ಮೀಂಜ–ಮಂಗಲ್ಪಾಡಿ ಸಂಪರ್ಕ ಸೇತುವೆ ನಿರ್ಲಕ್ಷ್ಯ: ಸ್ಥಳ ಪರಿಶೀಲಿಸಿದ ಸುರೇಂದ್ರನ್

ಮಂಜೇಶ್ವರ, ಏಪ್ರಿಲ್ 3: ನಾಲ್ಕು ವರ್ಷಗಳ ಹಿಂದೆ ಕುಸಿದು ಬಿದ್ದರೂ ಇನ್ನೂ ಮರುನಿರ್ಮಾಣವಾಗದ ಮೀಂಜ–ಮಂಗಲ್ಪಾಡಿ ಸಂಪರ್ಕದ ದೇರಂಬಳ ಸೇತುವೆಯನ್ನು Bharatiya Janata Party (ಬಿಜೆಪಿ) ಮಂಜೇಶ್ವರ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ಸುರೇಂದ್ರನ್ ಕೆ. ಭೇಟಿ ನೀಡಿ ವೀಕ್ಷಿಸಿದರು. ಸ್ಥಳ ಪರಿಶೀಲಿಸಿದ ವೇಳೆ ಮಾತನಾಡಿದ ಅವರು, ಸೇತುವೆ ಕುಸಿದು ನಾಲ್ಕು ವರ್ಷ ಕಳೆದರೂ ಪುನರ್ನಿರ್ಮಾಣ ಕಾರ್ಯ ಕೈಗೆತ್ತಿಕೊಳ್ಳದಿರುವುದು ಸರ್ಕಾರದ ನಿರ್ಲಕ್ಷ್ಯವನ್ನು ತೋರಿಸುತ್ತದೆ ಎಂದು ಆರೋಪಿಸಿದರು. ಸ್ಥಳೀಯ ಜನರು ಸಂಚಾರದ ತೊಂದರೆ ಅನುಭವಿಸುತ್ತಿದ್ದು, ತುರ್ತು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು….

Read More

ಕಾಸರಗೋಡಿನಲ್ಲಿ ಚುಟುಕು ಸಾಹಿತ್ಯೋತ್ಸವ-2026: ಸಾಹಿತ್ಯ ಚಟುವಟಿಕೆಗಳಿಗೆ ಹೊಸ ಚೈತನ್ಯ

ಕಾಸರಗೋಡು: ಚುಟುಕು ಸಾಹಿತ್ಯವನ್ನು ಪುನಶ್ಚೇತನಗೊಳಿಸಿ ಕವಿಗಳು ಹಾಗೂ ಸಾಹಿತಿಗಳಲ್ಲಿರುವ ಪ್ರತಿಭೆಯನ್ನು ಉತ್ತೇಜಿಸುವ ಉದ್ದೇಶದಿಂದ ಕಾಸರಗೋಡು ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ ವತಿಯಿಂದ ಚುಟುಕು ಸಾಹಿತ್ಯೋತ್ಸವ–2026 ಹಾಗೂ ಕಾಸರಗೋಡು-ಕರ್ನಾಟಕ ಚುಟುಕು ಕವಿಗೋಷ್ಠಿ ಭರ್ಜರಿಯಾಗಿ ನಡೆಯಿತು. ಚುಟುಕು ಸಾಹಿತ್ಯ ಪರಿಷತ್ ಕೇಂದ್ರ ಸಮಿತಿ ಮೈಸೂರು ಇದರ ಕೇರಳ ಗಡಿನಾಡ ಘಟಕವಾಗಿ 2000ರಲ್ಲಿ ಸ್ಥಾಪನೆಯಾದ ಕಾಸರಗೋಡು ಜಿಲ್ಲಾ ಘಟಕವು ಕಳೆದ 26 ವರ್ಷಗಳಿಂದ ನಿರಂತರವಾಗಿ ಸಾಹಿತ್ಯ ಹಾಗೂ ಕನ್ನಡಪರ ಚಟುವಟಿಕೆಗಳನ್ನು ಹಮ್ಮಿಕೊಂಡು ಬರುತ್ತಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಚುಟುಕು ಸಾಹಿತ್ಯ…

Read More

ಮಂಜೇಶ್ವರ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಸುರೇಂದ್ರನ್ ಪರ ರಾಜೇಶ್ ನಾಯ್ಕ್ ಮನೆಮನೆಗೆ ಮತಯಾಚನೆ

ಮಂಜೇಶ್ವರ, ಎಪ್ರಿಲ್ 9ರಂದು ನಡೆಯಲಿರುವ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು Bharatiya Janata Party (ಬಿಜೆಪಿ) ಪರ ಪ್ರಚಾರ ಚಟುವಟಿಕೆಗಳು ತೀವ್ರಗೊಂಡಿವೆ. ಮಂಜೇಶ್ವರ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಸುರೇಂದ್ರನ್ ಕೆ. ಅವರ ಪರ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಅವರು ಪುತ್ತಿಗೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಅಂಗಡಿಮುಗೇರು ಮತ್ತು ದೇಲಂಪಾಡಿ ಗ್ರಾಮಗಳಲ್ಲಿ ಮನೆಮನೆಗೆ ತೆರಳಿ ಮತಯಾಚನೆ ನಡೆಸಿದರು. ಈ ವೇಳೆ ಮತದಾರರನ್ನು ಉದ್ದೇಶಿಸಿ ಮಾತನಾಡಿದ ಅವರು, “ಈ ಬಾರಿ ನಿಮ್ಮ ಮತವನ್ನು ಬದಲಾಯಿಸಿ ನೋಡಿ, ಬದಲಾವಣೆಯ ಹೊಸ…

Read More

ಮಂಜೇಶ್ವರದಲ್ಲಿ ಬಿಜೆಪಿ ಪರ ಚುನಾವಣಾ ಅಖಾಡಕ್ಕಿಳಿದ ಶಾಸಕ ಕಾಮತ್

ಕೇರಳ ವಿಧಾನಸಭಾ ಚುನಾವಣೆಯ ಅಂಗವಾಗಿ ಗಡಿಭಾಗದ ಪ್ರತಿಷ್ಠಿತ ಮಂಜೇಶ್ವರ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕೆ. ಸುರೇಂದ್ರನ್ ರವರ ಗೆಲುವಿಗಾಗಿ ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕರಾದ ವೇದವ್ಯಾಸ ಕಾಮತ್ ಅವರು ಮನೆ ಮನೆಗೆ ತೆರಳಿ ಮತಯಾಚನೆ ನಡೆಸಿದರು. ಮಂಜೇಶ್ವರದ ಪ್ರಸಿದ್ಧ ಪುಣ್ಯಕ್ಷೇತ್ರವಾದ ಶ್ರೀ ಮದನಂತೇಶ್ವರ ದೇವಸ್ಥಾನ ಹಾಗೂ ಕೀರ್ತೇಶ್ವರ ಪರಿಸರ, ಕುಂಬ್ಳೆ ಪಂಚಾಯತ್ ವ್ಯಾಪ್ತಿಯ ಕುಂಟಗೇರಡ್ಕದ ಪರಿಶಿಷ್ಟ ಪಂಗಡ ಕಾಲೋನಿ, ಗುಡ್ಡೆಕೇರಿ, ಬಡಾಜೆ ಪ್ರದೇಶಗಳು ಸೇರಿದಂತೆ ಹಲವು ಮನೆಗಳಿಗೆ ಕಾರ್ಯಕರ್ತರೊಂದಿಗೆ ಭೇಟಿ ನೀಡಿದರು. ನರೇಂದ್ರ ಮೋದಿ…

Read More

ಹಾಡಹಗಲೇ ಬೈಕ್ ಕಳ್ಳರ ಅಟ್ಟಹಾಸ: ಪೇಟೆ ಮಧ್ಯೆಯೇ ಪಲ್ಸರ್ ಎಗರಿಸಿದ ಖದೀಮ

​ ಮಂಜೇಶ್ವರ: ಜನನಿಬಿಡ ಕುಂಬಳೆ ಪೇಟೆಯಲ್ಲಿ ಕಳ್ಳರ ಕೈಚಳಕ ಮಿತಿಮೀರಿದ್ದು, ಹೋಟೆಲ್‌ಗೆ ಊಟಕ್ಕೆ ಹೋದ ವ್ಯಕ್ತಿಯ ಬೈಕ್ ನಾಪತ್ತೆಯಾದ ಘಟನೆ ಸಾರ್ವಜನಿಕರಲ್ಲಿ ಆತಂಕ ಮೂಡಿಸಿದೆ. ಕಂಚಿಕಟ್ಟೆ ನಿವಾಸಿ ಅಜಿತ್ ಕುಮಾರ್ ಎಂಬವರು ಕಳೆದ ಶನಿವಾರ ಮಧ್ಯಾಹ್ನ ಬಸ್ ನಿಲ್ದಾಣದ ಹಿಂಭಾಗದ ಹೋಟೆಲ್‌ವೊಂದರ ಎದುರು ತಮ್ಮ ‘ಪಲ್ಸರ್’ ಬೈಕ್ ನಿಲ್ಲಿಸಿ ಊಟಕ್ಕೆ ತೆರಳಿದ್ದರು. ಕೇವಲ 15 ನಿಮಿಷಗಳ ಅಂತರದಲ್ಲಿ ಹೊರಬಂದಾಗ ಬೈಕ್ ಮಾಯವಾಗಿರುವುದು ಕಂಡುಬಂದಿದೆ. ​ಬೈಕ್ ಕಳ್ಳರ ಈ ದುಸ್ಸಾಹಸ ಕುಂಬಳೆ ಪೊಲೀಸರಿಗೆ ಸವಾಲಾಗಿದೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು…

Read More

ಮಂಜೇಶ್ವರ: ತ್ಯಾಜ್ಯ ಸಮಸ್ಯೆ ತೀವ್ರ – ಸಾರ್ವಜನಿಕರ ಆಕ್ರೋಶ, ಚುನಾವಣಾ ಬಹಿಷ್ಕಾರ ಎಚ್ಚರಿಕೆ

ಮಂಜೇಶ್ವರ: ಮಂಜೇಶ್ವರ ಪಂಚಾಯತ್ ವ್ಯಾಪ್ತಿಯ ಸಾರ್ವಜನಿಕ ಸ್ಥಳಗಳು ತ್ಯಾಜ್ಯದ ಕೂಪಗಳಾಗಿ ಮಾರ್ಪಟ್ಟಿದ್ದು, ಇಡೀ ಪರಿಸರ ದುರ್ವಾಸನೆಯಿಂದ ನರಳುತ್ತಿದೆ. ಮಳೆಗಾಲ ಆರಂಭಕ್ಕೆ ಇನ್ನೂ ಕೆಲವೇ ದಿನಗಳು ಬಾಕಿ ಇರುವ ಹಿನ್ನೆಲೆಯಲ್ಲಿ ತ್ಯಾಜ್ಯ ನಿರ್ವಹಣೆಗೆ ಯಾವುದೇ ಶಾಶ್ವತ ಪರಿಹಾರ ಕಾಣದಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಪ್ರಮುಖ ರಸ್ತೆ ಬದಿಗಳು ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಕಸದ ರಾಶಿಗಳು ಗುಡ್ಡದಂತೆ ಜಮಾಯಿಸಿದ್ದು, ಪ್ಲಾಸ್ಟಿಕ್ ಚೀಲಗಳು, ಕೊಳೆತ ಆಹಾರ ಪದಾರ್ಥಗಳು ಮತ್ತು ಮೃತ ಪ್ರಾಣಿಗಳ ಅವಶೇಷಗಳಿಂದ ಪರಿಸರ ಅಸ್ವಚ್ಛವಾಗಿದೆ. ಇದರಿಂದ ಸಾಂಕ್ರಾಮಿಕ ರೋಗಗಳು ಹರಡುವ…

Read More

ವಿನೋದ್ ಥಾವ್ಡೆ ಕಾಸರಗೋಡು ಭೇಟಿ: ಚುನಾವಣಾ ಸಿದ್ಧತೆ ಪರಿಶೀಲನೆ ಬಿಜೆಪಿ ಕಚೇರಿಯಲ್ಲಿ ಭರ್ಜರಿ ಸ್ವಾಗತ

ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹಾಗೂ ಕೇರಳದ ಚುನಾವಣಾ ಪ್ರಭಾರಿ ವಿನೋದ್ ಥಾವ್ಡೆ ಅವರು ಇಂದು ಕಾಸರಗೋಡಿಗೆ ಆಗಮಿಸಿ ಚುನಾವಣಾ ಪ್ರಕ್ರಿಯೆಗಳ ಅವಲೋಕನ ನಡೆಸಿದರು. ಬಿಜೆಪಿ ಕಾಸರಗೋಡು ಜಿಲ್ಲಾ ಕಚೇರಿ ಸಂದರ್ಶಿಸಿದ ಅವರನ್ನು ಜಿಲ್ಲಾಧ್ಯಕ್ಷೆ ಹಾಗೂ ಕಾಸರಗೋಡು ವಿಧಾನಸಭಾ ಕ್ಷೇತ್ರ ಎನ್. ಡಿ ಎ ಅಭ್ಯರ್ಥಿ ಅಶ್ವಿನಿ ಎಂ. ಎಲ್ ಶಾಲು ಹಾಕಿ ಸ್ವಾಗತಿಸಿದರು.ಇದೇ ಮೊದಲ ಬಾರಿಗೆ ಕಾಸರಗೋಡು ಆಗಮಿಸಿದ ಅವರು ಬಿಜೆಪಿಯ ಪ್ರತಿಷ್ಠಿತ ಕ್ಷೇತ್ರಗಳಾದ ಮಂಜೇಶ್ವರ ಮತ್ತು ಕಾಸರಗೋಡಿನ ಸಾಧ್ಯತೆಗಳ ಅವಲೋಕನ ಮತ್ತು ಚಟುವಟಿಕೆಗಳ ಮಾಹಿತಿ…

Read More

ಮಂಜೇಶ್ವರ ಶಾಸಕನ ಭರವಸೆಗಳ ವಿರುದ್ಧ ಬಿಜೆಪಿ ವಾಗ್ದಾಳಿ

ಹೊಸಂಗಡಿ :ಶಾಸಕನಾಗಿ ಖಾಸಗಿ ಕಟ್ಟಡದ ಮೂರನೇ ಅಂತಸ್ತೀನಲ್ಲಿ ಇರುವ ತಾಲೂಕು ಕಚೇರಿಗೆ ಸ್ವಂತ ಕಟ್ಟಡ ಮಾಡಲಾಗದ ಮಂಜೇಶ್ವರ ಶಾಸಕರ ಭರವಸೆ ಗಳು ಹಾಸ್ಯಸ್ಪದ ಎಂದು ಬಿಜೆಪಿ ಮಂಜೇಶ್ವರ ಮಂಡಲ ಅಧ್ಯಕ್ಷ ಆದರ್ಶ ಬಿ ಎಂ ಹೇಳಿದರು. ಈ ಬಾರಿ ಗೆದ್ದರೆ ಮಹಿಳೆಯರಿಗೆ ಬಸ್ ಉಚಿತ ಎಂಬ ಶಾಸಕರ ಘೋಷಣೆ ವಂಚನೆಯ ಪರಮಾವಧಿ ಯಾಕೆಂದರೆ ಮಂಜೇಶ್ವರ ವಿ ಸಾ ವ್ಯಾಪ್ತಿಯಲ್ಲಿ ksrtc ಬಸ್ ಎಲ್ಲಿಯೂ ಲೋಕಲ್ ಸರ್ವಿಸ್ ನಡೆಸುವುದಿಲ್ಲ. ಕಾಸರಗೋಡು ಮಂಗಳೂರು ಅಂತರ ರಾಜ್ಯ ksrtc ಗಳಲ್ಲಿ ಉಚಿತ…

Read More

ಕಾಸರಗೋಡು: ಹವಾಲಾ ಹಣದ ಕಳ್ಳಸಾಗಣೆ ವಿರುದ್ಧ ಪೊಲೀಸರ ಕಟ್ಟೆಚ್ಚರ – 72.9 ಲಕ್ಷ ರೂ. ವಶ

ಕಾಸರಗೋಡು: ಕಾಸರಗೋಡು ಜಿಲ್ಲೆಯಲ್ಲಿ ಹವಾಲಾ ಹಣದ ಕಳ್ಳಸಾಗಣೆ ತೀವ್ರಗೊಳ್ಳುತ್ತಿದ್ದು, ಕಾಸರಗೋಡು ಮತ್ತು ಕುಂಬಳೆ ಪ್ರದೇಶಗಳಲ್ಲಿ ನಡೆದ ಎರಡು ಪ್ರತ್ಯೇಕ ಕಾರ್ಯಾಚರಣೆಯಲ್ಲಿ ಪೊಲೀಸರು ಒಟ್ಟು 72.9 ಲಕ್ಷ ರೂಪಾಯಿ ದಾಖಲೆಗಳಿಲ್ಲದೆ ವಶಪಡಿಸಿಕೊಂಡಿದ್ದಾರೆ. ಕುಂಬಳೆಯಲ್ಲಿ 61.5 ಲಕ್ಷ ರೂಪಾಯಿ ಹಾಗೂ ಕಾಸರಗೋಡು ತಾಲೂಕು ಕಚೇರಿ ಸಮೀಪದ ಸಂಚಾರ ವೃತ್ತದ ಬಳಿ 11.40 ಲಕ್ಷ ರೂಪಾಯಿ ಹಣವನ್ನು ಜಪ್ತಿ ಮಾಡಲಾಗಿದೆ. ಕುಂಬಳೆಯ ಘಟನೆಯಲ್ಲಿ ಕಪ್ಪು ಹಣ ಸಾಗಿಸುತ್ತಿದ್ದ ವ್ಯಕ್ತಿಯನ್ನು ಬಂಧಿಸಲಾಗಿದೆ. ಕಾಸರಗೋಡು ತಲಂಕರದ ಮಾಡನ್ನೂರ್ ಹೌಸ್ ನಿವಾಸಿ ಶಬೀರ್ ಬಂಧಿತನಾಗಿದ್ದಾನೆ. ಗುಪ್ತ…

Read More

ಬ್ರಹ್ಮಶ್ರೀ ಮುಗೇರ ಮಹಾಕಾಳಿ ದೈವಸ್ಥಾನದಲ್ಲಿ ಪುನರ್ ಪ್ರತಿಷ್ಠೆ, ಹಾಗು ಬ್ರಹ್ಮಕಲಶೋತ್ಸವ , ನೇಮೋತ್ಸವ ಉತ್ಸವಕ್ಕೆ ಸಕಲ ಸಿದ್ಧತೆ

ಕುಂಜತ್ತೋರು ತೂಮಿನಾಡು, ಪ್ರದೇಶದಲ್ಲಿರುವ ಬ್ರಹ್ಮಶ್ರೀ ಮುಗೇರ ಮಹಾಕಾಳಿ ದೈವಸ್ಥಾನದಲ್ಲಿ ಪುನರ್ ಪ್ರತಿಷ್ಠೆ, ಹಾಗೂ ಬ್ರಹ್ಮಕಲಶೋತ್ಸವ ಮತ್ತು ನೇಮೋತ್ಸವಕ್ಕೆ ಸಕಲ ಸಿದ್ಧತೆಯು ನಡೆದಿದ್ದು ಏಪ್ರಿಲ್ 2ರಿಂದ 6,ರ ವರೆಗೆ ಕ್ಷೇತ್ರದ ತಂತ್ರಿವರ್ಯರಾದ ವೇದಮೂರ್ತಿ ಶ್ರೀ ಕೆ. ಮರಿಭಟ್ ಅವರ ದಿವ್ಯ ಹಸ್ತದಿಂದ ವೈದಿಕ ಹಾಗೂ ಧಾರ್ಮಿಕ ವಿಧಿವಿಧಾನಗಳೊಂದಿಗೆ ಭಕ್ತಿಭಾವಪೂರ್ಣವಾಗಿ ಧಾರ್ಮಿಕ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ. ಏಪ್ರಿಲ್ 2 ರಂದು ಬೆಳಗ್ಗೆ ಗಣಹೋಮ , ತೋರಣ ಮುಹೂರ್ತ ,ಉಗ್ರಾಣ ಮುಹೂರ್ತ ಚಪ್ಪರ ಮುಹೂರ್ತ ಗಳೊಂದಿಗೆ ಆರಂಭವಾಗುವ ಧಾರ್ಮಿಕಗಳೊಂದಿಗೆ ಮಹೋತ್ಸವಕ್ಕೆ ಚಾಲನೆ…

Read More
error: Content is protected !!