ಮಂಜೇಶ್ವರದಲ್ಲಿ ದಾಖಲೆ 81.04% ಮತದಾನ!ಕಾಸರಗೋಡು ಜಿಲ್ಲೆಯಲ್ಲೇ ಅತ್ಯಧಿಕ ಮತದಾನ

ಕಾಸರಗೋಡು: ನಿನ್ನೆ ನಡೆದ ವಿಧಾನಸಭಾ ಚುನಾವಣೆಯಲ್ಲಿ ಔದ್ಯೋಗಿಕ ಮಾಹಿತಿಯಂತೆ ಕಾಸರಗೋಡು ಜಿಲ್ಲೆಯಲ್ಲಿ 79. 11ಶೇ. ಮತದಾನವಾಗಿದೆ.ಐದು ವಿಧಾನಸಭಾ ಕ್ಷೇತ್ರಗಳ ಪೖಕಿ ಅತೀ ಹೆಚ್ಚು ಮತದಾನ ( 81.04 ಶೇ.) ಮಂಜೇಶ್ವರದಲ್ಲಿ ನಡೆದಿದ್ದು ಕುತೂಹಲ ಮೂಡಿಸಿದೆ. ಮಂಜೇಶ್ವರದ ಮತದಾನದ ಶೇಕಡಾವಾರು ಹೆಚ್ಚಳ ಯಾವ ಅಭ್ಯರ್ಥಿಗೆ ಅನುಕೂಲವಾಗಲಿದೆ ಎಂಬುದು ಕೌತುಕ ಮೂಡಿಸಿದೆ. ಮಂಜೇಶ್ವರದಲ್ಲಿ 2011ರ ವಿಧಾನಸಭಾ ಚುನಾವಣೆಯಲ್ಲಿ 75.21 ಶೇ ಮತದಾನವಾಗಿತ್ತು. ತದನಂತರ ಬಿಜೆಪಿ ಕೇವಲ 89 ಮತಗಳ ಅಂತರದಲ್ಲಿ ಸೋಲುಂಡ 2016 ರ ಚುನಾವಣೆಯಲ್ಲಿ 76.33 ಶೇ. ಮತದಾನ…

Read More

ಮೂಡಂಬೈಲ್ ನಲ್ಲಿ ಪಜಿಂಗಾರ್ ಸಾಲಿಯಾನ್ ಕುಟುಂಬದ ನೂತನ ತರವಾಡಿನ ಗ್ರಹಪ್ರವೇಶ , ಬ್ರಹ್ಮಕಲಶ ಪ್ರತಿಷ್ಠೆ ಹಾಗು ನೇಮೋತ್ಸವ

ಮಂಜೇಶ್ವರ: ಮೂಡಂಬೈಲ್ ಪಜಿಂಗಾರ್ ಸಾಲಿಯಾನ್ ಕುಟುಂಬದ ನೂತನ ತರವಾಡಿನ ಗ್ರಹಪ್ರವೇಶ, ಬ್ರಹ್ಮಕಲಶ ಪ್ರತಿಷ್ಠೆ ಹಾಗೂ ನೇಮೋತ್ಸವ ಕಾರ್ಯಕ್ರಮಗಳು ಏಪ್ರಿಲ್ 12 ಆದಿತ್ಯವಾರದಂದು ಭಕ್ತಿಭಾವದಿಂದ ನಡೆಯಲಿವೆ. ಇದರ ಪೂರ್ವಭಾವಿಯಾಗಿ ಏಪ್ರಿಲ್ 11ರಂದು ತಂತ್ರಿಗಳ ಉಪಸ್ಥಿತಿಯಲ್ಲಿ ಸ್ಥಳ ಶುದ್ಧಿ, ಪುಣ್ಯವಚನ, ಕಲಶಶುದ್ಧಿ, ವಾಸ್ತು ಹೋಮ ಮತ್ತು ವಾಸ್ತು ಬಲಿ ವಿಧಿವಿಧಾನಗಳು ನೆರವೇರಲಿವೆ. ಏಪ್ರಿಲ್ 12ರಂದು ಬ್ರಹ್ಮಶ್ರೀ ಬಡಾಜೆಬೀಡು ಗೋಪಾಲ ಕೃಷ್ಣ ತಂತ್ರಿಯವರ ಸಾನ್ನಿಧ್ಯದಲ್ಲಿ ಬೆಳಗ್ಗೆ 8:45ಕ್ಕೆ ಗ್ರಹಪ್ರವೇಶ ನಡೆಯಲಿದೆ. ಬಳಿಕ 9:10ರಿಂದ 10:19ರವರೆಗೆ ಪ್ರತಿಷ್ಠೆ, ಬ್ರಹ್ಮಕಲಶ, ಮುಡಿಪು ಸೇವೆ ಹಾಗೂ…

Read More

ನಕಲಿ ಮತದಾನಕ್ಕೆ ಯತ್ನ ಯುವಕನನ್ನು ತಡೆದ ಬಿ ಜೆ ಪಿ ಕಾರ್ಯಕರ್ತರು

ಮಂಜೇಶ್ವರ: ಮತದಾನ ಪ್ರಕ್ರಿಯೆಯಲ್ಲಿ ನಕಲಿ ಮತದಾನದ ಆರೋಪದ ಹಿನ್ನೆಲೆ ಯುವಕನೊಬ್ಬನನ್ನು ಪೊಲೀಸರು ವಶಕ್ಕೆ ತೆಗೆದುಕೊಂಡ ಘಟನೆ ಮಂಜೇಶ್ವರ ಮಂಡಲದಲ್ಲಿ ನಡೆದಿದೆ.ಕಯ್ಯಾರಿನ 128ನೇ ಸಂಖ್ಯೆಯ ಮತಗಟ್ಟೆಯಲ್ಲಿ ನಡೆದ ಘಟನೆ ವ್ಯಾಪಕ ಚರ್ಚೆ ಆಗಿದೆ ಪ್ರಶಾಂತ್ ಎನ್ನುವ ಹೆಸರಿನಲ್ಲಿ ನಕಲಿ ಮತದಾನ ಮಾಡಲು ಬಂದಿದ್ದಾನೆ ಎಂದು ಬಿ ಜೆ ಪಿ ಕಾರ್ಯಕರ್ತರು ಆರೋಪಿಸಿದ್ದರುಪೂರ್ವದಲ್ಲಿ ಪ್ರಶಾಂತ್ ಎನ್ನುವ ಯುವಕ ಮುಸ್ಲಿಂ ಮತಕ್ಕೆ ಮತಾಂತರವಾಗಿ ಮೊಹಮ್ಮದ್ ಅಶ್ರಫ್ ಎಂದು ಮರು ನಾಮಕರಣ ಮಾಡಿದಿದ್ದನು ಆದರೆ ಅವನು ತಂದಿದ್ದ ಆಧಾರ್ ಕಾರ್ಡ್ ಮೊಹಮ್ಮದ್ ಅಶ್ರಫ್…

Read More

ಸಹಸ್ರ ಕಣ್ಣುಗಳ ಸಾಕ್ಷಿಯಲ್ಲಿ ಕಂಡನಾರ್ ಕೇಳನ್ ವೆಳ್ಳಾಟಂ ವೈಭವ

ದೈವ ಮರಕಲ ಅಂಗಳವು ಅಪರೂಪದ ಕ್ಷಣಕ್ಕೆ ಸಾಕ್ಷಿಯಾಗಿದ್ದು, ಸಾವಿರಾರು ಭಕ್ತರು ಕಂಡನಾರ್ ಕೇಳನ್ ವೆಳ್ಳಾಟಂ ದರ್ಶನ ಪಡೆದು ಭಕ್ತಿಭಾವದಲ್ಲಿ ತೇಲಿದರು. ಜಿಲ್ಲೆಯ ಹೊಸದುರ್ಗ ತಾಲ್ಲೂಕಿನ ಚೇಟ್ಟುಕುಂಡು ಕೀಕಾನ ಮೀತಲ್ ವೀಡ್ ತರವಾಡಿನಲ್ಲಿ ವಯನಾಟು ಕುಲವನ್ ದೈವಕಟ್ಟು ಮಹೋತ್ಸವದ ಅಂಗವಾಗಿ ಮಂಗಲದಾಯಕ ಮೂರ್ತಿಯ ದಿವ್ಯ ದರ್ಶನ ನಿನ್ನೆಯ ದಿನವಾಯಿತ್ತು . ಸುಮಾರು ನೂರು ವರ್ಷಗಳ ಬಳಿಕ ಕೀಕಾನ ಗ್ರಾಮದಲ್ಲಿ ಕಂಡನಾರ್ ಕೇಳನ್ ವೆಳ್ಳಾಟಂ ದರ್ಶನ ನೀಡಿದ್ದು, ಸಾಕ್ಷಾತ್ ಶಿವಾಂಶ ಹೊಂದಿದ ದೈವದ ಅವತಾರ ಭಕ್ತರಲ್ಲಿ ಮೈ ರೋಮಾಂಚನ ಮೂಡಿಸಿತು….

Read More

33 ಬೂತ್‌ಗಳಲ್ಲಿ ಕಳ್ಳಮತದಾನ ಯತ್ನ ಆರೋಪ: ಕೆ. ಸುರೇಂದ್ರನ್

ಮಂಜೇಶ್ವರ: ಚುನಾವಣೆಯಲ್ಲಿ ಸೋಲಿನ ಭೀತಿಯಿಂದ ಯುಡಿಎಫ್ ಹಾಗೂ ಮುಸ್ಲಿಂ ಲೀಗ್ ವ್ಯಾಪಕವಾಗಿ ಕಳ್ಳಮತದಾನಕ್ಕೆ ಯತ್ನಿಸುತ್ತಿವೆ ಎಂದು ಎನ್‌ಡಿಎ ಅಭ್ಯರ್ಥಿ ಕೆ. ಸುರೇಂದ್ರನ್ ಆರೋಪಿಸಿದ್ದಾರೆ. ಮಂಜೇಶ್ವರದಲ್ಲಿ ಮಾತನಾಡಿದ ಅವರು, ವಿದೇಶದಲ್ಲಿರುವ ಮತದಾರರ ಸ್ಲಿಪ್‌ಗಳನ್ನು ಸಂಗ್ರಹಿಸಿ ಕಳ್ಳಮತದಾನ ಮಾಡಲು ಯತ್ನ ನಡೆಯುತ್ತಿದೆ ಎಂದು ದೂರಿದರು. ಲೀಗ್‌ನ ಬಿಎಲ್‌ಒಗಳ ಮೂಲಕ ಈ ಸ್ಲಿಪ್‌ಗಳನ್ನು ಸಂಗ್ರಹಿಸಲಾಗುತ್ತಿದೆ ಎಂದು ಆರೋಪಿಸಿದರು. ಮುಸ್ಲಿಂ ಲೀಗ್ ಪ್ರಭಾವವಿರುವ ಸುಮಾರು 33 ಬೂತ್‌ಗಳಲ್ಲಿ ಇಂತಹ ಯತ್ನ ನಡೆಯುತ್ತಿದ್ದು, ಮಹಿಳೆಯರನ್ನು ಬಳಸಿಕೊಂಡು ಕಳ್ಳಮತದಾನ ಮಾಡಲು ಯೋಜನೆ ರೂಪಿಸಲಾಗಿದೆ ಎಂದು ಹೇಳಿದರು….

Read More

“ಕಾಸರಗೋಡು ಗೋ- ಕುಟೀರ”ದ ನಿರ್ಮಾಣಕ್ಕೆ ಗೋ- ಭಕ್ತರು,ಗೋ- ಪೋಷಕರು ದಾನಿಗಳಿಂದ ಸಹಕಾರದ ನಿರೀಕ್ಷೆಯಲ್ಲಿ

ಕಾಸರಗೋಡು :- ಕರಾವಳಿ ಸಾಂಸ್ಕೃತಿಕ ಪ್ರತಿಷ್ಠಾನ (ರಿ.),ಕಾಸರಗೋಡು ಇದರ 35ನೇ ಸಂಸ್ಥಾಪನಾ ವರ್ಷಾಚರಣೆಯ ಸಂಭ್ರಮದ ಪ್ರಯುಕ್ತ ಕಾಸರಗೋಡು ಕನ್ನಡ ಗ್ರಾಮದಲ್ಲಿ ನಿರ್ಮಾಣವಾಗುತ್ತಿರುವ “ಕಾಸರಗೋಡು ಗೋ-ಕುಟೀರ”ದ ಕಾಮಗಾರಿಗೆ ಗೋ- ಭಕ್ತರು, ಗೋ -ಪೋಷಕರು, ದಾನಿಗಳಿಂದ ಆರ್ಥಿಕ ಸಹಾಯ,ಸಹಕಾರ ಪ್ರೋತ್ಸಾಹವನ್ನು ನೀಡುವಂತೆ ಮನವಿ ಮಾಡಲಾಗಿದೆ.ದೇಸಿ ಗೋವುಗಳನ್ನು ಉಳಿಸಿ ಬೆಳೆಸುವುದಕ್ಕಾಗಿ ಸುಮಾರು 25 ಲಕ್ಷ ರೂಪಾಯಿ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಕಾಸರಗೋಡು ಗೋ -ಕುಟೀರವನ್ನು ಜಗಜ್ಜನನಿ ಗೋಮಾತೆಯ ಆಶೀರ್ವಾದವನ್ನು ಪಡೆಯುವ ಉದ್ದೇಶದಿಂದ ಒಂದು ಧಾರ್ಮಿಕ ಶ್ರದ್ಧಾ ಕೇಂದ್ರವನ್ನಾಗಿ ರೂಪುಗೊಳಿಸುವುದಕ್ಕಾಗಿ ದೈವಾರ್ಷಿಕ ಕಾರ್ಯ ಯೋಜನೆಯನ್ನು…

Read More

ಮಂಜೇಶ್ವರದಲ್ಲಿ ಬಹಿರಂಗ ಪ್ರಚಾರಕ್ಕೆ ತೆರೆ: ಅಂತಿಮ ಹಂತಕ್ಕೆ ಚುನಾವಣೆ ಸಿದ್ಧತೆ

ಮಂಜೇಶ್ವರ:ವಿಧಾನಸಭಾ ಚುನಾವಣೆಯ ಅಬ್ಬರದ ಬಹಿರಂಗ ಪ್ರಚಾರಕ್ಕೆ ಮಂಗಳವಾರ ಸಂಜೆ 6 ಗಂಟೆಗೆ ಅಧಿಕೃತವಾಗಿ ತೆರೆ ಬಿದ್ದಿದೆ. ಇದರೊಂದಿಗೆ ಮಂಜೇಶ್ವರ ಕ್ಷೇತ್ರದಲ್ಲಿ ಕಳೆದ ಕೆಲವು ದಿನಗಳಿಂದ ಜೋರಾಗಿ ನಡೆದ ರೋಡ್ ಶೋಗಳು, ಸಾರ್ವಜನಿಕ ಸಭೆಗಳು ಹಾಗೂ ಮೈಕ್ ಅನೌನ್ಸ್‌ಮೆಂಟ್‌ಗಳು ಅಂತ್ಯಗೊಂಡಿವೆ. ಕ್ಷೇತ್ರದಲ್ಲಿ ತ್ರಿಕೋನ ಸ್ಪರ್ಧೆ ಏರ್ಪಡಿಸಿರುವ ಯುಡಿಎಫ್, ಎಲ್‌ಡಿಎಫ್ ಹಾಗೂ ಬಿಜೆಪಿ ಅಭ್ಯರ್ಥಿಗಳು ಮಂಗಳವಾರ ಬೆಳಿಗ್ಗೆಯಿಂದಲೇ ಮತದಾರರನ್ನು ಸೆಳೆಯಲು ಅಂತಿಮ ಕಸರತ್ತು ನಡೆಸಿದರು.ಪ್ರಮುಖ ನಾಯಕರು ಮತ್ತು ಕಾರ್ಯಕರ್ತರ ದಂಡಿನೊಂದಿಗೆ ನಡೆದ ಈ ಅಂತಿಮ ಹಂತದ ಪ್ರಚಾರದಲ್ಲಿ ಅಭ್ಯರ್ಥಿಗಳು ತಮ್ಮ…

Read More

ಚುನಾವಣಾ ಸಿದ್ಧತೆ ಪರಿಶೀಲನೆ: ಜಿಲ್ಲಾಧಿಕಾರಿ ಅರ್ಜುನ್ ಪಾಂಡ್ಯನ್ ಭೇಟಿ

ಮಂಜೇಶ್ವರ:ಮುಂಬರುವ ಚುನಾವಣೆಯ ಹಿನ್ನೆಲೆಯಲ್ಲಿ ಕಾಸರಗೋಡು ಜಿಲ್ಲಾಧಿಕಾರಿ ಅರ್ಜುನ್ ಪಾಂಡ್ಯನ್ ಅವರು ವಿವಿಧ ಮತಗಟ್ಟೆಗಳಿಗೆ ಭೇಟಿ ನೀಡಿ ಸಿದ್ಧತೆಗಳನ್ನು ಪರಿಶೀಲಿಸಿದರು. ಕಾಸರಗೋಡು ಸರ್ಕಾರಿ ಕಾಲೇಜಿನಲ್ಲಿ ಸ್ಥಾಪಿಸಲಾಗಿರುವ ಇವಿಎಂ ಮತ್ತು ವಿವಿಪ್ಯಾಟ್ ಭದ್ರತಾ ಕೊಠಡಿಗಳನ್ನು ಪರಿಶೀಲಿಸಿದ ಅವರು, ಭದ್ರತಾ ಕ್ರಮಗಳ ಬಗ್ಗೆ ಅಧಿಕಾರಿಗಳಿಗೆ ಅಗತ್ಯ ಸೂಚನೆಗಳನ್ನು ನೀಡಿದರು. ರಾಜ್ಯದ ಪ್ರಥಮ ಸಂಖ್ಯೆಯ ಬೂತ್ ಆಗಿರುವ ಕುಂಜತ್ತೂರು ಸರ್ಕಾರಿ ಶಾಲೆ ಹಾಗೂ ಸೂಕ್ಷ್ಮ ಮತಗಟ್ಟೆಗಳಾದ ಕಣ್ವತೀರ್ಥ, ಆಲಂಪಾಡಿ ಮತ್ತು ಚೆರ್ಕಳ ಶಾಲೆಗಳಿಗೆ ಭೇಟಿ ನೀಡಿ ಮೂಲಭೂತ ಸೌಕರ್ಯಗಳನ್ನು ಅವಲೋಕಿಸಿದರು. ಭಾಷಾ ಅಲ್ಪಸಂಖ್ಯಾತ…

Read More

ಆದಿಶಕ್ತಿ ಶ್ರೀ ಮಹಮ್ಮಾಯಿ ದೇವಸ್ಥಾನ, ಪರಂಬಳ: ಮಹಮ್ಮಾಯಿ ದೇವಿಯ ವಾರ್ಷಿಕ ಮಹಾಪೂಜೆ ಹಾಗೂ ಗೋಂದೋಳು ಪೂಜೆ

ಮಂಜೇಶ್ವರ (ಕಯ್ಯಾರು):ಆದಿಶಕ್ತಿ ಶ್ರೀ ಮಹಮ್ಮಾಯಿ ದೇವಸ್ಥಾನ, ಪರಂಬಳ, ಕಯ್ಯಾರುವಿನಲ್ಲಿ ಶ್ರೀ ಮಹಮ್ಮಾಯಿ ದೇವಿಯ ವಾರ್ಷಿಕ ಮಹಾಪೂಜೆ ಹಾಗೂ ಗೋಂದೋಳು ಪೂಜಾ ಮಹೋತ್ಸವವನ್ನು ಏಪ್ರಿಲ್ 9 ಮತ್ತು 10ರಂದು ಭಕ್ತಿಭಾವದಿಂದ ನಡೆಸಲು ನಿರ್ಧರಿಸಲಾಗಿದೆ. ಏಪ್ರಿಲ್ 9ರಂದು ಗಣಹೋಮ, ನಾಗಾರಾಧನೆ ಹಾಗೂ ಪರಿವಾರ ದೈವಗಳ ಆರಾಧನೆ ನಡೆಯಲಿದ್ದು, ಏಪ್ರಿಲ್ 10ರಂದು ಮಹಮ್ಮಾಯಿ ದೇವಿಯ ವಾರ್ಷಿಕ ಮಹಾಪೂಜೆ ಮತ್ತು ಗೋಂದೋಳು ಪೂಜಾ ಮಹೋತ್ಸವವು ವಿಧಿವತ್ತಾಗಿ ಜರುಗಲಿದೆ. ಈ ಮಹೋತ್ಸವವನ್ನು ಊರ ಮತ್ತು ಪರವೂರ ಸಮಾಜ ಬಾಂಧವರು ಹಾಗೂ ಭಕ್ತರ ಸಹಕಾರದೊಂದಿಗೆ ವರ್ಷಂಪ್ರತಿಯಂತೆ…

Read More

ಕಾಸರಗೋಡಿನಲ್ಲಿ ಎನ್‌ಡಿಎ ಭರ್ಜರಿ ರೋಡ್ ಶೋ: ಕಾರ್ಯಕರ್ತರಿಂದ ಉತ್ಸಾಹಭರಿತ ಮತಯಾಚನೆ

ಕಾಸರಗೋಡು:ನಗರವನ್ನು ಕಂಗೊಳಿಸುತ್ತಾ ಚುನಾವಣಾ ಪ್ರಚಾರಕ್ಕೆ ತೆರೆ ಎಳೆದಂತೆ, ಕಾಸರಗೋಡು ಕ್ಷೇತ್ರದ ಎನ್‌ಡಿಎ ಅಭ್ಯರ್ಥಿ ಎಂ.ಎಲ್ ಅಶ್ವಿನಿ ಅವರ ಪರವಾಗಿ ಭರ್ಜರಿ ರೋಡ್ ಶೋ ಹಾಗೂ ಕೊಟ್ಟಿಕಲಾಶ ಕಾರ್ಯಕ್ರಮವು ಕಾರ್ಯಕರ್ತರ ಉತ್ಸಾಹಭರಿತ ಭಾಗವಹಿಸುವಿಕೆಯಿಂದ ನಡೆಯಿತು. ಕಾಸರಗೋಡು ತಾಳಿಪಡ್ಪು ಮೈದಾನದಿಂದ ಆರಂಭವಾದ ರೋಡ್ ಶೋನಲ್ಲಿ ಅಭ್ಯರ್ಥಿಯ ಪ್ಲಕಾರ್ಡ್‌ಗಳು ಹಾಗೂ ಪಕ್ಷದ ಧ್ವಜಗಳನ್ನು ಹಿಡಿದು ನೂರಾರು ಕಾರ್ಯಕರ್ತರು ಭಾಗವಹಿಸಿದರು. ಈ ರೋಡ್ ಶೋನಲ್ಲಿ ಉಡುಪಿ ಶಾಸಕ ಯಶ್ಪಾಲ್ ಸುವರ್ಣ, ಬೆಳ್ತಂಗಡಿ ಶಾಸಕ ಹರೀಶ್ ಪೂಂಜ, ಪನ್‌ವೆಲ್ ಶಾಸಕ ಪ್ರಶಾಂತ್ ಠಾಕೂರ್, ಸಿನೆಮಾ…

Read More
error: Content is protected !!