ಷದ ಸಕ್ರಿಯ ಕಾರ್ಯಕರ್ತರಾಗಿದ್ದ ಅಬ್ದುಲ್ಲ ಮಾಸ್ಟರ್ ಸ್ವತಂತ್ರ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವುದು ರಾಜಕೀಯ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ. ಸುಮಾರು 14 ವರ್ಷಗಳ ಹಿಂದೆ ತನ್ನ ಪುತ್ರ ಮೊಹಮ್ಮದ್ ಇರ್ಷಾದ್ ಮೂಲಕ, ಲೀಗ್…

Read More

ಗಡಿನಾಡ ಕನ್ನಡ ಸೇವೆಗೆ ಡಾ. ವಾಮನ್ ರಾವ್ ಬೇಕಲ್‌ಗೆ ‘ಹೊಯ್ಸಳ ಪ್ರಶಸ್ತಿ–2025’ ಗೌರವ

ಕಾಸರಗೋಡು/ಮೈಸೂರು:ಗಡಿನಾಡ ಕಾಸರಗೋಡಿನಲ್ಲಿ ಕನ್ನಡ ಸೇವೆಗಾಗಿ ನಿರಂತರವಾಗಿ ದುಡಿಯುತ್ತಿರುವ ಕನ್ನಡ ಭವನದ ರೂವಾರಿ ಡಾ. ವಾಮನ್ ರಾವ್ ಬೇಕಲ್ ಅವರಿಗೆ ಪ್ರತಿಷ್ಠಿತ “ಹೊಯ್ಸಳ ಪ್ರಶಸ್ತಿ–2025” ಪ್ರದಾನ ಮಾಡಲಾಗಿದೆ. ಮೈಸೂರಿನ ಹೊಯ್ಸಳ ಕನ್ನಡ ಸಂಘ ಹಾಗೂ ಸವಿಗನ್ನಡ ಪತ್ರಿಕಾ ಬಳಗದ ವತಿಯಿಂದ ಮೈಸೂರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಭವನದಲ್ಲಿ ಏಪ್ರಿಲ್ 5, 2026ರಂದು ನಡೆದ 26ನೇ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಈ ಪ್ರಶಸ್ತಿ ಪ್ರದಾನ ನಡೆಯಿತು. ಕಾರ್ಯಕ್ರಮವನ್ನು ಪದ್ಮಶ್ರೀ ಪುರಸ್ಕೃತ ಪುಸ್ತಕಪ್ರೇಮಿ ಅಂಕೆಗೌಡ ದೀಪ ಬೆಳಗಿಸಿ ಉದ್ಘಾಟಿಸಿದರು. ಈ ಸಂದರ್ಭದಲ್ಲಿ…

Read More

ಚಂದ್ರಗಿರಿ ಕೊಪ್ಪಲು ಶ್ರೀ ಮಹಾಮ್ಮಾಯಿ ಅಮ್ಮನವರ ದೇವಳದಲ್ಲಿ 55ನೇ ಪ್ರತಿಷ್ಠಾ ಮಹೋತ್ಸವ ವೈಭವ

ಕಾಸರಗೋಡು:ಜಿಲ್ಲೆಯ ಐತಿಹಾಸಿಕ ಚಂದ್ರಗಿರಿ ಕೋಟೆ ಪರಿಸರದಲ್ಲಿರುವ ಚಂದ್ರಗಿರಿ ಕೊಪ್ಪಲು ಶ್ರೀ ಮಹಾಮ್ಮಾಯಿ ಅಮ್ಮನವರ ದೇವಳದ 55ನೇ ಪ್ರತಿಷ್ಠಾ ಮಹೋತ್ಸವವು ಭಕ್ತಿಭಾವದಿಂದ ಹಾಗೂ ವೈಭವದಿಂದ ಜರಗಿತು. ಬ್ರಹ್ಮಶ್ರೀ ಅರವತ್ ಪದ್ಮನಾಭ ತಂತ್ರಿಗಳ ಉಪಸ್ಥಿತಿಯಲ್ಲಿ, ಕೀಕಾಂಗೋಡು ಪನ್ನಿಪಳ್ಳಿ ಬ್ರಹ್ಮಶ್ರೀ ಶ್ರೀಧರ ಕಾಯರ್ ತ್ತಾಯರ ನೇತೃತ್ವದಲ್ಲಿ, ಚಂದ್ರಗಿರಿ ಅವಿನಾಶ್ ಭಟ್ ಅವರ ಸಹಭಾಗಿತ್ವದಲ್ಲಿ ಕಾರ್ಯಕ್ರಮಗಳು ನೆರವೇರಿದವು. ಏಪ್ರಿಲ್ 3ರಿಂದ 5ರವರೆಗೆ ನಡೆದ ಈ ಮಹೋತ್ಸವದ ಅಂಗವಾಗಿ ಕುಲಪುರೋಹಿತರಾದ ನಾಗೇಶ್ ಭಟ್ ತಲ್ಲಾಣಿ ಅವರ ಪೌರೋಹಿತ್ಯದಲ್ಲಿ ಸಾಮೂಹಿಕ ಉಚಿತ ಬ್ರಹ್ಮೋಪದೇಶ, ಹರಿಸೇವೆ ಹಾಗೂ…

Read More

ಮಂಜೇಶ್ವರ ಪೊಲೀಸ್ ಠಾಣಾ ಆವರಣದಲ್ಲಿ ಅಗ್ನಿ ಅವಘಡ: ಕಸ್ಟಡಿಯಲ್ಲಿದ್ದ 36 ವಾಹನಗಳು ಭಸ್ಮ

ಮಂಜೇಶ್ವರ: ಮಂಜೇಶ್ವರ ಪೊಲೀಸ್ ಠಾಣಾ ಕಸ್ಟಡಿಯಲ್ಲಿದ್ದ ಸುಮಾರು 36ಕ್ಕೂ ಹೆಚ್ಚು ವಾಹನಗಳು ಆಕಸ್ಮಿಕ ಬೆಂಕಿಗೆ ತುತ್ತಾಗಿ ಸಂಪೂರ್ಣ ಸುಟ್ಟು ಕರಕಲಾದ ಘಟನೆ ಇಂದು ಬೆಳಿಗ್ಗೆ ನಡೆದಿದೆ.​​ವಿವಿಧ ಅಪರಾಧ ಪ್ರಕರಣಗಳು, ದಾಖಲೆಗಳಿಲ್ಲದ ಕಾರಣಕ್ಕಾಗಿ ಮುಟ್ಟುಗೋಲು ಹಾಕಿಕೊಂಡಿದ್ದ ಮತ್ತು ಅಪಘಾತಕ್ಕೀಡಾಗಿ ಮಾಲೀಕರು ಬಿಟ್ಟು ಹೋಗಿದ್ದ ವಾಹನಗಳನ್ನು ಠಾಣಾ ಆವರಣದಲ್ಲಿ ನಿಲ್ಲಿಸಲಾಗಿತ್ತು. ದಿಢೀರಾಗಿ ಕಾಣಿಸಿಕೊಂಡ ಬೆಂಕಿಯು ಕ್ಷಣಾರ್ಧದಲ್ಲಿ ಆವರಣದಾದ್ಯಂತ ಹರಡಿದೆ. ಈ ಅಗ್ನಿ ದುರಂತದಲ್ಲಿ ಆಟೋರಿಕ್ಷಾಗಳು, ಓಮ್ನಿ ವ್ಯಾನ್‌ಗಳು, ಮಿನಿ ಲಾರಿಗಳು ಹಾಗೂ ಕಾರುಗಳು ಸೇರಿದಂತೆ ಒಟ್ಟು 36 ವಾಹನಗಳು ಬೆಂಕಿಗಾಹುತಿಯಾಗಿವೆ….

Read More

ಮಂಜೇಶ್ವರ ‘ಹಾಟ್ ಸೀಟ್’ ಗೆ ಬಿಜೆಪಿ ಕಸರತ್ತು: ಮನೆಮನೆಗೆ ತೆರಳಿ ಮತಯಾಚನೆ

ಕೇರಳದ ಮಂಜೇಶ್ವರ ವಿಧಾನಸಭಾ ಕ್ಷೇತ್ರ ಪ್ರತಿ ಚುನಾವಣೆಯಲ್ಲೂ ಕಠಿಣ ಸ್ಪರ್ಧೆ ನಡೆಯುವ “ಹಾಟ್ ಸೀಟ್” ಎಂದು ಪರಿಗಣಿಸಲಾಗುವ ಕ್ಷೇತ್ರ. ಪ್ರತೀ ಚುನಾವಣೆಯಲ್ಲಿ ಅತೀ ಕಡಿಮೆ ಅಂತರದಲ್ಲಿ ಸೋಲುವ ಬಿಜೆಪಿ ಈ ಬಾರಿ ಕಮಲ ಅರಳಿಸಲು ಶತಾಯಗತಾಯ ಪ್ರಯತ್ನ ಮಾಡುತ್ತಿದೆ. .ಈ ನಿಟ್ಟಿನಲ್ಲಿ ತುಳು ಕನ್ನಡ ಮಾತನಾಡುವ ಜನರೇ ಅಧಿಕವಾಗಿರುವ ಎಣ್ಮಕಜೆ ವ್ಯಾಪ್ತಿಯ ಕಂಡೇರಿ ಗ್ರಾಮ ಪಂಚಾಯತ್ ನಲ್ಲಿ ಮಂಜೇಶ್ವರ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾದ ಶ್ರೀ ಕೆ ಸುರೇಂದ್ರನ್ ರವರ ಪರವಾಗಿ ವಿಧಾನ ಪರಿಷತ್ ಸದಸ್ಯರಾದ ಶ್ರೀ…

Read More
error: Content is protected !!