ಬೆಜ್ಜ ಮೂಡಂಬೈಲು ಧೂಮಾವತಿ ಬಂಟ ದೈವಗಳ ಉತ್ಸವಕ್ಕೆ ಸಜ್ಜು: ವೈದಿಕ, ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಮಹೋತ್ಸವ

ಬೆಜ್ಜ ಮೂಡಂಬೈಲು: ಶ್ರೀ ಧೂಮಾವತಿ ಬಂಟ ದೈವಗಳ ಕ್ಷೇತ್ರದಲ್ಲಿ ಏಪ್ರಿಲ್ 1ರಂದು ಉತ್ಸವದ ಗೊನೆ ಮುಹೂರ್ತ , ಕೋಳಿಗೂಟ ಮತ್ತು ಉತ್ಸವದ ಚೆಂಡು ಆರಂಭಗೊಂಡು 6 ರಿಂದ 9 ರವರೆಗೆ ಭಕ್ತಿಭಾವದಿಂದ ದೈವಗಳ ಉತ್ಸವ ನಡೆಯಲಿದೆ. ಉತ್ಸವವು ಬುಧವಾರ ಬೆಳಗ್ಗೆ 9 ಗಂಟೆಯಿಂದ ಆರಂಭಗೊಂಡು ವಿವಿಧ ಧಾರ್ಮಿಕ, ವೈದಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಜರುಗಲಿದೆ. ಗ್ರಾಮಸ್ಥರು ಹಾಗೂ ಕ್ಷೇತ್ರ ಸೇವಾ ಸಮಿತಿಯವರ ಸಹಕಾರದಲ್ಲಿ ಮಹೋತ್ಸವವನ್ನು ಆಯೋಜಿಸಲಾಗಿದೆ. ಭಕ್ತರು ತಮ್ಮ ಬಂಧು-ಮಿತ್ರರೊಂದಿಗೆ ಆಗಮಿಸಿ ತನು-ಮನ-ಧನಗಳಿಂದ ಸಹಕರಿಸಿ, ಗಂಧ ಪ್ರಸಾದವನ್ನು…

Read More

ಕಯ್ಯಾರು ಉಳ್ಳಾಲ್ತಿ ಕಾಳಿಚಾಮುಂಡಿ ದೈವಸ್ಥಾನದಲ್ಲಿ ಬ್ರಹ್ಮಕಲಶೋತ್ಸವಕ್ಕೆ ಸಿದ್ಧತೆ: ಆಮಂತ್ರಣ ಪತ್ರಿಕೆ ಬಿಡುಗಡೆ

ಕಯ್ಯಾರು (ಮೇರ್ಲ): ಶ್ರೀ ಉಳ್ಳಾಲ್ತಿ ಕಾಳಿಚಾಮುಂಡಿ ದೈವಸ್ಥಾನದಲ್ಲಿ ಪುನರ್ ಪ್ರತಿಷ್ಠೆ, ಬ್ರಹ್ಮಕಲಶೋತ್ಸವ ಹಾಗೂ ವರ್ಷಾವಧಿ ನೇಮೋತ್ಸವವು ಏಪ್ರಿಲ್ 28ರಿಂದ 30ರವರೆಗೆ ಭಕ್ತಿಭಾವದಿಂದ ನಡೆಯಲಿದೆ. ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆಯವರ ಶುಭಾಶೀರ್ವಾದದೊಂದಿಗೆ ನಡೆಯಲಿರುವ ಈ ಮಹೋತ್ಸವವು ಊರ-ಪರವೂರ ಹಾಗೂ ಹತ್ತು ಸಮಸ್ತರು ಮತ್ತು ಕುಟುಂಬಸ್ಥರ ಸಹಕಾರದಿಂದ ಜರುಗಲಿದೆ. ಬ್ರಹ್ಮಶ್ರೀ ವೇದಮೂರ್ತಿ ಶ್ರೀ ಶಂಕರನಾರಾಯಣ ಕಡಮಣ್ಣಾಯ (ಬಂಬ್ರಾಣ ಬೂಡು, ಕರ್ಕುಳ) ಅವರ ದಿವ್ಯ ಹಸ್ತದಿಂದ ವೈದಿಕ ಹಾಗೂ ಧಾರ್ಮಿಕ ಕಾರ್ಯಕ್ರಮಗಳು ನೆರವೇರಲಿವೆ. ಈ ನಡುವೆ…

Read More

ಕುಂಬಳೆಯಲ್ಲಿ 159 ಲೀಟರ್ ಕರ್ಣಾಟಕ ಮದ್ಯ ವಶ : ಓರ್ವ ಬಂಧನ, ಮತ್ತೊಬ್ಬ ಪರಾರಿ

ಕುಂಬಳೆ: ಕೇರಳದಲ್ಲಿ ಮಾರಾಟ ನಿಷೇಧಿತವಾಗಿರುವ ಕರ್ಣಾಟಕ ನಿರ್ಮಿತ ಮದ್ಯವನ್ನು ಸಾಗಿಸುತ್ತಿದ್ದ ಇಬ್ಬರನ್ನು ಎಕ್ಸೈಸ್ ಇಲಾಖೆ ಪತ್ತೆಹಚ್ಚಿದ್ದು, ಓರ್ವ ಆರೋಪಿಯನ್ನು ಬಂಧಿಸಿ ಮತ್ತೊಬ್ಬರು ಪರಾರಿಯಾಗಿದ್ದಾರೆ. ತಲಪಾಡಿ ತಚ್ಚನಿ ನಿವಾಸಿ ನಿಖಿಲ್ ಬಂಧಿತ ಆರೋಪಿಯಾಗಿದ್ದು, ವಿಧಾನಸಭಾ ಚುನಾವಣೆಯ ಹಿನ್ನೆಲೆ ನಡೆಯುತ್ತಿದ್ದ ತಪಾಸಣೆ ವೇಳೆ ಅವರಿಂದ ಸುಮಾರು 159 ಲೀಟರ್ ಮದ್ಯವನ್ನು ವಶಪಡಿಸಿಕೊಂಡು ಕಸ್ಟಡಿಗೆ ತೆಗೆದುಕೊಳ್ಳಲಾಗಿದೆ. ಇದೇ ವೇಳೆ, ಎರಡನೇ ಆರೋಪಿಯಾದ ಕುಂಟಾಂಗಿರಡ್ಕ ನಿವಾಸಿ ಪ್ರಭಾಕರನ್ ಅಲಿಯಾಸ್ ಅನ್ನಿ ಪ್ರಭಾಕರನ್ ಪರಾರಿಯಾಗಿದ್ದಾನೆ. ಪರಾರಿಯಾಗುವ ಸಂದರ್ಭದಲ್ಲಿ ಮದ್ರಸದಿಂದ ಬರುತ್ತಿದ್ದ ಸುಮಾರು 15 ಬಾಲಕಿಯರ…

Read More

“ಕೇರಳ ದಿವಾಳಿಯ ದಿಕ್ಕಿಗೆ” – ಎಲ್‌ಡಿಎಫ್ ವಿರುದ್ಧ ಸಿದ್ದರಾಮಯ್ಯ ಕಿಡಿ : ಕರ್ನಾಟಕ ಮಾದರಿ ಕೇರಳಕ್ಕೆ? ಸಿದ್ದರಾಮಯ್ಯ ದೊಡ್ಡ ಸಂದೇಶ

ಮಂಜೇಶ್ವರ: ಹತ್ತು ವರ್ಷಗಳ ಎಲ್‌ಡಿಎಫ್ ಆಡಳಿತವು ಕೇರಳವನ್ನು ಆರ್ಥಿಕ ದಿವಾಳಿಯತ್ತ ಕೊಂಡೊಯುತ್ತಿದ್ದು ನಿರುದ್ಯೋಗ ಮತ್ತು ಬೆಲೆ ಏರಿಕೆಯಿಂದ ಜನತೆ ಸಂಕಷ್ಟದಲ್ಲಿದ್ದಾರೆ ಎಂದು ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದರು. ಮಂಜೇಶ್ವರ ಸಮೀಪದ ವರ್ಕಾಡಿ ಮಜೀರ್‌ಪಳ್ಳದಲ್ಲಿ ಯುಡಿಎಫ್ ಅಭ್ಯರ್ಥಿ ಎ.ಕೆ.ಎಂ. ಅಶ್ರಫ್ ಪರ ಆಯೋಜಿಸಿದ್ದ ಚುನಾವಣಾ ಪ್ರಚಾರ ಸಮಾವೇಶದಲ್ಲಿ ಮಾತನಾಡಿದ ಅವರು, ಹಿಂದಿನ ಕಾಂಗ್ರೆಸ್ ಆಡಳಿತ ಮತ್ತು ಪ್ರಸ್ತುತ ಎಲ್‌ಡಿಎಫ್ ಸರ್ಕಾರದ ನಡುವೆ ಇರುವ ವ್ಯತ್ಯಾಸವನ್ನು ಅಂಕಿ-ಅಂಶಗಳೊಂದಿಗೆ ವಿವರಿಸಿದರು. “ಕೇರಳ ಇಂದು ಸಾಲದ ಸುಳಿಯಲ್ಲಿ ಸಿಲುಕಿದೆ. ಭ್ರಷ್ಟಾಚಾರ ಮತ್ತು…

Read More

ಮಂಜೇಶ್ವರ ಚುನಾವಣೆಗೆ ಸಸ್ಪೆನ್ಸ್: ಲವಿನಾ ಎಂಟ್ರಿಯಿಂದ ಹೈ-ವೋಲ್ಟೇಜ್ ಫೈಟ್, ತ್ರಿಕೋನ ಕಾದಾಟಕ್ಕೆ ಹೊಸ ಟ್ವಿಸ್ಟ್ – ಸ್ವತಂತ್ರ ಅಭ್ಯರ್ಥಿಯಿಂದ ಶಾಕ್!

ಮಂಜೇಶ್ವರ: ಕೇರಳ ವಿಧಾನಸಭಾ ಚುನಾವಣೆಯ ಹೊಸ್ತಿಲಿನಲ್ಲಿ ಮಂಜೇಶ್ವರ ಕ್ಷೇತ್ರದಲ್ಲಿ ಹೊಸ ರಾಜಕೀಯ ಸಂಚಲನ ಸೃಷ್ಟಿಯಾಗಿದೆ. ಮಂಜೇಶ್ವರ ಪಂಚಾಯತ್ ಮಾಜಿ ಅಧ್ಯಕ್ಷೆ ಜೀನ್ ಲವಿನಾ ಮಾಂತೆರೋ ಅವರು ಅಂತಿಮ ಕ್ಷಣದಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದು, ತ್ರಿಕೋನ ಸ್ಪರ್ಧೆಗೆ ಹೊಸ ತಿರುವು ನೀಡಿದೆ. ಈ ಬೆಳವಣಿಗೆ ಪ್ರಮುಖ ರಾಜಕೀಯ ಪಕ್ಷಗಳ ಲೆಕ್ಕಾಚಾರವನ್ನು ಬದಲಾಯಿಸುವ ಸಾಧ್ಯತೆಯಿದ್ದು, ವಿಶೇಷವಾಗಿ ಬಿಜೆಪಿಗೆ ಇದು ಅನುಕೂಲಕರವಾಗಬಹುದು ಎಂದು ವಿಶ್ಲೇಷಿಸಲಾಗುತ್ತಿದೆ. ಇನ್ನೊಂದೆಡೆ, ತಮ್ಮ ಸಾಂಪ್ರದಾಯಿಕ ಮತಬ್ಯಾಂಕ್‌ಗೆ ಧಕ್ಕೆಯಾಗುವ ಭೀತಿಯಲ್ಲಿ ಯುಡಿಎಫ್ ಪಾಳೆಯದಲ್ಲಿ ಆತಂಕ ಮನೆಮಾಡಿದೆ. ಮಂಜೇಶ್ವರ ಕ್ಷೇತ್ರದಲ್ಲಿ…

Read More

ಪಾವೂರು ನಾಗ ಬ್ರಹ್ಮಾ ವನದುರ್ಗ ಸಾಸ್ತಾರ ಕ್ಷೇತ್ರದಲ್ಲಿ ಅಶ್ಲೇಷ ಪೂಜೆ

ಮಂಜೇಶ್ವರ: ಪಾವೂರು ನಾಗ ಬ್ರಹ್ಮಾ ವನದುರ್ಗ ಸಾಸ್ತಾರ ಕ್ಷೇತ್ರದಲ್ಲಿ ವಾರ್ಷಿಕೋತ್ಸವದ ಅಂಗವಾಗಿ ಅಶ್ಲೇಷ ಪೂಜೆ ಹಾಗೂ ನಾಗ ತಂಬಿಲ ಭಕ್ತಿಭಾವದಿಂದ ನೆರವೇರಿತು. ಕುಂಟ್ಟರೂ ರವೀಶ್ ತಂತ್ರಿಗಳ ಆಶೀರ್ವಾದದೊಂದಿಗೆ ತಲಪಾಡಿ ದುರ್ಗಾ ಪರಮೇಶ್ವರಿ ಕ್ಷೇತ್ರದ ಗಣೇಶ್ ಭಟ್ ಅವರ ನೇತೃತ್ವದಲ್ಲಿ ಪೂಜೆ ಮತ್ತು ವಿಧಿವಿಧಾನಗಳು ನಡೆದವು. ಕಾರ್ಯಕ್ರಮದಲ್ಲಿ ಕ್ಷೇತ್ರದ ಅಧ್ಯಕ್ಷ ಕೃಷ್ಣ ಶಿವಕೃಪಾ ಕುಂಜತೂರ್, ಉಪಾಧ್ಯಕ್ಷ ಗಣೇಶ್ ಪಾವೂರು, ಕಾರ್ಯದರ್ಶಿ ಕಮಲಾಕ್ಷ ವಕೀಲರು (ಮಂಗಳೂರು), ಖಜಾಂಚಿ ಕೋಟಿಯಪ್ಪ ಪೂಜಾರಿ ಸೇರಿದಂತೆ ದಯಾನಂದ ಪಾವೂರು, ಸರ್ಮಿಳಾ ಮಂಗಳೂರು, ಸದಾಶಿವ ಕುಂಜತೂರ್,…

Read More

ಉದಯಗಿರಿ ಶ್ರೀ ಮಹಾ ಕಾಳಿ ದೇವಾಲಯಕ್ಕೆ ಮುಖ್ಯದ್ವಾರ ಲೋಕಾರ್ಪಣೆ

ಕಾಸರಗೋಡು: ಜಿಲ್ಲೆಯ ಹೊಸದುರ್ಗ ತಾಲೂಕಿನ ವಾಣಿಯಂಪಾರೆ ಸಮೀಪದ ಇತಿಹಾಸ ಪ್ರಸಿದ್ಧ ಉದಯಗಿರಿ ಶ್ರೀ ಮಹಾಕಾಳಿ ದೇವಾಲಯದಲ್ಲಿ ಸಪ್ತ ದಿನಗಳ ಭಜನಾ ಪ್ರದಕ್ಷಿಣೆ ಹಾಗೂ ಪ್ರತಿಷ್ಠಾ ಮಹೋತ್ಸವ ಭಕ್ತಿಭಾವದಿಂದ ನೆರವೇರಿತು. ಈ ಧಾರ್ಮಿಕ ಕಾರ್ಯಕ್ರಮದಲ್ಲಿ ಭಕ್ತರು ಭಾರಿ ಸಂಖ್ಯೆಯಲ್ಲಿ ಭಾಗವಹಿಸಿ ದೇವಿಯ ಆರಾಧನೆಯಲ್ಲಿ ತೊಡಗಿದ್ದರು. ಈ ಸಂದರ್ಭದಲ್ಲಿ ಶ್ರೀ ಮಹಾಕಾಳಿ ಕ್ಷೇತ್ರಕ್ಕೆ ಕೋಟೆಯಾರ್ ಸಮಾಜದ ಯುವಕ ಸಮಿತಿಯಿಂದ ನಿರ್ಮಿಸಲಾದ ನೂತನ ಮುಖ್ಯದ್ವಾರದ ಲೋಕಾರ್ಪಣೆ ನೆರವೇರಿತು. ಕಾರ್ಯಕ್ರಮದಲ್ಲಿ ಸಮಾಜದ ಪ್ರಮುಖರು ಹಾಗೂ ಬಾಂಧವರು ಉಪಸ್ಥಿತರಿದ್ದು, ಧಾರ್ಮಿಕ ಆಚರಣೆಗಳು ಸಾಂಪ್ರದಾಯಿಕವಾಗಿ ನಡೆದವು.

Read More

ಉದಯಗಿರಿ ಶ್ರೀ ಮಹಾಕಾಳಿ ಕ್ಷೇತ್ರಕ್ಕೆ ಮಹಾದ್ವಾರ ಸಮರ್ಪಣೆ

ಬಾಣ್ಯಂಪಾರೆ: ರಾಮರಾಜ ಕ್ಷತ್ರಿಯ ಯಾನೆ ಕೋಟೆಯಾರ್ ಸೇವಾ ಸಂಘದ ಬಾಣ್ಯಂಪಾರೆ ಉಪಸಂಘದ ಸಮಾಜಬಾಂಧವರು ನಿರ್ಮಿಸಿದ ಮಹಾದ್ವಾರವನ್ನು ನಿನ್ನೆ ಮುಸ್ಸಂಜೆಯ ವೇಳೆ ಉದಯಗಿರಿ ಶ್ರೀ ಮಹಾಕಾಳಿ ಕ್ಷೇತ್ರಕ್ಕೆ ಭಕ್ತಿಪೂರ್ವಕವಾಗಿ ಸಮರ್ಪಿಸಲಾಯಿತು. ಈ ಸಂದರ್ಭದಲ್ಲಿ ನಡೆದ ಕಾರ್ಯಕ್ರಮದಲ್ಲಿ ಭಾಸ್ಕರ ನಂಬಿಯಾರ್ಡ್ಕ ಅವರು ಅಧ್ಯಕ್ಷತೆ ವಹಿಸಿದರು. ವಾಣಿಯಂಪಾರೆ ಉಪಸಂಘದ ಕಾರ್ಯದರ್ಶಿ ಜಗದೀಶ್ ಸ್ವಾಗತಿಸಿದರು. ಜಿಲ್ಲಾ ಸಂಘದ ಉಪಾಧ್ಯಕ್ಷರಾದ ಜಗದೀಶ್ ಕೂಡ್ಲು, ಕಾಸರಗೋಡು ಹಾಗೂ ಕಾರ್ಯಕಾರಿ ಸಮಿತಿ ಸದಸ್ಯರಾದ ಕಮಲಾಕ್ಷ ಅಣಂಗೂರು ಉಪಸ್ಥಿತರಿದ್ದರು. ವಾಣಿಯಂಪಾರೆ ಉಪಸಂಘದ ಖಜಾಂಚಿ ವಿಠಲ್ ಗೌರವಾರ್ಪಣೆ ಸಲ್ಲಿಸಿದರು. ಜಿಲ್ಲಾ…

Read More

ಅರಿಕ್ಕಾಡಿಯಲ್ಲಿ ಆಲಿ ಚಾಮುಂಡಿ ತೆಯ್ಯಂ ಪ್ರದರ್ಶನ: ಮಾನವ ಸಹೋದರತ್ವದ ಸಂದೇಶ

ಅರಿಕ್ಕಾಡಿ: ಮಾನವ ಸಹೋದರತ್ವದ ಸಂದೇಶವನ್ನು ಸಾರುವ ಅರಿಕ್ಕಾಡಿ ಪಾರೆ ಭಗವತಿ ಆಲಿ ಚಾಮುಂಡಿ ದೈವಸ್ಥಾನದಲ್ಲಿ ಶನಿವಾರ ಬೆಳಿಗ್ಗೆ ಭಕ್ತರ ಮುಂದೆ ರಂಗ ಪ್ರವೇಶ ಮಾಡಿತು. ಮಾರ್ಚ್ 30ರಿಂದ ಆರಂಭವಾದ ದೈವಸ್ಥಾನದ ವಾರ್ಷಿಕ ಉತ್ಸವವು ಏಪ್ರಿಲ್ 6ರಂದು ಸಮಾಪ್ತಿಯಾಗಲಿದ್ದು, ಸಮಾರೋಪ ದಿನದಂದು ಆಲಿಭೂತಂ, ಹೊಸ ಭಗವತಿ ದೈವ ಮತ್ತು ಭಗವತಿ ದರ್ಶನ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ. ಉತ್ಸವದ ಅಂಗವಾಗಿ ಎಡನೀರ್ ಮಠಾಧೀಶರಾದ ಸಚ್ಚಿದಾನಂದ ಭಾರತಿ ಸ್ವಾಮೀಜಿ ದೈವಸ್ಥಾನಕ್ಕೆ ಭೇಟಿ ನೀಡಿದರು. ಈ ಸಂದರ್ಭದಲ್ಲಿ ಕೆ. ಜಗದೀಶ್…

Read More

ಅಂಬಿತಾಡಿ ಗೇರುಕಟ್ಟೆ ರಸ್ತೆ ಬದಿಯ ತೋಡಿನಲ್ಲಿ ತುಂಬಿದ ತ್ಯಾಜ್ಯ: ವಾಹನದಲ್ಲಿ ತ್ಯಾಜ್ಯವನ್ನು ತಂದು ಬಿಸಾಕುತ್ತಿರುವುದಾಗಿ ಸ್ಥಳೀಯರ ದೂರು

ಅಂಬಿತಾಡಿ: ನೂರಾರು ವಾಹನಗಳು ಹಾಗೂ ದಾರಿಹೋಕರು ಸಂಚರಿಸುವ ಅಂಬಿತಾಡಿ–ಗೇರುಕಟ್ಟೆ ರಸ್ತೆಯಲ್ಲಿರುವ ತೋಡನ್ನು ಕಸದ ತೊಟ್ಟಿಯಂತೆ ಬಳಸಲಾಗುತ್ತಿದ್ದು, ಸ್ಥಳೀಯ ನಾಗರಿಕರ ಆತಂಕಕ್ಕೆ ಕಾರಣವಾಗಿದೆ. ಇತ್ತೀಚಿನ ದಿನಗಳಲ್ಲಿ ಹೊರಗಿನಿಂದ ಸಂಚರಿಸುವವರು ಕೂಡ ನಿರ್ಬಂಧವಿಲ್ಲದೆ ಕಸವನ್ನು ಬಿಸಾಡುತ್ತಿರುವುದು ಕಂಡುಬಂದಿದೆ. ಇದಲ್ಲದೆ, ವೈದ್ಯಕೀಯ ತ್ಯಾಜ್ಯವನ್ನು ಕೂಡ ಇಲ್ಲಿ ಎಸೆಯಲಾಗುತ್ತಿರುವುದು ಪರಿಸ್ಥಿತಿಯನ್ನು ಮತ್ತಷ್ಟು ಗಂಭೀರಗೊಳಿಸಿದೆ. ಇದೀಗ ತೋಡು ಕಸ ತ್ಯಾಜ್ಯದಿಂದ ತುಂಬಿ ತೋಡು ಕಣ್ಮರೆಯಾಗುವ ಸ್ಥಿತಿ ತಲುಪಿದೆ ಇನ್ನೂ ಒಂದು ತಿಂಗಳಲ್ಲಿ ಮಳೆಗಾಲ ಪ್ರಾರಂಭವಾಗಲಿರುವುದರಿಂದ, ನೀರು ಸರಾಗವಾಗಿ ಹರಿಯಲು ಸಾಧ್ಯವಿಲ್ಲದೆ ಕೃತಕ ನೆರೆ ಸೃಷ್ಟಿಯಾಗಿ…

Read More
error: Content is protected !!